Anant Ambani: ನಯ, ವಿನಯ, ವಿಧೇಯ ಅನಂತ; ಅಣ್ಣ ರಾಮನಂತೆ, ಅಕ್ಕ ದೇವತೆಯಂತೆ; ಭಾವಿ ಪತ್ನಿ ಏನಂತೆ?

'I am Hanuman, Brother Lord Ram, Sister Divine Mother': ಮುಕೇಶ್ ಅಂಬಾನಿ ಕಿರಿಯ ಮಗ ಅನಂತ್ ತನ್ನ ಕುಟುಂಬ ಸದಸ್ಯರು ಮತ್ತು ಭಾವಿ ಪತ್ನಿ ಬಗ್ಗೆ ಆಡಿದ ಮಾತುಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಅಣ್ಣ ಆಕಾಶ್ ತನಗೆ ಸಾಕ್ಷಾತ್ ರಾಮನಂತೆ, ಅಕ್ಕ ಇಶಾ ತನಗೆ ಮಾತೃ ಸ್ವರೂಪಿ ದೇವತೆಯಂತೆ ಎಂದಿದ್ದಾರೆ ಅನಂತ್ ಅಂಬಾನಿ. ತನ್ನ ಕಷ್ಟ ಕಾಲದಲ್ಲಿ ಜೊತೆಯಾಗಿ ನಿಂತು ಧೈರ್ಯ ನೀಡಿದ್ದು ರಾಧಿಕಾ ಎಂದು ಅನಂತ್ ತನ್ನ ಭಾವಿ ಪತ್ನಿಯನ್ನು ಹೊಗಳಿದ್ದಾರೆ.

Anant Ambani: ನಯ, ವಿನಯ, ವಿಧೇಯ ಅನಂತ; ಅಣ್ಣ ರಾಮನಂತೆ, ಅಕ್ಕ ದೇವತೆಯಂತೆ; ಭಾವಿ ಪತ್ನಿ ಏನಂತೆ?
ಅನಂತ್ ಅಂಬಾನಿ, ರಾಧಿಕಾ ಮರ್ಚೆಂಟ್
Follow us
|

Updated on: Feb 29, 2024 | 7:24 PM

ಭಾರತದ ನಂಬರ್ ಒನ್ ಶ್ರೀಮಂತ ಎನಿಸಿರುವ ಮುಕೇಶ್ ಅಂಬಾನಿ ಅವರ ಕಿರಿಯ ಮಗ ಅನಂತ್ ಅಂಬಾನಿ (Anant Ambani) ಹೆಸರು ಈಗ ಎಲ್ಲೆಡೆ ಕೇಳಿಬರುತ್ತಿದೆ. ಅವರ ಮದುವೆ ನಿಗದಿಯಾಗಿದ್ದು, ಸಮಾರಂಭಗಳು ನಡೆಯುತ್ತಿರುವುದು ಅವರನ್ನು ಸುದ್ದಿಯಲ್ಲಿಟ್ಟಿದೆ. ಆದರೆ, ನಿನ್ನೆ ಅವರು ಪತ್ರಿಕಾಗೋಷ್ಠಿಯಲ್ಲಿ ಆಡಿದ ಮಾತುಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ನಟಿ ಕಂಗನಾ ರಣಾವತ್ (Kangana Ranaut) ಈ ಅಂಬಾನಿ ಮಗನ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ್ದರು. ಎಂಥ ಸಭ್ಯತೆ, ಎಂಥ ಸಂಸ್ಕೃತಿ ಎಂದು ಅನಂತ್ ಅಂಬಾನಿಯನ್ನು ಹಾಡಿಹೊಗಳಿದ್ದರು. ಯಾವುದೇ ಪುರುಷರ ಬಗ್ಗೆ ಸುಲಭಕ್ಕೆ ಒಳ್ಳೆಯ ಅಭಿಪ್ರಾಯ ನೀಡದ ಕಂಗನಾ ಅನಂತ್ ಅಂಬಾನಿ ಬಗ್ಗೆ ಇಂಥ ಮಾತುಗಳ್ನಾಡುತ್ತಾರೆಂದರೆ ಅಂತಹದ್ದೇನಿದೆ ಜಾದು? ಇದಕ್ಕೆ ಉತ್ತರ, ಮೊನ್ನೆಮೊನ್ನೆ ಅವರು ಸಂದರ್ಶನದಲ್ಲಿ ಆಡಿದ ಮಾತುಗಳೇ ಸಾಕ್ಷ್ಯ.

