‘ರುದ್ರಾಕ್ಷಿ’, ‘ಹಯಗ್ರೀವ’: ಮಕ್ಕಳಿಗೆ ಈ ಹೆಸರು ಇಡಲು ಕಾರಣ ತಿಳಿಸಿದ ಧ್ರುವ ಸರ್ಜಾ

Dhruva Sarja: ಮಗಳಿಗೆ ರುದ್ರಾಕ್ಷಿ ಸರ್ಜಾ, ಮಗನಿಗೆ ಹಯಗ್ರೀವ ಸರ್ಜಾ ಎಂದು ಹೆಸರಿಟ್ಟಿದ್ದಾರೆ ಧ್ರುವ ಸರ್ಜಾ. ಮಕ್ಕಳಿಗೆ ಇದೇ ಹೆಸರು ಇಡಲು ಕಾರಣವನ್ನು ವಿವರಿಸಿದ್ದಾರೆ.

‘ರುದ್ರಾಕ್ಷಿ’, ‘ಹಯಗ್ರೀವ’: ಮಕ್ಕಳಿಗೆ ಈ ಹೆಸರು ಇಡಲು ಕಾರಣ ತಿಳಿಸಿದ ಧ್ರುವ ಸರ್ಜಾ
Follow us
ಮಂಜುನಾಥ ಸಿ.
|

Updated on: Jan 22, 2024 | 6:24 PM

ತೆರೆ ಮೇಲೆ ಒರಟನಂತೆ, ರೌಡಿಯಂತೆ, ದೈತ್ಯ ರಾಕ್ಷಸನಂತೆಯೂ ಕಾಣಿಸಿಕೊಂಡಿರುವ ಧ್ರುವ ಸರ್ಜಾ (Dhruva Sarja), ನಿಜ ಜೀವನದಲ್ಲಿ ಪಕ್ಕಾ ಫ್ಯಾಮಿಲಿ ಮ್ಯಾನ್. ಇಬ್ಬರು ಮುದ್ದಾದ ಮಕ್ಕಳ ತಂದೆಯಾಗಿರುವ ಧ್ರುವ ಸರ್ಜಾ, ಇಂದು (ಜನವರಿ 22) ತಮ್ಮ ಇಬ್ಬರು ಮಕ್ಕಳಿಗೆ ಹೆಸರಿಡುವ ಶಾಸ್ತ್ರ ಮಾಡಿದ್ದಾರೆ. ಅಣ್ಣ ಚಿರು ಸರ್ಜಾ ಸಮಾಧಿ ಇರುವ ಜಾಗದಲ್ಲಿಯೇ ತಮ್ಮ ಇಬ್ಬರು ಮಕ್ಕಳ ನಾಮಕರಣವನ್ನು ಧ್ರುವ ಸರ್ಜಾ ಮಾಡಿದ್ದಾರೆ. ಒಂದು ಹೆಣ್ಣು ಹಾಗೂ ಒಂದು ಗಂಡು ಮಗುವಿನ ತಂದೆ ಆಗಿರುವ ಧ್ರುವ ಸರ್ಜಾ, ಮಗಳಿಗೆ ರುದ್ರಾಕ್ಷಿ ಎಂದು ಹಾಗೂ ಮಗನಿಗೆ ಹಯಗ್ರೀವ ಎಂದು ಸಂಪ್ರದಾಯಬದ್ಧ ಹೆಸರಿಟ್ಟಿದ್ದಾರೆ. ಫ್ಯಾನ್ಸಿ ಹೆಸರು ಇಡುವುದು ಬೇಡವೆಂದು ಮೊದಲೇ ನಿಶ್ಚಯ ಮಾಡಿದ್ದೆವು ಹಾಗಾಗಿ ಸಂಪ್ರದಾಯಬದ್ಧವಾದ, ಅರ್ಥವುಳ್ಳ ಹೆಸರು ಇಟ್ಟಿದ್ದೇವೆ ಎಂದಿದ್ದಾರೆ.

