Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಫುಡ್ ಡೆಲಿವರಿ ಹುಡುಗನ ಸಖತ್ ಡ್ಯಾನ್ಸ್; ಇದೇ ಕಾರಣಕ್ಕೆ ಆರ್ಡರ್ ಬರಲು ತಡವಾಯಿತು ಎಂದು ಕಾಲೆಳೆದ ನೆಟ್ಟಿಗರು

ಇತ್ತೀಚಿನ ದಿನಗಳಲ್ಲಂತೂ ಇನ್ಸ್ಟಾಗ್ರಾಮ್ ಓಪನ್ ಮಾಡಿದ್ರೆ ಸಾಕು ನೃತ್ಯ ಸಂಬಂದಿ ರೀಲ್ಸ್ ವಿಡಿಯೋಗಳೇ ಹೆಚ್ಚಾಗಿ ಕಾಣಸಿಗುತ್ತವೆ. ಅದರಲ್ಲೂ ಕೆಲವೊಬ್ಬರ ಡಾನ್ಸ್ ವಿಡಿಯೋಗಳಂತೂ ಸಿಕ್ಕಾಪಟ್ಟೆ ವೈರಲ್ ಆಗುತ್ತವೆ. ಸದ್ಯ ಅದೇ ರೀತಿ ಝೊಮ್ಯಾಟೊ ಫುಡ್ ಡೆಲಿವರಿ ಹುಡುಗನ ಡಾನ್ಸ್ ವಿಡಿಯೋ ಕೂಡಾ ಸಖತ್ ವೈರಲ್ ಆಗಿದ್ದು, ಇದೇ ಕಾರಣಕ್ಕೋ ನಮ್ಮ ಆರ್ಡರ್ಸ್ ಬರಲು ಇಷ್ಟು ತಡವಾದದ್ದು ಎಂದು ನೆಟ್ಟಿಗರು ಈ ಯುವಕನ ಕಾಲೆಳೆದಿದ್ದಾರೆ.

Viral Video: ಫುಡ್ ಡೆಲಿವರಿ ಹುಡುಗನ   ಸಖತ್ ಡ್ಯಾನ್ಸ್; ಇದೇ ಕಾರಣಕ್ಕೆ ಆರ್ಡರ್ ಬರಲು ತಡವಾಯಿತು ಎಂದು ಕಾಲೆಳೆದ ನೆಟ್ಟಿಗರು
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷತಾ ವರ್ಕಾಡಿ

Updated on: Feb 23, 2024 | 7:58 PM

ಸೋಷಿಯಲ್ ಮೀಡಿಯಾವು ಪ್ರತಿಭೆಗಳನ್ನು ಪ್ರದರ್ಶಿಸಲಿರುವ ಒಂದು ಅದ್ಭುತ ವೇದಿಕೆಯಾಗಿದೆ. ಅದೆಷ್ಟೋ ಜನರು ನೃತ್ಯ, ಆಕ್ಟಿಂಗ್, ಚಿತ್ರಕಲೆ, ಸಂಗೀತ ಹೀಗೆ ತಮ್ಮ ತಮ್ಮ ಪ್ರತಿಭೆಗಳಿಗೆ ಸಂಬಂಧಿಸಿ ವಿಡಿಯೋ, ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವ ಮೂಲಕ ಜನರನ್ನು ಮನರಂಜಿಸುತ್ತಿರುತ್ತಾರೆ. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಈ ನೃತ್ಯಕ್ಕೆ ಸಂಬಂಧಿಸಿದ ರೀಲ್ಸ್ ವಿಡಿಯೋಗಳು ಪ್ರತಿನಿತ್ಯ ಹರಿದಾಡುತ್ತಿರುತ್ತವೆ. ಇವುಗಳಲ್ಲಿ ಕೆಲವೊಂದು ಡಾನ್ಸ್ ವಿಡಿಯೋಗಳು ಹುಚ್ಚುತನವೆಂದು ಕಂಡ್ರೆ, ಇನ್ನೂ ಕೆಲವೊಂದು ಡಾನ್ಸರ್ಸ್ ಗಳ ವಿಡಿಯೋಗಳು ನಮ್ಮ ಮನ ಗೆಲ್ಲುತ್ತವೆ. ಸದ್ಯ ಇದೀಗ ಅಂತಹದ್ದೇ ವಿಡಿಯೋವೊಂದು ಹರಿದಾಡುತ್ತಿದ್ದು, ಝೊಮ್ಯಾಟೊ ಡೆಲಿವರಿ ಹುಡುಗನ ಅದ್ಭುತ ನೃತ್ಯ ಪ್ರತಿಭೆಯನ್ನು ಕಂಡು ನೆಟ್ಟಿಗರು ಭೇಷ್ ಎಂದಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ಝೊಮ್ಯಾಟೊ ಫುಡ್ ಡೆಲಿವರಿ ಬಾಯ್ ರಸ್ತೆ ಮಧ್ಯದಲ್ಲಿ ʼಉಲ್ಜಾ ಜಿಯಾʼ ಎಂಬ ಹಿಂದಿ ಹಾಡಿಗೆ ಸಖತ್ ಸ್ಟೆಪ್ಸ್ ಹಾಕುತ್ತಿರುವುನ್ನು ಕಾಣಬಹುದು. ಈ ವೈರಲ್ ವಿಡಿಯೋವನ್ನು ಝೊಮ್ಯಾಟೊ ಫುಡ್ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿರುವಂತಹ ಮೊಸಾನ್ (@mosaan_2o) ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

