AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Dhruva Sarja: ವಿಮಾನ ದುರಂತದಿಂದ ಪಾರಾದ ಧ್ರುವ ಸರ್ಜಾ, ‘ಮಾರ್ಟಿನ್’ ತಂಡ

Martin Movie: ಶ್ರೀನಗರದಿಂದ ದೆಹಲಿಗೆ ಇಂಡಿಗೋ ವಿಮಾನದಲ್ಲಿ ‘ಮಾರ್ಟಿನ್​’ ಚಿತ್ರತಂಡದವರು ಪ್ರಯಾಣ ಮಾಡುತ್ತಿದ್ದರು. ಪೈಲಟ್ ಸಮಯ ಪ್ರಜ್ಞೆಯಿಂದ ದೊಡ್ಡ ಅನಾಹುತ ತಪ್ಪಿದೆ. ಕ್ರ್ಯಾಶ್ ಆಗಬೇಕಿದ್ದ ವಿಮಾನವು ಸುರಕ್ಷಿತವಾಗಿ ಲ್ಯಾಂಡ್​ ಆಗಿದ್ದು, ಚಿತ್ರತಂಡದವರು ನಿಟ್ಟುಸಿರು ಬಿಟ್ಟಿದ್ದಾರೆ. ಧ್ರುವ ಸರ್ಜಾ ಮತ್ತು ಅವರ ತಂಡದವರು ಈ ಬಗ್ಗೆ ವಿಡಿಯೋ ಮೂಲಕ ಮಾಹಿತಿ ತಿಳಿಸಿದ್ದಾರೆ.

Dhruva Sarja: ವಿಮಾನ ದುರಂತದಿಂದ ಪಾರಾದ ಧ್ರುವ ಸರ್ಜಾ, ‘ಮಾರ್ಟಿನ್’ ತಂಡ
ಧ್ರುವ ಸರ್ಜಾ ಜೊತೆ ‘ಮಾರ್ಟಿನ್​’ ಸಿನಿಮಾ ತಂಡ
Follow us
ಮದನ್​ ಕುಮಾರ್​
|

Updated on:Feb 20, 2024 | 7:17 AM

ಸ್ಯಾಂಡಲ್​ವುಡ್​ ನಟ ಧ್ರುವ ಸರ್ಜಾ ಹಾಗೂ ಅವರ ‘ಮಾರ್ಟಿನ್​’ ಸಿನಿಮಾ (Martin Movie) ತಂಡದವರು ವಿಮಾನ ದುರಂತದಿಂದ (Plane Crash) ಪಾರಾಗಿದ್ದಾರೆ. ಚಿತ್ರತಂಡದವರು ಈ ಬಗ್ಗೆ ಸೋಶಿಯಲ್​ ಮೀಡಿಯಾದಲ್ಲಿ ವಿಡಿಯೋ ಹಂಚಿಕೊಳ್ಳುವ ಮೂಲಕ ವಿಷಯ ತಿಳಿಸಿದ್ದಾರೆ. ‘ಮಾರ್ಟಿನ್​’ ಸಿನಿಮಾದ ಶೂಟಿಂಗ್​ ಬಿರುಸಿನಿಂದ ಸಾಗುತ್ತಿವೆ. ಹಾಡಿನ ಚಿತ್ರೀಕರಣಕ್ಕಾಗಿ ಚಿತ್ರತಂಡದವರ ಜೊತೆ ಧ್ರುವ ಸರ್ಜಾ ಅವರು ಶ್ರೀನಗರಕ್ಕೆ ತೆರಳಿದ್ದರು. ಅಲ್ಲಿ ಶೂಟಿಂಗ್​ ಮುಗಿಸಿಕೊಂಡು ದೆಹಲಿಗೆ ವಾಪಸ್​ ಬರುವಾಗ ವಿಮಾನದಲ್ಲಿ ತೊಂದರೆ ಕಾಣಿಸಿಕೊಂಡಿದೆ. ಆ ಸಂದರ್ಭದ ವಿಡಿಯೋವನ್ನು ಧ್ರುವ ಸರ್ಜಾ (Dhruva Sarja) ಅವರು ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಪೈಲಟ್ ಸಮಯ ಪ್ರಜ್ಞೆಯಿಂದ ಭಾರಿ ಅನಾಹುತ ತಪ್ಪಿದಂತಾಗಿದೆ. ಕ್ರ್ಯಾಶ್ ಆಗಬೇಕಿದ್ದ ಫ್ಲೈಟ್​​​ ಕೂದಲೆಳೆ ಅಂತರದಲ್ಲಿ ಸುರಕ್ಷಿತವಾಗಿ ಲ್ಯಾಂಡ್​ ಆಗಿದೆ. ಇಂಡಿಗೋ ವಿಮಾನದಲ್ಲಿ ‘ಮಾರ್ಟಿನ್​’ ಚಿತ್ರತಂಡದವರು ವಿಡಿಯೋ ಮಾಡಿದ್ದಾರೆ. ‘ಇವತ್ತಿನ ರೀತಿ ಇಷ್ಟು ಕೆಟ್ಟ ಅನುಭವ ಇಡೀ ಜೀವನದಲ್ಲೇ ಆಗಿರಲಿಲ್ಲ. ಈಗ ನಾವು ಸೇಫ್​ ಆಗಿದ್ದೇವೆ. ಜೈ ಆಂಜನೇಯ. ಪೈಲಟ್​ಗೆ ಧನ್ಯವಾದ’ ಎಂದು ಧ್ರುವ ಸರ್ಜಾ ಹೇಳಿದ್ದಾರೆ.