ನಾಮಕರಣ ಶಾಸ್ತ್ರಕ್ಕೆ ಧ್ರುವ ಸರ್ಜಾರ ಕುಟುಂಬಸ್ಥರು, ಪತ್ನಿ ಪ್ರೇರಣಾ ಅವರ ಕುಟುಂಬಸ್ಥರು ಹಲವು ಗೆಳೆಯರು, ಬಂಧುಗಳು ಆಗಮಿಸಿದ್ದರು. ಚಿತ್ರರಂಗದ ಕೆಲವು ಗಣ್ಯರು ಸಹ ನಾಮಕರಣ ಶಾಸ್ತ್ರದಲ್ಲಿ ಭಾಗಿಯಾಗಿ ಧ್ರುವ ಸರ್ಜಾ-ಪ್ರೇರಣಾ ದಂಪತಿಗಳನ್ನು ಅಭಿನಂದಿಸಿದರು. ಇಬ್ಬರು ಮಕ್ಕಳನ್ನು ಆಶೀರ್ವದಿಸಿದರು.

ಕಾರ್ಯಕ್ರಮದ ಬಳಿಕ ಮಾತನಾಡಿದ ಧ್ರುವ ಸರ್ಜಾ, ‘ಜನವರಿ 22 ನಾಮಕರಣ ಡೇಟ್ ಬಂತು, ಇಬ್ಬರು ಮಕ್ಕಳಿಗೂ ಒಟ್ಟಿಗೆ ನಾಮಕರಣ ಮಾಡೋದಕ್ಕೆ ಪ್ಲ್ಯಾನ್ ಮಾಡಿದ್ದೆವು. ಇದೇ ದಿನ ನಮ್ಮ ಬಾಸ್ ರಾಮ ಮಂದಿರದ ಉದ್ಘಾಟನೆ ಆಗಿದೆ. ತುಂಬಾ ಖುಷಿ ಆಗುತ್ತಿದೆ. ಮಗಳಿಗೆ ರುದ್ರಾಕ್ಷಿ ಡಿ ಸರ್ಜಾ, ಮಗನಿಗೆ ಹಯಗ್ರೀವ ಡಿ ಸರ್ಜಾ ಅನ್ನೋ ಹೆಸರಿಟ್ಟಿದ್ದೇವೆ. ಒತ್ತಕ್ಷರ ಹೆಸರಿಡಬೇಕು ಅಂತ ಈ ನಿರ್ಧಾರ ಮಾಡಿದ್ವಿ, ಒತ್ತಕ್ಷರ ಅಂದ್ರೆ ತುಂಬಾ ಒಳ್ಳೆಯದು ಅನ್ನುವ ನಂಬಿಕೆ ಇದೆ. ಯಾವುದೇ ಫ್ಯಾನ್ಸಿ ಹೆಸರು ಇಡಬಾರದು ಅಂತ ನಿರ್ಧಾರ ಮಾಡಿದ್ದೆವು. ಅಯೋಧ್ಯೆಯಲ್ಲಿ 12.20 ಕ್ಕೆ ಪೂಜೆ ಇತ್ತು. ನಾವು ನಮ್ಮ‌ ಮಕ್ಕಳಿಗೂ ಅದೇ ಸಮಯಕ್ಕೆ ನಾಮಕರಣ ಮಾಡಿದೆವು’ ಎಂದರು.

ಇದನ್ನೂ ಓದಿ:ಧ್ರುವ ಸರ್ಜಾ-ಪ್ರೇರಣಾ ಮಕ್ಕಳಿಗೆ ನಾಮಕರಣ; ಭಿನ್ನವಾಗಿದೆ ಹೆಸರು..

‘ನಾನು ಹಾಗೂ ಪತ್ನಿ ಹೆಸರಿನ ಆಯ್ಕೆ ಬಗ್ಗೆ ಬಹಳ ಯೋಚನೆ ಮಾಡಿದೆವು. ಒತ್ತಕ್ಷರದಲ್ಲಿಯೇ ಹೆಸರಿಡಬೇಕು, ಹೆಸರಿನಲ್ಲಿ ಶಕ್ತಿ ಇರಬೇಕು ಎಂಬುದು ನಮ್ಮ ಯೋಚನೆ ಆಗಿತ್ತು. ಮಗಳಿಗೆ ರುದ್ರಾಕ್ಷಿ ಸರ್ಜಾ ಎಂದು ಹೆಸರಿಟ್ಟೆವು, ಮಗನಿಗೆ ಹಯಗ್ರೀವ, ಪಂಚಮುಖಿ ಆಂಜನೇಯನ ಅವತಾರಗಳಲ್ಲಿ ಒಂದು. ಈ ಹೆಸರು ಫಿಕ್ಸ್ ಆದಮೇಲೂ ಕೆಲವು ಹೆಸರು ಹುಡುಕಿದೆವು ಆದರೆ ಈ ಹೆಸರಿನಷ್ಟು ಒಳ್ಳೆಯ ಹೆಸರು ಇನ್ಯಾವುದೂ ಅನ್ನಿಸಲಿಲ್ಲ’ ಎಂದರು.

