ಬೆಂಗಳೂರಿನಲ್ಲಿ ಇನ್ನೂ ಉಳಿದಿವೆ 7878 ರಸ್ತೆ ಗುಂಡಿ, ಪ್ರಾಣ ಕೈಯಲ್ಲಿ ಹಿಡಿದು ಸಂಚರಿಸುವ ಸ್ಥಿತಿ

ರಾಜ್ಯ ಸರ್ಕಾರ ಬೆಂಗಳೂರನ್ನ ಬ್ರ್ಯಾಂಡ್ ಬೆಂಗಳೂರು‌ ಮಾಡಲು ಹೊರಟಿದೆ. ನಗರದಲ್ಲಿ ಟ್ರಾಫಿಕ್ ಸಮಸ್ಯೆಯೊಂದೆಡೆಯಾದರೆ ಮತ್ತೊಂದೆಡೆಗೆ ರಸ್ತೆಗುಂಡಿ ಸಮಸ್ಯೆ. ನಗರದ ಮುಖ್ಯ ರಸ್ತೆಗಳಲ್ಲಿ ರಸ್ತೆ ಮಧ್ಯೆ ತಗ್ಗು ಗುಂಡಿಗಳಿದ್ದು, ಈ ರಸ್ತೆ ಗುಂಡಿಗೆ ಮುಕ್ತಿ ಇಲ್ವಾ ಎಂಬಂತಾಗಿದ್ದು, ವಾಹನ ಸವಾರರು ಜೀವ ಕೈಯಲ್ಲಿ ಹಿಡಿದು ರಸ್ತೆಗೆ ಇಳಿಯುವಂತಾಗಿದೆ.

ಬೆಂಗಳೂರಿನಲ್ಲಿ ಇನ್ನೂ ಉಳಿದಿವೆ 7878 ರಸ್ತೆ ಗುಂಡಿ, ಪ್ರಾಣ ಕೈಯಲ್ಲಿ ಹಿಡಿದು ಸಂಚರಿಸುವ ಸ್ಥಿತಿ
ರಸ್ತೆ ಗುಂಡಿಗಳು (ಸಂಗ್ರಹ ಚಿತ್ರ)
Follow us
Vinayak Hanamant Gurav
| Updated By: ಆಯೇಷಾ ಬಾನು

Updated on:Dec 30, 2023 | 3:34 PM

ಬೆಂಗಳೂರು, ಡಿ.30: ಬೆಂಗಳೂರಿನ ರಸ್ತೆ ಗುಂಡಿಗಳು (potholes) ಜನರ ಜೀವಕ್ಕಾಗಿ ಕಾದು ಕುಳಿತಂತಿದೆ. ಕೋಟ್ಯಾಂತರ ರೂಪಾಯಿ ವೆಚ್ಚ ಮಾಡಿದರೂ ರಸ್ತೆಗುಂಡಿಗಳನ್ನು ಮುಚ್ಚಲು ಪಾಲಿಕೆ (BBMP) ವಿಫಲವಾಗುತ್ತಿದೆ. ನಗರದ ಪ್ರಮುಖ ರಸ್ತೆಗಳಲ್ಲಿ ಎಲ್ಲೆಂದರಲ್ಲಿ ಗುಂಡಿಗಳು ಬಿದ್ದಿವೆ. ಈ ಯಮ ಗುಂಡಿಗಳಿಂದಾಗಿ ವಾಹನ ಸವಾರರು ಸರ್ಕಸ್ ಮಾಡುತ್ತಲೇ ಓಡಾಡುವಂತಾಗಿದೆ. ಸ್ವಲ್ಪ ಯಾಮಾರಿದ್ರು ಕೂಡ ಅನಾಹುತ ಆಗೊದಂತು ತಪ್ಪಿದ್ದಲ್ಲ, ಇನ್ನೂ ಬನ್ನೆರುಘಟ್ಟ ಮುಖ್ಯರಸ್ತೆಯ ಮಧ್ಯದಲ್ಲೆ ಗುಂಡಿಗಳು ಬಿದ್ದಿದ್ದು ವಾಹನ ಸವಾರರು ಓಡಾಡಲು ಕೂಡ ಭಯ ಪಡುವಂತಾಗಿದೆ. ಈ‌ ಬಗ್ಗೆ ಸ್ಥಳೀಯರು ಮಾತನಾಡಿ ಇಲ್ಲಿ ಗುಂಡಿಗಳು ಇವೆ ಇದರಿಂದ ಓಡಾಡಲು ತೊಂದರೆ ಆಗುತ್ತದೆ. ಈ ಬಗ್ಗೆ ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಬಿಬಿಎಂಪಿ ಅಧಿಕಾರಿಗಳ ಗಮನಕ್ಕೆ‌ ತಂದರು ಯಾರೊಬ್ಬರು ಇತ್ತ ಗಮನ ಹರಿಸುತ್ತಿಲ್ಲ ಎಂದು ಆಕ್ರೋಶ ಹೊರ ಹಾಕಿದ್ದಾರೆ.

