Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬ್ರೇಕ್ ಅಪ್; ಜೈಲಿನಲ್ಲಿರುವ ಭೂಗತ ಪಾತಕಿ ಅಬು ಸಲೇಂನ ಪ್ರೇಯಸಿಗೆ ಮತ್ತೊಬ್ಬನ ಜತೆ ಮದುವೆ

ಅಬು ಸಲೇಂ ಪತ್ನಿ ಸುಮೈರಾ ಜುಮೈ ಅವರಿಂದ ವಿಚ್ಛೇದನ ಪಡೆದ ನಂತರ ಬಾಲಿವುಡ್ ನಟಿ ಮತ್ತು ಪೋರ್ಚುಗಲ್‌ನಲ್ಲಿ ಇರುತ್ತಿದ್ದ ಮೋನಿಕಾ ಬೇಡಿಯೊಂದಿಗೆ ಸಂಪರ್ಕ ಹೊಂದಿದ್ದ. ಆತನ್ನು ಪೋರ್ಚುಗಲ್‌ನಿಂದ ಹಸ್ತಾಂತರಿಸಿದ ನಂತರ ಮೋನಿಕಾ ಬೇಡಿ ಕೂಡ ಅಬು ಸಲೇಂನನ್ನು ತೊರೆದರು. ಭೂಗತ ಪಾತಕಿಯನ್ನು ಮಹಿಳೆ ತೊರೆದಿದ್ದು ಇದು ಎರಡನೇ ಬಾರಿ.

ಬ್ರೇಕ್ ಅಪ್; ಜೈಲಿನಲ್ಲಿರುವ ಭೂಗತ ಪಾತಕಿ ಅಬು ಸಲೇಂನ ಪ್ರೇಯಸಿಗೆ ಮತ್ತೊಬ್ಬನ ಜತೆ ಮದುವೆ
ಅಬು ಸಲೇಂ
Follow us
ರಶ್ಮಿ ಕಲ್ಲಕಟ್ಟ
|

Updated on:Jan 10, 2024 | 2:15 PM

ಮುಂಬೈ ಜನವರಿ 10: ಗ್ಯಾಂಗ್​​​ಸ್ಟರ್ ಮತ್ತು ಭೂಗತ ಲೋಕದ ಡಾನ್ ಆಗಿರುವ ಅಬು ಸಲೇಂನನ್ನು (Abu Salem) ಆತನ ಪ್ರೇಯಸಿ  ಬಿಟ್ಟು ಹೋಗಿದ್ದಾಳೆ. ಅಬು ಸಲೇಂನ್ನು ಈ ರೀತಿ ಬಿಟ್ಟು ಹೋಗಿರುವ ಪ್ರೇಯಸಿಯರಲ್ಲಿ ಈಕೆ ಮೂರನೆಯವಳು. ಇತ್ತೀಚೆಗಷ್ಟೇ ಈತನ ಬದುಕಿನಿಂದ ಹೊರನಡೆದ ಮಹಿಳೆ ಮುಂಬ್ರಾದವಳು(Mumbra). ಕೆಲವು ವರ್ಷಗಳ ಹಿಂದೆ ನ್ಯಾಯಾಲಯದ ಪ್ರಕರಣವೊಂದಕ್ಕೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದಾಗ ಸಲೀಂ ಜತ ಆಕೆ ಇದ್ದಳು.ಆಕೆಯನ್ನು ಮದುವೆಯಾಗಲು ತಾತ್ಕಾಲಿಕವಾಗಿ ಜೈಲಿನಿಂದ ಹೊರಬರಲು ಸಲೇಂ ಬಯಸಿದ್ದ.

ಜುಲೈ 4, 2016 ರಂದು ಮಿಡ್-ಡೇ ಅಬು ಸಲೇ ಮತ್ತು ಆತನ ಪ್ರೇಯಸಿಯ ಚಿತ್ರಗಳನ್ನು ಪ್ರಕಟಿಸಿತ್ತು. ಎರಡು ವರ್ಷಗಳ ನಂತರ, ಸಲೇಂ ಆಕೆಯನ್ನು ಮದುವೆಯಾಗಲು ತಾತ್ಕಾಲಿಕವಾಗಿ ಜೈಲಿನಿಂದ ಹೊರಬರಲು ಬಯಸಿದ್ದು, ಪೆರೋಲ್‌ಗಾಗಿ ಅವರ ವಿನಂತಿಯನ್ನು ನಿರಾಕರಿಸಲಾಯಿತು.

ಮೊನಿಕಾ ಬೇಡಿ ಜತೆ ಸಂಬಂಧ ಇರಿಸಿಕೊಂಡಿದ್ದ ಅಬು ಸಲೇಂ

ಅಬು ಸಲೇಂ ಪತ್ನಿ ಸುಮೈರಾ ಜುಮೈ ಅವರಿಂದ ವಿಚ್ಛೇದನ ಪಡೆದ ನಂತರ ಬಾಲಿವುಡ್ ನಟಿ ಮತ್ತು ಪೋರ್ಚುಗಲ್‌ನಲ್ಲಿ ಇರುತ್ತಿದ್ದ ಮೋನಿಕಾ ಬೇಡಿಯೊಂದಿಗೆ ಸಂಪರ್ಕ ಹೊಂದಿದ್ದ. ಆತನ್ನು ಪೋರ್ಚುಗಲ್‌ನಿಂದ ಹಸ್ತಾಂತರಿಸಿದ ನಂತರ ಮೋನಿಕಾ ಬೇಡಿ ಕೂಡ ಅಬು ಸಲೇಂನನ್ನು ತೊರೆದರು. ಭೂಗತ ಪಾತಕಿಯನ್ನು ಮಹಿಳೆ ತೊರೆದಿದ್ದು ಇದು ಎರಡನೇ ಬಾರಿ

