AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Post: ನನ್ನ ಅತ್ತೆ ಸಾಯಬೇಕು ಸ್ವಾಮಿ, ಅತ್ತೆಯ ಸಾವಿಗೆ ದೇವರ ಬಳಿ ಸೊಸೆಯ ಡೀಲ್

ಪ್ರತಿಯೊಬ್ಬರು ದೇವಸ್ಥಾನಕ್ಕೆ ಹೋದಾಗ ಒಳ್ಳೆಯ ಉದ್ಯೋಗ ಸಿಗಲಿ, ಆಯುರಾರೋಗ್ಯ ಲಭಿಸಲಿ, ಮಕ್ಕಳು ಮೊಮ್ಮಕ್ಕಳು ಚೆನ್ನಾಗಿರಲಿ ಎಂದು ದೇವರ ಬಳಿ ಮನಃಪೂರ್ವಕವಾಗಿ ಬೇಡಿ ದೇವಾಲಯದ ಹುಂಡಿಗೆ ಒಂದಷ್ಟು ಹಣವನ್ನು ಕಾಣಿಕೆ ಹಾಕುತ್ತಾರೆ. ಆದರೆ ಇಲ್ಲೊಬ್ಬಳು ಸೊಸೆ  50 ರೂಪಾಯಿ ನೋಟಿನಲ್ಲಿ ನನ್ನ ಅತ್ತೆ ಸಾಯಬೇಕು ಸ್ವಾಮಿ ಎಂಬ ಬರಹವನ್ನು  ಬರೆದು, ಆ ನೋಟನ್ನು ದೇವರ ಹುಂಡಿಗೆ ಕಾಣಿಕೆ ಹಾಕಿದ್ದಾಳೆ. ಈ ಕುರಿತ ಸುದ್ದಿಯೊಂದು ಇದೀಗ ಸಖತ್ ವೈರಲ್ ಆಗುತ್ತಿದೆ.

Viral Post: ನನ್ನ ಅತ್ತೆ ಸಾಯಬೇಕು ಸ್ವಾಮಿ, ಅತ್ತೆಯ ಸಾವಿಗೆ ದೇವರ ಬಳಿ ಸೊಸೆಯ ಡೀಲ್
ವೈರಲ್​​ ವಿಡಿಯೋ
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​|

Updated on: Mar 07, 2024 | 4:36 PM

Share

ಅತ್ತೆ ಸೊಸೆಯ ಮಧ್ಯೆ ಮನಸ್ತಾಪಗಳು,  ಜಗಳಗಳು ಇದ್ದಿದ್ದೆ ಅಲ್ವಾ. ಮನೆ ಕೆಲಸಗಳ ವಿಚಾರವಾಗಿ ಅತ್ತೆ ಸೊಸೆಯ ಮಧ್ಯೆ ಸಣ್ಣಪುಟ್ಟ ಜಗಳಗಳು ಏರ್ಪಡುತ್ತವೆ. ಹೀಗೆ ಮನಸ್ತಾಪಗಳು ಏರ್ಪಟ್ಟಾಗ ಕೆಲವೊಂದು ಸೊಸೆಯಂದಿರು  ಅತ್ತೆಗೆ ಎದುರುತ್ತರ ಕೊಡುತ್ತಾರೆ. ಇನ್ನೂ ಕೆಲವು ಸೊಸೆಯರು ಹಿರಿಯರಿಗೆ ಎದುರು ಮಾತನಾಡುವುದು ಸರಿಯಲ್ಲ ಎಂದು ಅತ್ತೆಗೆ ಏನು ಹೇಳದೆ ಸುಮ್ಮನಿರುತ್ತಾರೆ. ಆದರೆ ಇಲ್ಲೊಂದು ಅತ್ತೆಯ ಕಾಟವನ್ನು ತಡೆಯಲಾರದ ಸೊಸೆಯೊಬ್ಬಳು ಅತ್ತೆಯ ಸಾವಿಗಾಗಿ ದೇವರ ಬಳಿಯೇ ಡೀಲ್ ಕೊಟ್ಟಿದ್ದಾಳೆ. ಈ ಕುರಿತ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ದೇವಾಲಯದ ಹುಂಡಿ ಎಣಿಕೆಯ ಸಂದರ್ಭದಲ್ಲಿ ನೋಟಿನ ಜೊತೆಗೆ ವಿಚಿತ್ರ ಬೇಡಿಕೆಗಳನ್ನು ಬರೆದಿಟ್ಟಿರುವ ಚೀಟಿಗಳು ಲಭಿಸಿರುವ ಸುದ್ದಿಗಳನ್ನು ಈ ಮೊದಲು ನೀವು ಕೇಳಿರುತ್ತೀರಿ ಅಲ್ವಾ. ಅದೇ ರೀತಿಯ ಘಟನೆಯೊಂದು ಇದೀಗ ನಡೆದಿದ್ದು, ಯಾರೋ 50 ರೂಪಾಯಿ ನೋಟಿನ ಮೇಲೆ ನನ್ನ ಅತ್ತೆ ಬೇಗ ಸಾಯಲಿ ಸ್ವಾಮಿ ಎಂದು ಬರೆದು ಆ ನೋಟನ್ನು ದೇವರ ಹುಂಡಿಗೆ ಹಾಕಿದ್ದಾರೆ. ಈ ನೋಟು ಹುಂಡಿ ಎಣಿಕೆಯ ಸಮಯದಲ್ಲಿ ಸಿಕ್ಕಿದ್ದು, ಈ ಕುರಿತ ಸುದ್ದಿ ಇದೀಗ ಸಖತ್ ವೈರಲ್ ಆಗಿದೆ.

