ದಾವಣಗೆರೆ: ಕುಡಿಯುವ ನೀರಿಗಾಗಿ ಪರದಾಡುತ್ತಿರುವ ಗ್ರಾಮದಲ್ಲಿ ಉಕ್ಕಿದ ಗಂಗೆ, ವಿಡಿಯೋ ವೈರಲ್​

ದಾವಣಗೆರೆ: ಕುಡಿಯುವ ನೀರಿಗಾಗಿ ಪರದಾಡುತ್ತಿರುವ ಗ್ರಾಮದಲ್ಲಿ ಉಕ್ಕಿದ ಗಂಗೆ, ವಿಡಿಯೋ ವೈರಲ್​

ಬಸವರಾಜ್​ ದೊಡ್ಡಮನಿ, ದಾವಣಗೆರೆ
| Updated By: ವಿವೇಕ ಬಿರಾದಾರ

Updated on: Feb 20, 2024 | 7:58 AM

ದಾವಣಗೆರೆ ತಾಲೂಕಿನ ಗುಮ್ಮನೂರ ಗ್ರಾಮದಲ್ಲಿ ಬೋರ್ವೆಲ್ ಕೊರೆದಾಗ ‌ನೀರು ಆಕಾಶಕ್ಕೆ ಚಿಮ್ಮಿದೆ. ತೀವ್ರ ಕುಡಿಯುವ ನೀರಿನ‌ ಸಮಸ್ಯೆ ಹಿನ್ನೆಲೆಯಲ್ಲಿ ಗುಮ್ಮನೂರ ಗ್ರಾಮ ಪಂಚಾಯಿತಿ ಬೊರ್​ವೆಲ್ ಕೊರೆಸಿದೆ. 589 ಅಡಿಗೆ 6 ಇಂಚು ನೀರು ಉಕ್ಕಿದೆ.

ರಾಜ್ಯದ್ಯಂತ ಬರಗಾಲ (Drought) ಆವರಿಸಿದ್ದು ಕುಡಿಯುವ ನೀರಿಗೆ ಪರದಾಡುವಂತ ಪರಿಸ್ಥಿತಿ ಎದುರಾಗಿದೆ. ಸಮರ್ಪಕವಾಗಿ ಮಳೆಯಾಗದ ಹಿನ್ನೆಲೆಯಲ್ಲಿ ನೀರಿನ ಮೂಲಗಳು ಬರಿದಾಗುತ್ತಿವೆ. ಹಾಗೆ ಅಂತರ್ಜಲ ಮಟ್ಟ ದಿನದಿಂದ ದಿನಕ್ಕೆ ಕುಸಿಯುತ್ತಿದೆ. ಹೀಗಾಗಿ ಬೋರ್ವೆಲ್​​ಗಳಲ್ಲಿ ನೀರು ಬರುತ್ತಿಲ್ಲ. ಈ ನಡುವೆ ದಾವಣಗೆರೆ (Davangere) ಜಿಲ್ಲೆಯಲ್ಲಿ ಗಂಗೆ ಉಕ್ಕಿದ್ದಾಳೆ. ಹೌದು ದಾವಣಗೆರೆ ತಾಲೂಕಿನ ಗುಮ್ಮನೂರ ಗ್ರಾಮದಲ್ಲಿ ಬೋರ್ವೆಲ್ (Borewell) ಕೊರೆದಾಗ ‌ನೀರು ಆಕಾಶಕ್ಕೆ ಚಿಮ್ಮಿದೆ. ತೀವ್ರ ಕುಡಿಯುವ ನೀರಿನ‌ ಸಮಸ್ಯೆ ಹಿನ್ನೆಲೆಯಲ್ಲಿ ಗುಮ್ಮನೂರ ಗ್ರಾಮ ಪಂಚಾಯಿತಿ ಬೊರ್​ವೆಲ್ ಕೊರೆಸಿದೆ. 589 ಅಡಿಗೆ 6 ಇಂಚು ನೀರು ಉಕ್ಕಿದೆ. ಇಲ್ಲಿ ಒಂದು ಸಾವಿರ ಅಡಿ ಬೋರ್ವೆಲ್ ಕೊರದರೂ ನೀರು ಸಿಗುವುದಿಲ್ಲ. ಆದರೆ 589 ಅಡಿಗೆ ನೀರು ಸಿಕ್ಕಿದ್ದು, ಗ್ರಾಮಸ್ಥರ ಮುಖದಲ್ಲಿ ಮಂದಹಾಸ ಮೂಡಿದೆ.