AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Holi 2024 Date: ಈ ವರ್ಷ ಹೋಳಿ ಹಬ್ಬ ಯಾವಾಗ? ಇಲ್ಲಿದೆ ಮಾಹಿತಿ

Holi: ಹೋಳಿ ಹಿಂದೂಗಳ ಪ್ರಮುಖ ಹಬ್ಬವಾಗಿದ್ದು, ಜನರು ತಮ್ಮ ಕುಟುಂಬ, ಸ್ನೇಹಿತರು ಮತ್ತು ಸಂಬಂಧಿಕರೊಂದಿಗೆ ಅಪಾರ ಸಂತೋಷದಿಂದ ಈ ಹಬ್ಬವನ್ನು ಆಚರಿಸುತ್ತಾರೆ. 2024 ರಲ್ಲಿ ಹೋಳಿಯನ್ನು ಯಾವಾಗ ಆಚರಿಸಲಾಗುತ್ತದೆ? ಸರಿಯಾದ ದಿನಾಂಕ ಮತ್ತು ಸಮಯ ಹಾಗೂ ಹೋಳಿ ಹಬ್ಬದ ಸಂಪೂರ್ಣ ಮಾಹಿತಿ ಇಲ್ಲಿದೆ.

Holi 2024 Date: ಈ ವರ್ಷ ಹೋಳಿ ಹಬ್ಬ ಯಾವಾಗ? ಇಲ್ಲಿದೆ ಮಾಹಿತಿ
ಸಾಂದರ್ಭಿಕ ಚಿತ್ರ
ಪ್ರೀತಿ ಭಟ್​, ಗುಣವಂತೆ
| Edited By: |

Updated on: Feb 16, 2024 | 6:22 PM

Share

ಹೋಳಿ ಹಿಂದೂಗಳ ಪ್ರಮುಖ ಹಬ್ಬಗಳಲ್ಲಿ ಒಂದಾಗಿದ್ದು ಇದನ್ನು ದೇಶಾದ್ಯಂತ ಬಹಳ ಆಡಂಬರದಿಂದ ಆಚರಿಸಲಾಗುತ್ತದೆ. ಹೋಳಿ ಹಬ್ಬ ಬಣ್ಣಗಳಿಂದ ಕೂಡಿರುವುದರಿಂದ ಎಲ್ಲರೂ ಪ್ರೀತಿಸುತ್ತಾರೆ. ಈ ಬಣ್ಣದ ಹಬ್ಬವು ಚಿಕ್ಕವರಿಂದ ಹಿಡಿದು ದೊಡ್ಡವರ ವರೆಗೂ ಅಚ್ಚುಮೆಚ್ಚು ಹಾಗಾಗಿ ಬಹಳ ಉತ್ಸಾಹದಿಂದ ಆಚರಿಸಲಾಗುತ್ತದೆ. ಹಾಗಾದರೆ ಈ ವರ್ಷದ ಹೋಳಿ ಹಬ್ಬ ಯಾವಾಗ? ದಿನಾಂಕ ಮತ್ತು ಸಮಯದ ಬಗೆಗಿನ ಸಂಪೂರ್ಣ ಮಾಹಿತಿ ಇಲ್ಲಿದೆ.

ಹೋಳಿ 2024 ದಿನಾಂಕ ಮತ್ತು ಸಮಯ

ಹೋಳಿ ಹಬ್ಬವನ್ನು ಪ್ರತೀ ವರ್ಷ ಫಾಲ್ಗುಣ ಮಾಸದ ಹುಣ್ಣಿಮೆಯ ದಿನದಂದು ಆಚರಿಸಲಾಗುತ್ತದೆ. ಹೋಳಿ ಹಬ್ಬವು ವಸಂತ ಋತುವಿನ ಆಗಮನವನ್ನು ಸೂಚಿಸುತ್ತದೆ. ಈ ಬಾರಿ ಹೋಳಿಯನ್ನು ಮಾರ್ಚ್‌ 25 ರಂದು ಆಚರಿಸಲಾಗುತ್ತದೆ. ಹುಣ್ಣಿಮೆ ತಿಥಿಯು ಮಾ. 24 ರಂದು ಬೆಳಿಗ್ಗೆ 09:54ಕ್ಕೆ ಆರಂಭವಾಗಿ, ಮಾ. 25 ರಂದು ಮಧ್ಯಾಹ್ನ 12:29 ಕ್ಕೆ ಕೊನೆಗೊಳ್ಳುತ್ತದೆ.