‘ಅಯೋಧ್ಯೆಯಲ್ಲಿ ಪೂಜೆಯ ಸಮಯಕ್ಕೆ ಸರಿಯಾಗಿಯೇ ಇಲ್ಲಿ ಸಹ ಅದೇ ಸಮಯಕ್ಕೆ ಪೂಜೆ ಮುಗಿಯಿತು ಅದು ನನಗೆ ಬಹಳ ಖುಷಿ ಕೊಟ್ಟಿತು. ನಾವು ಕುಟುಂಬ ಸಮೇತ ಆದಷ್ಟು ಬೇಗ ಅಯೋಧ್ಯೆಗೆ ಭೇಟಿ ನೀಡಲಿದ್ದೇವೆ ಎಂದ ಧ್ರುವ ಸರ್ಜಾ, ನಾಮಕರಣದ ಥೀಮ್​ ಬಗ್ಗೆ ಮಾತನಾಡಿ, ಮೋಹನ್ ಬಿಕೆ ಹಾಗೂ ರಾಕಿ ಅವರು ಸೆಟ್ ಹಾಕಿ ಅಲಂಕಾರ ಮಾಡಿಕೊಟ್ಟರು. ನನ್ನ ತಂಡ, ಗೆಳೆಯರು ಕೆಲಸ ಮಾಡಿ ನಾಮಕಾರಣ ಚೆನ್ನಾಗಿ ಮಾಡುವಂತಾಯಿತು’ ಎಂದರು.