ಪ್ರತಿ ಬಾರಿ ಎಲ್ಲಾ ಗುಂಡಿ ಮುಚ್ಚಲಾಗಿದೆ ಎನ್ನುವ ಪಾಲಿಕೆಯೇ ಕೊಟ್ಟಿರುವ ವರದಿಯಲ್ಲಿ ಇನ್ನೂ ಕೂಡ ನಗರದಲ್ಲಿ 5961 ರಸ್ತೆಗುಂಡಿಗಳು ಮುಚ್ಚುವುದು ಬಾಕಿ ಇದೆ. ಡಿಸೆಂಬರ್ ನಲ್ಲಿ ಪಾಲಿಕೆ ಮುಚ್ಚಿದ್ದು ಕೇವಲ 1917 ಗುಂಡಿಗಳು ಮಾತ್ರ. ಆದರೆ ನಗರದಲ್ಲಿ 5961 ಗುಂಡಿಗಳು ಮುಚ್ಚಲು ಬಾಕಿ ಇದ್ದು ಒಟ್ಟು ಈ ತಿಂಗಳು 7878 ಗುಂಡಿಗಳು ಬಿದ್ದಿವೆ.

ಇದನ್ನೂ ಓದಿ: ಮುಸ್ಲಿಂ ಮಹಿಳೆಯರ ಬಗ್ಗೆ ವಿವಾದಾತ್ಮಕ ಹೇಳಿಕೆ ಕೊಟ್ಟ ಕಲ್ಲಡ್ಕ ಪ್ರಭಾಕರ್‌ ಭಟ್‌ ವಿರುದ್ಧ ಮತ್ತೆರಡು FIR ದಾಖಲು

ಬೊಮ್ಮನಹಳ್ಳಿಯಲ್ಲಿ 643 ರಸ್ತೆ ಗುಂಡಿ, ದಾಸರಹಳ್ಳಿಯಲ್ಲಿ 645 ರಸ್ತೆ ಗುಂಡಿ, ಪೂರತಣ ವಲಯದಲ್ಲಿ 1988 ರಸ್ತೆ ಗುಂಡಿ, ಮಹಾದೇವಪುರದಲ್ಲಿ 1145 ರಸ್ತೆ ಗುಂಡಿ, ಆರ್ ಆರ್ ನಗರದಲ್ಲಿ 589 ರಸ್ತೆ ಗುಂಡಿ, ದಕ್ಷಿಣ ವಲಯದಲ್ಲಿ 706 ರಸ್ತೆ ಗುಂಡಿ, ಪಶ್ಚಿಮ ವಲಯದಲ್ಲಿ 739 ರಸ್ತೆ ಗುಂಡಿ, ಯಲಹಂಕದಲ್ಲಿ 1423 ರಸ್ತೆ ಗುಂಡಿ ಸೇರಿ ಒಟ್ಟು 7878 ರಸ್ತೆಗುಂಡಿಗಳು ಬಿದ್ದಿವೆ.

ಇನ್ನೂ ಈ ಬಗ್ಗೆ ಬಿಬಿಎಂಪಿ ಚೀಫ್ ಇಂಜಿನಿಯರ್ ರನ್ನ ಕೇಳಿದರೆ ತ್ವರಿತಗತಿಯಲ್ಲಿ ಗುಂಡಿ ಮುಚ್ಚಲು ಬಿಬಿಎಂಪಿ ಹೊಸ ಟೆಂಡರ್ ಕರೆಯಲು ಮುಂದಾಗಿದೆ. ಇದಕ್ಕಂತಲೇ ಪ್ರತಿ ವಾರ್ಡ್ 15 ಲಕ್ಷ ಅನುದಾನವನ್ನೂ ಪಾಲಿಕೆ ನಿಗದಿ ಮಾಡಿದೆ. ವಾರ್ಡ್ ಮಟ್ಟದಲ್ಲಿ ರಸ್ತೆಗುಂಡಿಗಳನ್ನು ಮುಚ್ಚಲು ವಿಶೇಷ ನಿಗಾವಹಿಸಲಿದ್ದು, ಶೀಘ್ರವೇ ರಸ್ತೆಗುಂಡಿ ಮುಚ್ಚಲಿದ್ದಾರೆ ಎಂದು ತಿಳಿಸಿದ್ದಾರೆ.

