Viral Video : ಸೋ ಹ್ಯಾಪಿ ಟುಡೇ: ಕೆಲಸಕ್ಕೆ ರಿಸೈನ್ ಕೊಟ್ಟು ಪುಲ್​​​ ಬಿಂದಾಸ್​​ ಆಗಿರುವ ಯುವಕ

ಉದ್ಯೋಗ ಎನ್ನುವುದು ಎಲ್ಲರಿಗೂ ಅತ್ಯವಶ್ಯಕ. ಕೆಲಸದಲ್ಲಿದ್ದು ಸಂಬಳ ಬಂದರೇನೇ ತಮ್ಮ ಅಗತ್ಯತೆಗಳನ್ನು ಪೂರೈಸಿಕೊಳ್ಳಲು ಸಾಧ್ಯ. ಕೆಲವರು ರಾತ್ರಿ ಹಗಲೆನ್ನದೇ ದುಡಿದು ವೃತ್ತಿಯಲ್ಲಿಯೇ ದೇವರನ್ನು ಕಾಣುತ್ತಾರೆ. ಆದರೆ ಇಲ್ಲೊಬ್ಬ ವಿದೇಶಿಗನು ಕೆಲಸಕ್ಕೆ ಗುಡ್ ಬೈ ಹೇಳಿದ ಸಂತೋಷದಲ್ಲಿಯೇ ಮಳೆಯಲ್ಲಿ ಕುಣಿದಾಡಿದ್ದಾನೆ. ವೈರಲ್ ಆಗಿರುವ ವಿಡಿಯೋದಲ್ಲಿ ಈತನ ಸಂತೋಷವು ಎಷ್ಟಿದೆ ಎನ್ನುವುದು ಸ್ಪಷ್ಟವಾಗಿ ತಿಳಿಯುತ್ತಿದೆ.

Viral Video : ಸೋ ಹ್ಯಾಪಿ ಟುಡೇ: ಕೆಲಸಕ್ಕೆ ರಿಸೈನ್ ಕೊಟ್ಟು ಪುಲ್​​​ ಬಿಂದಾಸ್​​ ಆಗಿರುವ ಯುವಕ
Follow us
ಸಾಯಿನಂದಾ
| Updated By: ಅಕ್ಷಯ್​ ಪಲ್ಲಮಜಲು​​

Updated on: Mar 02, 2024 | 2:44 PM

ಎಲ್ಲರಿಗೂ ಕೂಡ ಜೀವನದಲ್ಲಿ ಸೆಟ್ಲ್ ಆಗಬೇಕು. ತಾವು ಅಂದುಕೊಂಡ ಬದುಕು ನಮ್ಮದಾಗಬೇಕು ಎನ್ನುವುದಿರುತ್ತದೆ. ನೆಮ್ಮದಿಯುತ ಜೀವನಕ್ಕಾಗಿ ರಾತ್ರಿ ಹಗಲು ದುಡಿಯುವವರನ್ನು ನೋಡುತ್ತಿರುತ್ತೇವೆ. ಇನ್ನು ಓದು ಮುಗಿಯುತ್ತಿದ್ದಂತೆ ಸಂಬಂಧಿಕರು, ನೆರೆಹೊರೆಯರು ಕೆಲಸ ಆಯ್ತಾ, ಎಲ್ಲಿ ಕೆಲಸ ಮಾಡ್ತಾ ಇರುವುದು ಹೀಗೆ ನಾನಾ ಪ್ರಶ್ನೆಗಳನ್ನು ಕೇಳುವುದು ಸಹಜ. ಹೀಗಾಗಿ ಕೈ ತುಂಬಾ ಸಂಬಳ ಬರುವಂತಹ ಕೆಲಸ ಗಿಟ್ಟಿಸಿಕೊಳ್ಳಲು ಓಡಾಡುವವ ಯುವಕ ಯುವತಿಯರಿದ್ದಾರೆ. ಈ ಉದ್ಯೋಗವಿಲ್ಲದೇ ಹೋದರೆ ಸಮಾಜವು ಅಂತಹ ವ್ಯಕ್ತಿಯನ್ನು ನೋಡುವ ರೀತಿಯೇ ಬೇರೆ.. ಅದರಲ್ಲಿಯು ಪುರುಷರು ಉದ್ಯೋಗದಲ್ಲಿದ್ದರೆ ಅದು ಅವರ ಘನತೆ ಹಾಗೂ ಮರ್ಯಾದೆಯ ಪ್ರಶ್ನೆಯಾಗಿರುತ್ತದೆ.

