ಕಂಗನಾ-ಹೃತಿಕ್ ಮಧ್ಯೆ ನಡೆದಿತ್ತು ಕೀಳು ಮಟ್ಟದ ಫೈಟ್; ಕಾರಣವಾಗಿದ್ದು ಆ ಒಂದು ಪದ
Kangana Ranaut: ನಟಿ ಕಂಗನಾ ರನೌತ್ ಹುಟ್ಟುಹಬ್ಬ ಇಂದು. ನಟಯ ವೃತ್ತಿ ಜೀವನ ಬಹಳ ಏಳು-ಬೀಳುಗಳನ್ನು ಕಂಡಿದೆ. ಖಾಸಗಿ ಬದುಕು ಸಹ ಸಾಕಷ್ಟು ಏರಿಳಿತಗಳನ್ನು ಕಂಡಿದೆ. ಕಂಗನಾ ಹಾಗೂ ಹೃತಿಕ್ ರೋಷನ್ ನಡುವೆ ದೊಡ್ಡ ಮಟ್ಟದ ವಿವಾದವೇ ಆಗಿತ್ತು. ಪ್ರಕರಣ ಈಗಲೂ ನ್ಯಾಯಾಲಯದಲ್ಲಿದೆ. ಅಷ್ಟಕ್ಕೂ ಇಬ್ಬರ ನಡುವೆ ಜಗಳಕ್ಕೆ ಕಾರಣವಾದ ಅಂಶವೇನು?

ಕಂಗನಾ ರಣಾವತ್ ಹಾಗೂ ಹೃತಿಕ್ ರೋಷನ್ ಅವರು ಬಾಲಿವುಡ್ನಲ್ಲಿ ಫೇಮಸ್ ಆಗಿದ್ದಾರೆ. ಇಬ್ಬರೂ ‘ಕೈಟ್’, ‘ಕ್ರಿಶ್ 3’ ಸಿನಿಮಾಗಳಲ್ಲಿ ಒಟ್ಟಾಗಿ ನಟಿಸಿದ್ದಾರೆ. ಇವರ ಮಧ್ಯೆ ಶೂಟ್ ವೇಳೆ ಪ್ರೀತಿ ಮೂಡಿತ್ತು ಎಂದು ಹೇಳಲಾಗಿತ್ತು. ಆ ಬಳಿಕ ಬ್ರೇಕಪ್ ಕೂಡ ಆಯಿತು. ಸಂದರ್ಶನ ಒಂದರಲ್ಲಿ ಕಂಗನಾ ಅವರು ಹೃತಿಕ್ಗೆ ಪರೋಕ್ಷವಾಗಿ ಟಾಂಗ್ ಕೊಟ್ಟರು. ಇದರಿಂದ ಪರಿಸ್ಥಿತಿ ಗಂಭೀರವಾಯಿತು. ಚರ್ಚೆಗಳು ಜೋರಾಗಿ ಕೀಳು ಮಟ್ಟದ ಫೈಟ್ ಕೂಡ ಆಯಿತು. ಕಂಗನಾಗೆ ಇಂದು (ಮಾರ್ಚ್ 23) ಜನ್ಮದಿನ. ಈ ವೇಳೆ ಆ ಬಗ್ಗೆ ಚರ್ಚೆಗಳು ನಡೆಯುತ್ತಿವೆ.
