AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜೈಲಲ್ಲೇ ಖೈದಿ ಸಾವು ಪ್ರಕರಣಕ್ಕೆ ಟ್ವಿಸ್ಟ್; ಪೊಲೀಸರ ಥರ್ಡ್​​ ಡಿಗ್ರಿ ಟಾರ್ಚರ್​ನಿಂದ ಸಾವು ಆರೋಪ?

ಡಕಾಯಿತಿ ಪ್ರಕರಣದ ಆರೋಪಿಯಾಗಿದ್ದ ಗಣೇಶ್ ಎಂಬಾತನ ಸಾವಿಗೆ ಟ್ವಿಸ್ಟ್ ಸಿಕ್ಕಿದ್ದು, ಪೊಲೀಸರ ಥರ್ಡ್​​ ಡಿಗ್ರಿ ಟಾರ್ಚರ್​ನಿಂದ ಗಣೇಶ್ ಮೃತಪಟ್ಟಿರುವ ಆರೋಪ ಬೆಂಗಳೂರಿನ ಹೆಚ್​ಎಸ್​ಆರ್ ಪೊಲೀಸ್​ ಠಾಣೆ(HSR Layout Police station)ಯ ಸಿಬ್ಬಂದಿ​ ವಿರುದ್ಧ ಕೇಳಿಬಂದಿದೆ.

ಜೈಲಲ್ಲೇ ಖೈದಿ ಸಾವು ಪ್ರಕರಣಕ್ಕೆ ಟ್ವಿಸ್ಟ್; ಪೊಲೀಸರ ಥರ್ಡ್​​ ಡಿಗ್ರಿ ಟಾರ್ಚರ್​ನಿಂದ ಸಾವು ಆರೋಪ?
ಮೃತ ಗಣೇಶ್​, ಸ್ನೇಹಿತ ವಿನೋದ್​
ರಾಮು, ಆನೇಕಲ್​
| Updated By: ಕಿರಣ್ ಹನುಮಂತ್​ ಮಾದಾರ್|

Updated on: Dec 31, 2023 | 4:12 PM

Share

ಬೆಂಗಳೂರು, ಡಿ.31: ಡಕಾಯಿತಿ ಪ್ರಕರಣದ ಆರೋಪಿಯಾಗಿದ್ದ ಗಣೇಶ್ ಎಂಬಾತನ ಸಾವಿಗೆ ಟ್ವಿಸ್ಟ್ ಸಿಕ್ಕಿದ್ದು, ಪೊಲೀಸರ ಥರ್ಡ್​​ ಡಿಗ್ರಿ ಟಾರ್ಚರ್​ನಿಂದ ಗಣೇಶ್ ಮೃತಪಟ್ಟಿರುವ ಆರೋಪ ಬೆಂಗಳೂರಿನ ಹೆಚ್​ಎಸ್​ಆರ್ ಪೊಲೀಸ್​ ಠಾಣೆ(HSR Layout Police station)ಯ ಸಿಬ್ಬಂದಿ​ ವಿರುದ್ಧ ಕೇಳಿಬಂದಿದೆ. ‘ಗಣೇಶ್​ ಮರ್ಮಾಂಗಕ್ಕೆ ಖಾರದಪುಡಿ ಎರಚಲಾಗಿದ್ದು, ನೋವಿನ ನಡುವೆಯೂ 4 ದಿನ ಠಾಣೆಯಲ್ಲಿರಿಸಿಕೊಂಡಿದ್ದರು. ಆರೋಗ್ಯ ಹದಗೆಡುತ್ತಿದ್ದಂತೆ ತರಾತುರಿಯಲ್ಲಿ ಜೈಲಿಗೆ ಶಿಫ್ಟ್​ ಮಾಡಿದ್ದಾರೆ. ಈ ಪೊಲೀಸರ ಟಾರ್ಚರ್​ನಿಂದಲೇ ಗಣೇಶ್​ ಮೃತನಾಗಿದ್ದಾನೆ ಎಂದು ಪೊಲೀಸರ ವಿರುದ್ಧ ಮೃತ ಗಣೇಶ್ ಸ್ನೇಹಿತ ವಿನೋದ್ ಎಂಬಾತ ಗಂಭೀರ ಆರೋಪ ಮಾಡಿದ್ದಾನೆ.