ಅಣ್ಣ ರಾಮನಂತೆ, ಅಕ್ಕ ಸಾಕ್ಷಾತ್ ದೇವತೆ ಎಂದ ಅನಂತ್

ಮುಕೇಶ್ ಅಂಬಾನಿ ಅವರಿಗೆ ಮೂವರು ಮಕ್ಕಳು. ಆಕಾಶ್, ಇಶಾ ಮತ್ತು ಅನಂತ್. ಇವರ ಪೈಕಿ ಆಕಾಶ್ ಮತ್ತು ಇಶಾ ಅವಳಿ ಜವಳಿ. ಅನಂತ್ ಕೊನೆಯವರು. ಇವರಿಗೆ ವನ್ಯಜೀವಿ, ಪ್ರಾಣಿ ಪಕ್ಷಿಗಳೆಂದರೆ ಪ್ರೀತಿ ಹೆಚ್ಚು. ಇವುಗಳ ರಕ್ಷಣೆಗೆಂದು ವನತಾರ ಎಂಬ ಯೋಜನೆ ಕೈಗೊಂಡಿದ್ದಾರೆ. ಇದರ ಬಗ್ಗೆ ಮಾತನಾಡುತ್ತಾ ಅವರು ತಮ್ಮ ಅಣ್ಣ ಮತ್ತು ಅಕ್ಕನ ಬಗ್ಗೆ ತಮಗಿರುವ ಅದಮ್ಯ ಪ್ರೀತಿ, ನಂಬಿಕೆ, ಭದ್ರತೆ ಎಲ್ಲವನ್ನೂ ವ್ಯಕ್ತಪಡಿಸಿದ್ದರು.

ಇದನ್ನೂ ಓದಿ: ‘ಮೂಕ ಪ್ರಾಣಿಗಳ ಸೇವೆಯೇ ನನಗೆ ದೇವರ ಸೇವೆ’: ಅನಂತ್​​ ಅಂಬಾನಿ

‘ನನ್ನ ಅಣ್ಣ ಆಕಾಶ್ ನನಗೆ ಶ್ರೀ ರಾಮ ಇದ್ದಂತೆ. ಅಕ್ಕ ಇಶಾ ಮಾತಾಸ್ವರೂಪಿ ದೇವತೆಯಂತೆ. ಅವರಿಗೆ ನಾನು ಹನುಮನಂತೆ. ಅವರಿಬ್ಬರೂ ಯಾವಾಗಲೂ ನನ್ನನ್ನು ರಕ್ಷಿಸುತ್ತಾ ಬಂದಿದ್ದಾರೆ. ನಮ್ಮ ಮಧ್ಯೆ ಯಾವ ಸ್ಪರ್ಧೆಯಾಗಲೀ, ಭಿನ್ನಾಭಿಪ್ರಾಯವಾಗಲೀ ಇಲ್ಲ. ಫೆವಿಕ್ವಿಕ್​ನಂತೆ ನಾವೆಲ್ಲರೂ ಅಂಟಿಕೊಂಡಿದ್ದೇವೆ,’ ಎಂದು ಇಂಡಿಯಾ ಟುಡೇಗೆ ನೀಡಿದ ಸಂದರ್ಶನದಲ್ಲಿ ಅನಂತ್ ಅಂಬಾನಿ ಹೇಳಿದ್ದರು.

