ಅಯೋಧ್ಯೆಯ ರಾಮನ ದರ್ಶನಕ್ಕೆ 450 ಕಿ.ಮೀ ಸ್ಕೇಟಿಂಗ್ ಮಾಡಿದ 9 ವರ್ಷದ ಬಾಲಕಿ
9 ವರ್ಷದ ವಂಶಿಕಾ ಯಾದವ್ ಎಂಬ ಬಾಲಕಿ ಅಯೋಧ್ಯೆಯ ರಾಮಲಲ್ಲಾ ದರ್ಶನಕ್ಕಾಗಿ ಫಿರೋಜಾಬಾದ್‌ನಿಂದ ಅಯೋಧ್ಯೆಗೆ 450 ಕಿ.ಮೀ ದೂರ ಸ್ಕೇಟಿಂಗ್ ಮಾಡಿದ್ದಾಳೆ. ಆಕೆಯ ಈ ಸಾಧನೆ ಹಾಗೂ ಭಕ್ತಿಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಅಯೋಧ್ಯೆಯಲ್ಲಿರುವ ಬಾಲ ರಾಮನನ್ನು ಭೇಟಿ ಮಾಡಲು ಫಿರೋಜಾಬಾದ್‌ನಿಂದ ಅಯೋಧ್ಯೆಗೆ 450 ಕಿಲೋಮೀಟರ್ ಸ್ಕೇಟಿಂಗ್ ಮಾಡಿದ್ದಾಳೆ. ರಾಮನ ಮೇಲಿನ ಬಾಲಕಿಯ ಭಕ್ತಿಯ ಬಗ್ಗೆ ದೇಶಾದ್ಯಂತ ಚರ್ಚೆಯಾಗುತ್ತಿದೆ.
ಅಯೋಧ್ಯೆ, ಜನವರಿ 10: ಉತ್ತರ ಪ್ರದೇಶದಲ್ಲಿ ತೀವ್ರವಾದ ಚಳಿಯಿದೆ. ಈ ಚಳಿಯಲ್ಲೂ ಫಿರೋಜಾಬಾದ್‌ನಿಂದ 450 ಕಿ.ಮೀ ದೂರದವರೆಗೆ ಸ್ಕೇಟಿಂಗ್ ಮಾಡಿ 9 ವರ್ಷದ ಬಾಲಕಿ ವಂಶಿಕಾ ಯಾದವ್ ಎಂಬಾಕೆ ಅಯೋಧ್ಯೆಯ (Ayodhya) ರಾಮ ಲಲ್ಲಾನ ದರ್ಶನ ಪಡೆದಿದ್ದಾಳೆ. ಈ ಮೂಲಕ 9 ವರ್ಷದ ವಂಶಿಕಾ ಭಗವಾನ್ ರಾಮನ ಮೇಲಿನ ತನ್ನ ಭಕ್ತಿಯನ್ನು ವಿಭಿನ್ನ ರೀತಿಯಲ್ಲಿ ವ್ಯಕ್ತಪಡಿಸಿದ್ದಾಳೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ. ವಿಡಿಯೋ ನೋಡಿದ ಜನರು ಈ ಬಾಲಕಿಯ ಭಕ್ತಿಯನ್ನು ಮೆಚ್ಚುತ್ತಿದ್ದಾರೆ.
ವಂಶಿಕಾ ಜನವರಿ 3ರಂದು ಫಿರೋಜಾಬಾದ್‌ನಿಂದ ತಮ್ಮ ಪ್ರಯಾಣವನ್ನು ಪ್ರಾರಂಭಿಸಿದಳು. ಸುಮಾರು 450 ಕಿಲೋಮೀಟರ್ ದೂರಕ್ಕೆ 5 ದಿನಗಳ ಕಾಲ ಸ್ಕೇಟಿಂಗ್ ಮಾಡಿದ ನಂತರ ವಂಶಿಕಾ ಅಯೋಧ್ಯೆಯನ್ನು ತಲುಪಿದರು. ವಂಶಿಕಾ ಸ್ಕೇಟಿಂಗ್ ಮಾಡುತ್ತಿದ್ದಾಗ ಆಕೆಯ ಪ್ರಯಾಣಕ್ಕೆ ಅಡ್ಡಿಯಾಗದಂತೆ ನೋಡಿಕೊಳ್ಳಲು ಆಕೆಯ ತಂದೆ ಮತ್ತು ಚಿಕ್ಕಪ್ಪ ಕಾರಿನಲ್ಲಿ ಆಕೆಯನ್ನು ಹಿಂಬಾಲಿಸಿದರು. ಕೊನೆಗೂ ಆಕೆ ಯಶಸ್ವಿಯಾಗಿ ಗುರಿ ಮುಟ್ಟಿ ಬಾಲರಾಮನ ದರ್ಶನ ಪಡೆದಿದ್ದಾಳೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

