ಶಿವಮೊಗ್ಗ: ಅನ್ಯಕೋಮಿನ ಗುಂಪಿನಿಂದ ಯುವಕನಿಗೆ ಚಾಕು ಇರಿತ

ಎರಡು ಪ್ರತ್ಯೇಕ ಘಟನೆ: ಅನ್ಯಕೋಮಿನ ಗುಂಪು ಯುವಕನಿಗೆ ಚಾಕು ಇರಿದ ಘಟನೆ ಭದ್ರಾವತಿಯ ಬಾಬಳ್ಳಿ ಬಸ್ ನಿಲ್ದಾಣ ಬಳಿ ನಡೆದಿದೆ. ಹೊಸ ವರ್ಷಾಚರಣೆಗೆ ಕೇಕ್​ ತರಲು ಹೋಗಿದ್ದ ಯುವಕನನ್ನು ಕೊಲೆ ಮಾಡಿರುವ ಘಟನೆ ಬಳ್ಳಾರಿಯ ವಡ್ಡರಬಂಡಿ ಪ್ರದೇಶದಲ್ಲಿ ನಡೆದಿದೆ.

ಶಿವಮೊಗ್ಗ: ಅನ್ಯಕೋಮಿನ ಗುಂಪಿನಿಂದ ಯುವಕನಿಗೆ ಚಾಕು ಇರಿತ
ಭದ್ರಾವತಿ ಪೊಲೀಸ್​ ಠಾಣೆ
Follow us
TV9 Web
| Updated By: ವಿವೇಕ ಬಿರಾದಾರ

Updated on:Jan 01, 2024 | 9:02 AM

ಶಿವಮೊಗ್ಗ, ಜನವರಿ 01: ಅನ್ಯಕೋಮಿನ ಗುಂಪು ಯುವಕನಿಗೆ ಚಾಕು ಇರಿದ ಘಟನೆ ಭದ್ರಾವತಿಯ (Bhadravati) ಬಾಬಳ್ಳಿ ಬಸ್ ನಿಲ್ದಾಣ ಬಳಿ ನಡೆದಿದೆ. ಪರಮೇಶ್ವರ (38) ಗಾಯಗೊಂಡ ಯುವಕ. ಸದ್ಯ ಪರಮೇಶ್ವರ ಅವರನ್ನು ಮೆಗ್ಗಾನ್ ಆಸ್ಪತ್ರಗೆ ದಾಖಲಿಸಲಾಗಿದೆ. ಹಳೇ ದ್ವೇಷ ಹಿನ್ನೆಲೆಯಲ್ಲಿ ಚಾಕು ಇರಿಯಲಾಗಿದೆ ಎಂಬ ಶಂಕೆ ವ್ಯಕ್ತವಾಗಿದೆ. ಮೆಗ್ಗಾನ್ ಆಸ್ಪತ್ರೆಗೆ ಎಸ್​ಪಿ ಜಿ.ಕೆ.ಮಿಥುನ್ ಕುಮಾರ್ ಭೇಟಿ ನೀಡಿ ಗಾಯಾಳು ಪರಮೇಶ್ವರ್ ಅವರಿಂದ ಘಟನೆ ಬಗ್ಗೆ ಮಾಹಿತಿ ಪಡೆದುಕೊಂಡರು. ಭದ್ರಾವತಿ ಗ್ರಾಮಾಂತರ ಪೊಲೀಸ್ (Police) ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಹೊಸ ವರ್ಷಾಚರಣೆಗೆ ಕೇಕ್​ ತರಲು ಹೋಗಿದ್ದ ಯುವಕನ ಕೊಲೆ

ಬಳ್ಳಾರಿ: ಹೊಸ ವರ್ಷಾಚರಣೆಗೆ ಕೇಕ್​ ತರಲು ಹೋಗಿದ್ದ ಯುವಕನನ್ನು ಕೊಲೆ ಮಾಡಿರುವ ಘಟನೆ ನಗರದ ವಡ್ಡರಬಂಡಿ ಪ್ರದೇಶದಲ್ಲಿ ನಡೆದಿದೆ. ಸೈದುಲ್ಲಾ (24) ಕೊಲೆಯಾದ ಯುವಕ. ಸೈದುಲ್ಲಾ ಅವರು ಹೊಸ ವರ್ಷಾಚರಣೆಗೆ ಕೇಕ್​ ಖರೀದಿಸಲು ಹೋಗಿದ್ದರು. ಈ ವೇಳೆ ಸೈದುಲ್ಲಾ ಹಾಗೂ ಇತರ ಯುವಕರ ನಡುವೆ ಗಲಾಟೆ ನಡೆದಿದೆ.

