AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೃದಯ ಸ್ಪರ್ಶಿ ವಿಡಿಯೋ: ಅಯ್ಯ ಎಲ್ಲಿದ್ದೀಯಾ, ಬಾ ಅಯ್ಯ, ಆಸ್ಪತ್ರೆಗೆ ದಾಖಲಾದ ಯಜಮಾನನ್ನು ಕಾಣ ಬಂದ ಗಜರಾಜ

ಮನುಷ್ಯರಂತೆ ಆನೆಗಳು ಸಹ ಸಂಬಂಧಗಳಿಗೆ ತುಂಬಾ ಬೆಲೆ ಕೊಡುತ್ತವೆ. ತಮ್ಮ ಬಳಗದೊಂದಿಗೆ ಒಗ್ಗಟ್ಟಾಗಿರುವ ಆನೆಗಳು ಪರಸ್ಪರ ಸಹಾಯ ಮಾಡುತ್ತಾ ಸಹಬಾಳ್ವೆಯಿಂದ ಜೀವನ ನಡೆಸುತ್ತವೆ. ಹೀಗೆ ಆನೆಗಳಿಗೆ ಸಂಬಂಧಿಸಿದ ಹಲವಾರು ಭಾವನಾತ್ಮಕ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಆಗಾಗ್ಗೆ ವೈರಲ್ ಆಗುತ್ತಿರುತ್ತವೆ.  ಇದೀಗ ಅಂತಹದೊಂದು  ಹೃಯದಸ್ಪರ್ಷಿ ವಿಡಿಯೋ ಹರಿದಾಡುತ್ತಿದ್ದು,  ಆಸ್ಪತ್ರೆಯಲ್ಲಿ ದಾಖಲಾದ ಮಾಲೀಕನನ್ನು ಕಾಣಲು ಆನೆಯೊಂದು ಓಡೋಡಿ ಬಂದಿದೆ. ಸದ್ಯ ಈ ವಿಡಿಯೋ ವೈರಲ್ ಆಗಿದ್ದು, ನಿಜವಾಗಿಯೂ ಗುಣದಲಿ ಪ್ರಾಣಿಗಳೇ ಮೇಲು ಎನ್ನುತ್ತಿದ್ದಾರೆ ನೆಟ್ಟಿಗರು. 

ಹೃದಯ ಸ್ಪರ್ಶಿ ವಿಡಿಯೋ: ಅಯ್ಯ ಎಲ್ಲಿದ್ದೀಯಾ, ಬಾ ಅಯ್ಯ, ಆಸ್ಪತ್ರೆಗೆ ದಾಖಲಾದ ಯಜಮಾನನ್ನು ಕಾಣ ಬಂದ ಗಜರಾಜ
ವೈರಲ್​​​ ವಿಡಿಯೋ ಇಲ್ಲಿದೆ
TV9 Web
| Edited By: |

Updated on: Mar 08, 2024 | 4:31 PM

Share

ಪ್ರಾಣಿಗಳ ಪ್ರೀತಿಯೆ ಹಾಗೆ ನಿಷ್ಕಲ್ಮಷವಾದದ್ದು. ತಮ್ಮನ್ನು ಸಾಕಿದ ಮಾಲೀಕರಿಗೆ ಅವುಗಳು ನಿಸ್ವಾರ್ಥ ಪ್ರೀತಿಯನ್ನು ತೋರುತ್ತಾ, ಜೀವನಪರ್ಯಂತ ಅವರಿಗೆ  ವಿಧೇಯರಾಗಿರುತ್ತವೆ. ಕೇವಲ ಶ್ವಾನಗಳು ಮತ್ರವಲ್ಲ ಆನೆಗಳು ಸಹ ತಮ್ಮ ಮಾಲೀಕರಿಗೆ ವಿಧೇಯರಾಗಿರುತ್ತವೆ. ಹೌದು ಮನುಷ್ಯರಿಗಿಂತ ಹೆಚ್ಚಾಗಿಯೇ  ಸಂಬಂಧಗಳಿಗೆ  ಬೆಲೆ ಕೊಡುವ  ಆನೆಗಳು ಬಲು ಬುದ್ಧಿವಂತ ಪ್ರಾಣಿಗಳು. ತಮ್ಮ ಬಳಗದೊಂದಿಗೆ  ಒಗ್ಗಟ್ಟಾಗಿರರುವ ಆನೆಗಳು ಪರಸ್ಪರ ಸಹಾಯ ಮಾಡುತ್ತಾ ಸಹಬಾಳ್ವೆಯಿಂದ ಜೀವನ ನಡೆಸುತ್ತವೆ. ಅಷ್ಟೇ ಅಲ್ಲದೆ  ಈ ಮುಗ್ಧ ಪ್ರಾಣಿಗಳ ನಿಷ್ಕಲ್ಮಶ ಪ್ರೀತಿ, ಕಾಳಜಿ ನಿಜಕ್ಕೂ ನಮ್ಮ ಹೃದಯ ತುಂಬುವಂತೆ ಮಾಡುತ್ತವೆ. ಇದೀಗ ಅಂತಹದೊಂದು  ಹೃದಯಸ್ಪರ್ಷಿ ವಿಡಿಯೋ  ವೈರಲ್ ಆಗಿದ್ದು, ವಯೋ ಸಹಜ ಕಾಯಿಲೆಯಿಂದ ಆಸ್ಪತ್ರೆಗೆ ದಾಖಲಾಗಿದ್ದ ಮಾಲೀಕನನ್ನು ಕಾಣಲು ಆನೆಯೊಂದು ಓಡೋಡಿ ಬಂದಿದೆ.

