Nita Ambani: ರಿಲಾಯನ್ಸ್-ಡಿಸ್ನೀ ವಿಲೀನ ನಂತರದ ಸಂಸ್ಥೆಗೆ ನೀತಾ ಅಂಬಾನಿ ಮುಖ್ಯಸ್ಥೆ, ಉದಯ್ ಶಂಕರ್ ಉಪಾಧ್ಯಕ್ಷ ಆಗುವ ಸಾಧ್ಯತೆ

Reliance-Disney Merger: ರಿಲಾಯನ್ಸ್ ಇಂಡಸ್ಟ್ರೀಸ್​ಗೆ ಸೇರಿದ ವಯಾಕಾಮ್18 ಮತ್ತು ಡಿಸ್ನೀ ಇಂಡಿಯಾ ವಿಲೀನದ ಬಳಿಕ ಅದರ ಚುಕ್ಕಾಣಿ ನೀತಾ ಅಂಬಾನಿ ಕೈಗೆ ಹೋಗಬಹುದು ಎನ್ನಲಾಗಿದೆ. ವಿಲೀನದ ಭಾಗವಾಗಲಿರುವ ಬೋಧಿ ಟ್ರೀ ಸಂಸ್ಥೆಯ ಮುಖ್ಯಸ್ಥ ಉದಯ್ ಶಂಕರ್ ಅವರು ಹೊಸ ಸಂಸ್ಥೆಗೆ ವೈಸ್ ಛೇರ್ಮನ್ ಆಗಬಹುದು. ಈ ವಾರದೊಳಗೆ ವಯಾಕಾಮ್ ಮತ್ತು ಡಿಸ್ನಿ ವಿಲೀನದ ಒಪ್ಪಂದ ಅಂತಿಮಗೊಳ್ಳುವ ಸಾಧ್ಯತೆ ಇದೆ.

Nita Ambani: ರಿಲಾಯನ್ಸ್-ಡಿಸ್ನೀ ವಿಲೀನ ನಂತರದ ಸಂಸ್ಥೆಗೆ ನೀತಾ ಅಂಬಾನಿ ಮುಖ್ಯಸ್ಥೆ, ಉದಯ್ ಶಂಕರ್ ಉಪಾಧ್ಯಕ್ಷ ಆಗುವ ಸಾಧ್ಯತೆ
ನೀತಾ ಅಂಬಾನಿ
Follow us
|

Updated on:Feb 28, 2024 | 12:56 PM

ಮುಂಬೈ, ಫೆಬ್ರುವರಿ 28: ರಿಲಾಯನ್ಸ್ ಇಂಡಸ್ಟ್ರೀಸ್ ಮತ್ತು ವಾಲ್ಟ್ ಡಿಸ್ನೀ ವಿಲೀನಗೊಂಡ ಬಳಿಕ ಹುಟ್ಟುವ ಹೊಸ ಸಂಸ್ಥೆಗೆ (Viacom18 Disney Post Merger Entity) ನೀತಾ ಅಂಬಾನಿ ಛೇರ್ಮನ್ ಆಗುವ ಸಾಧ್ಯತೆ ಇದೆ. ಮಾಜಿ ಡಿಸ್ನೀ ಎಕ್ಸಿಕ್ಯೂಟಿವ್ ಮತ್ತು ಬೋಧಿ ಟ್ರೀ ಸಂಸ್ಥೆಯ ಮುಖ್ಯಸ್ಥ ಉದಯ್ ಶಂಕರ್ ಅವರು ವೈಸ್ ಛೇರ್ಮನ್ ಆಗಬಹುದು ಎಂದು ವರದಿಗಳು ಹೇಳುತ್ತಿವೆ. ಅಮೆರಿಕದ ವಾಲ್ಟ್ ಡಿಸ್ನಿ ತನ್ನ ಭಾರತೀಯ ವ್ಯವಹಾರಗಳನ್ನು (Indian business of Walt Disney) ರಿಲಾಯನ್ಸ್ ಗ್ರೂಪ್​ಗೆ ಸೇರಿದ ವಯಾಕಾಮ್18 ಜೊತೆ ವಿಲೀನಗೊಳಿಸಲು ಮುಂದಾಗಿದೆ. ಮೊನ್ನೆ ಈ ಸಂಬಂಧ ಎರಡೂ ಸಂಸ್ಥೆಗಳು ಒಪ್ಪಂದ ಮಾಡಿಕೊಂಡಿವೆ. ಈ ವಾರದೊಳಗೆ ಒಪ್ಪಂದ ಅಂತಿಮಗೊಳ್ಳುವ ಸಾಧ್ಯತೆ ಇದೆ.