ಇದನ್ನೂ ಓದಿ: ಚಾಮರಾಜನಗರ: ಯುವತಿಗೆ ಚುಡಾಯಿಸಿದಕ್ಕೆ ಯುವಕನಿಗೆ ಆರು ಬಾರಿ ಚಾಕು ಇರಿತ

ಗಲಾಟೆ ವೇಳೆ ಯುವಕರ ಗುಂಪು ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಸೈದುಲ್ಲಾ ಅವರನ್ನು ಕೊಲೆ ಮಾಡಿದ್ದಾರೆ. ಇದೇ ವೇಳೆ ಹಲ್ಲೆಗೊಳಗಾದ ಮತ್ತೊಬ್ಬನ ಸ್ಥಿತಿ ಗಂಭೀರವಾಗಿದೆ. ಇವರನ್ನು ವಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಬ್ರೂಸ್​ಪೇಟೆ ಠಾಣೆ ಪೊಲೀಸರ ಭೇಟಿ, ಪರಿಶೀಲನೆ ನಡೆಸಿದ್ದಾರೆ. ಪ್ರಕರಣದ ಆರೋಪಿ ರಾಜೇಶ್​ನನ್ನು ಬ್ರೂಸ್​ಪೇಟೆ ಪೊಲೀಸರು ಬಂಧಿಸಿದ್ದಾರೆ.

ನ್ಯೂ ಇಯರ್ ದಿನವೇ ಯುವಕನ ಬರ್ಬರ  ಕೊಲೆ

ಬೆಂಗಳೂರು: ನ್ಯೂಇಯರ್ ದಿನವೇ ಯುವಕನನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ  ಹನುಮಂತನಗರದ 80 ಅಡಿ ರಸ್ತೆಯಲ್ಲಿ ನಡೆದಿದೆ. ವಿಜಯ್ (21) ಕೊಲೆಯದಾದ ಯುವಕ.  ಯುವಕ ವಿಜಯ್​ ಬನಶಂಕರಿ ನಗರ ನಿವಾಸಿ ಎಂದು ತಿಳಿದುಬಂದಿದೆ. ಆರೋಪಿಗಳು ಆಟೋದಲ್ಲಿ ಬಂದು ವಿಜಯ ಅವರನ್ನು ಹತ್ಯೆಗೈದು ಶವವನ್ನು ರಸ್ತೆಬದಿ ಎಸೆದು ಎಸ್ಕೆಪ್​​ ಆಗಿದ್ದಾರೆ. ​ಹನುಮಂತನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕುಡಿದ ಅಮಲಿನಲ್ಲಿ ಯುವಕನ ಶರ್ಟ್ ಹರಿದು ಹಲ್ಲೆ

ಆನೇಕಲ್: ಕುಡಿದ ಅಮಲಿನಲ್ಲಿ ಯುವಕನ ಶರ್ಟ್ ಹರಿದು ಹಲ್ಲೆ ಮಾಡಿರುವ ಘಟನೆ ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ಫ್ಲೈಓವರ್ ಬಳಿ ನಡೆದಿದೆ. ಹಲ್ಲೆಗೊಳಗಾದ ಯುವಕ ಕೂಡ ಪಾನಮತ್ತನಾಗಿದ್ದನು. ಸ್ಥಳಕ್ಕೆ ಎಲೆಕ್ಟ್ರಾನಿಕ್ ಸಿಟಿ ಠಾಣೆ ಪೊಲೀಸರ ಭೇಟಿ, ಪರಿಶೀಲನೆ ನಡೆಸಿದ್ದಾರೆ. ಹಲ್ಲೆಗೊಳಗಾಗಿ ರಸ್ತೆ ಬದಿ ಬಿದ್ದಿದ್ದ ಯುವಕನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಮತ್ತಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 6:55 am, Mon, 1 January 24