AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜನವರಿ 30-31ರಂದು ಹೈದರಾಬಾದ್​ನಲ್ಲಿ ಅಪೋಲೋ ಹಾಸ್ಪಿಟಲ್ಸ್​ನಿಂದ ‘ಇಂಟರ್ನ್ಯಾಷನಲ್ ಹೆಲ್ತ್ ಡೈಲೋಗ್’

Apollo Hospitals organizing International Health Dialogue 2026: ಅಪೋಲೋ ಹಾಸ್ಪಿಟಲ್ಸ್ ವತಿಯಿಂದ 2026ರ ಜನವರಿ 30 ಮತ್ತು 31ರಂದು ಹೈದರಾಬಾದ್​ನಲ್ಲಿ ಐಎಚ್​ಡಿ ಸಮಾವೇಶ ನಡೆಯಲಿದೆ. ಈ ಇಂಟರ್ನ್ಯಾಷನಲ್ ಹೆಲ್ತ್ ಡೈಲೋಗ್ ಕಾರ್ಯಕ್ರಮದಲ್ಲಿ ದೇಶ ವಿದೇಶಗಳಿಂದ ಹಲವು ಹೆಲ್ತ್ ಲೀಡರ್​ಗಳು, ಪರಿಣಿತರು, ನೀತಿ ರೂಪಕರು ಪಾಲ್ಗೊಳ್ಳಲಿದ್ದಾರೆ.

ಜನವರಿ 30-31ರಂದು ಹೈದರಾಬಾದ್​ನಲ್ಲಿ ಅಪೋಲೋ ಹಾಸ್ಪಿಟಲ್ಸ್​ನಿಂದ ‘ಇಂಟರ್ನ್ಯಾಷನಲ್ ಹೆಲ್ತ್ ಡೈಲೋಗ್’
ಹಿಂದಿನ ವರ್ಷದ ಐಎಚ್​ಡಿ ಸಮಾವೇಶದ ಒಂದು ಚಿತ್ರ
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Jan 09, 2026 | 7:53 PM

Share

ಹೈದರಾಬಾದ್, ಜನವರಿ 9: ಇದೇ ತಿಂಗಳ ಕೊನೆಯ ಎರಡು ದಿನಗಳಂದು ಅಂತಾರಾಷ್ಟ್ರೀಯ ಆರೋಗ್ಯ ಸಂವಾದ ಕಾರ್ಯಕ್ರಮ ನಡೆಯಲಿದೆ. ಅಪೋಲೋ ಹಾಸ್ಪಿಟಲ್ಸ್ ಆಯೋಜಿಸುತ್ತಿರುವ ಇಂಟರ್ನ್ಯಾಷನಲ್ ಹೆಲ್ತ್ ಡೈಲೋಗ್​ನ 13ನೇ ಆವೃತ್ತಿ (IHD- International Health Dialogue) ಜನವರಿ 30-31ರಂದು ನಡೆಯಲಿದೆ. ಹೈದರಾಬಾದ್​ನಲ್ಲಿ ನಡೆಯುವ 2026ರ ಆವೃತ್ತಿಯ ಈ ಕಾರ್ಯಕ್ರಮದ ಥೀಮ್ ‘ಗ್ಲೋಬಲ್ ವಾಯ್ಸಸ್, ಒನ್ ವಿಶನ್’ (ಜಾಗತಿಕ ಧ್ವನಿಗಳು, ಒಂದೇ ದೃಷ್ಟಿ). ಜಾಗತಿಕ ಹೊರಹೊಮ್ಮುವ ಹೊಸ ಐಡಿಯಾಗಳು, ಇನ್ನೋವೇಶನ್​ಗಳು ಮತ್ತು ನಾಯಕತ್ವವನ್ನು ಒಂದು ಸಾಮಾನ್ಯ ಗುರಿಯತ್ತ ಕೊಂಡೊಯ್ಯುವ ಮೂಲಕ ಪ್ರಬಲವಾದ ಹೆಲ್ತ್​ಕೇರ್ ಸಿಸ್ಟಂಗಳನ್ನು ರೂಪಿಸುವ ಮಾರ್ಗಗಳನ್ನು ಅವಲೋಕಿಸುವುದು ಈ ಸಭೆಯ ಪ್ರಮುಖ ಅಜೆಂಡಾ ಆಗಿರುತ್ತದೆ.