ಸಂಜಯ್ ದತ್ ಅವರು ಅತಿಥಿಯಾಗಿ ಆಗಮಿಸಿದ ಬಗ್ಗೆ ಮಾತನಾಡಿದ ಧ್ರುವ, ‘ಸಂಜಯ್ ದತ್ ಅವರಿಗೆ ಅಳುಕುತ್ತಲೇ ಆಹ್ವಾನ ನೀಡಿದೆ. ನೀನು ನನ್ನ ಸಹೋದರ ಇದ್ದಂತೆ ನಾನು ಬರುತ್ತೇನೆ ಎಂದು ಬಂದರು ಎರಡು ಗಂಟೆಗಳ ಕಾಲ ಇಲ್ಲಿದ್ದು ಎಲ್ಲರೊಟ್ಟಿಗೆ ಬೆರೆತು ಮಕ್ಕಳನ್ನು ಆಶೀರ್ವದಿಸಿದರು. ಸಂಜಯ್ ದತ್ ಅವರು ಶಿವನ ಭಕ್ತರು. ಮಗಳಿಗೆ ರುದ್ರಾಕ್ಷಿ ಎಂದು ಹೆಸರಿಟ್ಟಿದ್ದು ಕೇಳಿ ಬಹಳ ಖುಷಿ ಪಟ್ಟರು’ ಎಂದರು ಧ್ರುವ ಸರ್ಜಾ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಹೋರಾಟದ ಮಧ್ಯಂತರ ವರದಿ ಸಲ್ಲಿಸಲು ಇಂದು ದೆಹಲಿಗೆ ತೆರಳಲಿರುವ ಯತ್ನಾಳ್ ತಂಡ
ಹೋರಾಟದ ಮಧ್ಯಂತರ ವರದಿ ಸಲ್ಲಿಸಲು ಇಂದು ದೆಹಲಿಗೆ ತೆರಳಲಿರುವ ಯತ್ನಾಳ್ ತಂಡ
ಕ್ಯಾಚ್ ಬಿಟ್ಟ ಸರ್ಫರಾಝ್​​ ಖಾನ್​​ಗೆ ಪಂಚ್ ಕೊಟ್ಟ ರೋಹಿತ್ ಶರ್ಮಾ
ಕ್ಯಾಚ್ ಬಿಟ್ಟ ಸರ್ಫರಾಝ್​​ ಖಾನ್​​ಗೆ ಪಂಚ್ ಕೊಟ್ಟ ರೋಹಿತ್ ಶರ್ಮಾ
ನದಿಪಾತ್ರದಲ್ಲಿ ಪ್ರತಿವಾರ ಗುಡ್ಡೆಬೀಳುತ್ತಿದೆ ಬೆಟ್ಟದಷ್ಟು ತ್ಯಾಜ್ಯ
ನದಿಪಾತ್ರದಲ್ಲಿ ಪ್ರತಿವಾರ ಗುಡ್ಡೆಬೀಳುತ್ತಿದೆ ಬೆಟ್ಟದಷ್ಟು ತ್ಯಾಜ್ಯ
ಭದ್ರಾ ಹಿನ್ನೀರಿನಲ್ಲಿ ಕಾಡಾನೆಗಳ ಜಲಕ್ರೀಡೆ: ವಿಡಿಯೋ ಇಲ್ಲಿದೆ
ಭದ್ರಾ ಹಿನ್ನೀರಿನಲ್ಲಿ ಕಾಡಾನೆಗಳ ಜಲಕ್ರೀಡೆ: ವಿಡಿಯೋ ಇಲ್ಲಿದೆ
ಹರ್ಷವರ್ಧನ್​ರನ್ನು ಉಳಿಸಲು 4 ತಾಸು ಶ್ರಮಪಟ್ಟೆವು: ಖಾಸಗಿ ಅಸ್ಪತ್ರೆ ವೈದ್ಯ
ಹರ್ಷವರ್ಧನ್​ರನ್ನು ಉಳಿಸಲು 4 ತಾಸು ಶ್ರಮಪಟ್ಟೆವು: ಖಾಸಗಿ ಅಸ್ಪತ್ರೆ ವೈದ್ಯ
ಫೆಂಗಲ್ ಚಂಡಮಾರುತ, ತಿರುವಣ್ಣಾಮಲೈನಲ್ಲಿ ಭೂಕುಸಿತ
ಫೆಂಗಲ್ ಚಂಡಮಾರುತ, ತಿರುವಣ್ಣಾಮಲೈನಲ್ಲಿ ಭೂಕುಸಿತ
ಬಿಗ್ ಬಾಸ್​ನಲ್ಲಿ ಮತ್ತೆ ಹೈಡ್ರಾಮಾ; ಉಲ್ಟಾ ಹೊಡೆದ ಶೋಭಾ ಶೆಟ್ಟಿ
ಬಿಗ್ ಬಾಸ್​ನಲ್ಲಿ ಮತ್ತೆ ಹೈಡ್ರಾಮಾ; ಉಲ್ಟಾ ಹೊಡೆದ ಶೋಭಾ ಶೆಟ್ಟಿ
ಅಯ್ಯಪ್ಪಸ್ವಾಮಿ ದೇವಾಲಯದ 18 ಮೆಟ್ಟಿಲುಗಳ ಮಹತ್ವ ತಿಳಿಯಿರಿ
ಅಯ್ಯಪ್ಪಸ್ವಾಮಿ ದೇವಾಲಯದ 18 ಮೆಟ್ಟಿಲುಗಳ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯ ಮಹಿಳೆಯರಿಗೆ ವಿದೇಶ ಪ್ರವಾಸದ ಯೋಗವಿದೆ
Daily Horoscope: ಈ ರಾಶಿಯ ಮಹಿಳೆಯರಿಗೆ ವಿದೇಶ ಪ್ರವಾಸದ ಯೋಗವಿದೆ
ಒಂದೇ ಇನ್ನಿಂಗ್ಸ್​ನಲ್ಲಿ ಎಲ್ಲಾ 10 ವಿಕೆಟ್ ಪಡೆದ ಯುವ ಸ್ಪಿನ್ನರ್
ಒಂದೇ ಇನ್ನಿಂಗ್ಸ್​ನಲ್ಲಿ ಎಲ್ಲಾ 10 ವಿಕೆಟ್ ಪಡೆದ ಯುವ ಸ್ಪಿನ್ನರ್