AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕರ್ನಾಟಕದ ಕಾಫಿಗೆ ಯೂರೋಪ್​ನಲ್ಲಿ ಬಲು ಬೇಡಿಕೆ; 2025ರಲ್ಲಿ 2 ಬಿಲಿಯನ್ ಡಾಲರ್ ಮುಟ್ಟಿದ ಭಾರತದ ಒಟ್ಟಾರೆ ಕಾಫಿ ರಫ್ತು

Indian Coffee exports register new milestone of 2 billion USD: 2025ರ ಕ್ಯಾಲಂಡರ್ ವರ್ಷದಲ್ಲಿ ಭಾರತದಿಂದ 2 ಬಿಲಿಯನ್ ಡಾಲರ್ ಮೌಲ್ಯದಷ್ಟು ಕಾಫಿ ರಫ್ತಾಗಿದೆ. ಜಗತ್ತಿನಲ್ಲಿ ಅತಿಹೆಚ್ಚು ಕಾಫಿ ಉತ್ಪಾದಿಸುವ ದೇಶಗಳಲ್ಲಿ ಭಾರತದ್ದು 7ನೇ ಸ್ಥಾನ. ಭಾರತದ ಶೇ. 70ರಷ್ಟು ಕಾಫಿಯನ್ನು ಕರ್ನಾಟಕದಲ್ಲೇ ಬೆಳೆಯಲಾಗುತ್ತದೆ. ಕರ್ನಾಟಕದ ರೋಬಸ್ಟಾ ಕಾಫಿಗೆ ಯೂರೋಪ್​ನಲ್ಲಿ ಬಹಳ ಬೇಡಿಕೆ ಇದೆ.

ಕರ್ನಾಟಕದ ಕಾಫಿಗೆ ಯೂರೋಪ್​ನಲ್ಲಿ ಬಲು ಬೇಡಿಕೆ; 2025ರಲ್ಲಿ 2 ಬಿಲಿಯನ್ ಡಾಲರ್ ಮುಟ್ಟಿದ ಭಾರತದ ಒಟ್ಟಾರೆ ಕಾಫಿ ರಫ್ತು
ಕಾಫಿ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jan 08, 2026 | 11:43 AM

Share

ಬೆಂಗಳೂರು, ಜನವರಿ 8: ಭಾರತದ ಕಾಫಿ ರಫ್ತು (coffee exports) ಕಳೆದ ವರ್ಷ (2025) ಹೊಸ ಮೈಲಿಗಲ್ಲು ಮುಟ್ಟಿದೆ. ವರದಿಗಳ ಪ್ರಕಾರ 2025ರಲ್ಲಿ ಭಾರತದ ಒಟ್ಟೂ ಕಾಫಿ ರಫ್ತು ಎರಡು ಬಿಲಿಯನ್ ಡಾಲರ್ ಆಗಿದೆ. ಭಾರತದ ಕಾಫಿಗೆ ಜಾಗತಿಕವಾಗಿ ಬಹಳ ಬೇಡಿಕೆ ಇದೆ. ಶೇ. 15ರಷ್ಟು ಸಿಎಜಿಆರ್​ನಲ್ಲಿ ರಫ್ತು ಬೆಳೆಯುತ್ತಿದೆ. 2024-25ರಲ್ಲಿ ಭಾರತದಲ್ಲಿ ಉತ್ಪಾದನೆಯಾದ ಕಾಫಿ 3.6 ಲಕ್ಷ ಟನ್​ಗಳಷ್ಟಿದೆ. 2025-26ರಲ್ಲಿ ಇದು 4 ಲಕ್ಷ ಟನ್ ದಾಟುವ ನಿರೀಕ್ಷೆ ಇದೆ. ಅತಿ ಹೆಚ್ಚು ಕಾಫಿ ಉತ್ಪಾದಿಸುವ ದೇಶಗಳಲ್ಲಿ ಭಾರತ ಏಳನೇ ಸ್ಥಾನದಲ್ಲಿದೆ.

ಕಾಫಿಯಲ್ಲಿ ಅರೇಬಿಕಾ ಮತ್ತು ರೋಬಸ್ಟಾ ಎರಡು ವೈವಿಧ್ಯತೆಗಳಿವೆ. ರೋಬಸ್ಟಾ ಕಡಿಮೆ ಮೌಲ್ಯದದ್ದಾದರೂ ಕಹಿ ಮತ್ತು ಘಾಟು ಹೆಚ್ಚು. ಯೂರೋಪ್​ನಲ್ಲಿ ಈ ಕಾಫಿಗೆ ಬಹಳ ಬೇಡಿಕೆ ಇದೆ. ಭಾರತದ ಹೆಚ್ಚಿನ ರೋಬಸ್ಟಾ ಕಾಫಿ ಕರ್ನಾಟಕದಲ್ಲೇ ತಯಾರಾಗುವುದು. ಇಟಲಿ, ಜರ್ಮನಿ ಮುಂತಾದ ದೇಶಗಳಿಗೆ ಬಹಳ ರಫ್ತಾಗುತ್ತದೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಗಾರ್ಮೆಂಟ್ಸ್ ಕಂಪನಿ ಶುರು ಮಾಡಿ ಕೆಲಸಗಾರರ ಆಟಕ್ಕೆ ಬೇಸ್ತು ಬಿದ್ದ ಆಸ್ಟ್ರೇಲಿಯನ್ ಉದ್ಯಮಿ