ಹೋಳಿ ಹಬ್ಬದ ಮಹತ್ವ

ಹಿಂದೂಗಳಲ್ಲಿ ಹೋಳಿ ಹಬ್ಬವು ತನ್ನದೇ ಆದ ಧಾರ್ಮಿಕ ಮಹತ್ವವನ್ನು ಹೊಂದಿದೆ. ಈ ಹಬ್ಬವು ಹಿಂದೂ ಧರ್ಮದ ಪ್ರಮುಖ ಹಬ್ಬಗಳಲ್ಲಿ ಒಂದಾಗಿದ್ದು ಹಾಗಾಗಿ ಹೋಳಿ ಹಬ್ಬವನ್ನು ಅಪಾರ ಸಂತೋಷ ಮತ್ತು ಉತ್ಸಾಹದಿಂದ ಆಚರಿಸಲಾಗುತ್ತದೆ. ಈ ಹಬ್ಬವನ್ನು ಕೆಲವೆಡೆ ಸತತ ಎರಡು ದಿನಗಳ ವರೆಗೆ ಆಚರಿಸಲಾಗುತ್ತದೆ, ಚೋಟಿ ಹೋಳಿ ಮತ್ತು ಮತ್ತೊಂದು ದಿನ ಬಡಿ ಹೋಳಿ ಅಥವಾ ರಂಗ್ ವಾಲಿ ಹೋಳಿ ಎಂದೂ ಕರೆಯಲಾಗುತ್ತದೆ. ಚೋಟಿ ಹೋಳಿಯಂದು, ಜನರು ದೀಪವನ್ನು ಬೆಳಗಿಸುತ್ತಾರೆ, ನಂತರ ರಾತ್ರಿ ಹೋಲಿಯ ದಹನವನ್ನು ನಡೆಸಲಾಗುತ್ತದೆ. ಹೋಳಿ ಶುದ್ಧಾನುಶುದ್ಧ ಭಾರತೀಯ ಆಚರಣೆ. ಅದರಲ್ಲೂ ಉತ್ತರ ಭಾರತದಲ್ಲಿ ಭಾರೀ ಜನಪ್ರಿಯ. ಆ ಜನಪ್ರಿಯತೆಯ ಕಾರಣದಿಂದಲೇ ಈಗ ಇಡೀ ದೇಶವನ್ನು ಹಬ್ಬಿದ್ದಷ್ಟೇ ಅಲ್ಲದೆ ವಿದೇಶಗಳಲ್ಲೂ ವ್ಯಾಪಿಸಿಕೊಂಡಿದೆ.

ಇನ್ನು ಕೆಲವೆಡೆ ಜನರು ಬಣ್ಣಗಳು ಮತ್ತು ನೀರಿನಿಂದ ಪೂರ್ತಿ ದಿನ ಆಟವಾಡುತ್ತಾರೆ. ಜೊತೆಗೆ ಪರಸ್ಪರರ ಮನೆಗೆ ಭೇಟಿ ನೀಡುವ ಮೂಲಕ ಸಿಹಿ ಹಂಚುತ್ತಾರೆ. ಈ ಹಬ್ಬವನ್ನು ಕರ್ನಾಟಕದಾದ್ಯಂತ ಅಪಾರ ಸಂತೋಷದಿಂದ ಆಚರಿಸುತ್ತಾರೆ. ಆ ದಿನ ಹೊಸ ಬಟ್ಟೆ ಧರಿಸಿ, ಪ್ರೀತಿ ಪಾತ್ರರೊಂದಿಗೆ ಬಣ್ಣಗಳ ಓಕುಳಿಯಾಡಿ ಹಬ್ಬವನ್ನು ಆನಂದಿಸುತ್ತಾರೆ. ಇನ್ನು ಪೌರಾಣಿಕ ನಂಬಿಕೆಗಳ ಪ್ರಕಾರ, ಭಗವಾನ್‌ ಶಿವನಿಂದ ಹೋಳಿ ಹಬ್ಬವು ಬೆಳಕಿಗೆ ಬಂದಿತು ಎಂದು ಹೇಳಲಾಗುತ್ತದೆ. ಈ ಹಬ್ಬವು, ದುಷ್ಕ್ರತ್ಯಗಳು ದೇವರ ಶಕ್ತಿಯ ಎದುರು ಎಂದಿಗೂ ಜಯವನ್ನು ಪಡೆಯಲು ಸಾಧ್ಯವಿಲ್ಲ ಎಂಬ ಸಾರವನ್ನು ತಿಳಿಸಿ ಕೊಡುತ್ತದೆ. ಜೊತೆಗೆ ಕೆಟ್ಟ ಶಕ್ತಿಗಳು, ದುಷ್ಟ ಆಲೋಚನೆಗಳು ನಾಶವಾಗಿ ಹೊಸತನ ಪ್ರಾರಂಭದ ಕಾಲವಾಗಿದೆ.

