ಬೆಂಗಳೂರು: ರೈಲಿನಲ್ಲಿ ಸಾಗಿಸುತ್ತಿದ್ದ 60 ಕೆಜಿ ಗಾಂಜಾ ವಶ, 7 ಜನರ ಬಂಧನ

ಎರಡು ಪ್ರತ್ಯೇಕ ಪ್ರಕರಣ: ರೈಲಿನಲ್ಲಿ ಬೆಂಗಳೂರಿಗೆ ಗಾಂಜಾ ಸಾಗಿಸಲು ಯತ್ನಿಸುತ್ತಿದ್ದ ಏಳು ಮಂದಿಯನ್ನು ರೈಲ್ವೇ ಪೊಲೀಸರು ಬಂಧಿಸಿದ್ದು, ಐದು ಪ್ರತ್ಯೇಕ ಪ್ರಕರಣಗಳನ್ನು ದಾಖಲಾಗಿವೆ. ಶಿವಮೊಗ್ಗ ಕೇಂದ್ರ ಕಾರಾಗೃಹದ ಕೈದಿಗಳಿಗೆ ಗಾಂಜಾ ಮತ್ತು ಮೊಬೈಲ್ ಸರಬರಾಜು ಮಾಡಲು ಯತ್ನಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಜೈಲಿನ ಭದ್ರತಾ ಸಿಬ್ಬಂದಿ ಬಂಧಿಸಿದ್ದಾರೆ.

ಬೆಂಗಳೂರು: ರೈಲಿನಲ್ಲಿ ಸಾಗಿಸುತ್ತಿದ್ದ 60 ಕೆಜಿ ಗಾಂಜಾ ವಶ, 7 ಜನರ ಬಂಧನ
ಬೆಂಗಳೂರಿನ ರೈಲಿನಲ್ಲಿ ಗಾಂಜಾ ವಶ
Follow us
ವಿವೇಕ ಬಿರಾದಾರ
|

Updated on: Dec 31, 2023 | 7:14 AM

ಬೆಂಗಳೂರು, ಡಿಸೆಂಬರ್​ 31: ರೈಲಿನಲ್ಲಿ (Train) ಬೆಂಗಳೂರಿಗೆ (Bengaluru) ಗಾಂಜಾ (Marijuana) ಸಾಗಿಸಲು ಯತ್ನಿಸುತ್ತಿದ್ದ ಏಳು ಮಂದಿಯನ್ನು ರೈಲ್ವೇ ಪೊಲೀಸರು (Railway Police) ಬಂಧಿಸಿದ್ದು, ಐದು ಪ್ರತ್ಯೇಕ ಪ್ರಕರಣ ದಾಖಲಾಗಿವೆ. ನಿತ್ಯಾನಂದ ದಾಸ್, ನಿಕೇಶ್ ರಾಣಾ, ಜಲಂಧರ್ ಕನ್ವರ್, ಸಾಗರ್ ಕನ್ವರ್, ರಾಜೇಶ್ ದಾಸ್ ಮತ್ತು ಅಮರ್ಜಿತ್ ಬಂಧಿತ ಆರೋಪಿಗಳು. ಐವರು ಆರೋಪಿಗಳು ಒಡಿಶಾದವರು, ಓರ್ವ ತ್ರಿಪುರದವ ಮತ್ತು ಇನ್ನೊಬ್ಬ ಬಿಹಾರ ಮೂಲದವ ಎಂದು ತಿಳಿದುಬಂದಿದೆ.

