Badrinath Dham Yatra 2024: ಬದರೀನಾಥನಿಗೆ ತುಪ್ಪ ಲೇಪಿತ ಕಂಬಳಿ ಯಾಕೆ? ಧಾಮದ ಬಾಗಿಲು ತೆರೆಯುವ ದಿನಾಂಕ, ಸಮಯ ಇಲ್ಲಿದೆ
ಚಾರ್ ಧಾಮ್ ಯಾತ್ರೆಯ ಬಾಗಿಲು ತೆರೆಯುವ ಪ್ರಕ್ರಿಯೆ ಆರಂಭವಾಗಿದೆ. ಜೊತೆಗೆ ಬದರೀನಾಥ್ ಧಾಮದ ಬಾಗಿಲು ತೆರೆಯುವ ದಿನಾಂಕವನ್ನು ಘೋಷಿಸಲಾಗಿದೆ. ಉತ್ತರಾಖಂಡದಲ್ಲಿರುವ ವಿಷ್ಣುವಿನ ಪವಿತ್ರ ಬದರೀನಾಥ ಧಾಮದ ಬಾಗಿಲುಗಳು ಈ ವರ್ಷ ಯಾವಾಗ ತೆರೆಯುತ್ತವೆ ಎಂದು ಆ ಶುಭ ಸಮಯ ಯಾವಾಗ? ಇಲ್ಲಿದೆ ಮಾಹಿತಿ.
ಚಾರ್ ಧಾಮ್ ಯಾತ್ರೆಯನ್ನು (Badrinath Dham Yatra) ಹಿಂದೂ ಧರ್ಮದಲ್ಲಿ ಬಹಳ ಮುಖ್ಯವೆಂದು ಪರಿಗಣಿಸಲಾಗಿದೆ. ಪ್ರತಿ ವರ್ಷ, ಚಾರ್ ಧಾಮ್ ಯಾತ್ರೆಯು ನಿಗದಿತ ಅವಧಿಗೆ ಪ್ರಾರಂಭವಾಗುತ್ತದೆ, ಅದರಲ್ಲಿ ಬದರೀನಾಥ್ ಧಾಮ್ ಯಾತ್ರೆಯನ್ನು ಬಹಳ ವಿಶೇಷವೆಂದು ಪರಿಗಣಿಸಲಾಗುತ್ತದೆ. ಏಕೆಂದರೆ ಉತ್ತರಾಖಂಡದಲ್ಲಿರುವ ಬದರೀನಾಥ ಧಾಮವನ್ನು ವಿಷ್ಣುವಿನ ಮುಖ್ಯ ವಾಸಸ್ಥಾನವೆಂದು ಪರಿಗಣಿಸಲಾಗಿದೆ. ಇದಲ್ಲದೆ, ಬದರೀನಾಥ್ ಧಾಮ್ ವನ್ನು ಭೂಮಿಯ ವೈಕುಂಠ ಧಾಮ್ ಎಂದೂ ಕೂಡ ಕರೆಯಲಾಗುತ್ತದೆ. 6 ತಿಂಗಳ ವಿಶ್ರಾಂತಿಯ ಸಮಯದಲ್ಲಿ ಶ್ರೀ ಹರಿ ವಿಷ್ಣುವು ಇಲ್ಲಿಯೇ ವಾಸಿಸುತ್ತಾನೆ ಎಂದು ನಂಬಲಾಗಿದೆ. ಈ ದೇವಾಲಯದ ಬಾಗಿಲು ತೆರೆಯುವ ಮೊದಲು, ಜೋಶಿ ಮಠದಲ್ಲಿರುವ ನರಸಿಂಹ ದೇವಸ್ಥಾನದಲ್ಲಿ ಗರುಡ ಚಾಡ್ ಉತ್ಸವವನ್ನು ಆಚರಿಸುವ ಸಂಪ್ರದಾಯವಿದೆ. ಪ್ರತಿ ವರ್ಷವು ನಡೆಯುವ ಈ ಉತ್ಸವದಲ್ಲಿ ಭಗವಾನ್ ಬದರೀನಾಥನ ಹೆಚ್ಚಿನ ಸಂಖ್ಯೆಯ ಭಕ್ತರು ಭಾಗವಹಿಸುತ್ತಾರೆ. ಹಾಗಾದರೆ ಬದರೀನಾಥ ಧಾಮದ ಬಾಗಿಲುಗಳ ತೆರೆಯುವ ಶುಭ ಸಮಯವನ್ನು ತಿಳಿದುಕೊಳ್ಳಿ.
ಬದರೀನಾಥ ಧಾಮದ ಬಾಗಿಲು ಯಾವಾಗ ತೆರೆಯುತ್ತದೆ?