ಇದನ್ನೂ ಓದಿ: ರಥಸಪ್ತಮಿಯ ದಿನ ಉಪವಾಸ ಮಾಡುವುದರಿಂದ ಏನೆಲ್ಲಾ ಪ್ರಯೋಜನಗಳಿವೆ?

ಹಬ್ಬದ ಹೆಸರು ಬೇರೆ ಬೇರೆಯದರೂ ಆಚರಣೆ ಒಂದೇ!

ಉತ್ತರ ಪ್ರದೇಶದ ಮಥುರಾದಲ್ಲಿ ಹೋಳಿ ಅತ್ಯಂತ ಜನಪ್ರಿಯ. ಹೋಳಿ ಹಬ್ಬದೊಂದಿಗೆ ರಾಧಾ- ಕೃಷ್ಣರ ಒಲುಮೆಯ ಕಥೆ ಬೆಸೆದುಕೊಂಡಿದ್ದು ಎನ್ನುವುದು ಇಲ್ಲಿನ ಜನರ ನಂಬಿಕೆ. ಹಾಗಾಗಿ ಬ್ರಜ್‌ ಎಂಬ ಪ್ರದೇಶದಲ್ಲಿ ಬರೋಬ್ಬರಿ 16 ದಿನಗಳ ಕಾಲ ಹೋಳಿಯ ಆಚರಣೆ ನಿರಂತರವಾಗಿ ನಡೆಸಲಾಗುತ್ತದೆ. ಈ ಹಬ್ಬವನ್ನು ಸಿಖ್ಖರು ಮೂರು ದಿನಗಳ ಕಾಲ ಹೋಲಾ ಮೊಹಲ್ಲಾ ಎಂಬುದಾಗಿ ಆಚರಿಸುತ್ತಾರೆ. ಅಸ್ಸಾಮಿಗರಿಗೆ ಹೋಳಿ ಫಕುವಾ ಅಥವಾ ಫಗುವಾ ಇನ್ನು ಒಡಿಶಾ ಮಂದಿಗೆ ಡೋಲಾ ಜಾತ್ರಾ, ಬಂಗಾಳಿಯರಿಗೆ ಬಸಂತೋ ಉತ್ಸವ್‌ ಹೀಗೆ ಹೆಸರು ಬೇರೆ ಬೇರೆಯದರೂ ಆಚರಣೆ ಒಂದೇ. ಹಾಗಾಗಿ ಈ ಹಬ್ಬ ವಿಶ್ವ ಪ್ರಸಿದ್ಧ. ಈ ಬಾರಿಯೂ ಹೋಳಿಯನ್ನು ಒಟ್ಟು ಗೂಡಿ ಆಚರಿಸುವ ಜೊತೆಗೆ ರಾಸಾಯನಿಕವಲ್ಲದ ಬಣ್ಣಗಳನ್ನು ಬಳಸುವುದರತ್ತ ಗಮನ ಹರಿಸೋಣ.

