ಕಂಗನಾ ಮನೆಗೆ ಬಂತು 1 ಲಕ್ಷ ರೂಪಾಯಿ ಕರೆಂಟ್ ಬಿಲ್; ಶಾಕ್ ಆದ ನಟಿ
ಹಿಮಾಚಲ ಪ್ರದೇಶದ ಮನಾಲಿಯಲ್ಲಿ ಕಂಗನಾ ರಣಾವತ್ ಅವರ ಮನೆ ಇದೆ. ಅಲ್ಲಿ ಅವರು ಸದ್ಯಕ್ಕೆ ವಾಸಿಸುತ್ತಿಲ್ಲ. ಆದರೂ ಆ ಮನೆಗೆ ಬರೋಬ್ಬರಿ ಒಂದು ಲಕ್ಷ ರೂಪಾಯಿ ವಿದ್ಯುತ್ ಬಿಲ್ ಬಂದಿದೆ ಎಂಬ ವಿಷಯವನ್ನು ಕಂಗನಾ ಬಹಿರಂಗಪಡಿಸಿದ್ದಾರೆ. ಈ ಮೂಲಕ ಅವರು ರಾಜ್ಯ ಸರ್ಕಾರದ ಕೆಲಸವನ್ನು ಟೀಕಿಸಿದ್ದಾರೆ.

ಬಾಲಿವುಡ್ ನಟಿ ಕಂಗನಾ ರಣಾವತ್ (Kangana Ranaut) ಅವರು ಸಿನಿಮಾಗಿಂತಲೂ ಹೆಚ್ಚಾಗಿ ರಾಜಕೀಯದಲ್ಲಿ ಬ್ಯುಸಿ ಆಗಿದ್ದಾರೆ. ಹಿಮಾಚಲ ಪ್ರದೇಶದ ಮಂಡಿ ಕ್ಷೇತ್ರದ ಸಂಸದೆ ಆಗಿರುವ ಅವರು ಹಲವು ಕಡೆಗಳಿಗೆ ತೆರಳಿ ರಾಜಕೀಯದ ಭಾಷಣ ಮಾಡುತ್ತಿದ್ದಾರೆ. ಹಿಮಾಚಲ ಪ್ರದೇಶದಲ್ಲಿ ಇರುವ ಕಾಂಗ್ರೆಸ್ ಸರ್ಕಾರವನ್ನು ಅವರು ಟೀಕಿಸಿದ್ದಾರೆ. ಇತ್ತೀಚೆಗೆ ನಡೆದ ಒಂದು ಕಾರ್ಯಕ್ರಮದಲ್ಲಿ ಅವರು ತಮ್ಮ ಮನೆಯ (Kangana Ranaut Home) ವಿದ್ಯುತ್ ಬಿಲ್ ಬಗ್ಗೆ ಅಚ್ಚರಿಯ ವಿಷಯ ತಿಳಿಸಿದ್ದಾರೆ. ಹಿಮಾಚಲ ಪ್ರದೇಶದಲ್ಲಿ ಇರುವ ಅವರ ಮನೆಗೆ ಬರೋಬ್ಬರಿ 1 ಲಕ್ಷ ರೂಪಾಯಿ ಕರೆಂಟ್ ಬಿಲ್ (Electricity Bill) ಬಂದಿದೆ ಎಂದು ಕಂಗನಾ ರಣಾವತ್ ಹೇಳಿದ್ದಾರೆ.
‘ಈ ತಿಂಗಳು ಮನಾಲಿಯಲ್ಲಿ ಇರುವ ನನ್ನ ಮನೆಗೆ ಒಂದು ಲಕ್ಷ ರೂಪಾಯಿ ವಿದ್ಯುತ್ ಬಿಲ್ ಬಂದಿದೆ. ಆ ಮನೆಯಲ್ಲಿ ನಾನು ವಾಸ ಮಾಡುತ್ತಿಲ್ಲ. ಇದು ನಿಜಕ್ಕೂ ಶೋಚನೀಯ ಪರಿಸ್ಥಿತಿ. ಅದನ್ನು ಓದಿ ನನಗೆ ನಾಚಿಕೆ ಆಯಿತು. ಎಂಥ ಸ್ಥಿತಿ ಬಂತು ಎನಿಸಿತು. ಆದರೆ ನಮಗೆಲ್ಲರಿಗೂ ಒಂದು ಅವಕಾಶ ಇದೆ. ನೀವೆಲ್ಲರೂ ಬೇರುಮಟ್ಟದಲ್ಲಿ ಕೆಲಸ ಮಾಡುತ್ತಿದ್ದೀರಿ’ ಎಂದಿದ್ದಾರೆ ಕಂಗನಾ ರಣಾವತ್.
