
Kangana Ranaut
ಕಂಗನಾ ರಣಾವತ್ ಅವರರು ನಟನೆಯಿಂದ ಹಾಗೂ ವಿವಾದಗಳಿಂದ ಸದಾ ಸುದ್ದಿ ಆಗುವ ನಟಿ. ಪರದೆಯ ಮೇಲೆ ಮತ್ತು ಪರದೆಯ ಹೊರಗೆ ಸದಾ ಚರ್ಚೆಯಲ್ಲಿ ಇರುತ್ತಾರೆ. ಅವರು ದಿಟ್ಟತನಕ್ಕೆ ಹೆಸರುವಾಸಿಯಾಗಿದ್ದಾರೆ. 1987ರ ಮಾರ್ಚ್ 23ರಂದು ಹಿಮಾಚಲ ಪ್ರದೇಶದಲ್ಲಿ ಕಂಗನಾ ಜನಿಸಿದರು. ಅವರು 2006ರಲ್ಲಿ ‘ಗ್ಯಾಂಗ್ಸ್ಟರ್’ ಸಿನಿಮಾ ಮೂಲಕ ಬಣ್ಣದ ಬದುಕು ಆರಂಭಿಸಿದರು. ಮೊದಲ ಸಿನಿಮಾದಲ್ಲೇ ಗೆಲುವು ಸಿಕ್ಕಿತು. ಈ ಚಿತ್ರಕ್ಕಾಗಿ ಅವರಿಗೆ ಫಿಲ್ಮ್ಫೇರ್ ಪ್ರಶಸ್ತಿ ಸಿಕ್ಕಿತು. ಕಂಗನಾ ಅವರು ‘ಕ್ವೀನ್’, ‘ತನು ವೆಡ್ಸ್ ಮನು’, ‘ಫ್ಯಾಶನ್’ ಅಂತಹ ಸೂಪರ್ ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಕಂಗನಾ ಸಾಮಾಜಿಕ ಮತ್ತು ರಾಜಕೀಯ ವಿಷಯಗಳ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಹೇಳಿಕೊಳ್ಳತ್ತಾರೆ. ಅವರು ನಿರ್ದೇಶಕಿ ಹಾಗೂ ನಿರ್ಮಾಪಕಿ ಕೂಡ ಹೌದು. ಸಾಕಷ್ಟು ವಿವಾದಗಳನ್ನು ಕೂಡ ಕಂಗನಾ ಮಾಡಿಕೊಂಡಿದ್ದಾರೆ.
ಡಿಕೆಶಿ ನಟ್ಟು ಬೋಲ್ಟು ಹೇಳಿಕೆ: ಕರ್ನಾಟಕಕ್ಕೆ ಬಂದು ತಿರುಗೇಟು ನೀಡಿದ ಕಂಗನಾ ರಣಾವತ್
ಚಿತ್ರರಂಗದ ಬಗ್ಗೆ ಡಿಕೆ ಶಿವಕುಮಾರ್ ಅವರು ಮಾತನಾಡಿದ್ದನ್ನು ನಟಿ ಕಂಗನಾ ರಣಾವತ್ ಕೂಡ ಖಂಡಿಸಿದ್ದಾರೆ. ಚಿತ್ರರಂಗದವರ ನಟ್ಟು ಬೋಲ್ಟು ಟೈಟ್ ಮಾಡುವುದು ತಮಗೆ ಗೊತ್ತು ಎಂದು ಡಿಕೆಶಿ ಹೇಳಿದ್ದರು. ಅದನ್ನು ಅನೇಕ ಸೆಲೆಬ್ರಿಟಿಗಳು ವಿರೋಧಿಸಿದ್ದಾರೆ. ಈಗ ಬಾಲಿವುಡ್ ನಟಿ ಕಂಗನಾ ಕೂಡ ಆ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ.