ವೈರಲ್​​​ ಪೋಸ್ಟ್​​ ಇಲ್ಲಿದೆ ನೋಡಿ:

ಈ ಘಟನೆ ಗಾಣಗಾಪುರ ಕ್ಷೇತ್ರದ ದತ್ತಾತ್ರೇಯ ದೇವಾಲಯದಲ್ಲಿ ನಡೆದಿದೆ. ಹೌದು ಇತ್ತೀಚಿಗೆ ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಗಾಣಗಾಪುರ ಕ್ಷೇತ್ರದ ದತ್ತಾತ್ರೇಯ ದೇವಸ್ಥಾನದ ಹುಂಡಿ ಎಣಿಕೆ ಕಾರ್ಯ ನೆಡೆಯಿತು.  ಈ ಸಂದರ್ಭದಲ್ಲಿ ಯಾರೋ 50 ರೂಪಾಯಿ ನೋಟಿನ ಮೇಲೆ ನನ್ನ ಅತ್ತೆ ಸಾಯಬೇಕು ಸ್ವಾಮಿ ಎಂದು ಬರೆದು ದೇವರಿಗೆ ಕಾಣಿಕೆಯಾಕಿರುವಂತಹ ನೋಟು ಸಿಕ್ಕಿದೆ. ನೋಟಿನ ಮೇಲಿನ ಈ ಬರಹವನ್ನು ಕಂಡು ಎಲ್ಲರೂ ದಿಗ್ಭ್ರಾಂತರಾಗಿದ್ದಾರೆ.

