ಬೈಕ್ ವ್ಹೀಲಿಂಗ್ ಮಾಡ್ತಿದ್ದ ಗ್ಯಾಂಗ್ ಅರೆಸ್ಟ್; ವಿಚಾರಣೆ ವೇಳೆ ಕಳ್ಳತನ, ಗಾಂಜಾ ಕೇಸ್ ಪತ್ತೆ

ಬೈಕ್ ವ್ಹೀಲಿಂಗ್ ಮಾಡಿದ್ದವರ ಗ್ಯಾಂಗ್ ಬೆನ್ನತ್ತಿದ ನೆಲಮಂಗಲ ಪೊಲೀಸರು ನಾಲ್ವರನ್ನ ಬಂಧಿಸಿದ್ದಾರೆ. ಹೆದ್ದಾರಿಯಲ್ಲಿ ದರ್ಪ ತೋರಿಸ್ತಿದ್ದರ ಎಡೆ ಮುರಿಕಟ್ಟಿದ್ದಾರೆ. ಈ ಪುಂಡರನ್ನ ವಿಚಾರಣೆ ಮಾಡಿದಾಗ ಮೊಬೈಲ್ ಕಳ್ಳತನ ಕೇಸ್ ಬಯಲಾಗಿದೆ. ಕಾರ್ತಿಕ್, ಮಂಜುನಾಥ್, ನವೀನ್ ಅನಿಲ್‌ ಕುಮಾರ್‌ನನ್ನ ವಿಚಾರಣೆ ಮಾಡಿದಾಗ ಮೊಬೈಲ್‌ ಮತ್ತು ಗಾಂಜಾ ಪತ್ತೆಯಾಗಿದೆ.

ಬೈಕ್ ವ್ಹೀಲಿಂಗ್ ಮಾಡ್ತಿದ್ದ ಗ್ಯಾಂಗ್ ಅರೆಸ್ಟ್; ವಿಚಾರಣೆ ವೇಳೆ ಕಳ್ಳತನ, ಗಾಂಜಾ ಕೇಸ್ ಪತ್ತೆ
ಬೈಕ್ ವ್ಹೀಲಿಂಗ್
Follow us
| Updated By: ಆಯೇಷಾ ಬಾನು

Updated on: Dec 29, 2023 | 1:08 PM

ಬೆಂಗಳೂರು, ಡಿ.29: ಹೆದ್ದಾರಿಯಲ್ಲಿ ಬೈಕ್ ವ್ಹೀಲಿಂಗ್ (Bike Wheeling) ಮಾಡುತ್ತಿದ್ದ ಗ್ಯಾಂಗ್ ಬೆನ್ನತ್ತಿದ ಪೊಲೀಸರು ನಾಲ್ವರನ್ನ ಬಂಧಿಸಿದ್ದಾರೆ. ಆದರೆ, ವಿಚಾರಣೆ ವೇಳೆ ಈ ಗ್ಯಾಂಗ್​ನ ಕಳ್ಳತನ ಕುಕೃತ್ಯಗಳು ಬಯಲಾಗಿವೆ. ನಗರದ ಹೈವೇಗಳಲ್ಲಿ ಬೈಕ್ ವ್ಹೀಲಿಂಗ್ ಮಾಡಿದ್ದವರ ಗ್ಯಾಂಗ್ ಬೆನ್ನತ್ತಿದ ನೆಲಮಂಗಲ ಪೊಲೀಸರು (Nelamangala Police) ನಾಲ್ವರನ್ನ ಬಂಧಿಸಿದ್ದಾರೆ. ಹೆದ್ದಾರಿಯಲ್ಲಿ ದರ್ಪ ತೋರಿಸ್ತಿದ್ದರ ಎಡೆ ಮುರಿಕಟ್ಟಿದ್ದಾರೆ. ಈ ಪುಂಡರನ್ನ ವಿಚಾರಣೆ ಮಾಡಿದಾಗ ಮೊಬೈಲ್ ಕಳ್ಳತನ ಕೇಸ್ ಬಯಲಾಗಿದೆ.

