ಕೋವಿಡ್ ವ್ಯಾಕ್ಸಿನೇಷನ್ ಹೆಸರಿನಲ್ಲಿ ಸಂತಾನಹರಣ ಚಿಕಿತ್ಸೆ: ಮೋಸಗೊಳಗಾದ ಬಂಗಾಳದ ವಲಸೆ ಕಾರ್ಮಿಕರು
ಮುಂಬೈನಲ್ಲಿ ಉದ್ಯೋಗದಲ್ಲಿರುವ ಐವತ್ತೈದು ವರ್ಷದ ಮಾಧವ್ ದೇಬನಾಥ್ ಕಾಳಿ ಪೂಜೆಯ ಸಮಯದಲ್ಲಿ ಮನೆಗೆ ಮರಳಿದ್ದರು. ಅವರನ್ನು ಕೋವಿಡ್-19 ವ್ಯಾಕ್ಸಿನೇಷನ್‌ಗಾಗಿ ಕರೆದೊಯ್ಯಲಾಗಿತ್ತು.ಆದರೆ ಆಶಾ ಕಾರ್ಯಕರ್ತೆಯರ ಸಹಯೋಗದೊಂದಿಗೆ ಎನ್‌ಎಸ್‌ಬಿ ಕಾರ್ಯಕರ್ತರು ಅನಧಿಕೃತವಾಗಿ ಸಂತಾನಹರಣ ಚಿಕಿತ್ಸೆ ಮಾಡಿದ್ದಾರೆ ಎಂದು ಮಾಧವ್ ಆರೋಪಿಸಿದ್ದಾರೆ.
ನಾಡಿಯಾ ಡಿಸೆಂಬರ್ 06: ಸರ್ಕಾರಿ ಸೇವೆಗಳನ್ನು ಒದಗಿಸುವ ಹೆಸರಿನಲ್ಲಿ ವಂಚನೆಯ ಆರೋಪಗಳು ಇತ್ತೀಚೆಗೆ ಹೊರಬಿದ್ದಿದ್ದು, ಬಂಗಾಳದ (West Bengal) ಆರೋಗ್ಯ ವಲಯದಲ್ಲಿ ಆಘಾತಕಾರಿ ಘಟನೆಗಳು ಬಯಲಾಗಿದೆ. ಶಾಂತಿಪುರ (Shantipur) ಪೊಲೀಸ್ ಠಾಣಾ ವ್ಯಾಪ್ತಿಯ ರಾಯ್ಪಾರಾ, ಚಂದ್ರಾ ಪ್ರದೇಶದಲ್ಲಿ ವಲಸೆ ಕಾರ್ಮಿಕರ ಒಪ್ಪಿಗೆ ಪಡೆಯದೆಯೇ ಅವರಿಗೆ ಸಂತಾನಹರಣ ಚಿಕಿತ್ಸೆ(sterilisation) ಮಾಡಲಾಗಿದೆ ಎಂದು ಆರೋಪಿಸಲಾಗಿದೆ.
ನ್ಯೂಸ್ 9 ವರದಿ ಪ್ರಕಾರ ಮುಂಬೈನಲ್ಲಿ ಉದ್ಯೋಗದಲ್ಲಿರುವ ಐವತ್ತೈದು ವರ್ಷದ ಮಾಧವ್ ದೇಬನಾಥ್ ಕಾಳಿ ಪೂಜೆಯ ಸಮಯದಲ್ಲಿ ಮನೆಗೆ ಮರಳಿದ್ದರು. ಅವರನ್ನು ಕೋವಿಡ್-19 ವ್ಯಾಕ್ಸಿನೇಷನ್‌ಗಾಗಿ ಕರೆದೊಯ್ಯಲಾಗಿತ್ತು.ಆದರೆ ಆಶಾ ಕಾರ್ಯಕರ್ತೆಯರ ಸಹಯೋಗದೊಂದಿಗೆ ಎನ್‌ಎಸ್‌ಬಿ ಕಾರ್ಯಕರ್ತರು ಅನಧಿಕೃತವಾಗಿ ಸಂತಾನಹರಣ ಚಿಕಿತ್ಸೆ ಮಾಡಿದ್ದಾರೆ ಎಂದು ಅವರು ಆರೋಪಿಸಿದ್ದಾರೆ. ಇಂಜೆಕ್ಷನ್ ತೆಗೆದುಕೊಂಡ ಮೂರು ನಿಮಿಷಗಳಲ್ಲಿ ಪ್ರಜ್ಞೆ ಕಳೆದುಕೊಂಡೆ.ಆಮೇಲೆ ರಸ್ತೆ ಬದಿಯಲ್ಲಿ ಎಚ್ಚರವಾಯಿತು ಎಂದು ಮಾಧವ್ ಹೇಳಿದ್ದಾರೆ.