ಮದುವೆಯಾಗುವ ಹುಡುಗಿ ಬಗ್ಗೆ ಅದೆಂಥ ಪ್ರೀತಿ ಈ ಅನಂತ್​ಗೆ…

ಅನಂತ್ ಅಂಬಾನಿ ಹೊಗಳಿಕೆ ತಮ್ಮ ಒಡಹುಟ್ಟಿದವರಿಗೆ ಮಾತ್ರ ಸೀಮಿತವಾಗಿಲ್ಲ. ತಾನು ಮದುವೆಯಾಗಲಿರುವ ರಾಧಿಕಾ ಮರ್ಚಂಟ್ ಅವರ ಬಗ್ಗೆ ಅಭಿಮಾನ ತೋರ್ಪಡಿಸಿದ್ದಾರೆ. ಆಕೆ ನನ್ನ ಕನಸಿನ ಕನ್ಯೆ. ಅವಳನ್ನು ಪಡೆಯುತ್ತಿರುವುದು ನನ್ನ ಭಾಗ್ಯ ಎಂದಿದ್ದಾರೆ.

ಇದನ್ನೂ ಓದಿ: ರೆಬೆಲ್ ಭಾರತ; ಅತ್ತ ಅಮೆರಿಕಕ್ಕೂ ಜಗ್ಗದು, ಇತ್ತ ಚೀನಾಗೂ ಜಗ್ಗದು; ಡಬ್ಲ್ಯುಟಿಒ ಸಭೆಯ ರೋಚಕ ಅಂಶಗಳು

ನನ್ನ ಕಷ್ಟದ ಕಾಲದಲ್ಲಿ ನನಗೆ ಜೊತೆಯಾಗಿ ನಿಂತು ಬೆಂಬಲ ನೀಡಿದ್ದು ರಾಧಿಕಾ. ಆರೋಗ್ಯ ಸಮಸ್ಯೆ ಕಾಡುತ್ತಿದ್ದಾಗ ನಾನು ಮಾನಸಿಕವಾಗಿ ಕುಸಿಯದಂತೆ ಧೈರ್ಯ ತೋರಿ, ಗಟ್ಟಿಯಾಗಿ ನಿಂತವಳು ರಾಧಿಕಾ. ವೈದ್ಯರೇ ಕೆಲ ಸಂಗತಿಯಲ್ಲಿ ಕೈಚೆಲ್ಲಿದ್ದರು. ಆದರೆ, ನನ್ನ ಅಪ್ಪ ಅಮ್ಮ ಭರವಸೆ ಕಳೆದುಕೊಳ್ಳಲಿಲ್ಲ. ರಾಧಿಕಾ ಕೂಡ ಶಕ್ತಿ ತುಂಬಿದರು ಎಂದು ಅನಂತ್ ಅಂಬಾನಿ ಹೇಳಿದ್ದಾರೆ.