ಸೋನಿ ಮತ್ತು ಝೀ ವಿಲೀನ ಪ್ರಯತ್ನ ವಿಫಲಗೊಂಡ ಬೆನ್ನಲ್ಲೇ ಈಗ ಬೇರೆ ಎರಡು ಎಂಟರ್ಟೈನ್ಮೆಂಟ್ ಮೀಡಿಯಾ ದಿಗ್ಗಜರ ಸಮಾಗಮದ ಪ್ರಯತ್ನ ಆಗುತ್ತಿದೆ. ಇದು ಯಶಸ್ವಿಯಾದಲ್ಲಿ ಮಾಧ್ಯಮ ಕ್ಷೇತ್ರದಲ್ಲಿ ರಿಲಾಯನ್ಸ್ ಹಿಡಿತ ಇನ್ನಷ್ಟು ಹೆಚ್ಚಲಿದೆ.

ಇದನ್ನೂ ಓದಿ: 90 ದಿನದಲ್ಲಿ ಹಣ ಡಬಲ್; ರಿಲಾಯನ್ಸ್ ಬೆಂಬಲಿತ ಬಾಲಾಜಿ ಟೆಲಿಫಿಲಂಸ್​ನ ಷೇರು ಮ್ಯಾಜಿಕ್

ವಯಾಕಾಮ್18 ಮತ್ತು ಡಿಸ್ನೀ ಇಂಡಿಯಾದ ವಿಲೀನದ ನಂತರದ ಸಂಸ್ಥೆಯಲ್ಲಿ ರಿಲಾಯನ್ಸ್ ಇಂಡಸ್ಟ್ರೀಸ್​ನ ಷೇರು ಪಾಲು ಶೇ. 61ರಷ್ಟು ಇರಲಿದೆ. ಉಳಿದ ಪಾಲು ಡಿಸ್ನಿಯದ್ದಾಗಿರಲಿದೆ ಎಂದು ಕೆಲ ವರದಿಗಳು ಹೇಳಿವೆ. ಆದರೆ, ಇನ್ನೂ ಕೆಲ ವರದಿಗಳ ಪ್ರಕಾರ ಹೊಸ ಸಂಸ್ಥೆಯಲ್ಲಿ ರಿಲಾಯನ್ಸ್​ನ ಷೇರುಪಾಲು ಶೇ. 51-54ರಷ್ಟು ಇರುತ್ತದೆ. ಡಿಸ್ನಿ ಶೇ. 40ರಷ್ಟು ಪಾಲು ಹೊಂದಿದರೆ, ಬೋಧಿ ಟ್ರೀ ಸಂಸ್ಥೆ ಶೇ. 9ರಷ್ಟು ಪಾಲು ಹೊಂದಬಹುದು ಎನ್ನಲಾಗುತ್ತಿದೆ. ಬೋಧಿ ಟ್ರೀ ಎಂಬುದು ಜೇಮ್ಸ್ ಮುರ್ಡೋಕ್ ಮತ್ತು ಉದಯ್ ಶಂಕರ್ ಅವರು ಜಂಟಿಯಾಗಿ ಆರಂಭಿಸಿದ್ದ ಎಂಟರ್ಟೈನ್ಮೆಂಟ್ ಮೀಡಿಯಾ ಸಂಸ್ಥೆ. ಉದಯ್ ಶಂಕರ್ ಡಿಸ್ನಿ ಇಂಡಿಯಾದಲ್ಲಿ ಈ ಹಿಂದೆ ಇದ್ದರು. ಈಗ ಇವರು ರಿಲಾಯನ್ಸ್ ಡಿಸ್ನಿ ಹೊಸ ಸಂಸ್ಥೆಯಲ್ಲಿ ವೈಸ್ ಛೇರ್ಮನ್ ಸ್ಥಾನ ಪಡೆಯಬಹುದು ಎನ್ನಲಾಗಿದೆ.

