Rich: ಭಾರತದಲ್ಲಿ ಅತಿ ಶ್ರೀಮಂತರ ಸಂಖ್ಯೆ ಹೆಚ್ಚಾಗುತ್ತಿದೆ; ಜಾಗತಿಕ ಸರಾಸರಿ ಹೆಚ್ಚಳಕ್ಕಿಂತ ಭಾರತೀಯರು ಬಹಳ ಮುಂದು

Knight Frank's The Wealth Report 2024: ಭಾರತದಲ್ಲಿ 2022ಕ್ಕೆ ಹೋಲಿಸಿದರೆ 2023ರಲ್ಲಿ ಅತಿ ಶ್ರೀಮಂತರ (ಅಲ್ಟ್ರಾ ಹೈ ನೆಟ್ ವರ್ತ್ ವ್ಯಕ್ತಿಗಳು) ಸಂಖ್ಯೆಯಲ್ಲಿ ಶೇ. 6.1ರಷ್ಟು ಹೆಚ್ಚಳವಾಗಿದೆ. ಭಾರತದಲ್ಲಿ 13,263 ಇರುವ ಅತಿ ಶ್ರೀಮಂತರ ಸಂಖ್ಯೆ 2028ರಲ್ಲಿ 20,000 ಸಮೀಪಕ್ಕೆ ಹೋಗಬಹುದು ಎಂದು ಹೇಳಲಾಗಿದೆ. ನೈಟ್ ಫ್ರಾಂಕ್ ಎಂಬ ರಿಯಲ್ ಎಸ್ಟೇಟ್ ಕನ್ಸಲ್ಟೆಂಟ್ ಕಂಪನಿ ಬಿಡುಗಡೆ ಮಾಡಿದ ದಿ ವೆಲ್ತ್ ರಿಪೋರ್ಟ್ ವರದಿಯಲ್ಲಿ ಅತಿಶ್ರೀಮಂತರ ಬೆಳವಣಿಗೆ ವ್ಯಕ್ತಪಡಿಸಲಾಗಿದೆ.

Rich: ಭಾರತದಲ್ಲಿ ಅತಿ  ಶ್ರೀಮಂತರ ಸಂಖ್ಯೆ ಹೆಚ್ಚಾಗುತ್ತಿದೆ; ಜಾಗತಿಕ ಸರಾಸರಿ ಹೆಚ್ಚಳಕ್ಕಿಂತ ಭಾರತೀಯರು ಬಹಳ ಮುಂದು
ಶ್ರೀಮಂತರು
Follow us
|

Updated on: Feb 28, 2024 | 3:36 PM

ಹೈದರಾಬಾದ್, ಫೆಬ್ರುವರಿ 28: ನೈಟ್ ಫ್ರಾಂಕ್ ಸಂಸ್ಥೆಯ ‘ದಿ ವೆಲ್ತ್ ರಿಪೋರ್ಟ್ 2024’ ಭಾರತದ ಆರ್ಥಿಕ ಬೆಳವಣಿಗೆಯ ಫಲಶ್ರುತಿಯನ್ನು ಎತ್ತಿತೋರಿಸಿದೆ. ಭಾರತದಲ್ಲಿ ಅತಿ ಶ್ರೀಮಂತ ವ್ಯಕ್ತಿಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ವೇಗವಾಗಿ ಬೆಳೆಯುತ್ತಿರುವುದನ್ನು ಈ ವರದಿ (Knight Frank’s The Wealth Report 2024) ತೋರಿಸಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಅತಿಶ್ರೀಮಂತರು ಅಥವಾ ಅಲ್ಟ್ರಾ ಹೈ ನೆಟ್ ವರ್ತ್ ಇಂಡಿವಿಜುವಲ್ಸ್ (Ultra-high Net-worth Individuals) ಸಂಖ್ಯೆಯಲ್ಲಿ ಶೇ. 6ರಷ್ಟು ಹೆಚ್ಚಾಗಿದೆ. ಭಾರತದಲ್ಲಿ ಈಗ ಇವರ ಸಂಖ್ಯೆ 13,263ಕ್ಕೆ ಏರಿದೆ. ವಿಶ್ವಾದ್ಯಂತ ಈ ದೊಡ್ಡ ಶ್ರೀಮಂತರ ಸಂಖ್ಯೆ 6,26,619 ಇದೆ ಎನ್ನಲಾಗಿದೆ.