ಈ ಬಗ್ಗೆ ವಿವರಿಸಿದ ಮಾಧವ್ ಕೋವಿಡ್ ವ್ಯಾಕ್ಸಿನೇಷನ್ ಎಂದು ಹೇಳಿ ಅವರು ಚುಚ್ಚುಮದ್ದನ್ನು ನೀಡಿದರು. ನಂತರ ನನಗೆ ತಿಳಿದ ವಿಷಯವೆಂದರೆ, ಶಸ್ತ್ರಚಿಕಿತ್ಸೆಯನ್ನು ನಡೆಸಲಾಯಿತು. ಮಾಹಿತಿ ಪ್ರಕಾರ, ಮಾಧವ್ ಅವರ ಪತ್ನಿ ಈ ಹಿಂದೆ ಸಂತಾನಹರಣ ಚಿಕಿತ್ಸೆಗೆ ಒಳಗಾಗಿದ್ದರು.ಲಸಿಕೆ ಲಭ್ಯವಿದ್ದರೆ ಅದನ್ನು ತೆಗೆದುಕೊಳ್ಳಬೇಕು. ನಾನು ಆಪರೇಷನ್ ಮಾಡಿಸಿಕೊಂಡೆ. ಹೀಗಿರುವಾಗ ಅವನಿಗೆ ಮಾಡಿದ್ದು ಯಾಕೆ ಎಂದು ಮಾಧವ್ ಅವರ ಪತ್ನಿ ಕೇಳಿದ್ದಾರೆ.ಮಾಧವ್ ಕುಟುಂಬದವರು ಶಾಂತಿಪುರ ಪೊಲೀಸ್ ಠಾಣೆಯಲ್ಲಿ ಔಪಚಾರಿಕ ದೂರು ದಾಖಲಿಸಿದ್ದಾರೆ.
ಮತ್ತೊಂದು ಘಟನೆಯಲ್ಲಿ, ಮಕ್ಕಳಿಲ್ಲದ ಮತ್ತು ಮಾನಸಿಕವಾಗಿ ಅಸಮತೋಲನ ಹೊಂದಿರುವ 62 ವರ್ಷದ ಖೋಕೊನ್ ದೇಬನಾಥ್ ಶಾಂತಿಪುರ ಪೊಲೀಸ್ ಠಾಣೆಗೆ ಲಿಖಿತ ದೂರು ಸಲ್ಲಿಸಿದ್ದಾರೆ. ತನ್ನ ಇಚ್ಛೆಗೆ ವಿರುದ್ಧವಾಗಿ ಸಂತಾನಹರಣ ಮಾಡಲಾಗುತ್ತಿದೆ ಎಂದು ಅವರು ದೂರಿನಲ್ಲಿ ಆರೋಪಿಸಿದ್ದಾರೆ.
ಇದನ್ನೂ ಓದಿ: ಬಂಗಾಳದಲ್ಲಿ ಈ ಬಾರಿ ಚಂಡೀಪಠಣ ಆಯೋಜಿಸಲಿದೆ ಟಿಎಂಸಿ, 5 ಲಕ್ಷ ಬ್ರಾಹ್ಮಣರು ಭಾಗವಹಿಸುವ ಸಾದ್ಯತೆ
ಅಧಿಕಾರಿಗಳು ಹೇಳಿದ್ದೇನು?
ಸಂತಾನಹರಣ ಚಿಕಿತ್ಸೆ ಆರೋಪಗಳಿಗೆ ಪ್ರತಿಕ್ರಿಯಿಸಿದ ವಕ್ತಾರರು ಅವರೆಲ್ಲ ಸುಳ್ಳು ಹೇಳುತ್ತಿದ್ದಾರೆ. ನಮ್ಮ ಮೇಲಧಿಕಾರಿಗಳು ಎಲ್ಲವನ್ನೂ ಸ್ಪಷ್ಟಪಡಿಸುತ್ತಾರೆ. ಅವರನ್ನು ಸಂಪರ್ಕಿಸಿ ಮತ್ತು ಅವರು ಸ್ಪಷ್ಟೀಕರಣವನ್ನು ನೀಡುತ್ತಾರೆ ಎಂದಿದ್ದಾರೆ. ನಾಡಿಯಾದ ಮುಖ್ಯ ಆರೋಗ್ಯ ಅಧಿಕಾರಿಯೊಬ್ಬರು, “ನಾವು ಇಲ್ಲಿ ಹೆಚ್ಚಿನ ಸಂತಾನಹರಣ ಪ್ರಕರಣಗಳನ್ನು ಸ್ವೀಕರಿಸುತ್ತಿಲ್ಲ. ಆದ್ದರಿಂದ, ನಮ್ಮ ಕಾರ್ಯಕ್ಷಮತೆಯ ಗುರಿಗಳನ್ನು ಪೂರೈಸಲು ನಾವು ಟ್ಯೂಬೆಕ್ಟಮಿ ಕಾರ್ಯವಿಧಾನಗಳನ್ನು ನಡೆಸುತ್ತಿದ್ದೇವೆ. ಗ್ರಾಮೀಣ ಆಸ್ಪತ್ರೆಗಳು ಮತ್ತು ರಾಜ್ಯ ಸಾಮಾನ್ಯ ಆಸ್ಪತ್ರೆಗಳಿಗೆ ಕನಿಷ್ಠ ಗುರಿಗಳನ್ನು ನಿಗದಿಪಡಿಸಲಾಗಿದೆ. ನೈರ್ಮಲ್ಯ ನಿಯಮಗಳ ಪ್ರಕಾರ, ಸಂತಾನಹರಣ ಚಿಕಿತ್ಸೆಯು ಸಂಪೂರ್ಣವಾಗಿ ಒಳಗೊಂಡಿರುವ ವ್ಯಕ್ತಿಯ ವಿವೇಚನೆಗೆ ಅನುಗುಣವಾಗಿರುತ್ತದೆ. ಎರಡನೇ ಮಗುವನ್ನು ಪಡೆದ ನಂತರ, ವ್ಯಕ್ತಿಗಳಿಗೆ ಸಲಹೆ ನೀಡಬೇಕು. ಅವರ ಅಭಿಪ್ರಾಯಗಳನ್ನು ಪರಿಗಣಿಸಬೇಕು ಎಂದು ಹೇಳಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