ಧ್ರುವ ಸರ್ಜಾ ಬರ್ತ್ಡೇಗೆ ಬಂದ ಜನಸಾಗರ; ಎಲ್ಲರಿಗೂ ಸೆಲ್ಫಿ ಸಂಭ್ರಮ
ದೂರದ ಊರುಗಳಿಂದ ಬಂದ ಅಭಿಮಾನಿಗಳು ಧ್ರುವ ಸರ್ಜಾಗೆ ವಿಶ್ ಮಾಡಿದ್ದಾರೆ. ನೆಚ್ಚಿನ ನಟನ ಜೊತೆ ಸೆಲ್ಫಿ ತೆಗೆದುಕೊಂಡು ಫ್ಯಾನ್ಸ್ ಖುಷಿಪಟ್ಟಿದ್ದಾರೆ. ಕಳೆದ ಮೂರು ವರ್ಷಗಳಿಂದ ಧ್ರುವ ಜನ್ಮದಿನ ಆಚರಿಸಿಕೊಂಡಿರಲಿಲ್ಲ. ಹಾಗಾಗಿ ಈ ಬಾರಿ ಅವರ ಹುಟ್ಟುಹಬ್ಬ ಸಖತ್ ಸ್ಪೆಷಲ್ ಆಗಿದೆ. ಆ ಸಂದರ್ಭದ ವಿಡಿಯೋ ಇಲ್ಲಿದೆ..
ನಟ ಧ್ರುವ ಸರ್ಜಾ ಅವರು ಇಂದು (ಅಕ್ಟೋಬರ್ 6) ಜನ್ಮದಿನ (Dhruva Sarja Birthday) ಆಚರಿಸಿಕೊಳ್ಳುತ್ತಿದ್ದಾರೆ. ಅ.5ರ ಮಧ್ಯರಾತ್ರಿಯಿಂದಲೇ ಸೆಲೆಬ್ರೇಷನ್ ಶುರುವಾಗಿದೆ. ರಾಜ್ಯದ ಮೂಲೆ ಮೂಲೆಗಳಿಂದ ಬಂದ ಅಭಿಮಾನಿಗಳು ಧ್ರುವ ಸರ್ಜಾಗೆ ಶುಭಾಶಯ ತಿಳಿಸಿದ್ದಾರೆ. ಹಾರ, ಕೇಕ್ ಬದಲಿಗೆ ಬಡ ಶಾಲಾ ಮಕ್ಕಳಿಗೆ ಅನುಕೂಲ ಆಗುವಂತೆ ಬುಕ್, ಪೆನ್ನು, ಬ್ಯಾಗ್ಗಳನ್ನು ಉಡುಗೊರೆ ರೂಪದಲ್ಲಿ ನೀಡುವಂತೆ ಅಭಿಮಾನಿಗಳಲ್ಲಿ ಧ್ರುವ ಮನವಿ ಮಾಡಿಕೊಂಡಿದ್ದರು. ಅದಕ್ಕೆ ತಕ್ಕಂತೆ ಅನೇಕ ಫ್ಯಾನ್ಸ್ (Dhruva Sarja Fans) ನಡೆದುಕೊಂಡಿದ್ದಾರೆ. ತಮ್ಮನ್ನು ನೋಡಲು ಬಂದ ಅಭಿಮಾನಿಗಳ ಜೊತೆ ನಿಂತು ಧ್ರುವ ಅವರು ಫೋಟೋಗೆ ಪೋಸ್ ನೀಡಿದ್ದಾರೆ. ನೆಚ್ಚಿನ ನಟನ ಜೊತೆ ಸೆಲ್ಫಿ ತೆಗೆದುಕೊಂಡು ಅಭಿಮಾನಿಗಳು ಖುಷಿಪಟ್ಟಿದ್ದಾರೆ. ಇಂದು ಚಿರಂಜೀವಿ ಸರ್ಜಾ ನಟನೆಯ ‘ರಾಜಮಾರ್ತಾಂಡ’ ಸಿನಿಮಾ ಬಿಡುಗಡೆ ಆಗಿದೆ. ಆ ಖುಷಿ ಕೂಡ ಧ್ರುವ ಸರ್ಜಾ (Dhruva Sarja) ಅವರ ಅಭಿಮಾನಿಗಳಿಗೆ ಇದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Latest Videos