WTO Meeting: ರೆಬೆಲ್ ಭಾರತ; ಅತ್ತ ಅಮೆರಿಕಕ್ಕೂ ಜಗ್ಗದು, ಇತ್ತ ಚೀನಾಗೂ ಜಗ್ಗದು; ಡಬ್ಲ್ಯುಟಿಒ ಸಭೆಯ ರೋಚಕ ಅಂಶಗಳು

Authoritative India In Abu Dhabi WTO Meet: ಅಬುಧಾಬಿಯಲ್ಲಿ ನಡೆಯುತ್ತಿರುವ 13ನೇ ಡಬ್ಲ್ಯುಟಿಒ ಮಿನಿಸ್ಟರಿಯಲ್ ಸಭೆಯಲ್ಲಿ ದೊಡ್ಡದೊಡ್ಡ ದೇಶಗಳ ಎದುರು ಭಾರತ ದಿಟ್ಟ ನಿಲುವು ತಳೆದಿದೆ. ಹೂಡಿಕೆ ಸೌಲಭ್ಯ ಮತ್ತು ರಿಯಾಯಿತಿ ವಿಚಾರವನ್ನು ಡಬ್ಲ್ಯುಟಿಒದಲ್ಲಿ ಚರ್ಚೆಗೆ ತರಬೇಕೆಂಬ ಚೀನಾ ಮೊದಲಾದ 125 ದೇಶಗಳ ಪ್ರಯತ್ನಕ್ಕೆ ಭಾರತ ತಡೆಯಾಗಿ ನಿಂತಿದೆ. ವಿದೇಶಗಳಲ್ಲಿರುವ ಭಾರತೀಯರು ತಮ್ಮ ತಾಯ್ನಾಡಿಗೆ ಕಳುಹಿಸುವ ಹಣಕ್ಕೆ ಆಯಾ ದೇಶದಿಂದ ತೆರಿಗೆ ಹಾಕಲಾಗುತ್ತದೆ. ಈ ತೆರಿಗೆ ಮೊತ್ತ ಕಡಿಮೆ ಮಾಡಬೇಕೆಂಬ ಭಾರತದ ಪ್ರಸ್ತಾಪಕ್ಕೆ ಅಮೆರಿಕ ಸಮ್ಮತಿ ನೀಡುತ್ತಿಲ್ಲ.

WTO Meeting: ರೆಬೆಲ್ ಭಾರತ; ಅತ್ತ ಅಮೆರಿಕಕ್ಕೂ ಜಗ್ಗದು, ಇತ್ತ ಚೀನಾಗೂ ಜಗ್ಗದು; ಡಬ್ಲ್ಯುಟಿಒ ಸಭೆಯ ರೋಚಕ ಅಂಶಗಳು
ಭಾರತ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Feb 29, 2024 | 1:03 PM

ಅಬುಧಾಬಿ, ಫೆಬ್ರುವರಿ 29: ಯಾರೂ ಖಾಯಂ ಮಿತ್ರರಲ್ಲ, ಯಾರೂ ಖಾಯಂ ಶತ್ರುಗಳಲ್ಲ… ಅವರವರಿಗೆ ಅವರವರ ಹಿತಾಸಕ್ತಿಯೇ ಮುಖ್ಯವಾಗಿರುತ್ತದೆ. ಜಾಗತಿಕ ಸ್ವರೂಪದಲ್ಲಿ ಕೆಲ ದೇಶಗಳು ಪರಸ್ಪರ ಮೈತ್ರಿ ಮಾಡಿಕೊಂಡರೂ ವ್ಯವಹಾರ ವಿಚಾರಕ್ಕೆ ಬಂದರೆ ಒಂದು ದೇಶಕ್ಕೆ ತನ್ನ ವೈಯಕ್ತಿಕ ಹಿತ ಸಾಧನೆಯೇ ಮುಖ್ಯವಾಗಿರುತ್ತದೆ. 13ನೇ ಡಬ್ಲ್ಯುಟಿಒ ಸಚಿವ ಸಭೆಯಲ್ಲಿ (WTO Ministerial Meeting) ಇದು ಹೊರನೋಟಕ್ಕೆ ಕಂಡುಬರುತ್ತಿರುವ ಸಂಗತಿ. ಸಂಯುಕ್ತ ಅರಬ್ ಸಂಸ್ಥಾನದ (Abu Dhabi, UAE) ಭಾಗದಲ್ಲಿ ಕಳೆದ ಎರಡು ದಿನಗಳಿಂದ ನಡೆಯುತ್ತಿರುವ ವಿಶ್ವ ವ್ಯಾಪಾರ ಸಂಘಟನೆಯ (WTO- World Trade Organization) ಸಭೆಯ ಯಾವುದೇ ಅಜೆಂಡಾಗೆ ಒಮ್ಮತಕ್ಕೆ ಬರದೇ ನಿರ್ಥಕವಾಗಿ ಮುಕ್ತಾಯಗೊಳ್ಳುವ ಸಾಧ್ಯತೆ ಕಾಣುತ್ತಿದೆ. ಮುಂದುವರಿದ ದೇಶಗಳ ಕೆಲ ಸ್ವಾರ್ಥ ಧೋರಣೆ ವಿರುದ್ಧ ಭಾರತ, ದಕ್ಷಿಣ ಆಫ್ರಿಕಾದಂತಹ ಉದಯೋನ್ಮುಖ ಆರ್ಥಿಕತೆಯ ದೇಶಗಳು ಸೆಟೆದು ನಿಂತಿವೆ. ಅಮೆರಿಕ, ಚೀನಾ, ಯೂರೋಪ್ ಹೀಗೆ ಬಲಶಾಲಿ ದೇಶಗಳ ಚಿತಾವಣಿಗೆ ಭಾರತ ಸ್ವಲ್ಪವೂ ಜಗ್ಗುತ್ತಿಲ್ಲ.

