Sign In

By signing in or creating an account, you agree with Associated Broadcasting Company's Terms & Conditions and Privacy Policy.

Sikandar Trailer: ಮಾಸ್ ಅವತಾರದಲ್ಲಿ ಸಲ್ಮಾನ್ ಖಾನ್; ಕ್ಯೂಟ್ ಆಗಿ ಕಾಣಿಸಿದ ರಶ್ಮಿಕಾ

ಸಲ್ಮಾನ್ ಖಾನ್ ಮತ್ತು ರಶ್ಮಿಕಾ ಮಂದಣ್ಣ ಅವರ ‘ಸಿಕಂದರ್’ ಸಿನಿಮಾದ ಟ್ರೈಲರ್ ಬಿಡುಗಡೆಯಾಗಿದೆ. ಸಲ್ಮಾನ್ ಮಾಸ್ ಅವತಾರದಲ್ಲಿ, ರಶ್ಮಿಕಾ ಕ್ಯೂಟ್ ಆಗಿ ಕಾಣಿಸಿಕೊಂಡಿದ್ದಾರೆ. ಆ್ಯಕ್ಷನ್, ಲವ್ ಸ್ಟೋರಿ ಮತ್ತು ಸಾಮಾಜಿಕ ಸಮಸ್ಯೆಗಳನ್ನು ಒಳಗೊಂಡ ಈ ಚಿತ್ರ ಮಾರ್ಚ್ 30 ರಂದು ತೆರೆ ಕಾಣಲಿದೆ.

Sikandar Trailer: ಮಾಸ್ ಅವತಾರದಲ್ಲಿ ಸಲ್ಮಾನ್ ಖಾನ್; ಕ್ಯೂಟ್ ಆಗಿ ಕಾಣಿಸಿದ ರಶ್ಮಿಕಾ
ಮಾಸ್ ಅವತಾರದಲ್ಲಿ ಸಲ್ಮಾನ್ ಖಾನ್; ಕ್ಯೂಟ್ ಆಗಿ ಕಾಣಿಸಿದ ರಶ್ಮಿಕಾ
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: Mar 24, 2025 | 8:21 AM

ಸಲ್ಮಾನ್ ಖಾನ್ ನಟನೆಯ ‘ಸಿಕಂದರ್’ ಸಿನಿಮಾ ಮಾರ್ಚ್ 30ಕ್ಕೆ ತೆರೆಮೇಲೆ ಬರಲಿದೆ. ಈ ಚಿತ್ರದ ಬಗ್ಗೆ ಫ್ಯಾನ್ಸ್ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಈ ಚಿತ್ರದಲ್ಲಿ ಸಲ್ಲುಗೆ ಜೊತೆಯಾಗಿ ರಶ್ಮಿಕಾ (Rashmika Mandanna) ನಟಿಸಿದ್ದಾರೆ. ಈ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ಅವರ ಪಾತ್ರ ಕ್ಯೂಟ್ ಆಗಿ ಇದೆ ಅನ್ನೋದು ಪಕ್ಕಾ ಆಗಿದೆ. ಈ ಚಿತ್ರದ ಟ್ರೇಲರ್​ನ ತಂಡದವರು ರಿಲೀಸ್ ಮಾಡಿದ್ದಾರೆ. ಟ್ರೇಲರ್ ನೋಡಿ ಫ್ಯಾನ್ಸ್ ಫುಲ್ ಫಿದಾ ಆಗಿದ್ದಾರೆ. ಟ್ರೇಲರ್ ಹೇಗಿದೆ? ಅದರಲ್ಲಿ ಏನೆಲ್ಲ ಇದೆ ಎಂಬ ಬಗ್ಗೆ ಮಾಹಿತಿ ಇಲ್ಲಿದೆ.

