Viral Video : ಏನು ಟ್ಯಾಲೆಂಟ್ ಗುರು, ಆಟೋ ಡ್ರೈವರ್‌ನ ನಿರರ್ಗಳ ಇಂಗ್ಲಿಷ್ ಕೇಳಿ ವಿದೇಶಿಗ ಫುಲ್ ಫಿದಾ
ಇಂಗ್ಲಿಷ್ ಭಾಷೆಯೆಂದರೆ ಕೆಲವರಿಗೆ ಅಷ್ಟಕಷ್ಟೆ. ಕೆಲವರು ಒಂದೊಂದೇ ಪದಗಳನ್ನು ಜೋಡಿಸಿ ಇಂಗ್ಲಿಷ್ ಭಾಷೆ ಮಾತನಾಡುವುದನ್ನು ನೋಡಿದರೆ ಅಯ್ಯೋ ಎನಿಸುತ್ತದೆ. ಆದರೆ ಸೋಶಿಯಲ್ ಮೀಡಿಯಾದಲ್ಲಿ ಸರಾಗವಾಗಿ ಇಂಗ್ಲಿಷ್ ಮಾತನಾಡುವ ಕ್ಲಿಪಿಂಗ್ಸ್ ಗಳು ವೈರಲ್ ಆಗುತ್ತಿರುತ್ತವೆ. ಆದರೆ ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ಕೇರಳದ ಆಟೋ ಡ್ರೈವರೊಬ್ಬರು ಸಲೀಸಾಗಿ ಇಂಗ್ಲಿಷ್ ಮಾತನಾಡಿದ್ದಾರೆ. ಈ ವಿಡಿಯೋ ನೋಡಿದ ನೆಟ್ಟಿಗರು ಫುಲ್ ಫಿದಾ ಆಗಿದ್ದಾರೆ.
ಹೆಚ್ಚಿನವರಿಗೆ ಈ ಆಂಗ್ಲ ಭಾಷೆಯೆಂದರೆ ಕಬ್ಬಿಣದ ಕಡಲೆ. ಆದರೆ ಎಲ್ಲರಿಗೂ ತಾವು ಚೆನ್ನಾಗಿ ಇಂಗ್ಲಿಷ್ ಭಾಷೆಯನ್ನು ಮಾತನಾಡಬೇಕು ಎನ್ನುವುದಿರುತ್ತದೆ. ಅದು ಕೆಲವರಿಗೆ ಸಾಧ್ಯವಾಗುವುದೇ ಇಲ್ಲ. ಇತ್ತೀಚೆಗಿನ ದಿನಗಳಲ್ಲಿ ದೊಡ್ಡವರನ್ನು ಮೀರಿಸುವಂತೆ ಸಣ್ಣ ಮಕ್ಕಳು ಈ ಭಾಷೆಯನ್ನು ಮಾತನಾಡುತ್ತಾರೆ. ಅದಲ್ಲದೆ, ಭಾಷೆ ಕಲಿಯುವ ಉದ್ದೇಶದಿಂದ ಆನ್ಲೈನ್ ಕೋರ್ಸ್ ಗಳನ್ನು ಸೇರಿರುವುದನ್ನು ನೋಡಿರಬಹುದು. ಈ ವಿಡಿಯೋ ನೋಡಿದರೆ ಇಂಗ್ಲಿಷ್ ಭಾಷೆಯ ಬಗೆಗಿನ ನಿಮ್ಮ ದೃಷ್ಟಿಕೋನವೇ ಬದಲಾಗುತ್ತದೆ.
ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ಆಟೋ ಡ್ರೈವರ್ ನಿರರ್ಗಳವಾಗಿ ಇಂಗ್ಲಿಷ್‌ನಲ್ಲಿ ಮಾತನಾಡುತ್ತಿದ್ದಾರೆ. ಎಷ್ಟೇಂದರೆ ಕೇಳುಗರು ಬೆಚ್ಚಿ ಬೀಳುವಷ್ಟು ನಿರರ್ಗಳವಾಗಿ. ವಿದೇಶಿಗನು ಈ ಆಟೋ ಚಾಲಕನ ಇಂಗ್ಲಿಷ್ ಕೇಳಿ ದೊಡ್ಡ ಅಭಿಮಾನಿಯಾಗಿ ಸಾಮಾಜಿಕ ಜಾಲತಾಣಗಳಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ:
View this post on Instagram
ಈ ಆಟೋ ಡ್ರೈವರ್ ನಿರರ್ಗಳವಾಗಿ ಇಂಗ್ಲಿಷ್ ಮಾತನಾಡುವ ಈ ವೀಡಿಯೊವನ್ನು vlogger zakkyzuu ಎನ್ನುವ ವ್ಯಕ್ತಿಯು ಪೋಸ್ಟ್ ಮಾಡಿದ್ದಾರೆ. ಬ್ರಿಟನ್‌ನ ಈ ವ್ಯಕ್ತಿಯೂ ರಸ್ತೆಬದಿಯಲ್ಲಿ ನಿಂತಿದ್ದ ಆಟೋ ಚಾಲಕನಿಗೆ ಎಟಿಎಂ ಎಲ್ಲಿದೆ ಎಂದು ಕೇಳುವುದನ್ನು ಈ ವಿಡಿಯೋದಲ್ಲಿ ನೋಡಬಹುದು. ಅದಕ್ಕೆ ಪ್ರತಿಯಾಗಿ ಆಟೋ ಡ್ರೈವರ್ ಅದೇ ನಿರರ್ಗಳವಾಗಿ ಇಂಗ್ಲಿಷ್‌ನಲ್ಲಿ ಇಲ್ಲಿ ಎರಡು ಎಟಿಎಂಗಳಿವೆ, ಅದರಲ್ಲಿ ಒಂದು ಕೆಲಸ ಮಾಡುತ್ತಿಲ್ಲ ಎಂದಿದ್ದಾರೆ.