120ಕ್ಕೂ ಹೆಚ್ಚು ದೇಶಗಳ ಗುಂಪುಗೂಡಿ ಬಂದ ಚೀನಾ

ಹದಿಮೂರನೇ ಡಬ್ಲ್ಯುಟಿಒ ಮಿನಿಸ್ಟರಿಯಲ್ ಸಭೆಯಲ್ಲಿ ಪ್ರಮುಖವಾಗಿ ಎದ್ದುಗಾಣಿದ್ದು ಚೀನಾದ ಪ್ರಯತ್ನ. ಹೂಡಿಕೆ ಸೌಲಭ್ಯ ಮತ್ತು ರಿಯಾಯಿತಿ (Investment Facilities and Concessions) ವಿಚಾರವನ್ನು ಡಬ್ಲ್ಯುಟಿಒ ಸಭೆಯ ಚರ್ಚೆಯಲ್ಲಿ ತರಲು ಚೀನಾ ಬಹಳ ಪ್ರಯತ್ನ ಮಾಡಿತು. ಚೀನಾ ಸೇರಿದಂತೆ 125 ದೇಶಗಳು ಹೂಡಿಕೆ ಸೌಲಭ್ಯ ಅಭಿವೃದ್ಧಿ ಕರಡು ಬಗ್ಗೆ ಒಂದು ನಿರ್ಣಯಕ್ಕೆ ಬಂದಿದ್ದವು. ಪರಸ್ಪರ ದೇಶಗಳಲ್ಲಿ ಹೂಡಿಕೆ ಮಾಡಲು ಈ ಒಪ್ಪಂದ ಅನುಕೂಲ ಮಾಡಿಕೊಡುತ್ತದೆ. ಚೀನಾ ಮಾತ್ರವಲ್ಲ, ದಕ್ಷಿಣ ಕೊರಿಯಾ, ಚಿಲಿ ಮುಂತಾದ ದೇಶಗಳು ಈ ಪ್ರಸ್ತಾಪಕ್ಕೆ ಬೆಂಬಲ ಕೊಟ್ಟಿವೆ. ಈ ಪ್ರಸ್ತಾವವನ್ನು ಡಬ್ಲ್ಯುಟಿಎ ಸಭೆಯಲ್ಲಿ ಚರ್ಚೆಗೆ ತರಲು ಈ ದೇಶಗಳು ಪ್ರಯತ್ನಿಸಿವೆ. ಇದಕ್ಕೆ ಭಾರತ, ದಕ್ಷಿಣ ಆಫ್ರಿಕಾ ಮೊದಲಾದ ದೇಶಗಳು ವಿರೋಧಿಸಿವೆ.

ಇದನ್ನೂ ಓದಿ: ಮೋದಿ 3.0 ಸರ್ಕಾರದ ಅವಧಿಯಲ್ಲಿ ಮುಂದುವರಿದ ದೇಶವನ್ನಾಗಿ ಮಾಡುವಂತಹ ಸುಧಾರಣೆಗಳನ್ನು ನಿರೀಕ್ಷಿಸಿ: ನಿರ್ಮಲಾ ಸೀತಾರಾಮನ್

ಚೀನಾದ ಈ ನಡೆಗೆ ಭಾರತದ ವಿರೋಧ ಯಾಕೆ?