View this post on Instagram

A post shared by MoSAaN (@mosaan_2o)

ವೈರಲ್ ವಿಡಿಯೋದಲ್ಲಿ ರಾತ್ರಿಯ ವೇಳೆ ತನ್ನ ಫುಡ್ ಡೆಲಿವರಿ ಕೆಲಸವನ್ನು ಮುಗಿಸಿ ಬಂದಂತಹ ಮೊಸಾನ್ ತಮ್ಮ ಖುಷಿಗಾಗಿ ರಸ್ತೆ ಮಧ್ಯದಲ್ಲಿ ʼಉಲ್ಜಾ ಜಿಯಾʼ ಎಂಬ ಹಿಂದಿ ಹಾಡಿಗೆ ಸಖತ್ ಆಗಿ ನೃತ್ಯ ಮಾಡುತ್ತಿರುವ ದೃಶ್ಯವನ್ನು ಕಾಣಬಹುದು.

ಇದನ್ನೂ ಓದಿ: ವಿಶ್ವದ ಅತ್ಯಂತ ಚಿಕ್ಕ ವಾಷಿಂಗ್ ಮೆಷಿನ್ ತಯಾರಿಸಿ ಗಿನ್ನೆಸ್ ದಾಖಲೆ ಬರೆದ ಆಂಧ್ರಪ್ರದೇಶದ ಯುವಕ