ಅನಂತ್ ಅಂಬಾನಿ ಅಸ್ತಮಾ ಸೇರಿದಂತೆ ವಿವಿಧ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದರು. ಈ ಕಾರಣಕ್ಕೆ ಅವರು ದಢೂತಿ ದೇಹದ ಹೊರೆ ಹೊತ್ತುಕೊಳ್ಳಬೇಕಿತ್ತು. ಇಂಥ ಸಂದರ್ಭದಲ್ಲಿ ಮೈ ಕರಗಿಸಲು ಅನಂತ್ ಬಹಳ ಶ್ರಮ ಪಟ್ಟಿದ್ದರು. ಈ ಹೊತ್ತಿನಲ್ಲಿ ಭಾವಿ ಪತ್ನಿ ರಾಧಿಕಾ ನೀಡಿದ ಬೆಂಬಲವನ್ನು ಅನಂತ್ ಅಂಬಾನಿ ನೆನೆದಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ
ಕೊಲೆ ಆರೋಪಿ ಪವಿತ್ರಾ ಗೌಡ ಆರೋಗ್ಯದಲ್ಲಿ ಏರುಪೇರು; ಆಸ್ಪತ್ರೆಗೆ ಶಿಫ್ಟ್​
ಕೊಲೆ ಆರೋಪಿ ಪವಿತ್ರಾ ಗೌಡ ಆರೋಗ್ಯದಲ್ಲಿ ಏರುಪೇರು; ಆಸ್ಪತ್ರೆಗೆ ಶಿಫ್ಟ್​
ಬೆಂಗಳೂರಿನಲ್ಲಿ ಸದ್ಯದಲ್ಲೇ ನೀರಿನ‌ ದರ ಏರಿಕೆ? ಡಿಕೆಶಿ ಹೇಳಿದ್ದಿಷ್ಟು
ಬೆಂಗಳೂರಿನಲ್ಲಿ ಸದ್ಯದಲ್ಲೇ ನೀರಿನ‌ ದರ ಏರಿಕೆ? ಡಿಕೆಶಿ ಹೇಳಿದ್ದಿಷ್ಟು
ರೀಲ್ಸ್​ಗೆ ಯುವತಿ ಬಲಿ, 15 ಸೆಕೆಂಡ್‌ನಲ್ಲೇ ಹಾರಿ ಹೋಯ್ತು ಪ್ರಾಣ ಪಕ್ಷಿ
ರೀಲ್ಸ್​ಗೆ ಯುವತಿ ಬಲಿ, 15 ಸೆಕೆಂಡ್‌ನಲ್ಲೇ ಹಾರಿ ಹೋಯ್ತು ಪ್ರಾಣ ಪಕ್ಷಿ
ರೇಣುಕಾಸ್ವಾಮಿ ಮರಣೋತ್ತರ ಪರೀಕ್ಷೆ ವರದಿ ಕುರಿತು ಕಮಿಷನರ್​ ಹೇಳಿದ್ದಿಷ್ಟು
ರೇಣುಕಾಸ್ವಾಮಿ ಮರಣೋತ್ತರ ಪರೀಕ್ಷೆ ವರದಿ ಕುರಿತು ಕಮಿಷನರ್​ ಹೇಳಿದ್ದಿಷ್ಟು
ಕೊಲೆ ಪ್ರಕರಣದ ಸಾಕ್ಷ್ಯ ನಾಶಕ್ಕೆ ನಡೆದಿತ್ತು ಪ್ಲ್ಯಾನ್
ಕೊಲೆ ಪ್ರಕರಣದ ಸಾಕ್ಷ್ಯ ನಾಶಕ್ಕೆ ನಡೆದಿತ್ತು ಪ್ಲ್ಯಾನ್
ತುಮಕೂರು ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿ ಶ್ರೀಗಳ ಆಶಿರ್ವಾದ ಪಡೆದ ವಿಜಯೇಂದ್ರ
ತುಮಕೂರು ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿ ಶ್ರೀಗಳ ಆಶಿರ್ವಾದ ಪಡೆದ ವಿಜಯೇಂದ್ರ
ದರ್ಶನ್ ನನ್ನ ಬಳಿ ಹೇಳಿ ಶೆಡ್​ಗೆ ಹೋಗಿಲ್ಲ; ಪಟ್ಟಣಗೆರೆ ಜಯಣ್ಣ
ದರ್ಶನ್ ನನ್ನ ಬಳಿ ಹೇಳಿ ಶೆಡ್​ಗೆ ಹೋಗಿಲ್ಲ; ಪಟ್ಟಣಗೆರೆ ಜಯಣ್ಣ
ಪಾರ್ಟಿಯಲ್ಲಿ ದರ್ಶನ್, ಚಿಕ್ಕಣ್ಣ ಜೊತೆ ಇದ್ದ ಮತ್ತೋರ್ವ ಹೀರೋ ಇವರೇ ನೋಡಿ
ಪಾರ್ಟಿಯಲ್ಲಿ ದರ್ಶನ್, ಚಿಕ್ಕಣ್ಣ ಜೊತೆ ಇದ್ದ ಮತ್ತೋರ್ವ ಹೀರೋ ಇವರೇ ನೋಡಿ
ಆಧಾರ್ ಕಾರ್ಡ್ ಅಪ್​ಡೇಟ್ ಮಾಡಲು ಮತ್ತೊಂದು ಅವಕಾಶ
ಆಧಾರ್ ಕಾರ್ಡ್ ಅಪ್​ಡೇಟ್ ಮಾಡಲು ಮತ್ತೊಂದು ಅವಕಾಶ
Daily Devotional: ದೇವಸ್ಥಾನದ ಹಿಂಭಾಗ ನಮಸ್ಕಾರ ಮಾಡುವುದರ ಮಹತ್ವ
Daily Devotional: ದೇವಸ್ಥಾನದ ಹಿಂಭಾಗ ನಮಸ್ಕಾರ ಮಾಡುವುದರ ಮಹತ್ವ