Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ದಯವಿಟ್ಟು ತಗಲಾಕ್ಕೋಬೇಡಿ’; ಇಬ್ಬರ ಮಧ್ಯೆ ದ್ವೇಷ ಬೆಳೆಸಲು ಬಂದವರಿಗೆ ಧ್ರುವ ಸರ್ಜಾ ವಾರ್ನಿಂಗ್

‘ದಯವಿಟ್ಟು ತಗಲಾಕ್ಕೋಬೇಡಿ’; ಇಬ್ಬರ ಮಧ್ಯೆ ದ್ವೇಷ ಬೆಳೆಸಲು ಬಂದವರಿಗೆ ಧ್ರುವ ಸರ್ಜಾ ವಾರ್ನಿಂಗ್

ರಾಜೇಶ್ ದುಗ್ಗುಮನೆ
|

Updated on: Oct 06, 2023 | 10:21 AM

ಧ್ರುವ ಸರ್ಜಾಹಾಗೂ ದರ್ಶನ್ ಮಧ್ಯೆ ಯಾವುದೂ ಸರಿ ಇಲ್ಲ ಅನ್ನೋದು ಇತ್ತೀಚೆಗೆ ಸ್ಪಷ್ಟವಾಗಿತ್ತು. ಕಾವೇರಿ ಬಂದ್ ದಿನ ನಡೆದ ಪ್ರತಿಭಟನೆಯಲ್ಲಿ ದರ್ಶನ್ ಹಾಗೂ ಧ್ರುವ ಸರ್ಜಾ ಒಟ್ಟಾಗಿ ಕಾಣಿಸಿಕೊಂಡರೂ ಪರಸ್ಪರ ಮಾತನಾಡಿಕೊಳ್ಳಲಿಲ್ಲ. ಹೀಗೇಕೆ ಎನ್ನುವ ಪ್ರಶ್ನೆ ಅನೇಕರಲ್ಲಿತ್ತು. ಮನಸ್ತಾಪ ಇರುವ ವಿಚಾರವನ್ನು ಧ್ರುವ ಸರ್ಜಾ ಪರೋಕ್ಷವಾಗಿ ಒಪ್ಪಿಕೊಂಡಿದ್ದಾರೆ.

ಧ್ರುವ ಸರ್ಜಾ (Dhruva Sarja) ಹಾಗೂ ದರ್ಶನ್ ಮಧ್ಯೆ ಯಾವುದೂ ಸರಿ ಇಲ್ಲ ಅನ್ನೋದು ಇತ್ತೀಚೆಗೆ ಸ್ಪಷ್ಟವಾಗಿತ್ತು. ಕಾವೇರಿ ಬಂದ್ ದಿನ ನಡೆದ ಪ್ರತಿಭಟನೆಯಲ್ಲಿ ದರ್ಶನ್ ಹಾಗೂ ಧ್ರುವ ಸರ್ಜಾ ಒಟ್ಟಾಗಿ ಕಾಣಿಸಿಕೊಂಡರೂ ಪರಸ್ಪರ ಮಾತನಾಡಿಕೊಳ್ಳಲಿಲ್ಲ. ಹೀಗೇಕೆ ಎನ್ನುವ ಪ್ರಶ್ನೆ ಅನೇಕರಲ್ಲಿತ್ತು. ಮನಸ್ತಾಪ ಇರುವ ವಿಚಾರವನ್ನು ಧ್ರುವ ಸರ್ಜಾ ಪರೋಕ್ಷವಾಗಿ ಒಪ್ಪಿಕೊಂಡಿದ್ದಾರೆ. ಈ ವಿಚಾರದಲ್ಲಿ ಅಡ್ವಾಂಟೇಜ್ ತೆಗೆದುಕೊಳ್ಳಲು ಕೆಲವರು ಪ್ರಯತ್ನಿಸುತ್ತಿದ್ದಾರೆ. ಇಬ್ಬರ ಮಧ್ಯೆ ದ್ವೇಷ ಹೆಚ್ಚಿಸುವ ಪ್ರಯತ್ನವನ್ನು ಕೆಲವರು ಮಾಡಿದ್ದಿದೆ. ಇವರಿಗೆ ಧ್ರುವ ಸರ್ಜಾ ವಾರ್ನಿಂಗ್ ನೀಡಿದ್ದಾರೆ. ‘ನನ್ನ ಹೆಸರಲ್ಲಿ ಫೇಕ್ ಅಕೌಂಟ್ ಕ್ರಿಯೇಟ್ ಮಾಡಿ ಏನೇನೋ ಮೆಸೇಜ್ ಮಾಡ್ತಿದ್ದಾರೆ. ಈ ರೀತಿ ಮಾಡೋಕೆ ಹೋಗಬೇಡಿ. ಆದರೂ ಮಾಡೇ ಮಾಡ್ತೀನಿ ಅಂದ್ರೆ ಮತ್ತೇನೂ ಹೇಳೋಕೆ ಆಗಲ್ಲ. ಹಾಗೆ ಮಾಡಿ, ಆದರೆ ತಗಲ್ಲಾಕ್ಕೋಬೇಡಿ’ ಎಂದು ನಗುತ್ತಲೇ ವಾರ್ನಿಂಗ್ ನೀಡಿದ್ದಾರೆ ಧ್ರುವ ಸರ್ಜಾ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