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ಆಸ್ಪತ್ರೆಯಲ್ಲಿ ದಾಖಲಾಗಿರುವಂತಹ ವಯಸ್ಸಾದ ಮಾಲೀಕನನ್ನು ಕಾಣಲು ಗಜರಾಜ ಬಂದಿರುವಂತಹ ದೃಶ್ಯವನ್ನು ಕಾಣಬಹುದು.  ಈ ವಿಡಿಯೋವನ್ನು @navvandirababu ಎಂಬ ಹೆಸರಿನ ಇನ್ಸ್ಟಾಗ್ರಾಮ್ ಪೇಜ್ ಒಂದರಲ್ಲಿ ಹಂಚಿಕೊಳ್ಳಲಾಗಿದೆ.

ವೈರಲ್​​ ವಿಡಿಯೋ ಇಲ್ಲಿದೆ ನೋಡಿ:

ವೈರಲ್  ಆಗಿರುವ ವಿಡಿಯೋದಲ್ಲಿ ವಯೋ ಸಹಜ ಖಾಯಿಲೆಯಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬರು ಮಾಲೀಕ ಆಸ್ಪತ್ರೆಗೆ ದಾಖಲಾಗಿದ್ದರು. ಅವರನ್ನು ಕಾಣಲು ಅವರು ಸಾಕಿದಂತಹ ಆನೆಯೊಂದು ಆಸ್ಪತ್ರೆಗೆ ಭೇಟಿ ನೀಡಿದಂತಹ ಭಾವನಾತ್ಮಕ ದೃಶ್ಯವನ್ನು ಕಾಣಬಹುದು. ನನ್ನ ಮಾಲೀಕ ಈಗ ಹೇಗಿದ್ದಾರೋ,  ಅವರನ್ನು ನಾನು ನೋಡಲೇಬೇಕು ಎಂದು ಆಸ್ಪತ್ರೆಗೆ ಬಂದಂತಹ ಗಜರಾಜ ಮಾಲೀಕನ ಕೈಯನ್ನು ತನ್ನ ಸೊಂಡಿಲಿನಿಂದ ಹಿಡಿದು ಸಾಂತ್ವನಿಸಿದೆ. ಜೊತೆಗೆ ಮಾಲೀಕನನ್ನು ಈ ಸ್ಥಿತಿಯಲ್ಲಿ ಕಂಡು ಆನೆಯು ಭಾವುಕವಾಗಿದೆ.

ಇದನ್ನೂ ಓದಿ: ಇಲ್ಲಿ ಪುರುಷರು ಕಡ್ಡಾಯವಾಗಿ ಎರಡು ಮದುವೆಯಾಗಲೇಬೇಕು! ʼನೋʼ ಅಂದ್ರೆ ಕಠಿಣ ಶಿಕ್ಷೆ