ಕೋಟ್ಯಂತರ ಹಿಂದೂಗಳ ನಂಬಿಕೆ ಮತ್ತು ಪೂಜ್ಯತೆಯ ಸಂಕೇತವಾದ ಭಗವಾನ್ ಬದರೀನಾಥ ಧಾಮದ ಬಾಗಿಲುಗಳನ್ನು 2024 ರ ಮೇ 12 ರಂದು ಬೆಳಿಗ್ಗೆ 6 ಗಂಟೆಗೆ ಬ್ರಹ್ಮ ಮುಹೂರ್ತದಲ್ಲಿ ಎಲ್ಲಾ ಭಕ್ತರಿಗೆ ತೆರೆಯಲಾಗುತ್ತದೆ. ಈ ಸಂದರ್ಭದಲ್ಲಿ, ಹೆಚ್ಚಿನ ಸಂಖ್ಯೆಯ ಭಕ್ತರು ದರ್ಶನ ಪಡೆಯಲು ಬರುತ್ತಾರೆ. ಶತಮಾನಗಳಿಂದ ನಡೆಯುತ್ತಿರುವ ಈ ಸಂಪ್ರದಾಯದ ಪ್ರಕಾರ, ಅರಮನೆಯಲ್ಲಿ ಬಾರಾಜ್ ಪುರೋಹಿತರು, ತೆಹ್ರಿ ರಾಜ ಮಹಾರಾಜ ಮನುಜ್ಯೇಂದ್ರ ಷಾ ಶುಭ ದಿನದ ಲೆಕ್ಕಾಚಾರ ಮಾಡಿದ ನಂತರ, ಬಾಗಿಲು ತೆರೆಯಲು ಸಮಯವನ್ನು ನಿರ್ಧರಿಸಲಾಗುತ್ತದೆ.
ಇದನ್ನೂ ಓದಿ: ರಥ ಸಪ್ತಮಿಯ ದಿನ ಪಾಲಿಸಬೇಕಾದ ಕೆಲವು ನಿಯಮಗಳು ಇಲ್ಲಿದೆ
ಬದರಿನಾಥ ದೇಗುಲದ ಹಿನ್ನೆಲೆ:
ವಿಷ್ಣುವಿಗೆ ಸಮರ್ಪಿತವಾದ 108 ಪ್ರಮುಖ ದೇವಸ್ಥಾನಗಳಲ್ಲಿ ಬದರಿನಾಥ ಕೂಡ ಒಂದು. ಅಲಕನಂದಾ ನದಿಯ ದಡದಲ್ಲಿ ಚಮೋಲಿ ಜಿಲ್ಲೆಯ ಗರ್ವಾಲ್ ಬೆಟ್ಟದ ಸಮೀಪ ಈ ದೇವಸ್ಥಾನವಿದೆ. ಇನ್ನು ವಿಷ್ಣು ಪುರಾಣಗಳಲ್ಲಿಯೂ ಈ ದೇವಾಲಯದ ಬಗ್ಗೆ ಉಲ್ಲೇಖಿಸಲಾಗಿದೆ. ಇಲ್ಲಿರುವ ವಿಷ್ಣುವಿನ ವಿಗ್ರಹವು ಧ್ಯಾನ ಭಂಗಿಯಲ್ಲಿದೆ. ಕೆಲವು ನಂಬಿಕೆಗಳ ಪ್ರಕಾರ ವಿಷ್ಣು ದೇವರು ಈ ಸ್ಥಳದಲ್ಲಿ ಧ್ಯಾನಕ್ಕೆ ಕುಳಿತಿದ್ದಾಗ ಅಲ್ಲಿನ ಹವಾಮಾನ ಅರಿತ ವಿಷ್ಣು ಪತ್ನಿ ದೇವಿ ಲಕ್ಷ್ಮೀಯು ಬದರಿ ಮರದ ರೂಪದಲ್ಲಿ ರಕ್ಷಣೆ ನೀಡಿದ್ದಳು ಎಂದು ನಂಬಲಾಗುತ್ತದೆ. ಲಕ್ಷ್ಮೀಯ ಭಕ್ತಿಯಿಂದ ಪ್ರಸನ್ನರಾದ ವಿಷ್ಣು ದೇವರು ಈ ಸ್ಥಳಕ್ಕೆ ಬದರಿಕಾ ಆಶ್ರಮ ಎಂದು ಹೆಸರಿಟ್ಟಿದ್ದಾಗಿ ಸ್ಥಳ ಪುರಾಣ ಹೇಳುತ್ತದೆ.
ಬದರೀನಾಥನಿಗೆ ತುಪ್ಪ ಲೇಪಿತ ಕಂಬಳಿ
ಇಲ್ಲಿ ಚಳಿಗಾಲದಲ್ಲಿ ಬದರೀನಾಥನಿಗೆ ತುಪ್ಪ ಲೇಪಿತ ಕಂಬಳಿಯನ್ನು ಹೊದಿಸಲಾಗುತ್ತದೆ. ಕೊರೆಯುವ ಚಳಿಗಾಗಿ ಈ ರೀತಿಯ ಸಂಪ್ರದಾಯವನ್ನು ಹಿಂದಿನಿಂದಲೂ ಪಾಲಿಸಿಕೊಂಡು ಬರಲಾಗಿದ್ದು ದೇವರ ಮೇಲೆ ತುಪ್ಪದ ಲೇಪನ ಮತ್ತು ಕಂಬಳಿ ಹಾಳಾಗದೇ ಇದ್ದರೆ, ಇದು ಶುಭ ಸೂಚಕ ಎಂದು ನಂಬಲಾಗುತ್ತದೆ. ಕಡು ಚಳಿಯಲ್ಲಿ ತುಪ್ಪ ಒಣಗದಿದ್ದರೆ ಅದು ಇಲ್ಲಿನ ಜನರಿಗೆ ಸಂತೋಷ ಕೊಡುತ್ತದೆ ಮತ್ತು ಇದು ದೇಶಕ್ಕೆ ಶುಭ ಸೂಚಕ ಎನ್ನುವ ನಂಬಿಕೆಯೂ ಇದೆ.
ಅಧ್ಯಾತ್ಮಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