ಕಾರ್ತಿಕ್, ಮಂಜುನಾಥ್, ನವೀನ್ ಅನಿಲ್‌ ಕುಮಾರ್‌ನನ್ನ ವಿಚಾರಣೆ ಮಾಡಿದಾಗ ಮೊಬೈಲ್‌ ಮತ್ತು ಗಾಂಜಾ ಪತ್ತೆಯಾಗಿದೆ. 17 ಮೊಬೈಲ್ ಮತ್ತು ಮಾರಕಾಸ್ತ್ರ ಮತ್ತು ಬೈಕ್‌ಗಳನ್ನ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ವಿದ್ಯುತ್ ಸ್ಪರ್ಶದಿಂದ 10 ವರ್ಷದ ಬಾಲಕಿ ಸಾವು

ಬೆಂಗಳೂರಿನಲ್ಲಿ ವಿದ್ಯುತ್ ತಂತಿಗೆ ತಾಯಿ ಮಗು ಬಲಿಯಾದ ಪ್ರಕರಣ ಮಾಸುವ ಮುನ್ನವೇ, ಮತ್ತೊಂದು ಅಂಥದ್ದೇ ಅನಾಹುತ ನಡೆದಿದೆ ಎನ್ನಲಾಗಿದೆ. ಅಪಾರ್ಟ್​ಮೆಂಟ್​ವೊಂದರಲ್ಲಿ ವಿದ್ಯುತ್ ಸ್ಪರ್ಶದಿಂದ 10 ವರ್ಷದ ಬಾಲಕಿ ಮೃತಪಟ್ಟಿದ್ದಾಳೆ ಅನ್ನೋ ಆರೋಪ ಇದೆ. ಆದ್ರೆ, ವಿದ್ಯುತ್ ಸ್ಪರ್ಶದಿಂದ ಮೃತಪಟ್ಟರೂ ಆಕೆ ತಂದೆ ನೀಡಿರುವ ದೂರು ಸಾಕಷ್ಟು ಅನುಮಾನಕ್ಕೆ ಕಾರಣವಾಗಿದೆ.

ಇದನ್ನೂ ಓದಿ: ಹೂಕೋಸು ಕಿತ್ತಿದ್ದಕ್ಕೆ ವಿದ್ಯುತ್ ಕಂಬಕ್ಕೆ ತಾಯಿಯನ್ನು ಕಟ್ಟಿ ಥಳಿಸಿದ ಮಗ

ಬೆಂಗಳೂರಿನ ವರ್ತೂರಿನ ಪ್ರೆಸ್ಟೀಜ್ ಹೆಬಿಟೇಡ್ ಅಪಾರ್ಟ್ ಮೆಂಟ್​ನಲ್ಲಿ ಬಾಲಕಿ ಸಾವಿಗೆ ತಿರುವು ಸಿಕ್ಕಿದೆ. ವಿದ್ಯುತ್ ಶಾಕ್​ನಿಂದ ಅಲ್ಲ ಸ್ವಿಮ್ಮಿಂಗ್​ ಫೂಲ್​ಗೆ ಬಿದ್ದು ಬಾಲಕಿ ಮೃತಪಟ್ಟಿದ್ದಾಳೆ ಎಂದು ತಂದೆ ದೂರು ನೀಡಿದ್ದಾರೆ. ನಿನ್ನೆ ಸಂಜೆ 7.30ರ ಸುಮಾರಿಗೆ 10 ವರ್ಷದ ಬಾಲಕಿ ಮಾನ್ಯ, ವಿದ್ಯುತ್ ಸ್ಪರ್ಶದಿಂದ ಮೃತಪಟ್ಟಿದ್ದಾಳೆ ಎಂದು ಅಪಾರ್ಟಮೆಂಟ್ ನಿವಾಸಿಗಳು ಪ್ರತಿಭಟನೆ ನಡೆಸಿದ್ರು. ಇದಕ್ಕೆ ಇಂಬು ಕೊಡುವಂತೆ ಸಿಸಿ ಕ್ಯಾಮಾರದಲ್ಲಿ ಲೈಟ್ ಆಫ್ ಆಗೋ ರೀತಿ ದೃಶ್ಯಗಳು ಸೆರೆಯಾಗಿದ್ವು. ಅಪಾರ್ಟಮೆಂಟ್ ನಿರ್ವಹಣಾ ಸಿಬ್ಬಂದಿಯ ಬೇಜವಾಬ್ದಾರಿಯೇ ಬಾಲಕಿ ಸಾವಿಗೆ ಕಾರಣವೆಂದು ರಾತ್ರಿಯಿಡಿ ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಿದ್ರು.