ಡಬ್ಲ್ಯುಟಿಒ ಇರುವುದು ವ್ಯಾಪಾರ ವಿಚಾರಗಳ ಬಗ್ಗೆ ನಿರ್ಧಾರ ತೆಗೆದುಕೊಳ್ಳಲು. ಆದರೆ, ಚೀನಾ ಮೊದಲಾದ ದೇಶಗಳು ಹೂಡಿಕೆ ಅಂಶವನ್ನು ಡಬ್ಲ್ಯುಟಿಒ ವ್ಯಾಪ್ತಿಗೆ ತರಲು ಹೊರಟಿವೆ. ಭಾರತ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದೆ. ಹೂಡಿಕೆ ವಿಚಾರ ಇರಬೇಕೆನ್ನುವ ಪ್ರಸ್ತಾವಕ್ಕೆ ನಿರ್ದಿಷ್ಟ ದೇಶಗಳ ಗುಂಪು ಮಾತ್ರವೇ ಸಮ್ಮತಿ ನೀಡಿವೆ. ಮೇಲಾಗಿ ಅದೇನೂ ಒಪ್ಪಂದವಲ್ಲ. ವ್ಯಾಪಾರದ ಬಗ್ಗೆ ಚರ್ಚೆ ನಡೆಸುವ ಈ ವೇದಿಕೆಯಲ್ಲಿ ಹೂಡಿಕೆಯನ್ನು ಚರ್ಚೆಗೆ ತರುವುದು ತಪ್ಪು ಎಂಬುದು ಭಾರತದ ನಿಲುವು. ದಕ್ಷಿಣ ಆಫ್ರಿಕಾ ಮೊದಲಾದ ಕೆಲ ದೇಶಗಳೂ ಕೂಡ ಇದೇ ನಿಲುವು ತಳೆದಿವೆ.

ಡಬ್ಲ್ಯುಟಿಒಯ ಚರ್ಚೆಯ ವ್ಯಾಪ್ತಿಗೆ ಹೂಡಿಕೆ ಅಂಶ ತರುವ ಪ್ರಯತ್ನ ಇದೇ ಮೊದಲಲ್ಲ…

ಕುತೂಹಲವೆಂದರೆ, ವಿಶ್ವ ವ್ಯಾಪಾರ ಸಂಸ್ಥೆಯಲ್ಲಿ ಚರ್ಚೆ ಅಥವಾ ಸಂಧಾನದ ಭಾಗವಾಗಿ ಹೂಡಿಕೆಯನ್ನು ತರಲು ಪ್ರಯತ್ನ ನಡೆದಿರುವುದು ಇದೇ ಮೊದಲಲ್ಲ. 1996ರಿಂದಲೂ ಯತ್ನ ಆಗುತ್ತಲೇ ಇದೆ. ದೋಹಾ ಸುತ್ತಿನ ಅಜೆಂಡಾದ ಅಂಶಗಳು ಜಾರಿಗೆ ಬರುವವರೆಗೂ ಹೂಡಿಕೆ ಬಗ್ಗೆ ಯಾವುದೇ ಚರ್ಚೆ ಇರುವಂತಿಲ್ಲ ಎಂದು 2004ರಲ್ಲಿ ನಿರ್ಧಾರವಾಗಿತ್ತು. ಇದೇ ನಿಲುವಿಗೆ ಭಾರತ ಹಾಗೂ ಮೊದಲಾದ ಕೆಲ ದೇಶಗಳು ಬದ್ಧವಾಗಿವೆ.

ಇದನ್ನೂ ಓದಿ: ಸರ್ಕಾರದಿಂದ ಸಿಎನ್​ಎಪಿ ಅಸ್ತ್ರ; ಟ್ರೂಕಾಲರ್​ಗೆ ಇದು ಮಾರಕಾಸ್ತ್ರವಾ? ಟೆಲಿಕಾಂ ಕಂಪನಿಗಳಿಗೂ ತಲೆನೋವು

ಆದರೆ, 2004ರಲ್ಲಿ ಆದ ನಿರ್ಧಾರವನ್ನೂ ಮೀರಿ, ಹೂಡಿಕೆಯನ್ನು ಡಬ್ಲ್ಯುಟಿಒ ಅಜೆಂಡಾಗೆ ಸೇರಿಸಲು ಪ್ರಯತ್ನ ಮಾತ್ರ ನಿಲ್ಲಲಿಲ್ಲ. ನೈರೋಬಿಯಲ್ಲಿ 2015ರಲ್ಲಿ ನಡೆದ ಸಭೆಯಲ್ಲಿ ಡಬ್ಲ್ಯುಟಿಒದ ಧೋರಣೆ ಬದಲಾಯಿತು. ಎಲ್ಲಾ ಸದಸ್ಯ ದೇಶಗಳು ಒಪ್ಪಿಕೊಂಡರೆ ಸಭೆಯಲ್ಲಿ ಚರ್ಚೆಗೆ ಹೊಸ ಅಂಶಗಳನ್ನು ಒಳಗೊಳ್ಳಬಹುದು ಎಂಬ ನಿರ್ಧಾರಕ್ಕೆ ಬರಲಾಯಿತು. ಅದರ ಪ್ರಕಾರವಾಗಿಯೂ ಈಗ ಅಬುಧಾಬಿಯಲ್ಲಿ ನಡೆಯುತ್ತಿರುವ 13ನೇ ಸಭೆಯಲ್ಲಿ ಚೀನಾ ಮೊದಲಾದ ದೇಶಗಳ ಹೂಡಿಕೆ ಸೌಲಭ್ಯ ಮತ್ತು ರಿಯಾಯಿತಿ ಪ್ರಸ್ತಾವಕ್ಕೆ ಸರ್ವ ಸದಸ್ಯರಿಂದ ಒಮ್ಮತ ಇಲ್ಲ. 125 ದೇಶಗಳು ಮಾತ್ರವೇ ಒಪ್ಪಿವೆ.

