ಬಳ್ಳಾರಿ: ಹೊಸ ವರ್ಷಕ್ಕೆ ಕೇಕ್ ತರಲು ಬಂದ ವ್ಯಕ್ತಿಯ ಚಾಕುವಿನಿಂದ ಇರಿದು ಕೊಲೆ, ಮತ್ತೊಬ್ಬ ಗಂಭೀರ
ಕೇಕ್ ತರಲು ಹೋಗಿದ್ದ ವೇಳೆ ಪಾರ್ಕಿಂಗ್ ಮಾಡಿದ್ದ ಬೈಕ್ ಗೆ ಕೊಲೆಯಾದವರ ಬೈಕ್ ತಗುಲಿದ ಪರಿಣಾಮ ಪರಸ್ಪರ ಕೈ ಕೈ ಮಿಲಾಯಿಸುವ ಮೂಲಕ ಜಗಳ ತೀವ್ರ ವಿಕೋಪಕ್ಕೆ ತಿರುಗಿ ಕೊಲೆಯಲ್ಲಿ ಅಂತ್ಯವಾಗಿದೆ ಎನ್ನಲಾಗಿದೆ. ಆರೋಪಿ ರಾಜೇಶ್ ಎಂಬಾತನನ್ನು ಬಂಧಿಸಲಾಗಿದೆ.
ಬಳ್ಳಾರಿ, ಜನವರಿ 1: ಹೊಸ ವರ್ಷದ ಸಂಭ್ರಮಾಚರಣೆಗೂ ಮುನ್ನಾ ದಿನದಂದೇ ಚಾಕು ಇರಿದು ಓರ್ವ ಕೊಲೆಯಾದ (Murder) ಘಟನೆ ಗಣಿನಾಡು ಬಳ್ಳಾರಿ (Ballari) ನಗರದ ವಡ್ಡರಬಂಡೆಯಲ್ಲಿ ನಡೆದಿದೆ. ಹೊಸ ವರ್ಷದ ಆಚರಣೆಗಾಗಿ ಕೇಕ್ ತರಲು ಸಹೋದರರಿಬ್ಬರು ಹೋಗಿದ್ದ ವೇಳೆ ಬೇಕರಿಯೊಂದರ ಬಳಿ ದುಷ್ಕರ್ಮಿಗಳು ಏಕಾಏಕಿ ದಾಳಿ ನಡೆಸಿದ್ದಾರೆ. ಘಟನೆಯಲ್ಲಿ ಆರ್.ಕೆ.ಕಾಲೋನಿಯ ನಿವಾಸಿ ಸೈಯದುಲ್ಲಾ (24) ಮೃತಪಟ್ಟಿದ್ದು, ಮತ್ತೋರ್ವ ಬಾಪೂಜಿ ನಗರದ ನಿವಾಸಿ ರಜಾಕ್ ವಲಿ (26) ತೀವ್ರ ಗಾಯಗೊಂಡಿದ್ದು, ವಿಮ್ಸ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕೇಕ್ ತರಲು ಹೋಗಿದ್ದ ವೇಳೆ ಪಾರ್ಕಿಂಗ್ ಮಾಡಿದ್ದ ಬೈಕ್ ಗೆ ಕೊಲೆಯಾದವರ ಬೈಕ್ ತಗುಲಿದ ಪರಿಣಾಮ ಪರಸ್ಪರ ಕೈ ಕೈ ಮಿಲಾಯಿಸುವ ಮೂಲಕ ಜಗಳ ತೀವ್ರ ವಿಕೋಪಕ್ಕೆ ತಿರುಗಿ ಕೊಲೆಯಲ್ಲಿ ಅಂತ್ಯವಾಗಿದೆ ಎನ್ನಲಾಗಿದೆ. ಆರೋಪಿ ರಾಜೇಶ್ ಎಂಬಾತನನ್ನು ಬಂಧಿಸಲಾಗಿದೆ.
ಇಡೀ ಬಳ್ಳಾರಿ ಜಿಲ್ಲೆ 2023 ಕ್ಕೆ ವಿಧಾಯ ಹೇಳಿ 2024 ರ ಹೊಸ ವರ್ಷವನ್ನ ಭರ ಮಾಡಿಕೊಳ್ಳಲು ಸಂತಸದಿಂದ ಕಾತುರ ದಿಂದ ಕಾಯುತ್ತಿರುವಾಗ, ಕೇವಲ ಬೈಕ್ ಪಾರ್ಕಿಂಗ್ ವಿಚಾರವಾಗಿ ಶುರುವಾದ ಗಲಾಟೆ ಓರ್ವನ ಜೀವ ಬಲಿ ಪಡೆದರೆ, ಇನ್ನೋರ್ವನನ್ನ ಸಾವು ಬದುಕಿನ ಮಧ್ಯ ಹೋರಾಡುವಂತೆ ಮಾಡಿಸಿದೆ. ಮೃತಪಟ್ಟ ಸೈದುಲ್ಲಗೆ ಹೊಟ್ಟೆ ಭಾಗಕ್ಕೆ ತೀವ್ರವಾಗಿ ಚಾಕು ಇರಿದ ಪರಿಣಾಮ ರಕ್ತ ಸ್ರಾವವಾಗಿ ಸಾವನ್ನಪ್ಪಿದ್ದರೆ, ಇನ್ನೊರ್ವ ರಜಾಕ ಹೊಟ್ಟೆ, ಬೆನ್ನು, ಕೈ ಭಾಗಕ್ಕೆ ಚಾಕು ಇರಿತವಾಗಿದ್ದು ಆತನು ಸಾವು ಬದುಕಿನ ಮದ್ಯ ಹೋರಾಟ ಮಾಡುತ್ತಿದ್ದಾರೆ. ಇಬ್ಬರೂ ದೂರದ ಸಹೋದರಾಗಿದ್ದು, ಯಾರ ತಂಟೆಗೆ ಹೋಗದೆ ತಮ್ಮ ಪಾಡಿಗೆ ತಾವು ಜೀವನ ಮಾಡುತ್ತಿದ್ದರು.
ಇದನ್ನೂ ಓದಿ: ನ್ಯೂ ಇಯರ್ ಪಾರ್ಟಿಗೆ ಬೆಂಗಳೂರಿಗೆ ಬಂದಿದ್ದ ಕೇರಳ ಎಸ್ಪಿ ಪುತ್ರನ ಮೇಲೆ ಹಲ್ಲೆ: ಆರೋಪ
ಘಟನೆ ಸಂಬಂಧ ಬ್ರೂಸ್ ಪೇಟೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.
ಮತ್ತಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:57 am, Mon, 1 January 24