ಕೆಲ ದಿನಗಳ ಹಿಂದೆ ಹಂಚಿಕೊಳ್ಳಲಾದ ಈ ವಿಡಿಯೋ 1.5 ಮಿಲಿಯನ್ ವೀಕ್ಷಣೆಗಳನ್ನು ಹಾಗೂ ಎರಡು ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದಕೊಂಡಿದೆ. ಹಾಗೂ ಹಲವಾರು ಕಾಮೆಂಟ್ಸ್ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಪ್ರಾಣಿಗಳ ಪ್ರೀತಿ ಮನುಷ್ಯರಿಗಿಂತ ಎಷ್ಟೋ ಪಟ್ಟು ಮೇಲುʼ ಎಂದು ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರರು ʼಮನುಷ್ಯರು ಸಂಬಂಧವನ್ನು ಮರೆಯಬಹುದು, ಆದರೆ ಪ್ರಾಣಿಗಳು ಯಾವಾಗಲೂ ಸಂಬಂಧಕ್ಕೆ ಬೆಲೆ ಕೊಡುತ್ತವೆʼ ಎಂಬ ಕಾಮೆಂಟ್ ಬರೆದುಕೊಂಡಿದ್ದಾರೆ. ಮತ್ತೊಬ್ಬ ಬಳಕೆದಾರರು ʼಇದೇ ಅಲ್ಲವೇ ನಿಸ್ವಾರ್ಥ ಪ್ರೀತಿʼ ಎಂದು ಹೇಳಿದ್ದಾರೆ. ಇನ್ನೂ ಅನೇಕರು ಮನುಷ್ಯ ಮಾನವೀಯತೆಯನ್ನು ಕಳೆದುಕೊಂಡಿರಬಹುದು, ಆದರೆ ಪ್ರಾಣಿಗಳಲ್ಲಿ ಮಾನವೀಯತೆ ಜೀವಂತವಾಗಿದೆ ಎಂದು ಹೇಳಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಗೌತಮ್ ಅದಾನಿ ಡಿಕೆಶಿ​​​​​ ಭೇಟಿ ಮಾಡಿದ್ಯಾಕೆ? ಇಲ್ಲಿದೆ ಅಸಲಿ ಕಾರಣ
ಗೌತಮ್ ಅದಾನಿ ಡಿಕೆಶಿ​​​​​ ಭೇಟಿ ಮಾಡಿದ್ಯಾಕೆ? ಇಲ್ಲಿದೆ ಅಸಲಿ ಕಾರಣ
ಎಕ್ಸ್​​ಪೋ ಲಕ್ಕಿ ಡ್ರಾನಲ್ಲಿ ಚಿನ್ನದ ನಾಣ್ಯ, ಪೆಪ್ಸ್ ಮಾಟ್ರೆಸ್ ಗೆದ್ದವರು
ಎಕ್ಸ್​​ಪೋ ಲಕ್ಕಿ ಡ್ರಾನಲ್ಲಿ ಚಿನ್ನದ ನಾಣ್ಯ, ಪೆಪ್ಸ್ ಮಾಟ್ರೆಸ್ ಗೆದ್ದವರು
‘ಟಾಕ್ಸಿಕ್’ ಅವಘಡ: ಸೌಂಡ್ ಬಾಕ್ಸ್ ಬಿದ್ದ ಬಳಿಕ ಪರಿಸ್ಥಿತಿ ಹೀಗಿತ್ತು ನೋಡಿ
‘ಟಾಕ್ಸಿಕ್’ ಅವಘಡ: ಸೌಂಡ್ ಬಾಕ್ಸ್ ಬಿದ್ದ ಬಳಿಕ ಪರಿಸ್ಥಿತಿ ಹೀಗಿತ್ತು ನೋಡಿ
ಮೂಲಭೂತ ಸೌಕರ್ಯಗಳಿಲ್ಲದೆ ಎತ್ತಿನ ಭುಜ ಟ್ರೆಕ್ಕಿಂಗ್ ರೀ ಓಪನ್
ಮೂಲಭೂತ ಸೌಕರ್ಯಗಳಿಲ್ಲದೆ ಎತ್ತಿನ ಭುಜ ಟ್ರೆಕ್ಕಿಂಗ್ ರೀ ಓಪನ್
ಮೈಸೂರಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋಗೆ ಭರ್ಜರಿ ರೆಸ್ಪಾನ್ಸ್!
ಮೈಸೂರಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋಗೆ ಭರ್ಜರಿ ರೆಸ್ಪಾನ್ಸ್!
ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್‌ಪೋ: ಇಂದೇ ಕೊನೆಯ ದಿನ
ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್‌ಪೋ: ಇಂದೇ ಕೊನೆಯ ದಿನ
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