‘ನನಗೆ ಮೃತ ಗಣೇಶ್ ಎರಡೂವರೆ ಲಕ್ಷ ಹಣ ನೀಡಿದ್ದ. ಈ ಹಿನ್ನಲೆ ಹಲವು ಬಾರಿ ಪೋನ್ ಕರೆ ಮಾಡಿದ್ದ. ಈ ಪ್ರಕರಣಕ್ಕೆ ಸಂಬಂಧಿಸಿ ನನ್ನನ್ನು ಸಹ 5 ದಿನ ಠಾಣೆಯಲ್ಲಿ ಅಕ್ರಮವಾಗಿರಿಸಿಕೊಂಡಿದ್ದರು. ಬಳಿಕ ನನ್ನ ಹೊರ ಬಿಡಲು 6 ಲಕ್ಷ ಹಣ, ಚಿನ್ನ ತೆಗೆದುಕೊಂಡಿದ್ದಲ್ಲದೇ, ಜೊತೆಗೆ ನನ್ನ ತಂದೆಯ ಮೇಲೂ ಹಲ್ಲೆ ಮಾಡಿದ್ದರು. ನಂತರ ಬೆದರಿಸಿ ನಮ್ಮ ತಂದೆ ಬಳಿ ಹೆಚ್ ಎಸ್ಆರ್ ಬಡಾವಣೆ ಸಬ್ ಇನ್ಸ್ಪೆಕ್ಟರ್ ಬಸವರಾಜ್ ಎಂಬುವವರು ಹಣ ಹಣ ಮತ್ತು ಚಿನ್ನ ಪಡೆದುಕೊಂಡರು ಎಂದು ಮೃತ ಗಣೇಶ್ ಸ್ನೇಹಿತ ವಿನೋದ್ ಗಂಭೀರ ಆರೋಪ ಮಾಡಿದ್ದಾರೆ.

ಇದನ್ನೂ ಓದಿ:ಗಂಡು ಮಗುವಿಗೆ ಜನ್ಮ ನೀಡಿದ್ದ ಬಾಣಂತಿ ಹೊಟ್ಟೆ ನೋವಿನಿಂದ ನರಳಿ ಸಾವು, ವೈದ್ಯರ ವಿರುದ್ಧ ಕುಟುಂಬಸ್ಥರ ಆಕ್ರೋಶ

ಘಟನೆ ವಿವರ

ಡಕಾಯಿತಿ ಪ್ರಕರಣದ ಹಿನ್ನಲೆ ಡಿ.22ನೇ ತಾರೀಖು ಹೆಚ್ಎಸ್ಆರ್ ಲೇಔಟ್ ಪೊಲೀಸರು ಆರೋಪಿ ಮಡಿವಾಳದ ತಾವರೆಕೆರೆ ಮೂಲದ ಗಣೇಶನನ್ನು ಬಂಧಿಸಿದ್ದರು. ಬಳಿಕ ತನಿಖೆಗೆ ಒಳಪಡಿಸಿ ಪರಪ್ಪನ ಅಗ್ರಹಾರ ಜೈಲಿಗೆ ಬಿಟ್ಟಿದ್ದರು. ನಿನ್ನೆ ಆಸ್ಪತ್ರೆಗೆ ಆರೋಪಿ ಗಣೇಶ್​ನನ್ನು ಕರೆದೊಯ್ಯಲಾಗಿತ್ತು. ಆದರೆ, ತೀವ್ರ ನೋವಿನಿಂದ ಬಳಲಿದ್ದ ಆರೋಪಿ ಗಣೇಶ್, ಮಾರ್ಗ ಮಧ್ಯೆಯೇ ಸಾವನ್ನಪ್ಪಿದ್ದ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!