ಸುಳ್ಳು ಹೇಳಿ ಕನ್ನಡ ಸಿನಿಮಾ ಮಾಡಿದ್ದ ‘ಮಣಿರತ್ನಂ’; ಸಿಕ್ಕಿತ್ತು ದೊಡ್ಡ ಯಶಸ್ಸು
Mani Ratnam Birthday: ಮಣಿರತ್ನಂ ಅವರ ಜನ್ಮದಿನದಂದು, ಅವರ ಮೊದಲ ಕನ್ನಡ ಚಿತ್ರ ‘ಪಲ್ಲವಿ ಅನುಪಲ್ಲವಿ’ಯ ಕಥೆ ಮತ್ತು ಅದರ ಯಶಸ್ಸಿನ ಬಗ್ಗೆ ತಿಳಿದುಕೊಳ್ಳೋಣ. ಕನ್ನಡ ತಿಳಿಯದ ಮಣಿರತ್ನಂ, ನಿರ್ಮಾಪಕರನ್ನು ಮೋಸಗೊಳಿಸಿ ಚಿತ್ರ ನಿರ್ಮಿಸಿದ್ದರು. ಈ ಸುಳ್ಳು ಅವರಿಗೆ ದೊಡ್ಡ ಯಶಸ್ಸನ್ನು ತಂದುಕೊಟ್ಟಿತು.

‘ಮಣಿರತ್ನಂ’ (Maniratnam Movie) ಅವರಿಗೆ ಇಂದು (ಜೂನ್ 2) ಜನ್ಮದಿನ. ಅವರಿಗೆ ಎಲ್ಲರೂ ಶುಭಾಶಯ ಕೋರುತ್ತಿದ್ದಾರೆ. ಅವರ ಮೊದಲ ಸಿನಿಮಾ ಕನ್ನಡದಲ್ಲಿ ಅನ್ನೋದು ವಿಶೇಷ. ಈಗ ಅವರ ಸಿನಿಮಾ ‘ಥಗ್ ಲೈಫ್’ ರಿಲೀಸ್ ಆಗುತ್ತಿದೆ. ಜೂನ್ 5ರಂದು ಸಿನಿಮಾ ಬಿಡುಗಡೆ ಹೊಂದಲಿದೆ. ಆದರೆ, ಕರ್ನಾಟಕದಲ್ಲಿ ಬಿಡುಗಡೆಗೆ ಇನ್ನೂ ಅವಕಾಶ ದೊರೆತಿಲ್ಲ. ಮಣಿರತ್ನಂ ಅವರು ಮೊದಲ ಸಿನಿಮಾ ಮಾಡುವಾಗ ಕನ್ನಡ ಬರುತ್ತಾ ಇರಲಿಲ್ಲ. ಅಲ್ಲದೆ ಅವರು ಒಂದು ದೊಡ್ಡ ಸುಳ್ಳು ಹೇಳಿದ್ದರು.
ಮಣಿರತ್ನಂ ಅವರು ಮೊದಲು ಮಾಡಿದ ಸಿನಿಮಾ ‘ಪಲ್ಲವಿ ಅನುಪಲ್ಲವಿ’. ಈ ಚಿತ್ರ 1983ರಲ್ಲಿ ಬಿಡುಗಡೆ ಕಂಡು ಸೂಪರ್ ಹಿಟ್ ಆಯಿತು. ಮಣಿರತ್ನಂ ಅವರಿಗೆ ಇದು ಮೊದಲ ಅನುಭವ. ಇದರಲ್ಲಿ ಅನಿಲ್ ಕಪೂರ್ ಅವರು ನಟಿಸಿದ್ದರು. ಲಕ್ಷ್ಮೀ ಕೂಡ ಈ ಚಿತ್ರಕ್ಕೆ ನಾಯಕಿ. ಕಿರಣ್ ವೈರಾಲೆ ಕೂಡ ಚಿತ್ರದಲ್ಲಿ ಕಾಣಿಸಿಕೊಂಡರು. ಆದರೆ, ಈ ಸಿನಿಮಾ ಮಾಡುವಾಗ ನಿರ್ಮಾಪಕರೇ ಅವರಿಗೆ ಸಿಕ್ಕಿರಲಿಲ್ಲ.
