ಬೆಂಗಳೂರಿನ ಮಸಾಜ್ ಪಾರ್ಲರ್ನಲ್ಲಿ ವೇಶ್ಯಾವಾಟಿಕೆ; 44 ಮಹಿಳೆಯರ ರಕ್ಷಣೆ, 34 ಆರೋಪಿಗಳು ವಶಕ್ಕೆ
ಬೆಂಗಳೂರಿನ ಮಸಾಜ್ ಪಾರ್ಲರ್ ಮೇಲೆ ಸಿಸಿಬಿ ಪೊಲೀಸರು ದಾಳಿ ಮಾಡಿದ್ದಾರೆ. ಮಸಾಜ್ ಪಾರ್ಲರ್ ಹೆಸರಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಅಡ್ಡೆ ಮೇಲೆ ರೇಡ್ ಮಾಡಿದ್ದಾರೆ. ಟಿನ್ ಫ್ಯಾಕ್ಟರಿ ಸಮೀಪದಲ್ಲಿ ನಿರ್ವಾಣ ಇಂಟರ್ ನ್ಯಾಷನಲ್ ಪ್ರೈ.ಲಿ.ಹೆಸರಿನ ಹೈಟೆಕ್ ಸ್ಪಾದಲ್ಲಿ ವೇಶ್ಯಾವಾಟಿಕೆ ನಡೆಯುತ್ತಿದ್ದದ್ದು ಬೆಳಕಿಗೆ ಬಂದಿದೆ.
ಬೆಂಗಳೂರು, ಜ.07: ಸಿಸಿಬಿ ಪೊಲೀಸರು (CCB Police) ಮಹದೇವಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ಓಲ್ಡ್ ಮದ್ರಾಸ್ ರಸ್ತೆಯ ನಿರ್ವಾಣ ಸ್ಪಾ ಮೇಲೆ ದಾಳಿ ನಡೆಸಿದ್ದು ಸುಮಾರು 4 ಗಂಟೆ ಕಾಲ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಸ್ಪಾ ಹೆಸರಿನಲ್ಲಿ ವೇಶ್ಯಾವಾಟಿಕೆ (Prostitution) ದಂಧೆ ನಡೆಯುತ್ತಿರುವುದು ಬೆಳಕಿಗೆ ಬಂದಿದೆ. ಹೊರ ರಾಜ್ಯ, ವಿದೇಶದ ಯುವತಿಯರನ್ನು ಕರೆಸಿ ದಂಧೆ ನಡೆಸಲಾಗುತ್ತಿತ್ತು ಎಂಬ ಬಗ್ಗೆ ಮಾಹಿತಿ ಸಿಕ್ಕಿದೆ. ದಾಳಿ ವೇಳೆ ಒಟ್ಟು 44 ಮಹಿಳೆಯರ ರಕ್ಷಣೆ ಮಾಡಲಾಗಿದ್ದು 34 ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ.
ಬಹುಮಹಡಿ ಕಟ್ಟಡದ 1 ಮತ್ತು 6ನೇ ಪ್ಲೋರ್ನಲ್ಲಿ ಅನಿಲ್ ಎಂಬಾತ ನಿರ್ವಾಣ ಸ್ಪಾ ನಡೆಸುತ್ತಿದ್ದ. ಸಿಸಿಬಿ ಮಹಿಳಾ ಸಂರಕ್ಷಣಾ ದಳ ನಿರ್ವಾಣ ಸ್ಪಾ ಮೇಲೆ ದಾಳಿ ಮಾಡಿ ದಂಧೆ ಬಯಲಿಗೆಳೆದಿದೆ. ಸ್ಪಾ ಹೆಸರಲ್ಲಿ ಕಾನೂನು ಬಾಹಿರವಾಗಿ ಬಾಡಿ ಟು ಬಾಡಿ ಮಸಾಜ್ ಸೇರಿದಂತೆ ವಿವಿಧ ಮಾದರಿಯ ಅನೈತಿಕ ಚಟುವಟಿಕೆ ನಡೆಯುತ್ತಿರೋದು ಪತ್ತೆಯಾಗಿದೆ. ಹೊರ ರಾಜ್ಯ ಮತ್ತು ಹೊರ ದೇಶದ ಯುವತಿಯರು ಮತ್ತು ಮಹಿಳೆಯರನ್ನ ಕರೆಸಿ ಈ ದಂಧೆ ನಡೆಸಲಾಗುತ್ತಿತ್ತು. ಒಟ್ಟು 34 ರೂಂಗಳನ್ನ ಒಳಗೊಂಡ ಬಹು ಅಂತಸ್ಥಿನ ಕಟ್ಟಡದಲ್ಲಿ ಸ್ಪಾ ನಡೆಯುತ್ತಿತ್ತು.
ಇನ್ನು ಸ್ಪಾ ನಡೆಸುತ್ತಿದ್ದ ಆರೋಪಿ ಅನಿಲ್ನನ್ನು ಬಂಧಿಸಲಾಗಿದ್ದು ಈತ ಹೊರ ರಾಜ್ಯದಿಂದ ಬಂದು ಬೆಂಗಳೂರಿನಲ್ಲಿ ಸ್ಪಾ ನಡೆಸುತ್ತಿದ್ದ ಎಂದು ತಿಳಿದುಬಂದಿದೆ. ಸದ್ಯ ಈ ಘಟನೆ ಸಂಬಂಧ ಮಹದೇವಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಸಿಸಿಬಿ ಅಧಿಕಾರಿಗಳು ಅನೀಲ್ನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: ತುಮಕೂರು: ವಸತಿ ಶಾಲೆಯಲ್ಲಿ ಅವ್ಯವಸ್ಥೆ ಖಂಡಿಸಿ ವಿದ್ಯಾರ್ಥಿಗಳಿಂದ ಪ್ರತಿಭಟನೆ
ಕಡ್ಲೆ ಬೀಜ ವಿಚಾರಕ್ಕೆ ಕ್ಯಾಶಿಯರ್ ಮೇಲೆ ಹಲ್ಲೆ
ಬಾರ್ನಲ್ಲಿ ಕಡ್ಲೆ ಬೀಜದ ವಿಚಾರಕ್ಕೆ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ್ದಾರೆ. ಬೆಂಗಳೂರು ಉತ್ತರ ತಾಲೂಕಿನ ಬೈಲಪ್ಪನಪಾಳ್ಯ ಗ್ರಾಮದ ವಿನಾಯಕ ಬಾರ್ನಲ್ಲಿ ಘಟನೆ ನಡೆದಿದ್ದು, ಕ್ಯಾಷಿಯರ್ ಪುನೀತ್ ಮೇಲೆ ಬಿಯರ್ ಬಾಟಲ್ನಿಂದ ಹಲ್ಲೆ ಮಾಡಿದ್ದಾರೆ. ಲಕ್ಕೇನಹಳ್ಳಿ ಅಂಜನಮೂರ್ತಿ ಸೇರಿ ಐವರು 10 ರೂ. ಕೊಟ್ಟು 3 ಪ್ಯಾಕೇಟ್ ಕಡ್ಲೆ ಬೀಜ ಕೇಳಿದ್ದರು. 10 ರೂ.ಗೆ ಎರಡು ಪ್ಯಾಕೇಟ್ ಬರುತ್ತೆ ಅಂದಿದ್ದಕ್ಕೆ ಹಲ್ಲೆ ಮಾಡಿದ್ದಾರೆ. ಕ್ಯಾಷಿಯರ್ ಪುನೀತ್ ತಲೆಗೆ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಮಾದನಾಯಕನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪರಾಧ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