ಕನ್ನಡಪರ ಮಾತನಾಡಿ ‘ಕೋಗಿಲು’ ಆಗು, ಇಲ್ಲದಿದ್ರೆ ಕಾಗೆ ಆಗ್ತೀಯಾ: ವೇಣುಗೋಪಾಲ್ಗೆ ಅಶೋಕ್ ಟಾಂಗ್
ಆರ್. ಅಶೋಕ್ ಅವರು ಕೆ.ಸಿ. ವೇಣುಗೋಪಾಲ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದು, ಕೇರಳದಲ್ಲಿ ಕನ್ನಡದ ಬಗ್ಗೆ ಮಾತನಾಡದೆ ಇಲ್ಲಿ ಕೋಗಿಲೆ ಕೂಗಿದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕೋಗಿಲು ಬಡಾವಣೆಯಲ್ಲಿನ ಅನ್ಯಾಯದ ಬಗ್ಗೆ ಪ್ರಶ್ನಿಸಿದ್ದಾರೆ. ಸಿದ್ದರಾಮಯ್ಯ ಅವರನ್ನು "ಲೀಸ್" ರಾಜಕಾರಣಿ ಎಂದು ಟೀಕಿಸಿ, ಕರ್ನಾಟಕದ ಹಣವನ್ನು ಬೇರೆ ರಾಜ್ಯಗಳ ಚುನಾವಣೆಗೆ ಬಳಸುವುದರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಬೆಂಗಳೂರು, ಜನವರಿ 10: ಕನ್ನಡಪರ ಮಾತನಾಡಿ ಕೋಗಿಲು ಆಗು, ಇಲ್ಲದಿದ್ದರೆ ಕಾಗೆ ಆಗ್ತೀಯಾ ಎಂದು ಕಾಂಗ್ರೆಸ್ ನಾಯಕ ಕೆ.ಸಿ.ವೇಣುಗೋಪಾಲ್ಗೆ ವಿಪಕ್ಷ ನಾಯಕ ಆರ್.ಅಶೋಕ್ ಟಾಂಗ್ ನೀಡಿದ್ದಾರೆ. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕೆ.ಸಿ.ವೇಣುಗೋಪಾಲ್ ಕೋಗಿಲು ಕೂಗಿದ ತಕ್ಷಣ ಇಲ್ಲಿ ಎಲ್ಲ ದಾಖಲೆಗಳು ಚೇಂಜ್ ಆದವು. ಆದರೆ, ಕೇರಳದಲ್ಲಿ ಕನ್ನಡ ಬಂದಾಗ ಆ ಕೋಗಿಲೆ ಕೂಗಲೇ ಇಲ್ಲ. ದೆಹಲಿಯಲ್ಲೇ ಸ್ಟ್ರಕ್ ಆಗೋಗಿದೆ, ಇವಾಗ ಕೂಗಪ್ಪ. ನೀನು ಕಾಗೆನೋ ಕೋಗಿಲೆನೋ ಅಂತಾ ಗೊತ್ತಾಗಬೇಕು. ಕನ್ನಡಿಗರಿಗೆ ದ್ರೋಹ ಎಸಗಿದರೆ ನೀನು ಕಾಗೇನೆ ಆಗ್ತೀಯಾ ಎಂದು ವಾಗ್ದಾಳಿ ಮಾಡಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ಓಡಲು ಇಲ್ಲಿ ಕ್ಲಿಕ್ ಮಾಡಿ.
Published on: Jan 10, 2026 09:01 PM