ಇದು ಸದ್ಯಕ್ಕೆ ಆರಂಭಿಕ ಹಂತದಲ್ಲಿರುವ ಪ್ಲಾನ್. ಈ ವಾರ ಒಪ್ಪಂದ ಅಂಶಗಳು ಅಂತಿಮಗೊಳ್ಳಬಹುದು. ಅಷ್ಟರೊಳಗೆ ಚುಕ್ಕಾಣಿ ಹಿಡಿಯುವವರ ಹೆಸರು ಬದಲಾದರೂ ಆಗಬಹುದು.

ಇದನ್ನೂ ಓದಿ: ಶಿವರಾತ್ರಿ, ಹೋಳಿ, ಗುಡ್​ಫ್ರೈಡೆಗೆ ಬ್ಯಾಂಕ್ ರಜೆ ಇದೆಯಾ? ಮಾರ್ಚ್ ತಿಂಗಳ 14 ದಿನ ರಜಾ ಪಟ್ಟಿ

ನೀತಾ ಅಂಬಾನಿ ಕಾರ್ಯಗಳು

ಭಾರತದ ನಂಬರ್ ಒನ್ ಶ್ರೀಮಂತ ಎನಿಸಿರುವ ಮುಕೇಶ್ ಅಂಬಾನಿ ಅವರ ಪತ್ನಿ ನೀತಾ ಅಂಬಾನಿ. ಇವರು ರಿಲಾಯನ್ಸ್ ಇಂಡಸ್ಟ್ರೀಸ್​ನ ಬೋರ್ಡ್​ನಲ್ಲಿ ಕೇವಲ ನಾನ್ ಎಕ್ಸಿಕ್ಯೂಟಿವ್ ಡೈರೆಕ್ಟರ್ ಮಾತ್ರವೇ. ಆದರೆ, ಆರ್​ಐಎಲ್​ನ ಸಾಮಾಜಿಕ ಸೇವಾ ವಿಭಾಗವಾದ ರಿಲಾಯನ್ಸ್ ಫೌಂಡೇಶನ್​ನ ಸಂಸ್ಥಾಪಕಾಧ್ಯಕ್ಷೆ ಆಗಿದ್ದಾರೆ.

ಫೌಂಡೇಶನ್ ಮೂಲಕ ಆಸ್ಪತ್ರೆ ಮತ್ತಿತರ ಕ್ಷೇತ್ರದಲ್ಲಿ ಸಾಕಷ್ಟು ಕೆಲಸ ಮಾಡುತ್ತಿದ್ದಾರೆ. ಮುಂಬೈ ಇಂಡಿಯನ್ಸ್ ಕ್ರಿಕೆಟ್ ತಂಡದ ಒಡತಿ. ಹಾಗೆಯೇ, ಇಂಡಿನ್ ಸೂಪರ್ ಲೀಗ್ ಎಂಬ ಫುಟ್ಬಾಲ್ ಟೂರ್ನಿ ಆಯೋಜಿಸುವ ಫೂಟ್​ಬಾಲ್ ಸ್ಪೋರ್ಟ್ಸ್ ಡೆವಲಪ್ಮೆಂಟ್ ಲಿ ಮುಖ್ಯಸ್ಥೆಯೂ ಆಗಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 12:22 pm, Wed, 28 February 24