ಆಗ ಆಟೋ ಡ್ರೈವರ್ ನೀವು ಎಟಿಎಂಗೆ ಹೋಗಲು ಬಯಸುತ್ತೀರಾ ಎಂದು ಕೇಳಲು ಪ್ರಾರಂಭಿಸುತ್ತಾರೆ. ಪ್ರಯಾಣ ದರವನ್ನೂ ಹೇಳಿದ್ದು, ಈ ಸಂಭಾಷಣೆಯೆಲ್ಲವೂ ಇಂಗ್ಲಿಷ್‌ನಲ್ಲಿ ನಡೆದಿದೆ. ಕೊನೆಗೆ ಆಟೋ ಡ್ರೈವರ್ ಕೊನೆಗೆ ವ್ಯಕ್ತಿಯನ್ನು ಆಟೋದಲ್ಲಿ ಕೂರಿಸಿಕೊಂಡು ಇಂಗ್ಲಿಷ್ ನಲ್ಲಿ ಸಾಕಷ್ಟು ಸಂಭಾಷಣೆ ನಡೆಸಿದ್ದಾರೆ. ಈ ಅದ್ಭುತ ವೀಡಿಯೋ ಕೇರಳದ್ದು ಎನ್ನಲಾಗುತ್ತಿದ್ದು, ಈ ಆಟೋ ಚಾಲಕನ ಹೆಸರು ಅಶ್ರಫ್.
ಇದನ್ನೂ ಓದಿ: ಉತ್ತರ ಕರ್ನಾಟಕದ ಖಡಕ್ ಜೋಳದ ರೊಟ್ಟಿ ನಾನಾ ರೀತಿಯ ಪಲ್ಯ, ಅಜ್ಜಿಯ ಕೈ ರುಚಿ ಅದ್ಭುತ
ಈ ವಿಡಿಯೋವೊಂದು ವೈರಲ್ ಆಗುತ್ತಿದ್ದು, ಇಲ್ಲಿಯವರೆಗೂ 10 ಮಿಲಿಯನ್‌ಗಿಂತಲೂ ಹೆಚ್ಚು ವೀಕ್ಷಣೆ ಕಂಡಿದೆ. ನೆಟ್ಟಿಗರು ಈ ಆಟೋ ಚಾಲಕನನ್ನು ಹಾಡಿ ಹೊಗಳುತ್ತಿದ್ದಾರೆ. ಬಳಕೆದಾರರೊಬ್ಬರು, ‘ನಿಸ್ಸಂಶಯವಾಗಿ ಅವರು ಇಂಗ್ಲಿಷ್ ಅನ್ನು ಬಹಳ ಶ್ರದ್ಧೆಯಿಂದ ಕಲಿತಿರಬೇಕು’ ಎಂದಿದ್ದಾರೆ. ಮತ್ತೊಬ್ಬರು, ‘ಇವರಲ್ಲಿ ನಿಜಕ್ಕೂ ಪ್ರತಿಭೆ ಇದೆ’ ಎಂದಿದ್ದಾರೆ. ಇನ್ನೊಬ್ಬರು, ‘ಎಸ್‌ಬಿಐ ಎಟಿಎಂ ಎಂದಿಗೂ ಕಾರ್ಯನಿರ್ವಹಿಸುವುದಿಲ್ಲ ಎಂದು ಆಟೋ ಚಾಲಕರು ಸರಿಯಾಗಿ ಹೇಳಿದ್ದಾರೆ’ ಎಂದಿದ್ದಾರೆ
ಇನ್ನಷ್ಟು ವೈರಲ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