- Madan Kumar
- Updated on: Mar 4, 2025
- 11:01 pm
ಕಾಪು ಮಾರಿಗುಡಿ ದೇವಸ್ಥಾನಕ್ಕೆ ಕಂಗನಾ ಭೇಟಿ; ಬ್ರಹ್ಮಕಲಶೋತ್ಸವ ಕಾರ್ಯಕ್ರಮದಲ್ಲಿ ಭಾಗಿ
ಕಾಪು ಕ್ಷೇತ್ರದಲ್ಲಿ ಇರುವ ಹೊಸ ಮಾರಿಗುಡಿ ದೇವಸ್ಥಾನಕ್ಕೆ ಬಾಲಿವುಡ್ ನಟಿ, ಸಂಸದೆ ಕಂಗನಾ ರಣಾವತ್ ಅವರು ಭೇಟಿ ನೀಡಿದ್ದಾರೆ. ದೇವಸ್ಥಾನದ ಬ್ರಹ್ಮಕಲಶೋತ್ಸವ ಕಾರ್ಯಕ್ರಮದಲ್ಲಿ ಕಂಗನಾ ಭಾಗಿ ಆಗಿದ್ದಾರೆ. ಮಂಡಿ ಕ್ಷೇತ್ರದ ಸಂಸದೆ ಆಗಿರುವ ಕಂಗನಾ ರಣಾವತ್ ಅವರು ಮಾರಿಯಮ್ಮನ ದರ್ಶನದ ಪಡೆದ ನಂತರ ಸಾರ್ವಜನಿಕ ಸಭೆಯಲ್ಲಿ ಪಾಲ್ಗೊಂಡರು.
- Madan Kumar
- Updated on: Mar 3, 2025
- 11:03 pm
ಕಂಗನಾ ರಣಾವತ್, ಜಾವೇದ್ ಅಖ್ತರ್ ನಡುವಿನ ಸುದೀರ್ಘ ಕೋರ್ಟ್ ಕೇಸ್ ಅಂತ್ಯ
ಜಾವೇದ್ ಅಖ್ತರ್ ಮೇಲೆ ಇಲ್ಲಸಲ್ಲದ ಆರೋಪ ಹೊರಿಸಿದ್ದ ಕಂಗನಾ ರಣಾವತ್ ಅವರು ಈಗ ಕ್ಷಮೆ ಕೇಳಿದ್ದಾರೆ. ಹಾಗಾಗಿ ಇಬ್ಬರ ನಡುವಿನ ಕೋರ್ಟ್ ಕೇಸ್ ಅಂತ್ಯವಾಗಿದೆ. ತಮಗೆ ಜಾವೇದ್ ಅಖ್ತರ್ ಬೆದರಿಕೆ ಹಾಕಿದ್ದರು ಎಂದು 2020ರಲ್ಲಿ ಕಂಗನಾ ರಣಾವತ್ ಹೇಳಿದ್ದರು. ಆದರೆ ಆ ಆರೋಪವನ್ನು ಜಾವೇದ್ ಅಖ್ತರ್ ತಳ್ಳಿ ಹಾಕಿದ್ದರು.
- Madan Kumar
- Updated on: Feb 28, 2025
- 10:48 pm
ಒಟಿಟಿಗೆ ಬರುತ್ತಿದೆ ಅಟ್ಟರ್ ಫ್ಲಾಪ್ ಸಿನಿಮಾ ಎಮರ್ಜೆನ್ಸಿ; ಈಗಲಾದ್ರೂ ಪ್ರೇಕ್ಷಕರು ಮೆಚ್ಚಿಕೊಳ್ತಾರಾ?
ಜನವರಿ 17ರಂದು ‘ಎಮರ್ಜೆನ್ಸಿ’ ಸಿನಿಮಾ ಬಿಡುಗಡೆ ಆಗಿತ್ತು. ಉತ್ತಮ ಕಲೆಕ್ಷನ್ ಮಾಡಲು ಈ ಚಿತ್ರಕ್ಕೆ ಸಾಧ್ಯವಾಗಲಿಲ್ಲ. ಈಗ ಒಟಿಟಿಯಲ್ಲಿ ರಿಲೀಸ್ ಮಾಡಲು ಸಿದ್ಧತೆ ನಡೆದಿದೆ. ಒಟಿಟಿ ರಿಲೀಸ್ ದಿನಾಂಕದ ಬಗ್ಗೆ ನಟಿ, ನಿರ್ದೇಶಕಿ ಕಂಗನಾ ರಣಾವತ್ ಅವರು ಮಾಹಿತಿ ನೀಡಿದ್ದಾರೆ. ಆ ಬಗ್ಗೆ ಇಲ್ಲಿದೆ ಇನ್ನಷ್ಟು ವಿವರ..
