‘ವಯಸ್ಸಾಗುವುದು ಕೂಡ ಒಂದು ಸಂತೋಷ’; ಕಂಗನಾಗೆ ಇಲ್ಲ ಬಿಳಿ ಕೂದಲ ಬಗ್ಗೆ ಚಿಂತೆ
Kangana Ranaut: ಕಂಗನಾ ರಣಾವತ್ ತಮ್ಮ ವಯಸ್ಸು ಮತ್ತು ಬಿಳಿ ಕೂದಲಿನ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದ್ದರೆ. ವಯಸ್ಸಾಗುವುದು ಸಂತೋಷ ಎಂದು ಹೇಳಿದ್ದಾರೆ. ಬಾಲಿವುಡ್‌ನಲ್ಲಿ ವಯಸ್ಸಾದ ನಟಿಯರಿಗೆ ಅವಕಾಶ ಕಡಿಮೆ ಎಂಬುದು ಗೊತ್ತು. ಆದರೆ, ರಾಜಕೀಯದಲ್ಲಿ ವಯಸ್ಸು ಗೌರವಕ್ಕೆ ಪಾತ್ರ ಎಂದು ಅವರು ನಂಬುತ್ತಾರೆ.

ಬಾಲಿವುಡ್ ನಟಿ ಕಂಗನಾ ರಣಾವತ್ (Kangana Ranaut) ನಾಯಕಿಯಾಗಿ ಹಲವು ಚಿತ್ರಗಳಲ್ಲಿ ನಟಿಸುವ ಮೂಲಕ ಎಲ್ಲರನ್ನೂ ಮೆಚ್ಚಿಸಿದ್ದಾರೆ. ಅಲ್ಲದೆ, ಕಂಗನಾ ಅವರ ಹೆಸರು ಯಾವಾಗಲೂ ವಿವಾದಗಳಲ್ಲಿ ಕೇಳಿಬರುತ್ತದೆ. ಚುನಾವಣೆಯಲ್ಲಿ ಗೆದ್ದ ನಂತರ ಕಂಗನಾ ಸಂಸದರಾದರು. ಅವರು ಇತ್ತೀಚೆಗೆ ‘ಎಮರ್ಜೆನ್ಸಿ’ ಚಿತ್ರದ ಮೂಲಕ ಪ್ರೇಕ್ಷಕರ ಮುಂದೆ ಬಂದರು. ಈ ಸಿನಿಮಾ ಮಿಶ್ರ ಪ್ರತಿಕ್ರಿಯೆ ಪಡೆಯಿತು. ಈ ಚಿತ್ರಕ್ಕಿಂತ ಮೊದಲು 2023 ರಲ್ಲಿ ಬಿಡುಗಡೆಯಾದ ಕಂಗನಾ ರನೌತ್ ಅವರ ’ತೇಜಸ್’ ಚಿತ್ರ ಶೋಚನೀಯವಾಗಿ ಸೋತಿತು. ಈಗ ಕಂಗನಾ ವಯಸ್ಸಿನ ಬಗ್ಗೆ ಮಾತನಾಡಿದ್ದಾರೆ.
ಕಂಗನಾಗೆ ದೊಡ್ಡ ಯಶಸ್ಸು ಸಿಗದೆ ಸಾಕಷ್ಟು ಸಮಯ ಕಳೆದಿದೆ. ಏಕೆಂದರೆ 2022ರಲ್ಲಿ ಬಿಡುಗಡೆಯಾದ ‘ಧಕಡ್’ ಚಿತ್ರ ವಿಫಲವಾಯಿತು. ‘ತಲೈವಿ’, ‘ಪಂಗಾ’ ಮತ್ತು ‘ಜಡ್ಜ್‌ಮೆಂಟಲ್ ಹೈ ಕ್ಯಾ’ ಚಿತ್ರಗಳು ಕೂಡ ಸೋಲಿನ ಸಾಲಿಗೆ ಸೇರಿವೆ. ಆದಾಗ್ಯೂ, ಕಂಗನಾ ರನೌತ್ ರಾಜಕೀಯಕ್ಕೆ ಬಂದಾಗಿನಿಂದ, ಅವರು ನಟನೆಯನ್ನು ತೊರೆಯುತ್ತಾರೆ ಎಂಬ ಊಹಾಪೋಹಗಳು ಕೇಳಿಬರುತ್ತಿವೆ.