ಕೆಲವರಿಗೆ ಕೆಲಸ ಮಾಡುವ ಸ್ಥಳದಲ್ಲಿ ಕಿರಿಕಿರಿಯ ವಾತಾವರಣವಿರುತ್ತದೆ. ಕೆಲಸ ಬಿಟ್ಟು ಹೋದರೆ ಸಾಕಪ್ಪ ಸಾಕು ಎನ್ನುವಂತಾಗಿರುತ್ತದೆ. ಆದರೆ ಕೆಲವರಿಗೆ ಮನೆಯ ಜವಾಬ್ದಾರಿಗಳು ಹೆಗಲ ಮೇಲೆ ಇರುವ ಕಾರಣ ಎಷ್ಟೇ ಕಷ್ಟವಾದರೂ ಕೂಡ ಉದ್ಯೋಗವನ್ನು ತೊರೆಯಲು ಮನಸ್ಸು ಮಾಡುವುದಿಲ್ಲ. ಇಡೀ ಕುಟುಂಬವೇ ಅವರ ದುಡಿಮೆಯನ್ನು ನಂಬಿಕೊಂಡಿರುವ ಕಾರಣ ಅವರ ಗತಿಯೇನು ಎನ್ನುವ ಸಣ್ಣ ಆಲೋಚನೆಯೊಂದು ಕಾಡುತ್ತದೆ. ಆದರೆ ವ್ಯಕ್ತಿಯೊಬ್ಬರು ಉದ್ಯೋಗದ ತೊರೆದ ಖುಷಿಗೆ ಮಳೆಯಲ್ಲಿ ಕುಣಿದಾಡಿದ್ದಾನೆ.

ಈ ವೀಡಿಯೊದಲ್ಲಿ ಫ್ಯಾಬ್ರಿಜಿಯೊ ವಿಲ್ಲಾರಿ ಮೊರೊನಿ ಅವರು ತಾವು ಕೆಲಸ ಬಿಟ್ಟಿರುವ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಪ್ಯಾರಿಸ್‌ನ ಬೀದಿಯಲ್ಲಿ ಮಳೆಗೆ ಮೈಯೊಡ್ಡಿ ಕುಣಿದಾಡುತ್ತಿರುವ ವಿಡಿಯೋದ ಜೊತೆಗೆ, ” ಇಂದು ಮಳೆಯಾಗುತ್ತಿದೆ, ಇದು ನನ್ನ ಅತ್ಯುತ್ತಮ ದಿನವಾಗಿದೆ. ನಾನು ನನ್ನ ಕೆಲಸವನ್ನು ಬಿಟ್ಟಿದ್ದೇನೆ. ನಾನು 9 ರಿಂದ 5 ಗಂಟೆಯವರೆಗಿನ ಈ ಕೆಲಸವನ್ನು ಮೊದಲು ಒಪ್ಪಿಕೊಂಡಾಗ ಮಾಡಲು ಸಾಧ್ಯವಾಗುತ್ತದೆ ಎಂದುಕೊಂಡಿದ್ದೆ. ಕೆಲಸ ಹಾಗೂ ಕಂಟೆಂಟ್ ರಚಿಸುವುದು ಈ ಎರಡನ್ನು ನಾನು ಸರಿಯಾಗಿ ನಿಭಾಯಿಸುತ್ತೇನೆ ಎಂದು ಭಾವಿಸಿದೆ.