- Madan Kumar
- Updated on: Feb 21, 2025
- 4:07 pm
ಕಲೆಕ್ಷನ್ ವಿಚಾರದಲ್ಲಿ ತೆವಳಿಕೊಂಡು ಸಾಗುತ್ತಿದೆ ‘ಎಮರ್ಜೆನ್ಸಿ’ ಸಿನಿಮಾ
ಕಂಗನಾ ರಣಾವತ್ ಅವರ ನಿರ್ದೇಶನ ಮತ್ತು ನಟನೆಯ ‘ಎಮರ್ಜೆನ್ಸಿ’ ಚಿತ್ರವು ಬಾಕ್ಸ್ ಆಫೀಸ್ನಲ್ಲಿ ಕಳಪೆ ಪ್ರದರ್ಶನ ನೀಡಿದೆ. 25 ಕೋಟಿ ರೂಪಾಯಿಗೂ ಅಧಿಕ ಬಜೆಟ್ನ ಈ ಚಿತ್ರವು 10 ಕೋಟಿಗೂ ಕಡಿಮೆ ಗಳಿಕೆ ಮಾಡಿದೆ. ಇಂದಿರಾ ಗಾಂಧಿ ಅವರ ತುರ್ತು ಪರಿಸ್ಥಿತಿಯನ್ನು ಆಧರಿಸಿದ ಈ ಚಿತ್ರದ ವಾಣಿಜ್ಯ ವಿಫಲತೆಯು ಕಂಗನಾ ಅವರಿಗೆ ದೊಡ್ಡ ಹಿನ್ನಡೆಯಾಗಿದೆ.
- Shreelaxmi H
- Updated on: Jan 22, 2025
- 8:06 am
ಕಂಗನಾ ನಟನೆಯ ‘ಎಮರ್ಜೆನ್ಸಿ’ ಸಿನಿಮಾಗೆ ಪಂಜಾಬ್ನಲ್ಲಿ ತೀವ್ರ ವಿರೋಧ
ಇಂದಿರಾ ಗಾಂಧಿ ಹೇರಿದ್ದ ತುರ್ತು ಪರಿಸ್ಥಿತಿ ಕುರಿತು ಮೂಡಿಬಂದಿರುವ ‘ಎಮರ್ಜೆನ್ಸಿ’ ಸಿನಿಮಾ ಇಂದು (ಜನವರಿ 17) ಬಿಡುಗಡೆ ಆಗಿದೆ. ಈ ಚಿತ್ರದ ಸುತ್ತ ಇರುವ ವಿವಾದಗಳು ಒಂದೆರಡಲ್ಲ. ಪಂಜಾಬ್ನಲ್ಲಿ ‘ಎಮರ್ಜೆನ್ಸಿ’ ಸಿನಿಮಾಗೆ ವಿರೋಧ ವ್ಯಕ್ತವಾಗಿದೆ. ಸಿನಿಮಾವನ್ನು ರಾಜ್ಯದಲ್ಲಿ ಬ್ಯಾನ್ ಮಾಡಬೇಕು ಎಂಬ ಒತ್ತಾಯ ಕೇಳಿಬಂದಿದೆ.
- Madan Kumar
- Updated on: Jan 17, 2025
- 3:42 pm
ಕಂಗನಾ ನಟನೆಯ ‘ಎಮರ್ಜೆನ್ಸಿ’ ಚಿತ್ರಕ್ಕೆ ಸೆನ್ಸಾರ್ ಮಂಡಳಿಯೇ ವಿಲನ್; ಹೇಗಿದೆ ಸಿನಿಮಾ?
ಕಂಗನಾ ರಣಾವತ್ ನಿರ್ದೇಶಿಸಿ ಮತ್ತು ನಟಿಸಿರುವ "ಎಮರ್ಜೆನ್ಸಿ" ಚಿತ್ರವು ಭಾರೀ ನಿರೀಕ್ಷೆಗಳ ನಡುವೆ ಬಿಡುಗಡೆಯಾಗಿದೆ. 1975ರ ತುರ್ತು ಪರಿಸ್ಥಿತಿಯನ್ನು ಆಧರಿಸಿದ ಈ ಚಿತ್ರಕ್ಕೆ ಸಿಕ್ಕಿರುವ ಟ್ವಿಟರ್ ವಿಮರ್ಶೆಗಳು ಮಿಶ್ರವಾಗಿವೆ. ಕೆಲವರು ಚಿತ್ರವನ್ನು ಮೆಚ್ಚಿಕೊಂಡರೆ, ಇನ್ನು ಕೆಲವರು ನಿರಾಸೆಗೊಂಡಿದ್ದಾರೆ. ಸೆನ್ಸಾರ್ ಮಂಡಳಿ ಮಾಡಿದ ಕಟ್ನಿಂದ ಚಿತ್ರಕ್ಕೆ ಸಮಸ್ಯೆ ಆಗಿದೆ.