ಆದ್ರೆ ಮೃತ ಬಾಲಕಿ ತಂದೆ ರಾಜೇಶ್ ಅಪಾರ್ಟಮೆಂಟ್​ನ ಸ್ವಿಮ್ಮಿಂಗ್ ಫೂಲ್​ಗೆ ಬಿದ್ದು ಮೃತಪಟ್ಟಿರೋದಾಗಿ ದೂರು ನೀಡಿದ್ದಾರೆ. ಇದು ಸದ್ಯ ಗೊಂದಲಕ್ಕೆ ಕಾರಣವಾಗಿದೆ. ಈ ಮಧ್ಯೆ ರಾತ್ರೋರಾತ್ರಿ ಅಪಾರ್ಟ್​ಮೆಂಟ್​ ಮ್ಯಾನೇಜರ್ ಪರಾರಿ ಆಗಿದ್ದಾನೆ. ಇನ್ನು ಮೃತ ಬಾಲಕಿ ಓಡಾಡಿರೋ ಸಿಸಿಟಿವಿ ದೃಶ್ಯ ಲಭ್ಯವಾಗಿದೆ. ಲಿಫ್ಟ್ ನಿಂದ ಸ್ವಿಮ್ಮಿಂಗ್ ಪೂಲ್ ಕಡೆ ತೆರಳುತ್ತಿರೋ ಬಾಲಕಿಯ ಸಿಸಿಟಿವಿ ದೃಶ್ಯ ಲಭ್ಯವಾಗಿದೆ. ಆದ್ರೆ ಸ್ವಿಮ್ಮಿಂಗ್ ಪೂಲ್ ಬಳಿ ಸಾವನ್ನಪ್ಪಿದ ದೃಶ್ಯ ಮಿಸ್ ಆಗಿದೆ. ಹೀಗಾಗಿ ಅನುಮಾನ ಮೂಡ್ತಿದೆ. ಅಪಾರ್ಟ್ ಮೆಂಟ್ ಸಿಬ್ಬಂದಿ ಬೇಕಂತಲೇ ಆ ದೃಶ್ಯ ಡಿಲೀಟ್ ಮಾಡಿದ್ದಾರೆಂದು ನಿವಾಸಿಗಳು ಆಕ್ರೋಶ ಹೊರಹಾಕ್ತಿದ್ದಾರೆ. ಮರೋಣತ್ತರ ಪರೀಕ್ಷೆ ಬಳಿಕ ಸಂಪೂರ್ಣ ಮಾಹಿತಿ ಸಿಗಲಿದೆ. ಸದ್ಯ ಅಪಾರ್ಟಮೆಂಟ್ ನಿವಾಸಿಗಳು ಬಾಲಕಿ ಸಾವಿಗೆ ನ್ಯಾಯಕ್ಕಾಗಿ ಆಗ್ರಹಿಸಿ, ಅಪಾರ್ಟ್​​ಮೆಂಟ್ ಮುಂದೆ ಮುಖ್ಯರಸ್ತೆ ತಡೆದು ಧರಣಿ ನಡೆಸಿದ್ರು.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ನಾಗವಲ್ಲಿ ಮಿಂಚು ರಾಧಿಕಾ ಕಣ್ಣಲ್ಲಿ ಕಾಣಿಸಿತು: ರಮೇಶ್ ಅರವಿಂದ್
ನಾಗವಲ್ಲಿ ಮಿಂಚು ರಾಧಿಕಾ ಕಣ್ಣಲ್ಲಿ ಕಾಣಿಸಿತು: ರಮೇಶ್ ಅರವಿಂದ್
ಬಿಹಾರದಲ್ಲಿ ಪ್ರವಾಹ ಭೀತಿ; ನೂರಾರು ಹಳ್ಳಿಗಳಿಗೆ ನುಗ್ಗಿದ ಗಂಗಾ ನದಿ ನೀರು
ಬಿಹಾರದಲ್ಲಿ ಪ್ರವಾಹ ಭೀತಿ; ನೂರಾರು ಹಳ್ಳಿಗಳಿಗೆ ನುಗ್ಗಿದ ಗಂಗಾ ನದಿ ನೀರು
