ಇದೇ ನಿಜವಾದ ಉತ್ತರ: ಅಸಲಿ ಕರಿಮಣಿ ಮಾಲೀಕ ಯಾರು? ಈ ಬಗ್ಗೆ ಹಿಂದೂ ಶಾಸ್ತ್ರದಲ್ಲಿರುವ ಉಲ್ಲೇಖ ಏನು?
ಎಲ್ಲಾ ಗುಣಗಳು ಒಟ್ಟು ಗೂಡಿ ಒಬ್ಬ ಹುಡುಗನಾಗುವುದಾದರೆ ಅವನು ಹೀಗೆಯೇ ಇರಬೇಕು ಎಂದು ಹೇಳುವ ಶ್ಲೋಕವಿದೆ. ಇದು ಹಿಂದಿನ ಕಾಲದಲ್ಲಿ ಎಷ್ಟು ಪ್ರಚಲಿತವೋ ಅಷ್ಟೇ ಈಗಲೂ ಕೂಡ. ಅಂದರೆ ಬಯಸುವುದಾದರೆ ಇಂತಹ ಹುಡುಗನನ್ನೇ ಬಯಸಬೇಕು ಎಂಬ ಹಂಬಲ ವಿರುವವರಿಗೆ ಇದು ಹೆಚ್ಚು ಸೂಕ್ತ. ಹಾಗಾದರೆ ಈ ಶ್ಲೋಕ ಹೇಳುವುದೇನು? ಇಲ್ಲಿದೆ ಮಾಹಿತಿ.
ಇತ್ತೀಚಿಗೆ ಕರಿಮಣಿ ಮಾಲೀಕ ಯಾರು? ಎಂಬ ಪ್ರಶ್ನೆ ಹಲವರನ್ನು ಕಾಡಿದ್ದು ಸುಳ್ಳಲ್ಲ. ಹಳೆಯ ಹಾಡಾದರೂ ಕೂಡ ಅದಕ್ಕೆ ಹೊಸ ಮೆರುಗನ್ನು ಕೊಟ್ಟಿದ್ದ ನೆಟ್ಟಿಗರಿಗೆ ಸರಿಯಾದ ಉತ್ತರ ಬಹುಷಃ ಸಿಕ್ಕಿಲ್ಲ. ಇದಕ್ಕೆ ಪೂರಕವೆಂಬಂತೆ ಹಿಂದಿನ ಕಾಲದಲ್ಲಿ ಹೇಳುತ್ತಿದ್ದ ಶ್ಲೋಕ ಒಂದು ಈ ಪ್ರಶ್ನೆಗೆ ಉತ್ತರ ಹುಡುಕಿ ಕೊಟ್ಟಿದೆ. ಹಿಂದೆ ನಮ್ಮ ಪೂರ್ವಜರು ಒಂದು ಹೆಣ್ಣಿನ ಬಳಿ ನಿನಗೆ ಎಂತಹ ಹುಡುಗ ಬೇಕು? ನಿನ್ನ ಮನದ ಅರಸ ಹೇಗಿರಬೇಕು? ಎಂದು ಕೇಳಿದಾಗ ಈ ಚಿಕ್ಕ ಶ್ಲೋಕ ಅಥವಾ ನೀವು ಇದನ್ನು ಉಕ್ತಿ ಎನ್ನಬಹುದು. ಆ ಮೂಲಕ ತನ್ನ ಹುಡುಗ ಹೇಗಿರಬೇಕು ಎಂಬುದನ್ನು ವರ್ಣಿಸುತ್ತಿದ್ದರಂತೆ. ಹಾಗಾಗಿ ಕರಿಮಣಿ ಕಟ್ಟುವವನಿಗೆ ಅಷ್ಟು ಅರ್ಹತೆಗಳಿರಬೇಕು ಎಂಬುದು ಆಗಿನ ಚಿಂತೆನೆಯಾಗಿತ್ತು. ಇದು ಈ ಕಾಲಕ್ಕೂ ಪ್ರಸ್ತುತವಾಗಿದೆ. ಬಹುಷಃ ಮುಂದೆಯೂ ಇದು ಹಳೆಯದಾಗದು.
ನಾವು ಪುರಾಣ ಕಥೆಗಳಲ್ಲಿ ಓದಿದ, ಕೇಳಿ ತಿಳಿದುಕೊಂಡ ಪಾತ್ರಗಳು ನಮ್ಮ ಮೇಲೆ ಪ್ರಭಾವ ಬೀರಿರುತ್ತದೆ. ಸಾಮಾನ್ಯವಾಗಿ ಹುಡುಗ ಶ್ರೀರಾಮ ಚಂದ್ರನಂತಿರಬೇಕು. ಅವನಲ್ಲಿ ಕೃಷ್ಣನ ತುಂಟತನ ಇರಬೇಕು. ಶಿವನು ಪಾರ್ವತಿಗೆ ತೋರಿದ ನಿಷ್ಠೆಯೂ ಬೇಕು, ಹೀಗೆ ಹಲವು ಕಥೆಗಳು ನಮಗೆ ಒಂದು ಹುಡುಗನ ರೂಪವನ್ನು ಕಟ್ಟಿಕೊಟ್ಟಿರುತ್ತದೆ. ಆದರೆ ಎಲ್ಲಾ ಗುಣಗಳು ಒಟ್ಟು ಗೂಡಿ ಒಬ್ಬ ಹುಡುಗನಾಗುವುದಾದರೆ ಅವನು ಹೀಗೆಯೇ ಇರಬೇಕು ಎಂದು ಹೇಳುವ ಶ್ಲೋಕವಿದೆ. ಇದು ಹಿಂದಿನ ಕಾಲದಲ್ಲಿ ಎಷ್ಟು ಪ್ರಚಲಿತವೋ ಅಷ್ಟೇ ಈಗಲೂ ಕೂಡ. ಅಂದರೆ ಬಯಸುವುದಾದರೆ ಇಂತಹ ಹುಡುಗನನ್ನೇ ಬಯಸಬೇಕು ಎಂಬ ಹಂಬಲ ವಿರುವವರಿಗೆ ಇದು ಹೆಚ್ಚು ಸೂಕ್ತ. ಹಾಗಾದರೆ ಈ ಶ್ಲೋಕ ಹೇಳುವುದೇನು?