ಆಸ್ಪತ್ರೆ ಕಾರ್ಯಾಚರಣೆಗಳು, ರೋಗಿ ಅನುಭವ ಮತ್ತು ಕ್ಲಿನಿಕಲ್ ಪರಿಣಾಮಗಳ ವಿಚಾರದಲ್ಲಿ ನಾಯಕತ್ವ ಪ್ರೇರಿತ ಸೇಫ್ಟಿ ಮಾಡಲ್​ಗಳು, ಮಾನವ ಕೇಂದ್ರಿತ ವಿನ್ಯಾಸ, ಡಿಜಿಟಲ್ ಪರಿವರ್ತನೆ ಮತ್ತು ಶ್ರೇಷ್ಠತೆ ಸಾಧಿಸುವುದು ಈ ಆಯಾಮಗಳ ಬಗ್ಗೆ ಐಎಚ್​ಡಿ 2026 ಕಾರ್ಯಕ್ರಮದಲ್ಲಿ ಗಮನ ಹರಿಸಲಾಗುತ್ತದೆ.

ಈ ಕಾರ್ಯಕ್ರಮ ಆಯೋಜಿಸುತ್ತಿರುವ ಅಪೋಲೋ ಹಾಸ್ಪಿಟಲ್ಸ್ ಗ್ರೂಪ್​ನ ಜಂಟಿ ಎಂಡಿಯಾಗಿರುವ ಡಾ. ಸಂಗೀತಾ ರೆಡ್ಡಿ ಅವರು ಈ ಕಾರ್ಯಕ್ರಮದ ಬಗ್ಗೆ ಮಾತನಾಡಿ, ಎಐ, ಡಾಟಾ ಮತ್ತು ಡಿಜಿಟಲ್ ಇಕೋಸಿಸ್ಟಂಗಳ ಶಕ್ತಿಯನ್ನು ಒಗ್ಗೂಡಿಸುತ್ತಿದೆ ಎಂದು ಹೇಳಿದ್ದಾರೆ.

‘ಹೆಲ್ತ್​ಕೇರ್ ತಜ್ಞರು, ಇನ್ನೋವೇಟರ್​ಗಳು, ನೀತಿ ರೂಪಕರು, ಪ್ರೇರಕರು (Evangelists) ಒಂದೆಡೆ ಸೇರಿ ಹೆಲ್ತ್​ಕೇರ್ ಕ್ಷೇತ್ರದ ಮುಂದಿನ ಹಾದಿಯನ್ನು ರೂಪಿಸುವ ಒಂದು ವೇದಿಕೆಯಾಗಿ ಇಂಟರ್ನ್ಯಾಷನಲ್ ಹೆಲ್ತ್ ಡೈಲೋಗ್ ಮಾರ್ಪಾಡಾಗಿದೆ. ಹೆಲ್ತ್​ಕೇರ್ ಅನ್ನು ಹೆಚ್ಚು ಸುಸ್ಥಿರವಾಗುವ ನಿಟ್ಟಿನಲ್ಲಿ ಜಾಗತಿಕ ಬದ್ಧತೆಯನ್ನು ಐಎಚ್​ಡಿ ಪ್ರತಿನಿಧಿಸುತ್ತದೆ. ಪ್ರತಿಯೊಂದು ಇನ್ನೋವೇಶನ್ ಕೂಡ ಮಾನವತೆಗೆ ಸೇವೆ ಸಲ್ಲಿಸುತ್ತದೆ. ಪ್ರತಿಯೊಂದು ಜೊತೆಗಾರಿಕೆಯೂ ಕೂಡ ವಿಶ್ವದ ಆರೋಗ್ಯಕ್ಕೆ ಕಾರಣವಾಗುತ್ತದೆ’ ಎಂದು ಡಾ. ಸಂಗೀತಾ ರೆಡ್ಡಿ ಹೇಳಿದ್ದಾರೆ.