‘ಮೊದಲ ಬಾರಿ ಸಾವನ್ನು ಹತ್ತಿರದಿಂದ ನೋಡಿ ವಾಪಸ್​ ಬಂದಿದ್ದೇನೆ. ಚಿರು, ತಂದೆ-ತಾಯಿ ಹಾಗೂ ಅಭಿಮಾನಿಗಳು ಆಶೀರ್ವಾದದಿಂದ ಪಾರಾಗಿದ್ದೇನೆ. ಫ್ಲೈಟ್​ನಲ್ಲಿ ಇದ್ದ ಎಲ್ಲರೂ ಜೀವ ಉಳಿಸಿಕೊಳ್ಳಲು ದೇವರಿಗೆ ಪ್ರಾರ್ಥನೆ ಮಾಡುತ್ತಿದ್ದರು. ನಾವು ಸೇಫ್​ ಆಗಿ ಲ್ಯಾಂಡ್​ ಆದಾಗ ಜನರು ಖುಷಿಯಿಂದ ಕೂಗಾಡಿದರು. ತಮ್ಮ ಪ್ರೀತಿಪಾತ್ರರಿಗೆ ಕರೆ ಮಾಡಿದರು. ಆನಂದ ಭಾಷ್ಪ ಸುರಿಸಿದರು. ಚೆನ್ನಾಗಿ ಬದುಕಲು ನಮಗೆ ಈ ಮರುಜನ್ಮ ಒಂದು ಕಾರಣವಾಗಿದೆ’ ಎಂದು ಧ್ರುವ ಸರ್ಜಾ ಅವರು ಪೋಸ್ಟ್​ ಮಾಡಿದ್ದಾರೆ.

ಇದನ್ನೂ ಓದಿ: ‘ದಯವಿಟ್ಟು ತಗಲಾಕ್ಕೋಬೇಡಿ’; ಇಬ್ಬರ ಮಧ್ಯೆ ದ್ವೇಷ ಬೆಳೆಸಲು ಬಂದವರಿಗೆ ಧ್ರುವ ಸರ್ಜಾ ವಾರ್ನಿಂಗ್

‘ಮಾರ್ಟಿನ್’ ಚಿತ್ರತಂಡದವರು ಸೇಫ್​ ಆಗಿದ್ದಾರೆ ಎಂಬುದು ತಿಳಿದು ಅಭಿಮಾನಿಗಳು ಕೂಡ ನಿಟ್ಟುಸಿರು ಬಿಟ್ಟಿದ್ದಾರೆ. ‘ಸುರಕ್ಷಿತವಾಗಿ ಬನ್ನಿ ಅಣ್ಣ. ನಿಮಗಾಗಿ ಕಾಯುತ್ತಿದ್ದೇವೆ. ನಿಮ್ಮ ಜೊತೆ ದೇವರು ಇದ್ದಾನೆ’ ಎಂದು ಅಭಿಮಾನಿಗಳು ಕಮೆಂಟ್​ ಮಾಡಿದ್ದಾರೆ. ‘ಮಾರ್ಟಿನ್​’ ಸಿನಿಮಾಗೆ ಎ.ಪಿ. ಅರ್ಜುನ್​ ನಿರ್ದೇಶನ ಮಾಡುತ್ತಿದ್ದಾರೆ. ಇಮ್ರಾನ್​ ಸರ್ದಾರಿಯಾ ಅವರು ನೃತ್ಯ ನಿರ್ದೇಶನ ಮಾಡುತ್ತಿದ್ದಾರೆ. ಅವರು ಕೂಡ ವಿಮಾನದಲ್ಲಿ ಪ್ರಯಾಣ ಮಾಡುತ್ತಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 6:57 am, Tue, 20 February 24

