Dhruva Sarja: ‘ಕೆಟ್ಟ ಅನುಭವ’: ವಿಮಾನ ದುರಂತ ತಪ್ಪಿದ ಬಳಿಕ ಧ್ರುವ ಸರ್ಜಾ ಮೊದಲ ಮಾತು
ಸ್ವಲ್ಪದರಲ್ಲೇ ದೊಡ್ಡ ಅನಾಹುತ ತಪ್ಪಿಹೋಗಿದೆ. ಧ್ರುವ ಸರ್ಜಾ ಮತ್ತು ‘ಮಾರ್ಟಿನ್’ ಚಿತ್ರತಂಡದವರು ಸೇಫ್ ಆದ ಬಳಿಕ ವಿಮಾನದಲ್ಲೇ ವಿಡಿಯೋ ಮೂಲಕ ಈ ಸುದ್ದಿ ತಿಳಿಸಿದ್ದಾರೆ. ‘ಇದು ತುಂಬ ಕೆಟ್ಟ ಅನುಭವ’ ಎಂದು ಧ್ರುವ ಸರ್ಜಾ ಹೇಳಿದ್ದಾರೆ. ಫ್ಲೈಟ್ ಕ್ರ್ಯಾಶ್ ತಪ್ಪಿದ ಬಳಿಕ ಅವರು ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಆ ವಿಡಿಯೋ ಇಲ್ಲಿದೆ..
ಕನ್ನಡದ ‘ಮಾರ್ಟಿನ್’ ಸಿನಿಮಾ (Martin Movie) ತಂಡದವರು ಪ್ರಯಾಣಿಸುತ್ತಿದ್ದ ವಿಮಾನ ಹವಾಮಾನ ವೈಪರಿತ್ಯದಿಂದ ತುರ್ತು ಭೂಸ್ಪರ್ಶ ಮಾಡಿದೆ. ಶ್ರೀನಗರದಿಂದ ದೆಹಲಿಗೆ ಪ್ರಯಾಣ ಮಾಡುತ್ತಿದ್ದ ವಿಮಾನ ಕ್ರ್ಯಾಶ್ (Plane Crash) ಆಗುವ ಸಾಧ್ಯತೆ ಇತ್ತು. ಆದರೆ ಪೈಲಟ್ ಸಮಯ ಪ್ರಜ್ಞೆಯಿಂದ ದೊಡ್ಡ ದುರಂತ ಸ್ವಲ್ಪದರಲ್ಲೇ ತಪ್ಪಿಹೋಗಿದೆ. ಈ ಘಟನೆ ನಡೆದ ಬಳಿಕ ಧ್ರುವ ಸರ್ಜಾ ಮತ್ತು ಮಾರ್ಟಿನ್ ಚಿತ್ರತಂಡದವರು ವಿಡಿಯೋ ಮಾಡಿದ್ದಾರೆ. ಆ ಮೂಲಕ ತಮ್ಮ ಅಭಿಮಾನಿಗಳಿಗೆ, ಆಪ್ತರಿಗೆ ಮಾಹಿತಿ ನೀಡಿದ್ದಾರೆ. ಇದನ್ನು ತುಂಬ ಕೆಟ್ಟ ಅನುಭವ ಎಂದು ಧ್ರುವ ಸರ್ಜಾ (Dhruva Sarja) ಕರೆದಿದ್ದಾರೆ. ‘ಇವತ್ತು ಆಗಿದ್ದು ವರ್ಸ್ಟ್ ಎಕ್ಸ್ಪೀರಿಯನ್ಸ್. ಜೀವನದಲ್ಲಿ ಇಂಥ ಕೆಟ್ಟ ಅನುಭವ ಆಗಿರಲಿಲ್ಲ. ದೇವರಿಗೆ ನಾವು ಧನ್ಯವಾದ ಹೇಳಬೇಕು. ಜೈ ಆಂಜನೇಯ. ನಾವು ಸುರಕ್ಷಿತವಾಗಿದ್ದೇವೆ’ ಎಂದು ಧ್ರುವ ಸರ್ಜಾ ಹೇಳಿದ್ದಾರೆ. ಪ್ರಾಣಾಪಾಯದಿಂದ ಪಾರಾದ ಬಳಿಕ ಎಲ್ಲರೂ ಪೈಲಟ್ಗೆ ಧನ್ಯವಾದ ಹೇಳಿದ್ದಾರೆ. ಮಾರ್ಟಿನ್ ಚಿತ್ರತಂಡದವರು ಸೇಫ್ ಆಗಿರುವ ವಿಷಯ ತಿಳಿದು ಅಭಿಮಾನಿಗಳು ನಿಟ್ಟುಸಿರು ಬಿಟ್ಟಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