ಸಲ್ಮಾನ್ ಖಾನ್ ಸಿನಿಮಾಗಳಲ್ಲಿ ಮಾಸ್ ಅಂಶಗಳು ಇದ್ದೇ ಇರುತ್ತವೆ. ಅದೇ ರೀತಿ ‘ಸಿಕಂದರ್’ ಸಿನಿಮಾದಲ್ಲೂ ಭರ್ಜರಿ ಆ್ಯಕ್ಷನ್ ಇದೆ. ಜೊತೆ ರಶ್ಮಿಕಾ ಜೊತೆಗಿನ ಲವ್ ಸ್ಟೋರಿ ಕೂಡ ಗಮನ ಸೆಳೆದಿದೆ. ಸಮಾಜದಲ್ಲಿರೋ ಕೆಟ್ಟ ಶಕ್ತಿಗಳ ವಿರುದ್ಧ ಸಲ್ಮಾನ್ ಖಾನ್ ಅವರು ಹೋರಾಡುತ್ತಾರೆ. ಆ ರೀತಿಯಲ್ಲಿ ಟ್ರೇಲರ್ ಮೂಡಿ ಬಂದಿದೆ. ಮುಂಬೈ ಸ್ಲಂಗಳ ಸಮಸ್ಯೆಯನ್ನೂ ಸಿನಿಮಾದಲ್ಲಿ ಹೇಳಿದಂತೆ ಇದೆ. ಸಲ್ಮಾನ್ ಖಾನ್ ಲವರ್ ಬಾಯ್ ಆಗಿ, ಆ್ಯಕ್ಷನ್ ಅವತಾರದಲ್ಲಿ ಪ್ರೇಕ್ಷಕರಿಗೆ ಇಷ್ಟವಾಗಿದ್ದಾರೆ.

ಸ್ಟಾರ್ ಹೀರೋಗಳ ಸಿನಿಮಾಗಳಲ್ಲಿ ಹೀರೋಯಿನ್​ಗಳು ಹೀಗೆ ಬಂದು ಹಾಗೆ ಹೋಗುತ್ತಾರೆ. ಆದರೆ, ಈ ಚಿತ್ರದಲ್ಲಿ ಆ ರೀತಿ ಇಲ್ಲ ಎನ್ನಲಾಗುತ್ತಿದೆ. ಏಕೆಂದರೆ ರಶ್ಮಿಕಾ ಮಂದಣ್ಣ ಅವರು ಟ್ರೇಲರ್ ಉದ್ದಕ್ಕೂ ಕಾಣಿಸಿಕೊಂಡಿದ್ದಾರೆ. ಈ ಚಿತ್ರದಲ್ಲಿ ಅವರ ನಟನೆ ಗಮನ ಸೆಳೆದಿದೆ. ಅವರು ಕ್ಯೂಟ್ ಕ್ಯೂಟ್ ಆಗಿ ಕಾಣಿಸಿಕೊಂಡಿದ್ದಾರೆ. ಸಿಕಂದರ್​ಗೆ ಇಷ್ಟ ಆಗುವ ಹುಡುಗಿಯಾಗಿ ಅವರು ಮಿಂಚಿದ್ದಾರೆ. ‘ಸಿಕಂದರ್’ ಚಿತ್ರದಲ್ಲಿ ಸತ್ಯರಾಜ್ ಅವರು ಖಳನಾಯಕನ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಮೊದಲು ಕೂಡ ಅವರು ಹಲವು ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದರು. ಅವರ ಖ್ಯಾತಿ ದೇಶಾದ್ಯಂತ ಹಬ್ಬಿದೆ. ಅವರಿಗೆ ಖಳನಾಯಕನಾಗಿ ಸಿನಿಮಾದಲ್ಲಿ ಒಳ್ಳೆಯ ಸ್ಕ್ರೀನ್​ ಸ್ಪೇಸ್ ಸಿಕ್ಕಿದೆ. ಕನ್ನಡದ ಕಿಶೋರ್ ಕೂಡ ‘ಸಿಕಂದರ್’ ಚಿತ್ರದಲ್ಲಿ ಪೊಲೀಸ್ ಅಧಿಕಾರ ಪಾತ್ರದಲ್ಲಿ ಬಣ್ಣ ಹಚ್ಚಿದ್ದಾರೆ.