- Rajesh Duggumane
- Updated on: Jan 17, 2025
- 12:21 pm
ಪ್ರಿಯಾಂಕಾ ಗಾಂಧಿಯನ್ನು ಹಾಡಿ ಹೊಗಳಿದ ಕಂಗನಾ ರನೌತ್
Kangana Ranaut: ಕಂಗನಾ ರಣಾವತ್ ಅವರು ಇತ್ತೀಚೆಗೆ ಸಂಸತ್ತಿನಲ್ಲಿ ಪ್ರಿಯಾಂಕಾ ಮತ್ತು ರಾಹುಲ್ ಗಾಂಧಿ ಅವರನ್ನು ಭೇಟಿಯಾಗಿದ್ದಾರೆ. ಪ್ರಿಯಾಂಕಾ ಅವರ ವಿನಮ್ರತೆಯನ್ನು ಕಂಗನಾ ಶ್ಲಾಘಿಸಿದರೆ, ರಾಹುಲ್ ಗಾಂಧಿ ಅವರ ಬಗ್ಗೆ ಟೀಕಿಸಿದ್ದಾರೆ. 'ಎಮರ್ಜೆನ್ಸಿ' ಚಿತ್ರವನ್ನು ವೀಕ್ಷಿಸುವಂತೆ ಅವರು ಇಬ್ಬರಿಗೂ ಒತ್ತಾಯಿಸಿದ್ದಾರೆ. ಈ ಭೇಟಿಯ ವಿವರಗಳನ್ನು ಕಂಗನಾ ಸಂದರ್ಶನದಲ್ಲಿ ಹಂಚಿಕೊಂಡಿದ್ದಾರೆ.
- Shreelaxmi H
- Updated on: Jan 11, 2025
- 9:36 pm
ಬಾಲಿವುಡ್ನಲ್ಲಿ ಅಚ್ಚರಿಯ ಬೆಳವಣಿಗೆ; ಕರಣ್ ಜೋಹರ್ಗೆ ಸಿನಿಮಾ ಆಫರ್ ಕೊಟ್ಟ ಕಂಗನಾ
ಕಂಗನಾ ರಣಾವತ್ ಅವರು ತಮ್ಮ ‘ಎಮರ್ಜೆನ್ಸಿ’ ಚಿತ್ರದ ಪ್ರಚಾರದ ವೇಳೆ ಕರಣ್ ಜೋಹರ್ ಅವರಿಗೆ ಸಿನಿಮಾದಲ್ಲಿ ಪಾತ್ರ ನೀಡುವುದಾಗಿ ಹೇಳಿದ್ದಾರೆ. ಇದು ಇಬ್ಬರ ನಡುವಿನ ಹಳೆಯ ವೈಷಮ್ಯವನ್ನು ಮತ್ತೆ ಜ್ಞಾಪಿಸಿದೆ. 2017ರಲ್ಲಿ ‘ಕಾಫಿ ವಿತ್ ಕರಣ್’ಶೋನಲ್ಲಿ ಕರಣ್ ವಿರುದ್ಧ ಕಂಗನಾ ಹರಿಹಾಯ್ದಿದ್ದರು. ಈಗ ‘ಎಮರ್ಜೆನ್ಸಿ’ ಜನವರಿ 17ರಂದು ಬಿಡುಗಡೆಯಾಗಲಿದೆ.
- Shreelaxmi H
- Updated on: Jan 11, 2025
- 8:52 am
‘ಎಮರ್ಜೆನ್ಸಿ’ ಸಿನಿಮಾ: ಪ್ರಿಯಾಂಕಾ ಗಾಂಧಿಗೂ ಇಷ್ಟ ಆಗಿದೆ ಕಂಗನಾ ಕೆಲಸ
ಈ ವರ್ಷ ಬಿಡುಗಡೆ ಆಗಲಿರುವ ಬಹುನಿರೀಕ್ಷಿತ ಸಿನಿಮಾಗಳಲ್ಲಿ ‘ಎಮರ್ಜೆನ್ಸಿ’ ಕೂಡ ಇದೆ. ರಾಜಕೀಯದ ಕಥಾಹಂದರ ಇರುವ ಕಾರಣದಿಂದ ಈ ಸಿನಿಮಾ ಮೇಲೆ ಹೈಪ್ ಸೃಷ್ಟಿ ಆಗಿದೆ. ಇಂದಿರಾ ಗಾಂಧಿ ಪಾತ್ರವನ್ನು ಮಾಡಿರುವ ಕಂಗನಾ ರಣಾವತ್ ಅವರೇ ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ಪ್ರಿಯಾಂಕಾ ಗಾಂಧಿ ‘ಎಮರ್ಜೆನ್ಸಿ’ ಸಿನಿಮಾ ನೋಡುವ ಸಾಧ್ಯತೆ ಇದೆ.
- Madan Kumar
- Updated on: Jan 8, 2025
- 9:03 pm