ಆದರೆ ಅದು ಸಾಧ್ಯವಾಗಲಿಲ್ಲ, ಈ ಬಗ್ಗೆ ತಿಳಿದುಕೊಳ್ಳಲು ಹೆಚ್ಚು ಸಮಯ ತೆಗೆದುಕೊಳ್ಳಲಿಲ್ಲ. ಹಾಗಾಗಿ ನಾನು ಕೆಲಸ ಬಿಡುವ ನಿರ್ಧಾರವನ್ನು ಮಾಡಬೇಕಾಯಿತು. ನೀವು ನನಗೆ ತೋರಿಸುವ ಅಪಾರ ಪ್ರೀತಿ ಮತ್ತು ಬೆಂಬಲಕ್ಕಾಗಿ ನಾನು ನಿಮಗೆ ಧನ್ಯವಾದ ಹೇಳುತ್ತೇನೆ. ಅದನ್ನು ಎಂದಿಗೂ ಮರೆಯಲಾಗುವುದಿಲ್ಲ. ಇದು ಸುಲಭದ ಆಯ್ಕೆಯಾಗಿರಲಿಲ್ಲ, ಆದರೆ ನೀವು ನೋಡುವಂತೆ, ಈ ನಿರ್ಧಾರವು ನನಗೆ ಸಂತೋಷವನ್ನು ತಂದಿತು. ನಮಗೆ ಮುಂದಿನದನ್ನು ನೋಡಲು ಉತ್ಸುಕವಾಗಿದೆ” ಎಂದು ಬರೆದುಕೊಂಡಿದ್ದಾರೆ.

ವೈರಲ್​​ ವಿಡಿಯೋ ಇಲ್ಲಿದೆ ನೋಡಿ:

ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ 9 ಗಂಟೆಯಿಂದ 5 ಗಂಟೆಯವರೆಗಿನ ಕೆಲಸವನ್ನು ತ್ಯಜಿಸಿದ್ದು, ಆ ಬಳಿಕ ಖುಷಿಯಿಂದ ಮಳೆಯಲ್ಲಿ ಕುಣಿದಾಡುತ್ತಿರುವುದನ್ನು ಕಾಣಬಹುದು. ಈ ವಿಡಿಯೋವನ್ನು ಫೆಬ್ರವರಿ 22 ರಂದು ಶೇರ್ ಮಾಡಿಕೊಳ್ಳಲಾಗಿದೆ. ಈಗಾಗಲೇ 7.6 ಮಿಲಿಯನ್ ವೀಕ್ಷಣೆಗಳನ್ನು ಕಂಡಿದ್ದು, 370,000 ಲೈಕ್ಸ್ ಗಳು ಬಂದಿದೆ.

ಇದನ್ನೂ ಓದಿ: ಸೈಕಲ್ ಕಂಪನಿಗಳಿಗೆ ಅಚ್ಚರಿ ಮೂಡಿಸುವಂತಿದೆ ಈ ಡಿಫರೆಂಟ್ ಸೈಕಲ್

ಈ ವಿಡಿಯೋಗೆ ನಾನಾ ರೀತಿಯ ಕಾಮೆಂಟ್ ಗಳು ವ್ಯಕ್ತವಾಗಿದ್ದು, ಬಳಕೆದಾರನೊಬ್ಬ, ನನಗೆ ಅರಿವಾಗಲು ವರ್ಷಗಳೇ ಬೇಕಾಯಿತು. ನಿಮ್ಮ ಜೀವನದ ಪ್ರತಿಯೊಂದಕ್ಕೂ ಶೇಕಡಾ ನೂರರಷ್ಟು ಸಮಯ ಕೊಡಲು ಸಾಧ್ಯವಿಲ್ಲ. ಆದರೆ ನಿಮ್ಮ ಹೊಸ ಪ್ರಯಾಣಕ್ಕೆ ನಾನು ಶುಭ ಹಾರೈಸುತ್ತೇನೆ” ಎಂದು ಬರೆದುಕೊಂಡಿದ್ದಾರೆ. ಮತ್ತೊಬ್ಬರು, “ನಾನು ಅದೇ ರೀತಿ ಮಾಡಬೇಕೆಂದು ನಾನು ಬಯಸುತ್ತೇನೆ..ಆದರೆ ದುರದೃಷ್ಟವಶಾತ್ ನಾನು ಬಿಲ್ ಪಾವತಿಗಳನ್ನು ಹೊಂದಿದ್ದೇನೆ” ಎಂದು ಹೀಗೆ ನಾನಾ ರೀತಿಯ ಕಾಮೆಂಟ್ ಗಳು ವ್ಯಕ್ತವಾಗಿವೆ.

ಇನ್ನಷ್ಟು ವೈರಲ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