ಇದನ್ನೂ ಓದಿ
Image
ರಶ್ಮಿಕಾ ಅಪ್ಪನಿಗೆ ಇಲ್ಲದೆ ತೊಂದರೆ ನಿಮಗೇಕೆ; ಸಲ್ಮಾನ್ ಖಾನ್ ನೇರ ಪ್ರಶ್ನೆ
Image
‘ಕನ್ನಡ ಸಿನಿಮಾ ಎಂದಾಗ ಬೇಸರ ಆಗೋದು ಏನು ಗೊತ್ತಾ?’; ವಿವರಿಸಿದ ಯಶ್
Image
ಮೊದಲ ಸಿನಿಮಾ ಅವಕಾಶ ಕೊಟ್ಟ ನಿರ್ಮಾಪಕನಿಗೆ ಯಶ್ ಧನ್ಯವಾದ
Image
ಮನದ ಕಡಲು ಇವೆಂಟ್​ಗೆ ಬಂದ ಯಶ್, ಬಾಚಿ ತಬ್ಬಿದ ಮುರಳಿ ಮಾಸ್ಟರ್

ಇದನ್ನೂ ಓದಿ: ‘ರಶ್ಮಿಕಾ ಅಪ್ಪನಿಗೆ ಇಲ್ಲದೆ ತೊಂದರೆ ನಿಮಗೇಕೆ’; ಸಲ್ಮಾನ್ ಖಾನ್ ನೇರ ಪ್ರಶ್ನೆ

‘ಘಜಿನಿ’ ರೀತಿಯ ಸಿನಿಮಾಗಳನ್ನು ನೀಡಿದ ಎಆರ್ ಮುರುಗದಾಸ್ ಅವರು ‘ಸಿಕಂದರ್’ ಸಿನಿಮಾ ನಿರ್ದೇಶನ ಮಾಡಿದ್ದಾರೆ. ಸಲ್ಮಾನ್ ಖಾನ್, ರಶ್ಮಿಕಾ ಮಂದಣ್ಣ, ಸತ್ಯರಾಜ್, ಕಿಶೋರ್ ಮೊದಲಾದವರು ಪಾತ್ರವರ್ಗದಲ್ಲಿ ಇದ್ದಾರೆ. ಸಾಜಿದ್ ನಾಡಿಯಾದ್ವಾಲಾ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಮಾರ್ಚ್ 30 ಸಿನಿಮಾ ತೆರೆಗೆ ಬರುತ್ತಿದೆ. ಭಾನುವಾರ ಚಿತ್ರ ಬಿಡುಗಡೆ ಆಗುತ್ತಿದೆ ಅನ್ನೋದು ವಿಶೇಷ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಕನ್ನಡಿಗ ವೈಶಾಕ್​ನನ್ನು ಕಣಕ್ಕಿಳಿಸಿ ಪಂದ್ಯ ಗೆದ್ದ ಪಂಜಾಬ್
ಕನ್ನಡಿಗ ವೈಶಾಕ್​ನನ್ನು ಕಣಕ್ಕಿಳಿಸಿ ಪಂದ್ಯ ಗೆದ್ದ ಪಂಜಾಬ್
ದೆಹಲಿಯಲ್ಲಿ ಹೆಚ್​ಡಿಕೆ ಮತ್ತು ದೇವೇಗೌಡರನ್ನು ಭೇಟಿಯಾಗಿರುವ ಜಾರಕಿಹೊಳಿ
ದೆಹಲಿಯಲ್ಲಿ ಹೆಚ್​ಡಿಕೆ ಮತ್ತು ದೇವೇಗೌಡರನ್ನು ಭೇಟಿಯಾಗಿರುವ ಜಾರಕಿಹೊಳಿ