‘ನಾನು ಕನ್ನಡದಲ್ಲಿ ಮೊದಲ ಸಿನಿಮಾ ಮಾಡಿದೆ. ನಾನು ಸ್ಕ್ರಿಪ್ಟ್ ಬರೆದೆ. ನನಗೆ ಆಗ ಕನ್ನಡವೂ ಬರುತ್ತಿರಲಿಲ್ಲ, ಸಿನಿಮಾ ಮೇಕಿಂಗ್ ಕೂಡ ಗೊತ್ತಿರಲಿಲ್ಲ. ನಾನು ಸ್ಕ್ರಿಪ್ಟ್ ಬರೆದೆ. ನಾನು ನಟನಿಗೆ ನಿರ್ಮಾಪಕ ಇದ್ದಾರೆ ಎಂದರೆ, ನಿರ್ಮಾಪಕರ ಬಳಿ ಹೀರೋ ಇದ್ದಾರೆ’ ಎಂದೆ. ಹೀಗೆ ಅವರಿಗೆ ಸಿನಿಮಾ ಸಿಕ್ಕಿತ್ತು. ವೇಣುಸ್ ಪಿಕ್ಚರ್ಸ್ ಈ ಸಿನಿಮಾನ ನಿರ್ಮಾಣ ಮಾಡಿತ್ತು. ಮೊದಲು ಕಥೆ ಬರೆದು, ದೊಡ್ಡ ನಿರ್ದೇಶಕರಿಗೆ ಕಥೆ ನೀಡಿ, ಅವರಿಂದ ನಿರ್ದೇಶನ ಕಲಿಯುವ ಆಲೋಚನೆ ಇತ್ತು. ಕೊನೆಗೆ ಅವರೇ ನಿರ್ದೇಶನ ಮಾಡಿದರು.
ಇದನ್ನೂ ಓದಿ: ‘ನಾನು ನಿಮ್ಮ ದೊಡ್ಡ ಅಭಿಮಾನಿ’; ಮಣಿರತ್ನಂನಿಂದ ಸಾಯಿ ಪಲ್ಲವಿಗೆ ವಿಶೇಷ ಮೆಚ್ಚುಗೆ
ಮಣಿರತ್ನಂ ಅವರು ಮೊದಲ ಚಿತ್ರದಲ್ಲೇ ಗೆಲುವು ಕಂಡರು. ಆ ಬಳಿಕ ಹಲವು ಸೂಪರ್ ಹಿಟ್ ಚಿತ್ರಗಳನ್ನು ಅವರು ನೀಡಿದ್ದಾರೆ. ಅವರ ಬಗ್ಗೆ ಅನೇಕರಿಗೆ ಗೌರವ ಇದೆ. ‘ಥಗ್ ಲೈಫ್’ ವಿಚಾರದಲ್ಲಿ ಅವರು ಮೌನ ಕಾಯ್ದುಕೊಂಡಿದ್ದಾರೆ. ಈ ಚಿತ್ರಕ್ಕೆ ಕಮಲ್ ಹಾಸನ್ ಅವರ ನಿರ್ದೇಶನ ಇದೆ. ಅವರೇ ಈ ವಿವಾದಕ್ಕೆ ಕಾರಣ ಆದವರು. ‘ಕನ್ನಡ ತಮಿಳಿನಿಂದ ಹುಟ್ಟಿದ್ದು’ ಎಂದು ವಿವಾದ ಮಾಡಿದರು. ಆ ಬಳಿಕ ಕ್ಷಮೆ ಕೇಳಲು ಅವರು ಸಿದ್ಧರಿಲ್ಲ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.