ತಾಜಾ ಸುದ್ದಿ
ಬಕ್ರೀದ್ ಹಬ್ಬದಲ್ಲಿ ಗೋಹತ್ಯೆ ನಡೆದಿವೆ ಎಂದು ಫೋನ್ ಬಿಸಾಡಿದ ಚನ್ನಬಸಪ್ಪ
ಬಕ್ರೀದ್ ಹಬ್ಬದಲ್ಲಿ ಗೋಹತ್ಯೆ ನಡೆದಿವೆ ಎಂದು ಫೋನ್ ಬಿಸಾಡಿದ ಚನ್ನಬಸಪ್ಪ
ಬೆಂಗಳೂರಿನ ಖಾಸಗಿ ನರ್ಸಿಂಗ್ ಕಾಲೇಜಿನ ಬಸ್​ಗಳು ಬೆಂಕಿಗಾಹುತಿ
ಬೆಂಗಳೂರಿನ ಖಾಸಗಿ ನರ್ಸಿಂಗ್ ಕಾಲೇಜಿನ ಬಸ್​ಗಳು ಬೆಂಕಿಗಾಹುತಿ
ಸೆಂಟ್ರಲ್ ಜೈಲಿನ ಬಳಿ ಬಂದ ಕುಡುಕನಿಗೆ ದರ್ಶನ್ ರನ್ನು ನೋಡಲೇಬೇಕೆಂಬ ಹಠ
ಸೆಂಟ್ರಲ್ ಜೈಲಿನ ಬಳಿ ಬಂದ ಕುಡುಕನಿಗೆ ದರ್ಶನ್ ರನ್ನು ನೋಡಲೇಬೇಕೆಂಬ ಹಠ
ರಾಹುಲ್ ಮಾತಾಡುವಾಗ ಮೈಕ್ ಆಫ್ ಮಾಡಲಾಯಿತೆಂಬ ಆರೋಪ ಸುಳ್ಳು: ಶೋಭಾ ಕರಂದ್ಲಾಜೆ
ರಾಹುಲ್ ಮಾತಾಡುವಾಗ ಮೈಕ್ ಆಫ್ ಮಾಡಲಾಯಿತೆಂಬ ಆರೋಪ ಸುಳ್ಳು: ಶೋಭಾ ಕರಂದ್ಲಾಜೆ
ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇ ದಾಟಿ ಕಾರಿಗೆ ಡಿಕ್ಕಿ ಹೊಡೆದ KSRTC ಬಸ
ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇ ದಾಟಿ ಕಾರಿಗೆ ಡಿಕ್ಕಿ ಹೊಡೆದ KSRTC ಬಸ
ನಿನ್ನೆ ದೆಹಲಿಯಲ್ಲಿದ್ದ ಕೇಂದ್ರ ಸಚಿವ ಸೋಮಣ್ಣರಿಂದ ಇಂದು ಬೆಂಗಳೂರಲ್ಲಿ ಸಭೆ
ನಿನ್ನೆ ದೆಹಲಿಯಲ್ಲಿದ್ದ ಕೇಂದ್ರ ಸಚಿವ ಸೋಮಣ್ಣರಿಂದ ಇಂದು ಬೆಂಗಳೂರಲ್ಲಿ ಸಭೆ
ದೈವ ಕ್ಷೇತ್ರದಲ್ಲಿ ಪವಾಡ; ಆಫ್ ಮಾಡಿದ್ದರೂ ತನ್ನಂತಾನೆ ಚಲಿಸಿದ ಆಟೋ
ದೈವ ಕ್ಷೇತ್ರದಲ್ಲಿ ಪವಾಡ; ಆಫ್ ಮಾಡಿದ್ದರೂ ತನ್ನಂತಾನೆ ಚಲಿಸಿದ ಆಟೋ
ಸಿಎಂ/ಡಿಸಿಎಂ ಅಗಬೇಕೆನ್ನುವವರು ಮತ್ತೊಮ್ಮೆ ಚುನಾವಣೆ ಎದುರಿಸಲಿ:ಡಿಕೆ ಸುರೇಶ್
ಸಿಎಂ/ಡಿಸಿಎಂ ಅಗಬೇಕೆನ್ನುವವರು ಮತ್ತೊಮ್ಮೆ ಚುನಾವಣೆ ಎದುರಿಸಲಿ:ಡಿಕೆ ಸುರೇಶ್
ಶಿವಕುಮಾರ್ ಸಿಎಂ ಆಗಬೇಕು ಎಂದಷ್ಟೇ ಹೇಳಿದ್ದು: ಚಂದ್ರಶೇಖರನಾಥ ಸ್ವಾಮೀಜಿ
ಶಿವಕುಮಾರ್ ಸಿಎಂ ಆಗಬೇಕು ಎಂದಷ್ಟೇ ಹೇಳಿದ್ದು: ಚಂದ್ರಶೇಖರನಾಥ ಸ್ವಾಮೀಜಿ
ಸೋಲಿಗೆ ಮಾಧ್ಯಮಗಳ ಮೇಲೆ ಗೂಬೆ ಕೂರಿಸುವ ಪ್ರಯತ್ನ ಮಾಡಿದ ಡಿಕೆ ಸುರೇಶ್
ಸೋಲಿಗೆ ಮಾಧ್ಯಮಗಳ ಮೇಲೆ ಗೂಬೆ ಕೂರಿಸುವ ಪ್ರಯತ್ನ ಮಾಡಿದ ಡಿಕೆ ಸುರೇಶ್