ಸದ್ಯಕ್ಕೆ ವಾಪಸ್ಸು ಹೋಗುತ್ತಿದ್ದೇನೆ ಎಂದಷ್ಟೇ ಹೇಳಿದ ಬಸನಗೌಡ ಯತ್ನಾಳ್
ಸದ್ಯಕ್ಕೆ ವಾಪಸ್ಸು ಹೋಗುತ್ತಿದ್ದೇನೆ ಎಂದಷ್ಟೇ ಹೇಳಿದ ಬಸನಗೌಡ ಯತ್ನಾಳ್
ಯುವ ಕ್ರಿಕೆಟಿಗನ ಕ್ವಾಟ್ಲೆ ನೋಡಿ ಶಾಕ್ ಆದ ಇಡೀ ಆರ್​ಸಿಬಿ ತಂಡ
ಯುವ ಕ್ರಿಕೆಟಿಗನ ಕ್ವಾಟ್ಲೆ ನೋಡಿ ಶಾಕ್ ಆದ ಇಡೀ ಆರ್​ಸಿಬಿ ತಂಡ
ನಮ್ಮ ಸಿಎಂ ಕಚೇರಿಯೂ ಇಷ್ಟು ಭವ್ಯವಾಗಿಲ್ಲವೆಂದು ಉದ್ಗರಿಸಿದ ಪರಮೇಶ್ವರ್!
ನಮ್ಮ ಸಿಎಂ ಕಚೇರಿಯೂ ಇಷ್ಟು ಭವ್ಯವಾಗಿಲ್ಲವೆಂದು ಉದ್ಗರಿಸಿದ ಪರಮೇಶ್ವರ್!
ಬಿಜೆಪಿ ಶಾಸಕರು ಪೀಠಕ್ಕೆ ಅಗೌರವ ತೋರಿಲ್ಲ,ಸದನ ದೇಗುಲವಿದ್ದಂತೆ: ಸುರೇಶ್ ಗೌಡ
ಬಿಜೆಪಿ ಶಾಸಕರು ಪೀಠಕ್ಕೆ ಅಗೌರವ ತೋರಿಲ್ಲ,ಸದನ ದೇಗುಲವಿದ್ದಂತೆ: ಸುರೇಶ್ ಗೌಡ
ಸಿಎಂ ಸಿದ್ದರಾಮಯ್ಯಕ್ಕಿಂತ ಮೊದಲು ಡಿಸಿಎಂ ಶಿವಕುಮಾರ್ ದೆಹಲಿ ಪಯಣ
ಸಿಎಂ ಸಿದ್ದರಾಮಯ್ಯಕ್ಕಿಂತ ಮೊದಲು ಡಿಸಿಎಂ ಶಿವಕುಮಾರ್ ದೆಹಲಿ ಪಯಣ
ಕರಾಟೆಯಲ್ಲಿ ಪುಟ್ಟ ಹುಡುಗನ ಅದ್ಭುತ ಸಾಧನೆ, ಏಷ್ಯಾ ಬುಕ್ ಆಫ್​ಗೆ ಸೇರ್ಪಡೆ
ಕರಾಟೆಯಲ್ಲಿ ಪುಟ್ಟ ಹುಡುಗನ ಅದ್ಭುತ ಸಾಧನೆ, ಏಷ್ಯಾ ಬುಕ್ ಆಫ್​ಗೆ ಸೇರ್ಪಡೆ
ಪಾರ್ಲಿಮೆಂಟ್ ಕಚೇರಿಯಲ್ಲಿ ಇವತ್ತು ಸಹ ಹೆಚ್​ಡಿಕೆಯನ್ನು ಭೇಟಿಯಾದ ಸತೀಶ್
ಪಾರ್ಲಿಮೆಂಟ್ ಕಚೇರಿಯಲ್ಲಿ ಇವತ್ತು ಸಹ ಹೆಚ್​ಡಿಕೆಯನ್ನು ಭೇಟಿಯಾದ ಸತೀಶ್
Video: ಬೆಂಗಳೂರಿನಲ್ಲಿ ಭಯಾನಕ ಸಿಲಿಂಡರ್ ಸ್ಫೋಟ, ವ್ಯಕ್ತಿ ಜಸ್ಟ್ ಮಿಸ್
Video: ಬೆಂಗಳೂರಿನಲ್ಲಿ ಭಯಾನಕ ಸಿಲಿಂಡರ್ ಸ್ಫೋಟ, ವ್ಯಕ್ತಿ ಜಸ್ಟ್ ಮಿಸ್