ಇದನ್ನೂ ಓದಿ: ಎಐ ಇಂಪ್ಯಾಕ್ಟ್ ಸಮಿಟ್​ಗೆ ಪೂರ್ವಭಾವಿಯಾಗಿ 12 ಸ್ಟಾರ್ಟಪ್​ಗಳೊಂದಿಗೆ ಪ್ರಧಾನಿ ಮೋದಿ ಸಭೆ

ಹೈದರಾಬಾದ್​ನಲ್ಲಿ ನಡೆಯುವ ಐಎಚ್​ಡಿ 2026 ಸಮಾವೇಶದಲ್ಲಿ ಈ ಕೆಳಗಿನ ನಾಲ್ಕು ಕಾನ್ಫರೆನ್ಸ್​ಗಳು ಮತ್ತು ಲರ್ನಿಂಗ್ ಸ್ಟ್ರೀಮ್​ಗಳು ಇರಲಿವೆ:

  1. ಐಪಿಎಸ್​ಸಿ (ಇಂಟರ್ನ್ಯಾಷನಲ್ ಪೇಶೆಂಟ್ ಸೇಫ್ಟಿ ಕಾನ್ಫರೆನ್ಸ್): ಸ್ವಯಂಪ್ರೇರಿತವಾದ ಪ್ರಾಕ್ಟಿಸ್ ಮತ್ತು ಹೆಲ್ತ್​ಕೇರ್ ಸಿಸ್ಟಂಗಳು ರೋಗಿ ಸುರಕ್ಷತೆಯನ್ನು ಹೇಗೆ ಸುಧಾರಿಸುತ್ತವೆ ಎಂಬುದನ್ನು ಸಮಾವೇಶದಲ್ಲಿ ಚರ್ಚಿಸಲಾಗುತ್ತದೆ.
  2. ಎಚ್​ಒಪಿಇ (ಹೆಲ್ತ್​ಕೇರ್ ಆಪರೇಷನ್ಸ್ ಮತ್ತು ಪೇಷೆಂಟ್ ಎಕ್ಸ್​ಪೀರಿಯನ್ಸ್ ಕಾನ್ಫರೆನ್ಸ್): ರೋಗಿಗೆ ಚಿಕಿತ್ಸೆ ನೀಡುವ ಪ್ರತೀ ಮುಖ್ಯ ಘಟ್ಟಗಳಲ್ಲೂ ಕ್ಷಮತೆ, ನಾವೀನ್ಯತೆ ತರುವ ಬಗ್ಗೆ ವಿಧಾನಗಳ ಬಗ್ಗೆ ಚರ್ಚಿಸಲಾಗುತ್ತದೆ.
  3. ಟಿಎಚ್​ಐಟಿ (ಟ್ರಾನ್ಸ್​ಫಾರ್ಮಿಂಗ್ ಹೆಲ್ತ್​ಕೇರ್ ವಿತ್ ಐಟಿ): ಈ ಕಾನ್ಫರೆನ್ಸ್​ನಲ್ಲಿ ವಿಶ್ವಾದ್ಯಂತ ಹೆಲ್ತ್​​ಕೇರ್ ಮತ್ತು ಐಟಿ ಮುಖಂಡರನ್ನು ಒಟ್ಟಿಗೆ ಸೇರಲಿದ್ದಾರೆ. ಅವರ ಅತ್ಯಾಧುನಿಕ ವಿಧಾನಗಳ ಬಗ್ಗೆ ಮಾಹಿತಿ ಹಂಚಿಕೊಳ್ಳುತ್ತಾರೆ.
  4. ಕ್ಲಿನೋವೇಟ್: ಕ್ಯಾನ್ಸರ್ ರೋಗ, ಹೃದ್ರೋಗ, ಮಹಿಳಾ ಆರೋಗ್ಯ, ಲ್ಯಾಬ್ ಮೆಡಿಸಿನ್ ಮೇಲೆ ಕ್ಲಿನಿಕಲ್ ಸಿಎಂಇ ಸೀರೀಸ್ ಇರುತ್ತದೆ. ಇದರಲ್ಲಿ ಹೆಲ್ತ್​ಕೇರ್ ವೃತ್ತಿಪರರು ಮತ್ತು ಸಂಶೋಧಕರಿಗೆ ತಜ್ಞರಿಂದ ಕಲಿಕೆ ನೀಡಲಾಗುತ್ತದೆ.