ಭೋಗೇಷು ರಾಜ, ವಚನೇಷು ರಾಮ,
ಚತುರಸ್ಯ ಕೃಷ್ಣ, ಧೈರ್ಯೇಷು ಕರ್ಣ,
ರೂಪೇಚ ಇಂದ್ರ, ಕಾಮೇಷು ಮದನ,
ಸುಖ ದುಃಖ ಮಿತ್ರಮ್ ಮಮ ಧರ್ಮ ರಮಣ।।
ಭೋಗೇಷು ರಾಜ -ಕೈ ಹಿಡಿದವಳನ್ನು ರಾಣಿಯಂತೆ ನೋಡಿಕೊಳ್ಳುವವನು.
ವಚನೇಷು ರಾಮ -ತನ್ನವಳಿಗೆ ಸುಳ್ಳು ಹೇಳದವನು, ಕೊಟ್ಟ ಮಾತನು ಎಂದಿಗೂ ತಪ್ಪದವನು.
ಚತುರಸ್ಯ ಕೃಷ್ಣ -ತನ್ನ ಮನದರಸಿಯನ್ನು ಮತ್ತು ಆಕೆಯ ಕುಟುಂಬವನ್ನು ಉಪಾಯದಿಂದ ಅಪಾಯ ಬರದಂತೆ ಕಾಪಾಡುವವನು.
ಧೈರ್ಯೇಷು ಕರ್ಣ -ತನ್ನವಳಿಗೆ ಏನೇ ಕಷ್ಟ ಬಂದರೂ ಅವಳ ಜೊತೆ ನಿಂತು ಎದುರಿಸುವುವನು.
ರೂಪೇಚ ಇಂದ್ರ -ರೂಪದಲ್ಲಿ ಇಂದ್ರನನ್ನು ಹೋಲುವವನು.
ಕಾಮೇಷು ಮದನ -ಮಾನಸಿಕ ದೈಹಿಕ ಸಂತೃಪ್ತಿಯನ್ನು ನೀಡುವವನು.
ಸುಖ ದುಃಖ ಮಿತ್ರಮ್ ಮಮ ಧರ್ಮ ರಮಣ -ಅಂದರೆ ಈ ಆರು ಗುಣಗಳನ್ನು ಹೊಂದಿದವನು ನಿಜವಾದ ಕರಿಮಣಿ ಮಾಲೀಕಕ ಅರ್ಥಾತ್ ತನ್ನ ಕೈ ಹಿಡಿಯುವವನು ಈ ಎಲ್ಲಾ ಗುಣಗಳನ್ನು ಹೊಂದಿರಬೇಕು. ತನ್ನ ಸುಖ ದುಃಖಗಳಲ್ಲಿ ಮಿತ್ರನಾಗಿ ಜೊತೆಯಾಗಿ ನಿಲ್ಲಬೇಕು ಎಂಬುದಾಗಿದೆ. ಅಂದರೆ ನನ್ನ ರಮಣ, ಮನದ ಒಡೆಯನಾಗಿ ಬರುವವನು ಹೇಗಿರಬೇಕು ಎಂಬುದನ್ನು ಈ ಸಾಲುಗಳು ವಿವರಿಸುತ್ತದೆ.
ಇದನ್ನೂ ಓದಿ: ರಥಸಪ್ತಮಿಯ ದಿನ ಉಪವಾಸ ಮಾಡುವುದರಿಂದ ಏನೆಲ್ಲಾ ಪ್ರಯೋಜನಗಳಿವೆ?
ವೈರಲ್ ವಿಡಿಯೋ ಇಲ್ಲಿದೆ ನೋಡಿ:
View this post on Instagram
ಕರಿಮಣಿ ಮಾಲೀಕ ಯಾರು? ಎಂದು ಕೇಳುತ್ತಿದ್ದವರಿಗೆ ಈ ಉತ್ತರ ಸೂಕ್ತ. ಅದಲ್ಲದೆ ಈ ಉಕ್ತಿಯನ್ನು ಭಾವಸಾಗರದ ನಾವಿಕ bhavasagarada_naavika ಎಂಬ ಇನ್ಸ್ಟಾ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು ಭಾರಿ ವೈರಲ್ ಆಗಿದೆ. ಈ ಪೋಸ್ಟ್ ಗೆ ನೆಟ್ಟಿಗರು “ಇದೇ ನಿಜವಾದ ಉತ್ತರ” ಎಂದು ಬರೆದುಕೊಂಡಿದ್ದಾರೆ.
ಅಧ್ಯಾತ್ಮಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 12:27 pm, Fri, 16 February 24