ಮುಂಬ್ರಾದಲ್ಲಿ ಮತ್ತೊಬ್ಬ ವ್ಯಕ್ತಿಯನ್ನು ಮದುವೆ ಆದ ಗರ್ಲ್ ಫ್ರೆಂಡ್

ಅಬು ಸಲೇಂ ಜೀವನದಿಂದ ಈಗ ಮತ್ತೊಬ್ಬ ಮಹಿಳೆ ದೂರವಾಗಿದ್ದಾಳೆ .ಈಕೆ ಶುಕ್ರವಾರ (ಜನವರಿ 5) ಮುಂಬ್ರಾದಲ್ಲಿ ಇನ್ನೊಬ್ಬ ವ್ಯಕ್ತಿಯೊಂದಿಗೆ ವಿವಾಹವಾದರು ಎಂದು ವರದಿಯಾಗಿದೆ. ಮಹಿಳೆಯ ಮದುವೆಯು ಅಬು ಸಲೇಂ ಸಂಬಂಧದ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಅಬು ಸಲೇಂ ಪ್ರಸ್ತುತ 25 ವರ್ಷಗಳ ಜೈಲು ಶಿಕ್ಷೆಯನ್ನು ಅನುಭವಿಸುತ್ತಿದ್ದು, ಪನ್ವೆಲ್‌ನಲ್ಲಿರುವ ತಲೋಜಾ ಜೈಲಿನಲ್ಲಿದ್ದಾನೆ. ಅಬು ಸಲೇಂಗೆ ಪೆರೋಲ್ ನಿರಾಕರಿಸಿದ ನಂತರ ಮಹಿಳೆ ಮನಸ್ಸು ಬದಲಾಯಿಸಿರಬಹುದು ಎನ್ನಲಾಗಿದೆ.

ಅಬು ಸಲೇಂಗೆ ಪೆರೋಲ್ ನಿರಾಕರಣೆ

2018 ರಲ್ಲಿ ವಿಶೇಷ ವಿವಾಹ ಕಾಯಿದೆಯಡಿಯಲ್ಲಿ ಮದುವೆಯಾಗಲು ಸಲೇಂ 45 ದಿನಗಳ ಪೆರೋಲ್‌ಗೆ ಅರ್ಜಿ ಸಲ್ಲಿಸಿದ್ದು ತಾನು 12 ವರ್ಷಗಳಿಂದ ಜೈಲಿನಲ್ಲಿದ್ದೇನೆ. ನಾನು ಎಂದಿಗೂ ಪೆರೋಲ್‌ಗೆ ಅರ್ಜಿ ಸಲ್ಲಿಸಿಲ್ಲ ಎಂದು ಹೇಳಿದ್ದಾರೆ. ಈತ ಅಜಂಗಢಕ್ಕೆ ಹೋಗುತ್ತಿದ್ದಾಗ ಮಹಿಳೆಯೊಂದಿಗೆ ಪ್ರಯಾಣಿಸುತ್ತಿದ್ದರು ಎಂದು ಮಿಡ್-ಡೇ ವರದಿ ಮಾಡಿದೆ.

ಇದನ್ನೂ ಓದಿ: ಅಂಡರ್ವಲ್ಡ್ ಮುಂದೆ ಮಂಡಿಯೂರದ ಏಕೈಕ ಬಾಲಿವುಡ್ ಸ್ಟಾರ್ ಶಾರುಖ್ ಖಾನ್’

ನಿಕಾಹ್ ಆಗಿತ್ತು?

ಈ ಮಹಿಳೆಯೊಂದಿಗೆ ಅಬು ಸಲೇಂ ನಿಕಾಹ್ ಮಾಡಿದ್ದಾನೆ ಎಂಬ ವರದಿಗಳೂ ಇವೆ. ಆದಾಗ್ಯೂ, ಈ ವರದಿಗಳನ್ನು ಆಕೆಯ ಕುಟುಂಬ ಸದಸ್ಯರು ನಿರಾಕರಿಸಿದರು. ಮಹಿಳೆಯ ಅಜ್ಜ ಸಲೇಂನೊಂದಿಗೆ ಮಹಿಳೆಯ ಹೆಸರಿನಲ್ಲಿ ನೋಂದಾಯಿಸಲಾದ ಸಿಮ್ ಕಾರ್ಡ್ಅ ನ್ನು ಬಳಸುತ್ತಿದ್ದರು, ಏಕೆಂದರೆ ಅವರು ಈತನ ಕಾನೂನು ವ್ಯವಹಾರಗಳನ್ನು ನೋಡಿಕೊಳ್ಳುತ್ತಿದ್ದರು ಎಂದು ಅವರು ಹೇಳಿದ್ದಾರೆ.

ಮತ್ತಷ್ಟು ಅಪರಾಧ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 2:14 pm, Wed, 10 January 24