‘ಇಡೀ ದೇಶದಲ್ಲಿ ಮೋದಿ ಅಲೆ ಇದೆ. ಆದರೆ ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್ನವರು ಎಂಥ ದುರ್ಗತಿ ತಂದಿದ್ದಾರೆ. ನಾವೆಲ್ಲರೂ ಹಿಮಾಚಲ ಪ್ರದೇಶವನ್ನು ಉನ್ನತಿಯ ಕಡೆಗೆ ತೆಗೆದುಕೊಂಡು ಹೋಗಬೇಕು’ ಎಂದು ಕಂಗನಾ ಅವರು ಹೇಳಿದ್ದಾರೆ.
There is a wave of PM Modi in the entire country and saffron but it is painful to watch Himachal Pradesh’s condition. The electricity bill of Rs 1 lakh came for my house in Manali..I don’t even live there : Kangana Ranaut #HimachalPradesh #KanganaRanaut pic.twitter.com/Z1rVSbQoi1
— Rahul Chauhan (@RahulCh9290) April 8, 2025
ಸಿನಿಮಾ ಕ್ಷೇತ್ರದಲ್ಲಿ ಸದ್ಯಕ್ಕೆ ಕಂಗನಾ ರಣಾವತ್ ಅವರಿಗೆ ಹಿನ್ನಡೆ ಆಗಿದೆ. ಇತ್ತೀಚಿನ ವರ್ಷಗಳಲ್ಲಿ ಅವರು ನಟಿಸಿದ ಸಿನಿಮಾಗಳು ಗೆದ್ದಿಲ್ಲ. ‘ಎಮರ್ಜೆನ್ಸಿ’ ಸಿನಿಮಾವನ್ನು ಕಂಗನಾ ಅವರು ಕಷ್ಟಪಟ್ಟು ಮಾಡಿದ್ದರು. ಇಂದಿರಾ ಗಾಂಧಿ ಬಯೋಪಿಕ್ ಆಗಿ ಮೂಡಿಬಂದಿದ್ದ ಆ ಸಿನಿಮಾಗೆ ಸ್ವತಃ ಕಂಗನಾ ಅವರು ನಿರ್ದೇಶನ ಮಾಡಿದ್ದರು. ಆದರೆ ಬಾಕ್ಸ್ ಆಫೀಸ್ನಲ್ಲಿ ಆ ಸಿನಿಮಾ ಗೆಲ್ಲಲೇ ಇಲ್ಲ.
ಇದನ್ನೂ ಓದಿ: ಡಿಕೆಶಿ ನಟ್ಟು ಬೋಲ್ಟು ಹೇಳಿಕೆ: ಕರ್ನಾಟಕಕ್ಕೆ ಬಂದು ತಿರುಗೇಟು ನೀಡಿದ ಕಂಗನಾ ರಣಾವತ್
ಬಿಡುಗಡೆಗೂ ಮುನ್ನವೇ ‘ಎಮರ್ಜೆನ್ಸಿ’ ಸಿನಿಮಾಗೆ ಸೆನ್ಸಾರ್ ಸಮಸ್ಯೆ ಎಂಟಾಗಿತ್ತು. ರಿಲೀಸ್ ದಿನಾಂಕವನ್ನು ಮುಂದೂಡಲಾಗಿತ್ತು. ಅಂತಿಮವಾಗಿ ಜನವರಿ 17ರಂದು ತೆರೆಕಂಡ ಆ ಸಿನಿಮಾಗೆ ವಿಶ್ರ ಪ್ರತಿಕ್ರಿಯೆ ಸಿಕ್ಕಿತು. ನೆಟ್ಫ್ಲಿಕ್ಸ್ನಲ್ಲಿ ಈ ಸಿನಿಮಾ ಲಭ್ಯವಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.