ನ್ಯೂ ಇಯರ್ ಪಾರ್ಟಿಗೆ ಬೆಂಗಳೂರಿಗೆ ಬಂದಿದ್ದ ಕೇರಳ ಎಸ್ಪಿ ಪುತ್ರನ ಮೇಲೆ ಹಲ್ಲೆ: ಆರೋಪ
ಹೊಸ ವರ್ಷ ಸಂಭ್ರಮಾಚರಣೆಗೆ ಬೆಂಗಳೂರಿಗೆ ಬಂದಿದ್ದ ಕೇರಳದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪುತ್ರನ ಮೇಲೆ ಹಲ್ಲೆ ಮಾಡಿರುವ ಆರೋಪ ಕೇಳಿಬಂದಿದೆ. ನಗರದ ಡೈರಿ ಸರ್ಕಲ್ ಬಳಿಯ ಕ್ರೈಸ್ಟ್ ಕಾಲೇಜು ಬಳಿ ಘಟನೆ ನಡೆದಿದೆ.
ಬೆಂಗಳೂರು, ಜನವರಿ 01: ಹೊಸ ವರ್ಷ (New Year) ಸಂಭ್ರಮಾಚರಣೆಗೆ ನಗರಕ್ಕೆ ಬಂದಿದ್ದ ಕೇರಳದ (Kerala) ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ಪುತ್ರನ ಮೇಲೆ ಹಲ್ಲೆ ಮಾಡಿರುವ ಆರೋಪ ಕೇಳಿಬಂದಿದೆ. ಇಲ್ಲಿನ ಡೈರಿ ಸರ್ಕಲ್ ಬಳಿಯ ಕ್ರೈಸ್ಟ್ ಕಾಲೇಜು ಬಳಿ ಘಟನೆ ನಡೆದಿದೆ. ಸ್ಟಾಲಿನ್ ಹಲ್ಲೆಗೊಳಗಾದ ಯುವಕ. ನ್ಯೂ ಇಯರ್ ಪಾರ್ಟಿಗೆಂದು ಯುವಕ ಸ್ಟಾಲಿನ್ ಕೇರಳದಿಂದ ಬೆಂಗಳೂರಿಗೆ ಬಂದಿದ್ದಾನೆ. ಸ್ಟಾಲಿನ್ ತನ್ನ ಗೆಳೆಯರ ಜೊತೆ ಪಬ್ನಲ್ಲಿ ಪಾರ್ಟಿ ಮಾಡುತ್ತಿದ್ದನು.ಕೆಲ ಹೊತ್ತಿನ ಬಳಿಕ ಸ್ಟಾಲಿನ್ ಗೆಳೆಯರು ಪಬ್ನಿಂದ ಹೊರಗೆ ಬಂದಿದ್ದಾರೆ. ಹೀಗೆ ಹೊರಗೆ ಬಂದವರು ಯುವತಿಯನ್ನು ಟಚ್ ಮಾಡಿದ್ದಾರೆ ಎಂದು ಸ್ಟಾಲಿನ್ ಗೆಳಯರ ಜೊತೆ ಇಬ್ಬರು ಯುವಕರು ಜಗಳ ತೆಗೆದಿದ್ದಾರೆ.
ಇದನ್ನು ತಿಳಿದ ಸ್ಟಾಲಿನ್, ಏನಾಯ್ತು ಎಂದು ಘಟನಾ ಸ್ಥಳಕ್ಕೆ ಬಂದು ನೋಡುತ್ತಿದ್ದಾಗ ಆ ಇಬ್ಬರು ಯುವಕರು ಸ್ಟಾಲಿನ್ ಮೇಲೂ ಹಲ್ಲೆ ಮಾಡಿದ್ದಾರೆ. ಗಲಾಟೆಯಲ್ಲಿ ಸ್ಟಾಲಿನ್ ಅವರ ಹಲ್ಲು ಮುರಿದಿದೆ. ಕೂಡಲೇ ಸ್ಥಳಕ್ಕೆ ಬಂದ ಪೊಲೀಸರು ಗಲಾಟೆ ತಡೆದಿದ್ದಾರೆ. ಬಳಿಕ ಪೊಲೀಸರು ವಿಚಾರಿಸಿದಾಗ ತಾನು ಕೇರಳದ ಎಸ್ಪಿ ಎಜೆ ಬಾಬು ಪುತ್ರ ಎಂದು ಸ್ಟಾಲಿನ್ ಹೇಳಿದ್ದಾನೆ. ಆಡುಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಮತ್ತಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