ಅದು 2016ರ ಸಮಯ. ಕಂಗನಾ ರಣಾವತ್ ಅವರು ‘ಆಶಿಕಿ 3’ ಸಿನಿಮಾದಲ್ಲಿ ಹೃತಿಕ್ಗೆ ಜೊತೆಯಾಗಿ ನಟಿಸಬೇಕಿತ್ತು. ಹೃತಿಕ್ ಇದ್ದಾರೆ ಎಂಬ ಕಾರಣದಿಂದಲೇ ಕಂಗನಾ ಅವರು ಈ ಪ್ರಾಜೆಕ್ಟ್ನಿಂದ ದೂರ ಹೋದರೇ ಎಂದು ಕೇಳಲಾಯಿತು. ಈ ಪ್ರಶ್ನೆಗೆ ಉತ್ತರಿಸಿದ್ದ ಕಂಗನಾ, ‘ಮಾಜಿಗಳು (Ex) ಎಲ್ಲರ ಗಮನ ಸೆಳೆಯಲು ಸಿಲ್ಲಿ ಕೆಲಸಗಳನ್ನು ಮಾಡುತ್ತಾ ಇರುತ್ತಾರೆ’ ಎಂದು ಹೇಳಿದ್ದರು. ಈ ಮೂಲಕ ಹೃತಿಕ್ನ ಎಕ್ಸ್ ಎಂದು ಕರೆದರು.
ಇದರಿಂದ ಸಿಟ್ಟಾದ ಹೃತಿಕ್ ರೋಷನ್ ಅವರು ಟ್ವಿಟರ್ ಮೂಲಕ ಕಂಗನಾ ವಿರುದ್ಧ ಪರೋಕ್ಷವಾಗಿ ಟಾಂಗ್ ಕೊಟ್ಟರು. ಆ ಬಳಿಕ ಕಂಗನಾ ರಣಾವತ್ಗೆ ನೋಟಿಸ್ ಕಳುಹಿಸಿ, ಬಹಿರಂಗವಾಗಿ ಕ್ಷಮೆ ಕೇಳುವಂತೆ ಕೋರಿದರು. ಅಲ್ಲದೆ, 2014ರಲ್ಲಿ ಕಂಗನಾ ಅವರು 1,439 ಮೇಲ್ಗಳನ್ನು ಕಳುಹಿಸಿದ್ದು, ಇವೆಲ್ಲವೂ ಬೇಸ್ಲೆಸ್ ಆಗಿವೆ ಎಂದು ಹೃತಿಕ್ ಆರೋಪ ಮಾಡಿದ್ದರು. ಆದರೆ, ಇದನ್ನು ಕಂಗನಾ ಅಲ್ಲಗಳೆದರು.
ಇದನ್ನೂ ಓದಿ:ಹೋಟೆಲ್ ಉದ್ಯಮಕ್ಕೆ ಕಾಲಿಟ್ಟಿದ ಕಂಗನಾ ರನೌತ್, ಸಿನಿಮಾದಲ್ಲಿ ಲಾಸ್ ಕಾರಣವೇ?
ಕಂಗನಾ ಅವರು ಹೇಳುವ ಪ್ರಕಾರ ಹೃತಿಕ್ ಜೊತೆ ಅವರು ಡೇಟಿಂಗ್ ಮಾಡಿದ್ದರು. ವಿವಾಹ ವಿಚಾರ ಬಂದಾಗ ಹೃತಿಕ್ ಹೆದರಿದ್ದೂ ಅಲ್ಲದೆ, ಇದು ಸಾಧ್ಯವಿಲ್ಲ ಎಂದು ನೇರವಾಗಿ ಹೇಳಿದ್ದರಂತೆ. ಈ ವಿಚಾರದಲ್ಲಿ ಕಂಗನಾ ತಾವು ಸಂತ್ರಸ್ತೆ ಎಂದು ಹೇಳಿಕೊಂಡಿದ್ದರು. ಕಂಗನಾಗೆ ಈಗಲೂ ಹೃತಿಕ್ ರೋಷನ್ ಅವರನ್ನು ಕಂಡರೆ ಆಗುವುದಿಲ್ಲ. ಅವರ ವಿಚಾರ ಮಾತನಾಡಲು ಹೋಗುವುದಿಲ್ಲ. ಆ ವಿಚಾರ ಬಂದಾಗ ಅವರು ಮೌನ ತಾಳುತ್ತಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