ಯಾರಿವರು ಯುಎಚ್​ಎನ್​ಡಬ್ಲ್ಯುಐ ಶ್ರೀಮಂತರು?

ಅಲ್ಟ್ರಾ ಹೈ ನೆಟ್ ವರ್ತ್ ವ್ಯಕ್ತಿಗಳು ಅಥವಾ ಅತಿಶ್ರೀಮಂತರು ಕನಿಷ್ಠ 30 ಮಿಲಿಯನ್ ಡಾಲರ್ ಮೌಲ್ಯದ ಸಂಪತ್ತು ಹೊಂದಿರುವವರಾಗಿರುತ್ತಾರೆ. 30 ಮಿಲಿಯನ್ ಡಾಲರ್ ಎಂದರೆ ಸುಮಾರು 250 ಕೋಟಿ ರೂ ಮೌಲ್ಯದ ಆಸ್ತಿ ಹೊಂದಿರುವ ಕುಬೇರರು ಇವರು.

ಭಾರತದಲ್ಲಿ 2022ರಲ್ಲಿ 12,495 ವ್ಯಕ್ತಿಗಳು ಅತಿ ಶ್ರೀಮಂತರಿದ್ದರು. 2023ರಲ್ಲಿ ಇವರ ಸಂಖ್ಯೆ 13,263ಕ್ಕೆ ಏರಿದೆ.

ಇದನ್ನೂ ಓದಿ: ಕೆಲಸ ಬಿಟ್ಟುಹೋದ ಉದ್ಯೋಗಿಯ ಪಿಎಫ್ ಹಣ ಹಿಂಪಡೆಯುವ ಅಧಿಕಾರ ಸಂಸ್ಥೆಗೆ ಇದೆಯೇ? ಇಲ್ಲಿದೆ ಉತ್ತರ

ವಿಶ್ವಾದ್ಯಂತ 2022ರಲ್ಲಿ ಅತಿ ಶ್ರೀಮಂತರ ಸಂಖ್ಯೆ 6,01,300 ಇತ್ತು. 2023ರಲ್ಲಿ ಇವರ ಸಂಖ್ಯೆ 6,26,619ಕ್ಕೆ ಏರಿದೆ. ಶೇ. 4.1ರಷ್ಟು ಸಂಖ್ಯೆ ಏರಿದೆ.

2028ರಲ್ಲಿ ಭಾರತದಲ್ಲಿ ಇವರ ಸಂಖ್ಯೆ ಬರೋಬ್ಬರಿ ಶೇ. 50ರಷ್ಟು ಹೆಚ್ಚಳಗೊಂಡು 19,900ರ ಗಡಿ ದಾಟಲಿದೆ ಎಂದು ನೈಟ್ ಫ್ರಾಂಕ್​ನ ದಿ ವೆಲ್ತ್ ರಿಪೋರ್ಟ್ ವರದಿಯಲ್ಲಿ ಅಂದಾಜು ಮಾಡಲಾಗಿದೆ.

ಇನ್ನು, ಜಾಗತಿಕವಾಗಿ ಈ ಅತಿಶ್ರೀಮಂತರ ಸಂಖ್ಯೆ 2028ರ ವರ್ಷದಲ್ಲಿ 8,02,891ಕ್ಕೆ ಹೋಗಬಹುದು. ಅಂದರೆ ಶೇ. 28ರಷ್ಟು ಸಂಖ್ಯೆ ಹೆಚ್ಚಾಗಬಹುದು.