ಕಾಫಿಯಲ್ಲಿ ಕರ್ನಾಟಕವೇ ಕಿಂಗ್

ಇನ್ನು, ಅರೇಬಿಕಾ ತಳಿಯ ಕಾಫಿಯಲ್ಲಿ ಫ್ಲೇವರ್ ಕಡಿಮೆ. ಆದರೆ, ಇದಕ್ಕೆ ಹೆಚ್ಚಿನ ಮಾರುಕಟ್ಟೆ ಇದೆ. ಅದರಲ್ಲೂ ಪಶ್ಚಿಮ ಏಷ್ಯನ್ ಭಾಗಗಳಿಗೆ ಇದರ ರಫ್ತಾಗುತ್ತದೆ. ಕರ್ನಾಟಕದಲ್ಲಿ ಕೊಡಗು, ಚಿಕ್ಕಮಗಳೂರಿಲ್ಲಿರುವ ಕಾಫಿ ಎಸ್ಟೇಟ್​ಗಳಲ್ಲಿ ಅರೇಬಿಕಾ ಕಾಫಿ ಹೆಚ್ಚಾಗಿ ಬೆಳೆಯಲಾಗುತ್ತದೆ. ಕೇರಳದಲ್ಲಿ ಬಹುತೇಕ ಅರೇಬಿಕಾ ಕಾಫಿ ಬೆಳೆಯಲಾಗುತ್ತದೆ.

ಭಾರತದ ಒಟ್ಟಾರೆ ಕಾಫಿ ಉತ್ಪಾದನೆಯಲ್ಲಿ ಕರ್ನಾಟಕದ ಪಾಲು ಶೇ. 70ಕ್ಕೂ ಹೆಚ್ಚಿದೆ. ಕೇರಳದಲ್ಲಿ ಶೇ. 20ರಷ್ಟು ಕಾಫಿ ಬೆಳೆಯಲಾಗುತ್ತದೆ. ತಮಿಳುನಾಡಿನಲ್ಲಿ ಶೇ. 5ರಷ್ಟು ಕಾಫಿ ಉತ್ಪಾದನೆ ಇದೆ. ಭಾರತದ ಶೇ. 95ಕ್ಕೂ ಅಧಿಕ ಕಾಫಿಯನ್ನು ದಕ್ಷಿಣ ಭಾರತದಲ್ಲೇ ತಯಾರಿಸಲಾಗುತ್ತದೆ ಎಂಬುದು ವಿಶೇಷ. ಈಶಾನ್ಯ ರಾಜ್ಯಗಳು ಹಾಗೂ ಒಡಿಶಾದಲ್ಲಿ ಸೀಮಿತ ಪ್ರಮಾಣದಲ್ಲಿ ಕಾಫಿ ಬೆಳೆಯಲಾಗುತ್ತದೆ.

ಇದನ್ನೂ ಓದಿ: ಪಿಎಂ ಕಿಸಾನ್ ಸ್ಕೀಮ್- ರೈತರು ಇಕೆವೈಸಿ ಮಾಡಲು 3 ವಿಧಾನಗಳು

ಭಾರತದಲ್ಲಿ ಉತ್ಪಾದನೆಯಾಗುವ ಕಾಫಿಯಲ್ಲಿ ಶೇ. 70ರಷ್ಟನ್ನು ರಫ್ತು ಮಾಡಲಾಗುತ್ತದೆ. 2023-24ರಲ್ಲಿ 1.28 ಬಿಲಿಯನ್ ಡಾಲರ್​ನಷ್ಟು ಕಾಫಿ ರಫ್ತು ಮಾಡಲಾಗಿತ್ತು. 2024-25ರಲ್ಲಿ ಕಾಫಿ ರಫ್ತು ಮೌಲ್ಯ 1.81 ಬಿಲಿಯನ್ ಡಾಲರ್ ಇದೆ. 2025ರ ಕ್ಯಾಲಂಡರ್ ವರ್ಷದಲ್ಲಿ ಇದು 2 ಬಿಲಿಯನ್ ಡಾಲರ್ ಮುಟ್ಟಿದೆ. 2025-26ರ ವರ್ಷದಲ್ಲೂ ಕಾಫಿ ರಫ್ತು 2 ಬಿಲಿಯನ್ ಡಾಲರ್ ಮೈಲಿಗಲ್ಲು ಮುಟ್ಟುವ ನಿರೀಕ್ಷೆ ಇದೆ.

ಭಾರತ 50ಕ್ಕೂ ಅಧಿಕ ದೇಶಗಳಿಗೆ ಕಾಫಿ ರಫ್ತು ಮಾಡತ್ತದೆ. ಇಟಲಿ ದೇಶಕ್ಕೆ ಅತಿಹೆಚ್ಚು ರಫ್ತಾಗುತ್ತದೆ. ಕರ್ನಾಟಕದ ರೋಬಸ್ಟಾ ಕಾಫಿಗೆ ಯೂರೋಪ್ ಅತಿದೊಡ್ಡ ಮಾರುಕಟ್ಟೆಯಾಗಿದೆ. ಇಟಲಿ, ರಷ್ಯಾ, ಜರ್ಮನಿ, ಯುಎಇ, ಬೆಲ್ಜಿಯಂ, ಅಮೆರಿಕ, ಜಪಾನ್ ಮೊದಲಾದ ದೇಶಗಳು ಭಾರತದ ಕಾಫಿಯನ್ನು ಆಮದು ಮಾಡಿಕೊಳ್ಳುತ್ತವೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