PM Kisan eKYC: ಪಿಎಂ ಕಿಸಾನ್ ಸ್ಕೀಮ್- ರೈತರು ಇಕೆವೈಸಿ ಮಾಡಲು 3 ವಿಧಾನಗಳು
PM Kisan scheme, 3 methods of updating e-KYC: ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಲ್ಲಿ 10 ಕೋಟಿಗೂ ಅಧಿಕ ರೈತರು ನೊಂದಾಯಿಸಿಕೊಂಡಿದ್ದಾರೆ. ಪ್ರತಿಯೊಬ್ಬರಿಗೂ ವರ್ಷಕ್ಕೆ 6,000 ರೂ ಸಿಗುತ್ತದೆ. ಆದರೆ, ಫಲಾನುಭವಿ ರೈತರು ಕೆವೈಸಿ ಅಪ್ಡೇಟ್ ಮಾಡದಿದ್ದರೆ ಹಣ ಸಿಗುವುದಿಲ್ಲ. ಇಕೆವೈಸಿ ಅಪ್ಡೇಟ್ ಮಾಡಲು ಮೂರು ದಾರಿ ಅಥವಾ ವಿಧಾನಗಳಿವೆ. ಅದರ ವಿವರ ಈ ಲೇಖನದಲ್ಲಿದೆ...

ಪಿಎಂ ಕಿಸಾನ್ ಸ್ಕೀಮ್ ಯೋಜನೆಯಲ್ಲಿ (PM Kisan Scheme) ರೈತರ ವ್ಯವಸಾಯಕ್ಕೆ ನೆರವಾಗಲು ಸರ್ಕಾರ ವರ್ಷಕ್ಕೆ ಮೂರು ಬಾರಿ ಸಹಾಯಧನ ನೀಡುತ್ತದೆ. ತಲಾ 2 ಸಾವಿರ ರೂಗಳಂತೆ ವರ್ಷಕ್ಕೆ ಮೂರು ಕಂತುಗಳಲ್ಲಿ 6,000 ರೂ ನೀಡಲಾಗುತ್ತದೆ. ದೇಶಾದ್ಯಂತ 10 ಕೋಟಿಗೂ ಅಧಿಕ ರೈತರು ಈ ಯೋಜನೆಗೆ ನೊಂದಾಯಿಸಿದ್ದಾರೆ. ಸ್ಕೀಮ್ಗೆ ನೊಂದಾಯಿಸಿದರೂ ಬಹಳಷ್ಟು ರೈತರಿಗೆ ಕಂತಿನ ಹಣ ಲಭಿಸಿಲ್ಲ. ಇದಕ್ಕೆ ಹೆಚ್ಚಿನ ಕಾರಣ ಇಕೆವೈಸಿ ಮಾಡದೇ ಇರುವುದು.
ಬ್ಯಾಂಕ್ ಅಕೌಂಟ್, ಮ್ಯೂಚುವಲ್ ಫಂಡ್, ಡೀಮ್ಯಾಟ್ ಅಕೌಂಟ್, ಗ್ಯಾಸ್ ಕನೆಕ್ಷನ್ ಇತ್ಯಾದಿ ಬಹಳಷ್ಟು ಕಾರ್ಯಗಳಿಗೆ ಆಗಾಗ್ಗೆ ಕೆವೈಸಿ ಅಪ್ಡೇಟ್ ಮಾಡಬೇಕೆಂದು ಹೇಳಲಾಗುತ್ತದೆ. ಪಿಎಂ ಕಿಸಾನ್ ಯೋಜನೆಯಲ್ಲೂ ಕೆವೈಸಿ ಪರಿಷ್ಕರಿಸಬೇಕು. ನೇರ ಕೆವೈಸಿ ಬದಲು ಇಕೆವೈಸಿ ಅಪ್ಡೇಟ್ ಮಾಡುವ ಅವಕಾಶ ಕೊಡಲಾಗಿದೆ. ಇಕೆವೈಸಿಯನ್ನು ಅಪ್ಡೇಟ್ ಮಾಡಲು ಮೂರು ವಿಧಾನಗಳಿವೆ. ಅದರ ವಿವರ ಇಲ್ಲಿದೆ…
ಇದನ್ನೂ ಓದಿ: ಚಿನ್ನದಂತೆ ಬೆಳ್ಳಿಗೂ ಸದ್ಯದಲ್ಲೇ ಬರಲಿದೆ ಹಾಲ್ಮಾರ್ಕ್ ಗುರುತು
ಕೆವೈಸಿ ಅಪ್ಡೇಟ್ ಮಾಡುವುದು ಯಾಕೆ?