ಅಮೆರಿಕದ ಜೊತೆ ಭಾರತದ ಭಿನ್ನಾಭಿಪ್ರಾಯವೇನು?

ಡಬ್ಲ್ಯುಟಿಒ ಸಭೆಯಲ್ಲಿ ಭಾರತ ಅಮೆರಿಕದ ಕೆಲ ನಿಲುವುಗಳನ್ನೂ ವಿರೋಧಿಸುತ್ತಿದೆ. ವಿದೇಶಗಳಲ್ಲಿರುವ ಭಾರತೀಯರು ತಮ್ಮ ತಾಯ್ನಾಡಿಗೆ ಹಣ ಕಳುಹಿಸುವಾಗ ಆ ಹಣಕ್ಕೆ ಆಯಾ ದೇಶಗಳು ತೆರಿಗೆ ವಿಧಿಸುತ್ತವೆ. ಇದು ತುಸು ಹೆಚ್ಚಿನ ಮಟ್ಟದಲ್ಲಿದೆ. ಈ ತೆರಿಗೆ ಮೊತ್ತವನ್ನು ಕಡಿಮೆ ಮಾಡಬೇಕು ಎಂಬುದು ಭಾರತದ ಪ್ರಸ್ತಾಪ. ಆದರೆ, ಭಾರತದ ಈ ಪ್ರಸ್ತಾಪಕ್ಕೆ ಅಮೆರಿಕ ಒಪ್ಪುತ್ತಿಲ್ಲ. ಡೊನಾಲ್ಟ್ ಟ್ರಂಪ್ ಸರ್ಕಾರ ಇದ್ದಾಗಲೂ ಇದಕ್ಕೆ ವಿರೋಧ ಮಾಡಲಾಗಿತ್ತು. ಐರೋಪ್ಯ ದೇಶಗಳು ಮೊದಲಿಗೆ ಇದಕ್ಕೆ ಸಹಮತ ಹೊಂದಿದ್ದವಾದರೂ ಈಗ ಅವುಗಳ ನಿಲುವು ಬದಲಾಗುತ್ತಿದೆ.

ಇದನ್ನೂ ಓದಿ: ಭಾರತದಲ್ಲಿ ಅತಿ ಶ್ರೀಮಂತರ ಸಂಖ್ಯೆ ಹೆಚ್ಚಾಗುತ್ತಿದೆ; ಜಾಗತಿಕ ಸರಾಸರಿ ಹೆಚ್ಚಳಕ್ಕಿಂತ ಭಾರತೀಯರು ಬಹಳ ಮುಂದು

ಅಮೆರಿಕದ ಬಗ್ಗೆ ಭಾರತದ ಅಸಮಾಧಾನ ಇದೊಂದಕ್ಕೇ ಅಲ್ಲ, ಡಬ್ಲ್ಯುಟಿಒ ವ್ಯಾಜ್ಯ ಪರಿಹಾರ ವ್ಯವಸ್ಥೆ ಅಥವಾ ಡಿಸ್ಪ್ಯೂಟ್ ರೆಸಲ್ಯೂಶನ್ ಸಿಸ್ಟಂನಲ್ಲಿ ಮೇಲ್ಮನವಿ ವ್ಯವಸ್ಥೆಯನ್ನು ಸುಧಾರಿಸಬೇಕೆಂದು ಭಾರತ ಕೇಳಿಕೊಳ್ಳುತ್ತಿದೆ. ಅಮೆರಿಕ ಇದಕ್ಕೆ ಆಸಕ್ತಿ ತೋರುತ್ತಿಲ್ಲ.

ಡಬ್ಲ್ಯುಟಿಒದ ಈ 13ನೇ ಸಭೆಯಲ್ಲಿ ಇವತ್ತು ಕೊನೆಯ ದಿನವಾಗಿದೆ. ಸಭೆಯ ನಿಲುವು ಅಂತಿಮವಾಗಿ ಏನಿರುತ್ತದೆ ಎಂಬುದು ಕುತೂಹಲ ಮೂಡಿಸಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್