ಅಧ್ಯಾತ್ಮಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ಸೊಸೆಗೆ ನೌಕರಿ ಕೊಟ್ಟಿಲ್ಲವೆಂದು ಅಂಗನವಾಡಿಗೆ ಬೀಗ ಜಡಿದ ಮಾಲೀಕ!
ಸೊಸೆಗೆ ನೌಕರಿ ಕೊಟ್ಟಿಲ್ಲವೆಂದು ಅಂಗನವಾಡಿಗೆ ಬೀಗ ಜಡಿದ ಮಾಲೀಕ!
ಯಶ್​ಗೆ ಗಜಕೇಸರಿ ಯೋಗ ಇದೆ: ‘ಟಾಕ್ಸಿಕ್’ ಯಶಸ್ಸಿನ ಬಗ್ಗೆ ಕೆ. ಮಂಜು ಭವಿಷ್ಯ
ಯಶ್​ಗೆ ಗಜಕೇಸರಿ ಯೋಗ ಇದೆ: ‘ಟಾಕ್ಸಿಕ್’ ಯಶಸ್ಸಿನ ಬಗ್ಗೆ ಕೆ. ಮಂಜು ಭವಿಷ್ಯ
ರಸ್ತೆಯಲ್ಲಿ ಹೋಗುತ್ತಿದ್ದ 3 ವರ್ಷದ ಬಾಲಕನ ಮೇಲೆ ಬೀದಿ ನಾಯಿಗಳ ದಾಳಿ
ರಸ್ತೆಯಲ್ಲಿ ಹೋಗುತ್ತಿದ್ದ 3 ವರ್ಷದ ಬಾಲಕನ ಮೇಲೆ ಬೀದಿ ನಾಯಿಗಳ ದಾಳಿ
ಧ್ರುವಂತ್ ಮೇಲೆ ರಕ್ಷಿತಾ ಶೆಟ್ಟಿಗೆ ಮೂಡಿದೆ ಕರುಣೆ: ಕರಗಿತು ಮನಸ್ಸು
ಧ್ರುವಂತ್ ಮೇಲೆ ರಕ್ಷಿತಾ ಶೆಟ್ಟಿಗೆ ಮೂಡಿದೆ ಕರುಣೆ: ಕರಗಿತು ಮನಸ್ಸು
ಹುಬ್ಬಳ್ಳಿ ಕೇಸ್​: ನಾಪತ್ತೆಯಾಗಿದ್ದ ಕೈ ಸದಸ್ಯೆ ಪೊಲೀಸ್​​ ವಶಕ್ಕೆ
ಹುಬ್ಬಳ್ಳಿ ಕೇಸ್​: ನಾಪತ್ತೆಯಾಗಿದ್ದ ಕೈ ಸದಸ್ಯೆ ಪೊಲೀಸ್​​ ವಶಕ್ಕೆ
ಯಶ್ ರೇಂಜ್ ಸಾಮಾನ್ಯದ್ದಲ್ಲ: ವಿವರಿಸಿದ ನಿರ್ಮಾಪಕ ಕೆ ಮಂಜು
ಯಶ್ ರೇಂಜ್ ಸಾಮಾನ್ಯದ್ದಲ್ಲ: ವಿವರಿಸಿದ ನಿರ್ಮಾಪಕ ಕೆ ಮಂಜು
ಕಠಿಣವಾಗುತ್ತಿವೆ ಟಾಸ್ಕ್​​ಗಳು, ಗೆಲ್ಲುವರು ಯಾರು? ಬೀಳುವರು ಯಾರು?
ಕಠಿಣವಾಗುತ್ತಿವೆ ಟಾಸ್ಕ್​​ಗಳು, ಗೆಲ್ಲುವರು ಯಾರು? ಬೀಳುವರು ಯಾರು?
ಗೃಹಲಕ್ಷ್ಮಿ ಹಣದ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಶಾಕಿಂಗ್ ಹೇಳಿಕೆ
ಗೃಹಲಕ್ಷ್ಮಿ ಹಣದ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಶಾಕಿಂಗ್ ಹೇಳಿಕೆ
ಕರ್ನಾಟಕದ ಆಸ್ತಿ ಮಾಲೀಕರಿಗೆ ಗುಡ್​​ ನ್ಯೂಸ್: ಸಂಪುಟದಲ್ಲಿ ಮಹತ್ವದ ತೀರ್ಮಾನ
ಕರ್ನಾಟಕದ ಆಸ್ತಿ ಮಾಲೀಕರಿಗೆ ಗುಡ್​​ ನ್ಯೂಸ್: ಸಂಪುಟದಲ್ಲಿ ಮಹತ್ವದ ತೀರ್ಮಾನ
ಧುರಂಧರ್ 2 Vs ಟಾಕ್ಸಿಕ್: ಟೀಕೆ ಮಾಡಿದವರಿಗೆ ತಿರುಗೇಟು ಕೊಟ್ಟ ಕೆ. ಮಂಜು
ಧುರಂಧರ್ 2 Vs ಟಾಕ್ಸಿಕ್: ಟೀಕೆ ಮಾಡಿದವರಿಗೆ ತಿರುಗೇಟು ಕೊಟ್ಟ ಕೆ. ಮಂಜು