ಮತ್ತೊಂದು ಗಮನಾರ್ಹ ಅಂಶವೆಂದರೆ 2024ರಲ್ಲಿ ಶೇ. 90ರಷ್ಟು ಅತಿಶ್ರೀಮಂತರು ತಮ್ಮ ಸಂಪತ್ತು ಇನ್ನಷ್ಟು ಹೆಚ್ಚಾಗಬಹುದು ಎಂಬ ವಿಶ್ವಾಸದಲ್ಲಿ ಇದ್ದಾರೆ. ಅದರಲ್ಲೂ ಶೇ. 63ರಷ್ಟು ಶ್ರೀಮಂತರು ಶೇ. 10ಕ್ಕಿಂತ ಹೆಚ್ಚು ಸಂಪತ್ತು ವೃದ್ಧಿಯ ನಿರೀಕ್ಷೆಯಲ್ಲಿದ್ದಾರೆ.

ಇದನ್ನೂ ಓದಿ: 90 ದಿನದಲ್ಲಿ ಹಣ ಡಬಲ್; ರಿಲಾಯನ್ಸ್ ಬೆಂಬಲಿತ ಬಾಲಾಜಿ ಟೆಲಿಫಿಲಂಸ್​ನ ಷೇರು ಮ್ಯಾಜಿಕ್