ಇದನ್ನೂ ಓದಿ: ಭಿಕ್ಷಾಟನೆಯಿಂದಲೇ ತಿಂಗಳಿಗೆ ಲಕ್ಷಾಂತರ ರೂಪಾಯಿ ಗಳಿಸುವ ನಟ

ಈ ನೋಟಿನ ಚಿತ್ರ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದ್ದು, ನೋಟಿನ ಮೇಲೆ ನನ್ನ ಅತ್ತೆ ಬೇಗ ಸಾಯಬೇಕು ಸ್ವಾಮಿ  ಎಂದು ಬರೆದಿರುವ ಬರಹವನ್ನು ಕಾಣಬಹುದು. ಈ ವೈರಲ್ ಫೋಟೋವನ್ನು @p_s.madiwal ಎಂಬ ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, “ಕಲಬುರಗಿ ಜಿಲ್ಲೆಯ ಅಫಜಲಪುರದ ತಾಲೂಕಿನ ಗಾಣಗಾಪುರದ ದತ್ತಾತ್ರೇಯ ದೇವರ ಹುಂಡಿಯಲ್ಲಿ ಕಾಣಿಕೆ ಹಾಕಿರುವ 50 ರೂಪಾಯಿ ಮುಖ ಬೆಲೆಯ ನೋಟು ಪತ್ತೆಯಾಗಿದೆ. ಅದರಲ್ಲಿ ಬರೆದಿರುವ ಬರಹವನ್ನು ಗಮನಿಸಿ” ಎಂಬ ಶೀರ್ಷಿಕೆಯನ್ನು ಬರೆದುಕೊಳ್ಳಲಾಗಿದೆ. ಈ ನೋಟಿನ ಫೋಟೋವನ್ನು ಕಂಡು ಅಬ್ಬಬ್ಬಾ ಇದ್ಯಾವತಹರದ ಬೇಡಿಕೆ ದೇವರೆ ಎಂದು ನೋಡುಗರು ಆಶ್ಚರ್ಯಚಕಿತರಾಗಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಜೆಪಿಗೆ ಹೊಸ ಸಾರಥಿ ಬೆನ್ನಲ್ಲೇ ದಿಲ್ಲಿಗೆ ಹಾರಿದ ವಿಜಯೇಂದ್ರ
ಬಿಜೆಪಿಗೆ ಹೊಸ ಸಾರಥಿ ಬೆನ್ನಲ್ಲೇ ದಿಲ್ಲಿಗೆ ಹಾರಿದ ವಿಜಯೇಂದ್ರ
ಬನ್ನೇರುಘಟ್ಟ ಝೂಗೆ ದಕ್ಷಿಣ ಆಫ್ರಿಕಾದ ಕ್ಯಾಪುಚಿನ್ ಕೋತಿಗಳ ಎಂಟ್ರಿ
ಬನ್ನೇರುಘಟ್ಟ ಝೂಗೆ ದಕ್ಷಿಣ ಆಫ್ರಿಕಾದ ಕ್ಯಾಪುಚಿನ್ ಕೋತಿಗಳ ಎಂಟ್ರಿ
ಮನೆ ಭೋಗ್ಯ ಸಂಬಂಧ ಇಬ್ಬರ ಗಲಾಟೆ,  ಮೂರನೆಯವರಿಗೆ ಬಿತ್ತು ಗೂಸಾ!
ಮನೆ ಭೋಗ್ಯ ಸಂಬಂಧ ಇಬ್ಬರ ಗಲಾಟೆ,  ಮೂರನೆಯವರಿಗೆ ಬಿತ್ತು ಗೂಸಾ!
ಬರ್ತ್​ಡೇಗೆ ಕುಮಾರಸ್ವಾಮಿಗೆ ಅಭಿಮಾನಿ ಕೊಟ್ಟ ಚಿನ್ನದ ಚೈನ್ ಹೇಗಿದೆ ನೋಡಿ!
ಬರ್ತ್​ಡೇಗೆ ಕುಮಾರಸ್ವಾಮಿಗೆ ಅಭಿಮಾನಿ ಕೊಟ್ಟ ಚಿನ್ನದ ಚೈನ್ ಹೇಗಿದೆ ನೋಡಿ!
ಚಾಮರಾಜನಗರದಲ್ಲಿ ಬೃಹದಾಕಾರದ ಹುಲಿ ಪ್ರತ್ಯಕ್ಷ!
ಚಾಮರಾಜನಗರದಲ್ಲಿ ಬೃಹದಾಕಾರದ ಹುಲಿ ಪ್ರತ್ಯಕ್ಷ!
ಸದನದಲ್ಲಿ ಸಿಎಂ ಸಿದ್ದರಾಮಯ್ಯ ಕಾಲೆಳೆದ ಸುರೇಶ್ ಕುಮಾರ್: ಸ್ವಾರಸ್ಯಕರ ಚರ್ಚೆ
ಸದನದಲ್ಲಿ ಸಿಎಂ ಸಿದ್ದರಾಮಯ್ಯ ಕಾಲೆಳೆದ ಸುರೇಶ್ ಕುಮಾರ್: ಸ್ವಾರಸ್ಯಕರ ಚರ್ಚೆ
ಮಾಗಡಿ ಯುವಕ- ಉಡುಪಿ ಯುವತಿ, ಆನ್​​ಲೈನ್​​ನಲ್ಲೇ ನಿಶ್ಚಿತಾರ್ಥ
ಮಾಗಡಿ ಯುವಕ- ಉಡುಪಿ ಯುವತಿ, ಆನ್​​ಲೈನ್​​ನಲ್ಲೇ ನಿಶ್ಚಿತಾರ್ಥ
ಲೇಡಿ ಗೆಟಪ್ ವಿಷಯಕ್ಕೆ ಶಿವಣ್ಣನ ಕಾಲೆಳೆದ ಉಪೇಂದ್ರ; ಎಷ್ಟು ಕ್ಯೂಟ್ ನೋಡಿ
ಲೇಡಿ ಗೆಟಪ್ ವಿಷಯಕ್ಕೆ ಶಿವಣ್ಣನ ಕಾಲೆಳೆದ ಉಪೇಂದ್ರ; ಎಷ್ಟು ಕ್ಯೂಟ್ ನೋಡಿ
ಬಿಗ್​​ಬಾಸ್ ಫಿನಾಲೆಗೆ ಕನ್ನಡತಿಯರ ಎಂಟ್ರಿ: ಗೆದ್ದವರಿಗೆ ಸಿಗುವ ಹಣವೆಷ್ಟು?
ಬಿಗ್​​ಬಾಸ್ ಫಿನಾಲೆಗೆ ಕನ್ನಡತಿಯರ ಎಂಟ್ರಿ: ಗೆದ್ದವರಿಗೆ ಸಿಗುವ ಹಣವೆಷ್ಟು?
ಮುಂದೆ ನಮ್ರತೆ ಕಲಿತುಕೊಳ್ಳೋಣ ಬಿಡಿ: ಮೋಹನ್ ದಾಸ್ ಪೈಗೆ ಡಿಕೆಶಿ ಟಾಂಗ್
ಮುಂದೆ ನಮ್ರತೆ ಕಲಿತುಕೊಳ್ಳೋಣ ಬಿಡಿ: ಮೋಹನ್ ದಾಸ್ ಪೈಗೆ ಡಿಕೆಶಿ ಟಾಂಗ್