ಒಟ್ಟಾರೆ ರಸ್ತೆಗುಂಡಿಗಳಿಂದ ಬೆಂಗಳೂರಿಗೆ ಮುಕ್ತಿ ಇಲ್ಲ ಎಂಬಂತಾಗಿದೆ. ಇದಕ್ಕಂತಲೇ ಪ್ರತಿ ವರ್ಷ ಬಜೆಟ್ ನಲ್ಲಿ ನೂರಾರು ಕೋಟಿ ಪಾಲಿಕೆ ಮೀಸಲಿಡುತ್ತೆ. ಆದರೂ ಇದಕ್ಕೊಂದು ಶಾಶ್ವತ ಪರಿಹಾರ ನೀಡಲು ಬಿಬಿಎಂಪಿ ಎಡವುತ್ತಿರುವುದು ವಿಪರ್ಯಾಸ.

ಬೆಂಗಳೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 3:29 pm, Sat, 30 December 23

ನಕ್ಸಲ್ ನಾಯಕ ವಿಕ್ರಂಗೌಡನ ಎನ್ಕೌಂಟರ್ ಸಹ ಸಂಶಯ ಹುಟ್ಟಿಸುತ್ತಿದೆ: ಅಣ್ಣಾಮಲೈ
ನಕ್ಸಲ್ ನಾಯಕ ವಿಕ್ರಂಗೌಡನ ಎನ್ಕೌಂಟರ್ ಸಹ ಸಂಶಯ ಹುಟ್ಟಿಸುತ್ತಿದೆ: ಅಣ್ಣಾಮಲೈ
ಮುಡಾ ಅಧಿಕಾರಿಗಳು ತಾಯಿಯ ಒಡಲನ್ನು ಬಗೆಯುತ್ತಿದ್ದಾರೆ: ಸ್ನೇಹಮಯಿ ಕೃಷ್ಣ
ಮುಡಾ ಅಧಿಕಾರಿಗಳು ತಾಯಿಯ ಒಡಲನ್ನು ಬಗೆಯುತ್ತಿದ್ದಾರೆ: ಸ್ನೇಹಮಯಿ ಕೃಷ್ಣ
ದಾಸರಹಳ್ಳಿ ವಲಯ ಕಚೇರಿ ಇಂಜನೀಯರ್ ಯದುಕೃಷ್ಣ ಸಿಕ್ಕಿಬಿದ್ದ ಅಧಿಕಾರಿ
ದಾಸರಹಳ್ಳಿ ವಲಯ ಕಚೇರಿ ಇಂಜನೀಯರ್ ಯದುಕೃಷ್ಣ ಸಿಕ್ಕಿಬಿದ್ದ ಅಧಿಕಾರಿ
‘ವಟವಟ ಅಂತಾನೆ’; ಐಶ್ವರ್ಯಾಗೆ ಶಿಶಿರ್ ಮೇಲಿದ್ದ ಅಭಿಪ್ರಾಯ ಬದಲಾಯ್ತಾ?
‘ವಟವಟ ಅಂತಾನೆ’; ಐಶ್ವರ್ಯಾಗೆ ಶಿಶಿರ್ ಮೇಲಿದ್ದ ಅಭಿಪ್ರಾಯ ಬದಲಾಯ್ತಾ?
ಮನೆಯಲ್ಲಿ ತೆಂಗಿನಕಾಯಿ ಕಟ್ಟುವುದರ ಹಿಂದಿನ ಅರ್ಥವೇನು ಗೊತ್ತಾ? ವಿಡಿಯೋ ನೋಡಿ
ಮನೆಯಲ್ಲಿ ತೆಂಗಿನಕಾಯಿ ಕಟ್ಟುವುದರ ಹಿಂದಿನ ಅರ್ಥವೇನು ಗೊತ್ತಾ? ವಿಡಿಯೋ ನೋಡಿ
ಇಂದಿನ ರಾಶಿ ಫಲ, ಪಂಚಾಂಗ ಮತ್ತು ಜ್ಯೋತಿಷ್ಯ ಭವಿಷ್ಯ ತಿಳಿಯಿರಿ
ಇಂದಿನ ರಾಶಿ ಫಲ, ಪಂಚಾಂಗ ಮತ್ತು ಜ್ಯೋತಿಷ್ಯ ಭವಿಷ್ಯ ತಿಳಿಯಿರಿ
ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ
ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?