Holi 2024: ಈ ಹಳ್ಳಿಯಲ್ಲಿ ಹೋಳಿ ಆಚರಣೆ ಎಂದರೆ ಭಯ! ದಶಕಗಳಿಂದ ಬಣ್ಣಗಳಿಂದ ದೂರ
ಉತ್ತರಾಖಂಡದ ಕೆಲವು ಭಾಗಗಳ ಜನರು ಹಲವು ವರ್ಷಗಳಿಂದ ಹೋಳಿ ಆಚರಣೆಯಿಂದ ದೂರ ಉಳಿದ್ದಿದ್ದಾರೆ. ಹೋಳಿ ಆಚರಿಸುವುದರಿಂದ ದೇವರ ಶಾಪಕ್ಕೆ ಗುರಿಯಾಗುತ್ತೇವೆ ಎಂದು ಇಲ್ಲಿನ ಸ್ಥಳೀಯರು ನಂಬಿಕೊಂಡು ಬಂದಿದ್ದಾರೆ.
ರಂಗು ರಂಗಿನ ಹೋಳಿ ಹಬ್ಬ, ಎಲ್ಲರ ಮನ-ಮನಸ್ಸಿಗಳನ್ನು ಪುಳಕಿತಗೊಳಿಸುವ ಹಬ್ಬವಾಗಿದೆ. ಒಬ್ಬರು ಇನ್ನೊಬ್ಬರಿಗೆ ಬಣ್ಣದಿಂದ ಹೋಳಿ ಹಾಕುವುದು , ಮೈಗೆಲ್ಲ ಬಣ್ಣದ ಕಲರವು ಆ ದಿನದ ಹೋಳಿ ಹಬ್ಬಕ್ಕೆ ಕಲೆಯನ್ನು ನೀಡುತ್ತದೆ. ಹೋಳಿ ಹಬ್ಬವನ್ನು ಬಣ್ಣಗಳ ಹಬ್ಬ ಅಥವಾ ಪ್ರೀತಿಯ ಹಬ್ಬ ಎಂದು ಕರೆಯಲಾಗುತ್ತದೆ. ಆದರೆ ಉತ್ತರಾಖಂಡದ ಕೆಲವು ಭಾಗಗಳ ಜನರು ಹಲವು ವರ್ಷಗಳಿಂದ ಹೋಳಿ ಆಚರಣೆಯಿಂದ ದೂರ ಉಳಿದ್ದಿದ್ದಾರೆ. ಹೋಳಿ ಆಚರಿಸುವುದರಿಂದ ದೇವರ ಶಾಪಕ್ಕೆ ಗುರಿಯಾಗುತ್ತೇವೆ ಎಂದು ಇಲ್ಲಿನ ಸ್ಥಳೀಯರು ನಂಬಿಕೊಂಡು ಬಂದಿದ್ದಾರೆ.
ಯಾವ ಹಳ್ಳಿಗಳಲ್ಲಿ ಹೋಳಿ ಆಚರಣೆಯಿಲ್ಲ:
ರುದ್ರಪ್ರಯಾಗ ಜಿಲ್ಲೆಯಲ್ಲಿ ಕ್ವೇಲಿ, ಕುರ್ಜನ್ ಮತ್ತು ಜೊಂಡ್ಲಾ ಎಂಬ ಮೂರು ಗ್ರಾಮಗಳಿವೆ. ಈ ಗ್ರಾಮಗಳಲ್ಲಿ ಇದುವರೆಗೆ ಹೋಳಿ ಆಡಿಲ್ಲ. ಯಾಕೆಂದರೆ ಇಲ್ಲಿನ ಗ್ರಾಮ ದೇವತೆ ಭೂಮಿಯಾಳ ಮತ್ತು ಕುಲದೇವಿ ನೀಡಿದ ಶಾಪದಿಂದ ಹೋಳಿ ಆಡುವುದಿಲ್ಲ ಎಂಬ ನಂಬಿಕೆಯೇ ಹೋಳಿ ಆಚರಿಸದಿರಲು ಕಾರಣ. ಈ ಗ್ರಾಮದಲ್ಲಿ ಯಾರಾದರೂ ಹೋಳಿ ಆಚರಿಸಿದರೆ ಭೂಮ್ಯಾಲ ದೇವತೆಗಳು ಕೋಪಗೊಳ್ಳುತ್ತಾರೆ ಎಂಬ ಪ್ರತೀತಿ ಇದೆ. ಈ ರೀತಿ ಮಾಡುವುದರಿಂದ ಗ್ರಾಮದಲ್ಲಿ ಜನ, ಜಾನುವಾರುಗಳಿಗೆ ರೋಗ ಬಂದು ಅಕಾಲಿಕ ಮರಣ ಹೊಂದುತ್ತದೆ ಎಂಬ ನಂಬಿಕೆ ಇದೆ. ಅನೇಕ ವರ್ಷಗಳ ಹಿಂದೆ ಗ್ರಾಮಸ್ಥರು ಹೋಳಿ ಆಚರಿಸಲು ಪ್ರಯತ್ನಿಸಿದರು, ಆದರೆ ನಂತರ ಗ್ರಾಮದಲ್ಲಿ ಕಾಲರಾ ಹರಡಿತು ಮತ್ತು ಅನೇಕ ಜನರು ಸತ್ತರು ಎಂದು ಸ್ಥಳೀಯರು ಹೇಳುತ್ತಾರೆ.
ಇದನ್ನೂ ಓದಿ: ಹಿಂದೂ ಪುರಾಣದ ಪ್ರಕಾರ ರಾತ್ರಿ ಗೂಬೆಯನ್ನು ನೋಡಿದರೆ ಶುಭವೋ ಅಶುಭವೋ?
ಜನರ ನಂಬಿಕೆ:
“ವರ್ಷಗಳ ಹಿಂದೆ ಗ್ರಾಮದಲ್ಲಿ ಹೋಳಿ ಹಬ್ಬ ಆಚರಿಸಿದಾಗ ಕಾಲರಾ ಮುಂತಾದ ಕಾಯಿಲೆಗಳಿಗೆ ತುತ್ತಾಗಿ ಜನ ಸಾವನ್ನಪ್ಪಿದ್ದರು” ಎಂದು ಗ್ರಾಮಸ್ಥರು ಹೇಳುತ್ತಾರೆ.ಆದರೆ ಈ ಗ್ರಾಮಗಳ ಸಮೀಪದ ಹಳ್ಳಿಗಳಲ್ಲಿ ಹೋಳಿಯನ್ನು ವೈಭವದಿಂದ ಆಡಲಾಗುತ್ತದೆ. ಬಣ್ಣಗಳ ಸುರಿಮಳೆಯಾಗುತ್ತದೆ.
ಅಧ್ಯಾತ್ಮಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 5:49 pm, Sat, 9 March 24