ಹಾಡಹಗಲೇ ಮೆಡಿಕಲ್ ಶಾಪ್​ಗೆ ನುಗ್ಗಿ ದರೋಡೆ ಮಾಡಿದ ಕಳ್ಳರು; ವಿಡಿಯೋ ವೈರಲ್
ಹಾಡಹಗಲೇ ಮೆಡಿಕಲ್ ಶಾಪ್​ಗೆ ನುಗ್ಗಿ ದರೋಡೆ ಮಾಡಿದ ಕಳ್ಳರು; ವಿಡಿಯೋ ವೈರಲ್
ಇದ್ದಕ್ಕಿದ್ದಂತೆ ರೈಲ್ವೆ ಪ್ಲಾಟ್​ಫಾರ್ಮ್​ ಮೇಲೆ 6 ಅಡಿ ಉದ್ದದ ಹಾವು ಪ್ರತ್ಯ
ಇದ್ದಕ್ಕಿದ್ದಂತೆ ರೈಲ್ವೆ ಪ್ಲಾಟ್​ಫಾರ್ಮ್​ ಮೇಲೆ 6 ಅಡಿ ಉದ್ದದ ಹಾವು ಪ್ರತ್ಯ
ರಾಮನಗರದಲ್ಲಿ ಕೇಂದ್ರ ಸಚಿವ ಕುಮಾರಸ್ವಾಮಿಗೆ ಕೌಂಟರ್ ಕೊಟ್ಟ ಡಿಕೆಶಿ
ರಾಮನಗರದಲ್ಲಿ ಕೇಂದ್ರ ಸಚಿವ ಕುಮಾರಸ್ವಾಮಿಗೆ ಕೌಂಟರ್ ಕೊಟ್ಟ ಡಿಕೆಶಿ
ಕಾರು ಡಿಕ್ಕಿ ಹೊಡೆದ ರಭಸಕ್ಕೆ ಫ್ಲೈಓವರ್ ಪಿಲ್ಲರ್ ಮೇಲೆ ಸಿಲುಕಿದ ಯುವತಿ
ಕಾರು ಡಿಕ್ಕಿ ಹೊಡೆದ ರಭಸಕ್ಕೆ ಫ್ಲೈಓವರ್ ಪಿಲ್ಲರ್ ಮೇಲೆ ಸಿಲುಕಿದ ಯುವತಿ
ಬೀದರ್​​ನ ಐತಿಹಾಸಿಕ ಕೋಟೆ ಆವರಣದಲ್ಲಿ ಏರ್ ಶೋ ಪ್ರದರ್ಶನ
ಬೀದರ್​​ನ ಐತಿಹಾಸಿಕ ಕೋಟೆ ಆವರಣದಲ್ಲಿ ಏರ್ ಶೋ ಪ್ರದರ್ಶನ
ಬಾಂಗ್ಲಾ ತಂಡದ ಫೀಲ್ಡಿಂಗ್ ಸೆಟ್ ಮಾಡಿದ ರಿಷಭ್ ಪಂತ್
ಬಾಂಗ್ಲಾ ತಂಡದ ಫೀಲ್ಡಿಂಗ್ ಸೆಟ್ ಮಾಡಿದ ರಿಷಭ್ ಪಂತ್
ದರ್ಬಾರ್ ಗಲ್ಲಿಯಲ್ಲಿ ರಸ್ತೆಯುದ್ದಕ್ಕೂ ಪ್ಯಾಲೆಸ್ತೀನ್ ಧ್ವಜ ಶಾಮಿಯಾನ
ದರ್ಬಾರ್ ಗಲ್ಲಿಯಲ್ಲಿ ರಸ್ತೆಯುದ್ದಕ್ಕೂ ಪ್ಯಾಲೆಸ್ತೀನ್ ಧ್ವಜ ಶಾಮಿಯಾನ
ಚನ್ನಪಟ್ಟಣ: ಹೈಟೆಕ್ ಕ್ರೀಡಾಂಗಣ ನಿರ್ಮಾಣಕ್ಕೆ ಡಿಕೆಶಿ ಶಂಕುಸ್ಥಾಪನೆ
ಚನ್ನಪಟ್ಟಣ: ಹೈಟೆಕ್ ಕ್ರೀಡಾಂಗಣ ನಿರ್ಮಾಣಕ್ಕೆ ಡಿಕೆಶಿ ಶಂಕುಸ್ಥಾಪನೆ