ಫಲಾನುಭವಿಗಳು ಅಸ್ತಿತ್ವದಲ್ಲಿ ಇದ್ದಾರೆ ಎಂದು ಋಜುವಾತುಪಡಿಸಲು ಇಕೆವೈಸಿಯನ್ನು ಮತ್ತೆ ಪಡೆಯಲಾಗುತ್ತದೆ. ಇಕೆವೈಸಿ ಮಾಡಲು ಮೂರು ವಿಧಾನಗಳು ಕೆಳಕಂಡಂತಿವೆ:
- ಒಟಿಪಿ ಆಧಾರಿತ ಇಕೆವೈಸಿ
- ಬಯೋಮೆಟ್ರಿಕ್ ಆಧಾರಿತ ಇಕೆವೈಸಿ
- ಮುಖ ಚರ್ಯೆ ಬಳಸಿ ಇ-ಕೆವೈಸಿ
ಒಟಿಪಿ ಆಧಾರಿತವಾಗಿ ಇ-ಕೆವೈಸಿ ಮಾಡುವುದು ಹೇಗೆ?
ಪಿಎಂ ಕಿಸಾನ್ ಪೋರ್ಟಲ್ಗೆ ಹೋಗಿ ಅಲ್ಲಿ ಇಕೆವೈಸಿ ಲಿಂಕ್ ಕ್ಲಿಕ್ ಮಾಡಿ. ಆಧಾರ್ ಸಂಖ್ಯೆ ನಮೂದಿಸಿದಾಗ ಆಧಾರ್ಗೆ ಜೋಡಿತವಾದ ಮೊಬೈಲ್ ನಂಬರ್ಗೆ ಒಟಿಪಿ ಬರುತ್ತದೆ. ಅದನ್ನು ನಮೂದಿಸಿದ ಬಳಿಕ ಇಕೆವೈಸಿ ಅಪ್ಡೇಟ್ ಆಗುತ್ತದೆ.
ಬಯೋಮೆಟ್ರಿಕ್ ಆಧಾರಿತ ಇಕೆವೈಸಿ ಮಾಡುವುದು ಹೇಗೆ?
ರೈತರ ಊರಿಗೆ ಸಮೀಪದಲ್ಲೇ ಇರುವ ನಾಗರಿಕ ಸೇವಾ ಕೇಂದ್ರಗಳು ಅಥವಾ ರಾಜ್ಯ ಸೇವಾ ಕೇಂದ್ರಗಳಿಗೆ ಹೋಗಿ ಅಲ್ಲಿ ನಿಮ್ಮ ಆಧಾರ್ ನಂಬರ್ ಕೊಟ್ಟು ಇ-ಕೆವೈಸಿ ಅಪ್ಡೇಟ್ ಮಾಡಿಸಬಹುದು. ಇದಕ್ಕೆ 15 ರೂ ಶುಲ್ಕ ಇರುತ್ತದೆ.
ಇದನ್ನೂ ಓದಿ: ಈ ಎಸ್ಎಂಬಿಯಲ್ಲಿ ಆಕರ್ಷಕ ಬಡ್ಡಿ ಆಫರ್; ನಿತ್ಯವೂ ಚಕ್ರಬಡ್ಡಿ; ಏನಿದರ ಅನುಕೂಲ?
ಫೇಸ್ ರೆಕಗ್ನಿಶನ್ ಆಧಾರಿತವಾದ ಇ-ಕೆವೈಸಿ
ಪಿಎಂ ಕಿಸಾನ್ ಮೊಬೈಲ್ ಆ್ಯಪ್ ಮತ್ತು ಆಧಾರ್ ಫೇಸ್ ಆರ್ಡಿ ಆ್ಯಪ್ ಈ ಎರಡು ಅಪ್ಲಿಕೇಶನ್ಗಳನ್ನು ಡೌನ್ಲೋಡ್ ಮಾಡಿಕೊಳ್ಳಬೇಕು. ಪಿಎಂ ಕಿಸಾನ್ ಆ್ಯಪ್ಗೆ ಲಾಗಿನ್ ಆಗಿ ಅಲ್ಲಿ ಇಕೆವೈಸಿ ಕ್ಲಿಕ್ ಮಾಡಿ. ನಿಮ್ಮ ಮುಖಚರ್ಯೆಯನ್ನು ಅದು ಸ್ಕ್ಯಾನ್ ಮಾಡುತ್ತದೆ. ಅದು ಯಶಸ್ವಿಯಾದಲ್ಲಿ ಇಕೆವೈಸಿ ಪೂರ್ಣಗೊಳ್ಳುತ್ತದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