ಆಡ್ತೀನಿ, ಆಡಲ್ಲ.. ಯಾವುದನ್ನು ಖಚಿತವಾಗಿ ಹೇಳಲಾರೆ ಎಂದ ಧೋನಿ
ಆಡ್ತೀನಿ, ಆಡಲ್ಲ.. ಯಾವುದನ್ನು ಖಚಿತವಾಗಿ ಹೇಳಲಾರೆ ಎಂದ ಧೋನಿ
ತಮ್ಮ ಅಭಿಮಾನಿ ಕುಟುಂಬಕ್ಕೆ 5 ಲಕ್ಷ ರೂ. ಸಹಾಯ ಮಾಡಿದ ಸಚಿವ ಜಮೀರ್
ತಮ್ಮ ಅಭಿಮಾನಿ ಕುಟುಂಬಕ್ಕೆ 5 ಲಕ್ಷ ರೂ. ಸಹಾಯ ಮಾಡಿದ ಸಚಿವ ಜಮೀರ್
ಬೆಂಗಳೂರು-ಮಂಗಳೂರು ರಸ್ತೆಯಲ್ಲಿ ಟ್ರಾಫಿಕ್ ಜಾಮ್​: ಬದಲಿ ಮಾರ್ಗ ಸೂಚನೆ
ಬೆಂಗಳೂರು-ಮಂಗಳೂರು ರಸ್ತೆಯಲ್ಲಿ ಟ್ರಾಫಿಕ್ ಜಾಮ್​: ಬದಲಿ ಮಾರ್ಗ ಸೂಚನೆ
ಅಯೋಧ್ಯೆಯಲ್ಲಿ ಶ್ರೀರಾಮನ ದರ್ಶನ ಪಡೆದ ವಿರಾಟ್ ಕೊಹ್ಲಿ-ಅನುಷ್ಕಾ ಶರ್ಮಾ
ಅಯೋಧ್ಯೆಯಲ್ಲಿ ಶ್ರೀರಾಮನ ದರ್ಶನ ಪಡೆದ ವಿರಾಟ್ ಕೊಹ್ಲಿ-ಅನುಷ್ಕಾ ಶರ್ಮಾ
ಚಿಕ್ಕಮಗಳೂರಿನಲ್ಲಿ ಮಳೆಗೆ ಸಾಲು ಸಾಲು ಅವಾಂತರ:ನದಿಗೆ ಬಿದ್ದ 2 ಕಾರುಗಳು
ಚಿಕ್ಕಮಗಳೂರಿನಲ್ಲಿ ಮಳೆಗೆ ಸಾಲು ಸಾಲು ಅವಾಂತರ:ನದಿಗೆ ಬಿದ್ದ 2 ಕಾರುಗಳು
ಕೂದಲು ಹಿಡಿದು ತಾಯಿಯನ್ನು ಮನಬಂದಂತೆ ಥಳಿಸಿದ ಸಾಕು ಮಗ
ಕೂದಲು ಹಿಡಿದು ತಾಯಿಯನ್ನು ಮನಬಂದಂತೆ ಥಳಿಸಿದ ಸಾಕು ಮಗ
ಮಡೆನೂರು ಮನು ವಿವಾದದಲ್ಲಿ ಅಪ್ಪಣ್ಣ ಹೆಸರು ಕೇಳಿಬಂದಿದ್ದಕ್ಕೆ ನಟನ ಸ್ಪಷ್ಟನೆ
ಮಡೆನೂರು ಮನು ವಿವಾದದಲ್ಲಿ ಅಪ್ಪಣ್ಣ ಹೆಸರು ಕೇಳಿಬಂದಿದ್ದಕ್ಕೆ ನಟನ ಸ್ಪಷ್ಟನೆ
ಭಾರಿ ಮಳೆಯಿಂದ ಶಿರಾಡಿ ಘಾಟ್​​ ರಸ್ತೆಯಲ್ಲಿ ಭೂ ಕುಸಿತ
ಭಾರಿ ಮಳೆಯಿಂದ ಶಿರಾಡಿ ಘಾಟ್​​ ರಸ್ತೆಯಲ್ಲಿ ಭೂ ಕುಸಿತ
ರಶ್ಮಿಕಾಗೆ ಮೈಸೂರು ಸ್ಯಾಂಡಲ್​ ಅವಕಾಶ ಕೊಡಬಹುದಿತ್ತು: ಕುಮಾರ್ ಬಂಗಾರಪ್ಪ
ರಶ್ಮಿಕಾಗೆ ಮೈಸೂರು ಸ್ಯಾಂಡಲ್​ ಅವಕಾಶ ಕೊಡಬಹುದಿತ್ತು: ಕುಮಾರ್ ಬಂಗಾರಪ್ಪ
ಭಾರತದ ನೆಲದಲ್ಲಿ ಭಯೋತ್ಪಾದಕರ ಅಂತ್ಯಕ್ರಿಯೆಗೆ ಅವಕಾಶವಿಲ್ಲ: ಇಲ್ಯಾಸಿ
ಭಾರತದ ನೆಲದಲ್ಲಿ ಭಯೋತ್ಪಾದಕರ ಅಂತ್ಯಕ್ರಿಯೆಗೆ ಅವಕಾಶವಿಲ್ಲ: ಇಲ್ಯಾಸಿ