ಕಳೆದ ಹತ್ತು ದಿನಗಳಿಂದ ಬೆಂಗಳೂರಿಗೆ ಆಗಮಿಸುತ್ತಿದ್ದ ರೈಲುಗಳಲ್ಲಿ ರೈಲ್ವೆ ಪೊಲೀಸರು ಶೋಧ ನಡೆಸುತ್ತಿದ್ದಾರೆ. ಪ್ರಶಾಂತಿ ಎಕ್ಸ್‌ಪ್ರೆಸ್, ಶೇಷಾದ್ರಿ ಎಕ್ಸ್‌ಪ್ರೆಸ್ ಮತ್ತು ಶಾಲಿಮಾರ್-ವಾಸ್ಕೋ-ಡ-ಗಾಮಾ ಅಮರಾವತಿ ಎಕ್ಸ್‌ಪ್ರೆಸ್ ರೈಲುಗಳಲ್ಲಿ ಗಾಂಜಾ ಪತ್ತೆಯಾಗಿದೆ. 60 ಲಕ್ಷ ರೂಪಾಯಿ ಮೌಲ್ಯದ 60 ಕೆಜಿ ಗಾಂಜಾವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಬೈಯಪ್ಪನಹಳ್ಳಿ, ಬೆಂಗಳೂರು ಗ್ರಾಮಾಂತರ ಮತ್ತು ಹುಬ್ಬಳ್ಳಿ ರೈಲ್ವೆ ಪೊಲೀಸ್ ಠಾಣೆಗಳಲ್ಲಿ ಐದು ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ. ಪೊಲೀಸರ ಪ್ರಕಾರ, ಆರೋಪಿ ನಿತ್ಯಾನಂದ ದಾಸ್ ಮತ್ತು ರಾಜೇಶ್ ಬೆಂಗಳೂರಿನಲ್ಲಿ ಫುಡ್​ ಡೆಲೆವರಿ ಬಾಯ್​​ ಏಜೆಂಟ್‌ಗಳಂತೆ ಮಾದಕ ವಸ್ತುಗಳನ್ನು ಸರಬರಾಜು ಮಾಡುತ್ತಿದ್ದರು.

ಇದನ್ನೂ ಓದಿ: ಹುಬ್ಬಳ್ಳಿ: ಮನೆಯಲ್ಲಿ ಅಕ್ರಮವಾಗಿ ಸಂಗ್ರಹಿಸಿದ್ದ 1635 ಗ್ರಾಂ ಗಾಂಜಾ ವಶ, ಇಬ್ಬರ ಬಂಧನ 

ಕೈದಿಗಳಿಗೆ ಗಾಂಜಾ ಸರಬರಾಜು ಮಾಡಲು ಯತ್ನಿಸಿದ ಇಬ್ಬರ ಬಂಧನ

ಶಿವಮೊಗ್ಗ: ಕೇಂದ್ರ ಕಾರಾಗೃಹದ ಕೈದಿಗಳಿಗೆ ಗಾಂಜಾ ಮತ್ತು ಮೊಬೈಲ್ ಸರಬರಾಜು ಮಾಡಲು ಯತ್ನಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಜೈಲಿನ ಭದ್ರತಾ ಸಿಬ್ಬಂದಿ ಬಂಧಿಸಿದ್ದಾರೆ. ಆರೋಪಿಯಿಂದ ಪ್ಲಾಸ್ಟಿಕ್ ಚೀಲಗಳಲ್ಲಿ ತುಂಬಿದ್ದ ಗಾಂಜಾ, ಕೀಪ್ಯಾಡ್ ಮೊಬೈಲ್ ಫೋನ್ ಮತ್ತು ಎರಡು ಮೊಬೈಲ್ ಚಾರ್ಜ್ ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಇಬ್ಬರನ್ನು ವಶಕ್ಕೆ ಪಡೆದ ನಂತರ ಜೈಲಿನ ಭದ್ರತಾ ಸಿಬ್ಬಂದಿ ತುಂಗಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಆರೋಪಿಗಳು ಚೀಲಗಳಲ್ಲಿ ಗಾಂಜಾ ಇರಿಸಿ ಕಾರಾಗೃಹದ ಆವರಣದ ಓಳಗೆ ಎಸೆಯುತ್ತಿದ್ದ ದೃಶ್ಯ ಜೈಲಿನ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ದೃಶ್ಯಾವಳಿಗಳನ್ನು ಕಂಡ ಪೊಲೀಸರು ಬಂಧಿಸಲು ಹೋದಾಗ ಆರೋಪಿಗಳು ಪರಾರಿಯಾಗಲು ಯತ್ನಿಸಿದ್ದಾರೆ. ಸುಮಾರು 2 ಕಿ.ಮೀ ವರೆಗೆ ಬೆನ್ನಟ್ಟಿದ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