ಜನವರಿ 30 ಮತ್ತು 31ರಂದು ನಡೆಯುವ ಈ ಸಮಾವೇಶದಲ್ಲಿ ಆರೋಗ್ಯ ಕ್ಷೇತ್ರದ ಹಲವು ಮುಖಂಡರು ಮತ್ತು ನೀತಿ ರೂಪಕರು ಪಾಲ್ಗೊಳ್ಳುತ್ತಾರೆ. ನೈಜರ್ ರಿಪಬ್ಲಿಕ್​ನ ಪಬ್ಲಿಕ್ ಹೆಲ್ತ್ ಸಚಿವ ಕರ್ನಲ್ ಮೇಜರ್ ಗರ್ಬಾ ಹಕಿಮಿ, ಪಪುವಾ ನ್ಯೂಗಿನಿಯಾದ ಆರೋಗ್ಯ ಸಚಿವ ಇಲಿಯಾಸ್ ಕಪವೋರೆ, ಕಾಂಗೋ ರಿಪಬ್ಲಿಕ್​ನ ಆರೋಗ್ಯ ಸಚಿವ ಇಬಾರ, ಬರ್ಮುಡಾದ ಆರೋಗ್ಯ ಸಚಿವ ಕಿಮ್ ವಿಲ್ಸನ್ ಅವರು ಭಾಗವಹಿಸುತ್ತಿದ್ದಾರೆ.

ಇದನ್ನೂ ಓದಿ: ಕರ್ನಾಟಕದ ಕಾಫಿಗೆ ಯೂರೋಪ್​ನಲ್ಲಿ ಬಲು ಬೇಡಿಕೆ; 2025ರಲ್ಲಿ 2 ಬಿಲಿಯನ್ ಡಾಲರ್ ಮುಟ್ಟಿದ ಭಾರತದ ಒಟ್ಟಾರೆ ಕಾಫಿ ರಫ್ತು

ಆರೋಗ್ಯ ಕ್ಷೇತ್ರದ ಹಲವು ಸಂಘ ಸಂಸ್ಥೆಗಳ ಮುಖ್ಯಸ್ಥರಾದ ಡಾ. ಜೋನಾತನ್ ಪೆರ್ಲಿನ್, ಡಾ. ಕಾರ್ಸ್ಟನ್ ಎಂಜೆಲ್, ಡಾ. ಡೀನ್ ಹೋ, ಡಾ ಅತುಲ್ ಮೋಹನ್ ಕೋಚ್ಚರ್, ಡಾ. ನೀಲಮ್ ಧಿಂಗ್ರ, ಡಾ. ಇಯಾಲ್ ಝಿಮ್ಲಿಕ್ಮನ್ ಮೊದಲಾದವರು ಪಾಲ್ಗೊಳ್ಳುತ್ತಿದ್ದಾರೆ.

ಈ ಕಾರ್ಯಕ್ರಮದ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯಲು ಅಧಿಕೃತ ವೆಬ್​ಸೈಟ್​ಗಳ ಲಿಂಕ್ ಇಲ್ಲಿದೆ:

internationalhealthdialogue.com/

www.patient-safety.co.in

www.hopeconference.co.in/

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 7:52 pm, Fri, 9 January 26