ಕಂಗನಾ ಬಿಜೆಪಿ ಟಿಕೆಟ್‌ನಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಅವರು ಹಿಮಾಚಲ ಪ್ರದೇಶದ ಮಂಡಿ ಲೋಕಸಭಾ ಸ್ಥಾನದಿಂದ ಗೆದ್ದರು. ಚಲನಚಿತ್ರಗಳ ಜೊತೆಗೆ, ಅವರು ರಾಜಕೀಯ ಕೆಲಸಕ್ಕೂ ಪೂರ್ಣ ಸಮಯವನ್ನು ಮೀಸಲಿಡುತ್ತಿದ್ದಾರೆ. ಇಂತಹ ಸಂದರ್ಭಗಳಲ್ಲಿ ಅವರು ನಟನೆಯನ್ನು ಬಿಡುತ್ತಾರೆಯೇ ಎಂಬ ಅನುಮಾನವನ್ನು ಅಭಿಮಾನಿಗಳು ವ್ಯಕ್ತಪಡಿಸುತ್ತಿದ್ದಾರೆ. ಏತನ್ಮಧ್ಯೆ, ಕಂಗನಾ ಅವರ ಇತ್ತೀಚಿನ ಕಾಮೆಂಟ್‌ಗಳು ವೈರಲ್ ಆಗಿವೆ. ಕಂಗನಾ ಇತ್ತೀಚೆಗೆ ತಮ್ಮ ವಯಸ್ಸಿನ ಬಗ್ಗೆ ಮಾತನಾಡಿದ್ದಾರೆ.
‘ನಾನು ವಯಸ್ಸಿನ ಬಗ್ಗೆ ಎಂದಿಗೂ ಯೋಚಿಸಲಿಲ್ಲ. ನನ್ನ ಆಧ್ಯಾತ್ಮಿಕತೆಯಿಂದ ತುಂಬಿದ ಮನಸ್ಸು ಎಂದಿಗೂ ವಯಸ್ಸಿಗೆ ಹೆದರುವುದಿಲ್ಲ. ಚಿತ್ರರಂಗದಲ್ಲಿ ಬಿಳಿ ಕೂದಲಿಗೆ ಹೆದರುವ ಜನರನ್ನು ನಾನು ನೋಡಿದ್ದೇನೆ. ಆದರೆ ರಾಜಕೀಯದಲ್ಲಿ ಹಾಗಲ್ಲ. ವಯಸ್ಸಾಗುವುದು ಕೂಡ ಒಂದು ಸಂತೋಷ. ರಾಜಕೀಯದಲ್ಲಿರುವ ಜನರು ವೃದ್ಧರ ಬಗ್ಗೆ ದಯೆ ತೋರಿಸುತ್ತಾರೆ ಎಂದು ನಾನು ಭಾವಿಸುತ್ತೇನ’ ಎಂದು ಕಂಗನಾ ಹೇಳಿದರು. ಈ ಕಾಮೆಂಟ್‌ಗಳು ವೈರಲ್ ಆಗಿವೆ.
ಇದನ್ನೂ ಓದಿ: ಯೂಟ್ಯೂಬರ್ ಬಂಧನ, ಬೆಂಬಲಕ್ಕೆ ಬಂದ ಪವನ್ ಕಲ್ಯಾಣ್, ಕಂಗನಾ
ಕಂಗನಾ ಸದ್ಯ ಯಾವುದೇ ಹೊಸ ಸಿನಿಮಾ ಘೋಷಣೆ ಮಾಡಿಲ್ಲ. ಅವರು ನಟನೆ, ನಿರ್ಮಾಣ ಹಾಗೂ ನಿರ್ದೇಶನ ಮೂರರಲ್ಲೂ ತೊಡಗಿಕೊಂಡಿದ್ದರು. ಅವರು ನಟನೆಯಿಂ ದೂರ ಆದರೆ ಚಿತ್ರರಂಗಕ್ಕೆ ದೊಡ್ಡ ನಷ್ಟವೇ ಸರಿ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 8:11 am, Mon, 2 June 25