ಫೆಬ್ರವರಿ 14 ರಂದು ಹಂಚಿಕೊಳ್ಳಲಾದ ಈ ವಿಡಿಯೋ 12.8 ಮಿಲಿಯನ್ ವೀಕ್ಷಣೆಗಳನ್ನು ಹಾಗೂ 4 ಲಕ್ಷಕ್ಕೂ ಅಧಿಕ ಲೈಕ್ಸ್ ಗಳನ್ನು ಪಡೆದುಕೊಂಡಿದೆ. ಹಾಗೂ ತರಹೇವಾರಿ ಕಾಮೆಂಟ್ಸ್ ಗಳೂ ಹರಿದು ಬಂದಿವೆ. ಒಬ್ಬ ಬಳಕೆದಾರರು ʼಸಹೋದರ ನಾನು ನನ್ನ ಆರ್ಡರ್ ಗಾಗಿ ಕಾಯುತ್ತಿದ್ದೇನೆ, ಇನ್ನಾ ಬಂದಿಲ್ಲʼ ಅಂತ ತಮಾಷೆಯ ಕಾಮೆಂಟ್ ಬರೆದುಕೊಂಡಿದ್ದಾರೆ. ಮತ್ತೊಬ್ಬ ಬಳಕೆದಾರರು ʼಓಹೋ ಇದೇ ಕಾರಣಕ್ಕೋ ನಾನು ಆರ್ಡರ್ ಮಾಡಿದ ಬಿರಿಯಾನಿ ಬರಲು ತಡವಾಗಿದ್ದುʼ ಎಂದು ಈ ಯುವಕನ ಕಾಲೆಳೆದಿದ್ದಾರೆ. ಮತ್ತೊಬ್ಬ ಬಳಕೆದಾರರು ʼನಾನು ಆರ್ಡರ್ ಮಾಡಿದ ಬಟರ್ ಚಿಕನ್ ಎಲ್ಲಿದೆ ಬ್ರೋʼ ಎಂದು ತಮಾಷೆಯ ಕಾಮೆಂಟ್ ಮಾಡಿದ್ದಾರೆ. ಇನ್ನೂ ಅನೇಕರು ಈ ಯುವಕ ನೃತ್ಯಕ್ಕೆ ಮೆಚ್ಚುಗೆಯನ್ನು ಸೂಚಿಸಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Daily Devotional: ದೇವಸ್ಥಾನದಲ್ಲಿ ಮಹಿಳೆಯರು ಹೂವು ಧರಿಸುವುದು ಶುಭವೇ?
Daily Devotional: ದೇವಸ್ಥಾನದಲ್ಲಿ ಮಹಿಳೆಯರು ಹೂವು ಧರಿಸುವುದು ಶುಭವೇ?
Daily horoscope: ಹುಣ್ಣಿಮೆಯ ದಿನದ ರಾಶಿ ಫಲಗಳನ್ನು ತಿಳಿಯಿರಿ
Daily horoscope: ಹುಣ್ಣಿಮೆಯ ದಿನದ ರಾಶಿ ಫಲಗಳನ್ನು ತಿಳಿಯಿರಿ
ಮಂಗಳೂರಿನಲ್ಲೊಂದು ಎದೆ ಝಲ್ ಎನಿಸುವ ಭೀಕರ ಅಪಘಾತ
ಮಂಗಳೂರಿನಲ್ಲೊಂದು ಎದೆ ಝಲ್ ಎನಿಸುವ ಭೀಕರ ಅಪಘಾತ
ಮಾತಿಗೆ ಮಾತು ಬೆಳೆದು ಕಂಡಕ್ಟರ್​-ಪ್ರಯಾಣಿಕರ ನಡುವೆ ಹೊಡೆದಾಟ!
ಮಾತಿಗೆ ಮಾತು ಬೆಳೆದು ಕಂಡಕ್ಟರ್​-ಪ್ರಯಾಣಿಕರ ನಡುವೆ ಹೊಡೆದಾಟ!
ಕುಡಿದ ಯುವಕರಿಂದ ಆಂಧ್ರದ ಮಹಿಳಾ ಪೊಲೀಸ್ ಅಧಿಕಾರಿಯ ಕೂದಲೆಳೆದು ಹಲ್ಲೆ
ಕುಡಿದ ಯುವಕರಿಂದ ಆಂಧ್ರದ ಮಹಿಳಾ ಪೊಲೀಸ್ ಅಧಿಕಾರಿಯ ಕೂದಲೆಳೆದು ಹಲ್ಲೆ
ಪುನೀತ್ ಕೆನ್ನೆಗೆ ಹೊಡೆಯುವ ದೃಶ್ಯ ಹೇಗಿತ್ತು? ಆ ದಿನದ ಅನುಭವ ತಿಳಿಸಿದ ನಟ
ಪುನೀತ್ ಕೆನ್ನೆಗೆ ಹೊಡೆಯುವ ದೃಶ್ಯ ಹೇಗಿತ್ತು? ಆ ದಿನದ ಅನುಭವ ತಿಳಿಸಿದ ನಟ
‘ಅಪ್ಪು’ ಸಿನಿಮಾದ ಅವಕಾಶ ನನಗೆ ಸಿಕ್ಕಾಗ ನಂಬೋಕೆ ಆಗಲಿಲ್ಲ: ಗುರುಕಿರಣ್
‘ಅಪ್ಪು’ ಸಿನಿಮಾದ ಅವಕಾಶ ನನಗೆ ಸಿಕ್ಕಾಗ ನಂಬೋಕೆ ಆಗಲಿಲ್ಲ: ಗುರುಕಿರಣ್
ಕರಾವಳಿ ಜಿಲ್ಲೆಗಳ ಸಮಸ್ಯೆಯನ್ನು ಸದನದ ಗಮನಕ್ಕೆ ತಂದ ಸುನೀಲ ಕುಮಾರ
ಕರಾವಳಿ ಜಿಲ್ಲೆಗಳ ಸಮಸ್ಯೆಯನ್ನು ಸದನದ ಗಮನಕ್ಕೆ ತಂದ ಸುನೀಲ ಕುಮಾರ
ಪಾರ್ಕಿಂಗ್ ವಿಚಾರಕ್ಕೆ ಜಗಳ; ಡಯಾಲಿಸಿಸ್‌ನಲ್ಲಿದ್ದ ವಿಜ್ಞಾನಿ ಸಾವು
ಪಾರ್ಕಿಂಗ್ ವಿಚಾರಕ್ಕೆ ಜಗಳ; ಡಯಾಲಿಸಿಸ್‌ನಲ್ಲಿದ್ದ ವಿಜ್ಞಾನಿ ಸಾವು
ಎಸ್ಸಿಎಸ್ಪಿ-ಟಿಎಸ್ಪಿ ಕಾಯ್ದೆ ಜಾರಿ ಮಾಡಿದ್ದು ಅವರಿಗೆ ಅನೂಕೂಲವಾಗಲು: ಸಚಿವ
ಎಸ್ಸಿಎಸ್ಪಿ-ಟಿಎಸ್ಪಿ ಕಾಯ್ದೆ ಜಾರಿ ಮಾಡಿದ್ದು ಅವರಿಗೆ ಅನೂಕೂಲವಾಗಲು: ಸಚಿವ