ಟರ್ಕಿ, ಅಮೆರಿಕ, ಭಾರತ ಟಾಪ್-3

ಅತಿ ಶ್ರೀಮಂತರ ಸಂಖ್ಯೆ ಏರಿಕೆ ವೇಗ ಗಮನಿಸಿದರೆ ಟರ್ಕಿ ಅಗ್ರಸ್ಥಾನ ಪಡೆದಿದೆ. ಟರ್ಕಿಯಲ್ಲಿ ಅತಿಶ್ರೀಮಂತರ ಸಂಖ್ಯೆ ಶೇ. 9.7ರಷ್ಟು ಏರಿದೆ. ಅಮೆರಿಕದಲ್ಲಿ ಶೇ. 7.9, ಭಾರತದಲ್ಲಿ ಶೇ. 6.1ರಷ್ಟು ಸಂಖ್ಯೆ ಏರಿದೆ. ಸೌತ್ ಕೊರಿಯಾ ಶೇ. 5.6 ಮತ್ತು ಸ್ವಿಟ್ಜರ್​ಲ್ಯಾಂಡ್ ಶೇ. 5.2ರಷ್ಟು ಶ್ರೀಮಂತರ ಹೆಚ್ಚಳ ಕಂಡು ಟಾಪ್-5 ಪಟ್ಟಿಯಲ್ಲಿ ಸ್ಥಾನ ಪಡೆದಿವೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ
ದರ್ಶನ್​ ಪ್ರಕರಣದ ಬಗ್ಗೆ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ ನಟಿ ಭಾವನಾ
ದರ್ಶನ್​ ಪ್ರಕರಣದ ಬಗ್ಗೆ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ ನಟಿ ಭಾವನಾ
ಆಟೋರಿಕ್ಷಾ ದರವೂ ಹೆಚ್ಚಳವಾಗಲಿದೆಯೇ? ರಾಮಲಿಂಗಾರೆಡ್ಡಿ ಹೇಳುವಂತೆ ಹೌದು!
ಆಟೋರಿಕ್ಷಾ ದರವೂ ಹೆಚ್ಚಳವಾಗಲಿದೆಯೇ? ರಾಮಲಿಂಗಾರೆಡ್ಡಿ ಹೇಳುವಂತೆ ಹೌದು!
ಹೈಕಮಾಂಡ್ ಹೇಳಿದ್ದನ್ನು ರಾಜ್ಯದ ನಾಯಕರಿಗೆ ಜ್ಞಾಪಿಸುತ್ತಿದ್ದೇನೆ: ರಾಜಣ್ಣ
ಹೈಕಮಾಂಡ್ ಹೇಳಿದ್ದನ್ನು ರಾಜ್ಯದ ನಾಯಕರಿಗೆ ಜ್ಞಾಪಿಸುತ್ತಿದ್ದೇನೆ: ರಾಜಣ್ಣ
ಹಾಲಿನ ದರ ಏರಿಕೆ ಹಣ ರೈತರಿಗೆ ಹೋಗೋದು ಬಿಜೆಪಿ ನಾಯಕರಿಗೆ ಇಷ್ಟವಿಲ್ಲ:ಡಿಕೆಶಿ
ಹಾಲಿನ ದರ ಏರಿಕೆ ಹಣ ರೈತರಿಗೆ ಹೋಗೋದು ಬಿಜೆಪಿ ನಾಯಕರಿಗೆ ಇಷ್ಟವಿಲ್ಲ:ಡಿಕೆಶಿ
ಕೆಂಪೇಗೌಡ ಜಯಂತಿ; ನಮ್ಮ ಹೆಸರಿಲ್ಲದಿರುವುದು ದೊಡ್ಡ ವಿಷಯವಲ್ಲ: ಕುಮಾರಸ್ವಾಮಿ
ಕೆಂಪೇಗೌಡ ಜಯಂತಿ; ನಮ್ಮ ಹೆಸರಿಲ್ಲದಿರುವುದು ದೊಡ್ಡ ವಿಷಯವಲ್ಲ: ಕುಮಾರಸ್ವಾಮಿ
ಮುಸ್ಲಿಂ ವೋಟು ವನ್-ಸೈಡೆಡ್ ಆಗಿ ಸಾಗರ್ ಸಿಕ್ಕಿದ್ದು ಅಂತ ಹೇಳಿದ್ದು: ಜಮೀರ್
ಮುಸ್ಲಿಂ ವೋಟು ವನ್-ಸೈಡೆಡ್ ಆಗಿ ಸಾಗರ್ ಸಿಕ್ಕಿದ್ದು ಅಂತ ಹೇಳಿದ್ದು: ಜಮೀರ್
ಉಡುಪಿ: ಬಿರುಸುಗೊಂಡ ಮುಂಗಾರು ಮಳೆ; ಕಾಪು, ಮಲ್ಪೆ ಕಡಲ ಕಿನಾರೆ ಪ್ರಕ್ಷುಬ್ಧ
ಉಡುಪಿ: ಬಿರುಸುಗೊಂಡ ಮುಂಗಾರು ಮಳೆ; ಕಾಪು, ಮಲ್ಪೆ ಕಡಲ ಕಿನಾರೆ ಪ್ರಕ್ಷುಬ್ಧ
ಸಂಸತ್ ಭವನದಲ್ಲಿ ಪರಸ್ಪರ ಕೈ ಕುಲುಕಿದ ಪ್ರಧಾನಿ ಮೋದಿ ಮತ್ತು ರಾಹುಲ್ ಗಾಂಧಿ
ಸಂಸತ್ ಭವನದಲ್ಲಿ ಪರಸ್ಪರ ಕೈ ಕುಲುಕಿದ ಪ್ರಧಾನಿ ಮೋದಿ ಮತ್ತು ರಾಹುಲ್ ಗಾಂಧಿ
‘ದರ್ಶನ್ ಇರುವ ಫ್ಲೋರ್​ನಲ್ಲಿ ಹೆಣ್ಣು ಮಕ್ಕಳು ಇರುವಂತಿರಲಿಲ್ಲ’
‘ದರ್ಶನ್ ಇರುವ ಫ್ಲೋರ್​ನಲ್ಲಿ ಹೆಣ್ಣು ಮಕ್ಕಳು ಇರುವಂತಿರಲಿಲ್ಲ’
ವಿರೋಧ ಪಕ್ಷದ ನಾಯಕ ಆರ್ ಅಶೋಕರನ್ನು ತರಾಟೆಗೆ ತೆಗೆದುಕೊಂಡ ಹೆಚ್ ವಿಶ್ವನಾಥ್
ವಿರೋಧ ಪಕ್ಷದ ನಾಯಕ ಆರ್ ಅಶೋಕರನ್ನು ತರಾಟೆಗೆ ತೆಗೆದುಕೊಂಡ ಹೆಚ್ ವಿಶ್ವನಾಥ್