AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕನಸಿನಲ್ಲಿ ಮುರಿದ ಗಾಜನ್ನು ನೋಡುವುದು ಶುಭವೋ ಅಶುಭವೋ? ಈ ಕನಸು ಭವಿಷ್ಯದ ಸೂಚನೆ

ಕೆಲವೊಂದು ಕನಸುಗಳು ಭವಿಷ್ಯದ ಘಟನೆಗಳ ಸೂಚನೆಗಳಾಗಿರುತ್ತವೆ. ಆದರೆ ಅದನ್ನು ನೋಡುವ ಮತ್ತು ಅರ್ಥ ಮಾಡಿಕೊಳ್ಳುವ ರೀತಿ ಸರಿಯಾಗಿ ಇರಬೇಕಷ್ಟೇ. ನಿಮ್ಮ ಕನಸಿನಲ್ಲಿ ಮುರಿದ ಗಾಜನ್ನು ನೀವು ನೋಡಿದರೆ, ಅದು ಅನೇಕ ವಿಭಿನ್ನ ಅರ್ಥಗಳನ್ನು ಹೊಂದಿರಬಹುದು. ಅಲ್ಲದೆ ಗಾಜು ಒಡೆಯುವುದು ಕುಟುಂಬಕ್ಕೆ ಪ್ರಮುಖ ಸಮಸ್ಯೆಯಾಗಿದೆ. ಕನಸಿನಲ್ಲಿ ಮುರಿದ ಕನ್ನಡಿಯನ್ನು ನೋಡುವುದು ಏನನ್ನು ತಿಳಿಸುತ್ತದೆ ಎಂಬುದನ್ನು ತಿಳಿಯಿರಿ.

ಕನಸಿನಲ್ಲಿ ಮುರಿದ ಗಾಜನ್ನು ನೋಡುವುದು ಶುಭವೋ ಅಶುಭವೋ? ಈ ಕನಸು ಭವಿಷ್ಯದ ಸೂಚನೆ
ಸಾಂದರ್ಭಿಕ ಚಿತ್ರ
ಪ್ರೀತಿ ಭಟ್​, ಗುಣವಂತೆ
| Edited By: |

Updated on: Feb 17, 2024 | 4:29 PM

Share

ಪ್ರತಿಯೊಂದು ಕನಸಿಗೂ ಕೆಲವು ಅರ್ಥವಿದೆ, ಆ ಕನಸು ನಿಮಗೆ ಶುಭ ಅಥವಾ ಅಶುಭ ಫಲಿತಾಂಶಗಳನ್ನು ನೀಡುತ್ತದೆ. ಈ ಕೆಲವು ಸೂಚನೆಗಳ ಪ್ರಕಾರ ನಿಮ್ಮ ಭವಿಷ್ಯದಲ್ಲಿ ನೀವು ಸಾಕಷ್ಟು ಸುಧಾರಣೆಗಳನ್ನು ಮಾಡಬಹುದು ಮತ್ತು ಸಮಯಕ್ಕೆ ಸರಿಯಾಗಿ ಕೆಟ್ಟ ಆಘಾತಗಳಿಂದಾಗುವ ನಷ್ಟವನ್ನು ತಿಳಿದುಕೊಳ್ಳಬಹುದು. ಕಾರಣವಿಲ್ಲದೆಯೇ ಬರುವ ಕನಸುಗಳು ಕೆಲವೊಮ್ಮೆ ನಿಮಗೆ ಅರಿವಿಲ್ಲದರ ಬಗ್ಗೆ ಸೂಚನೆಗಳನ್ನು ನೀಡಬಹುದು. ಹಾಗಾಗಿ ಕೆಲವು ವಸ್ತುಗಳು ನಿಮ್ಮ ಕನಸಲ್ಲಿ ಬಂದರೆ ಅವುಗಳಿಗೆ ಒಂದೊಂದು ಅರ್ಥವಿರುತ್ತದೆ. ಅದೇ ರೀತಿ ಮುರಿದ ಗಾಜಿನ ಕನಸು ನಿಮಗೆ ಅನೇಕ ರೀತಿಯ ಸಂಕೇತಗಳನ್ನು ನೀಡುತ್ತದೆ. ಹಾಗಾದರೆ ಇದು ಶುಭವೋ ಅಥವಾ ಅಶುಭವೋ? ಇದು ಯಾವುದರ ಸೂಚನೆಯಾಗಿದೆ? ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

ಕನಸಿನ ವಿಜ್ಞಾನದ ಪ್ರಕಾರ, ಪ್ರತಿಯೊಂದು ಕನಸು ವಿಭಿನ್ನ ಅರ್ಥಗಳನ್ನು ಹೊಂದಿದೆ. ಈ ಎಲ್ಲಾ ಕನಸುಗಳು ಭವಿಷ್ಯದ ಘಟನೆಗಳ ಸೂಚನೆಗಳಾಗಿರುತ್ತವೆ. ಆದರೆ ಅದನ್ನು ನೋಡುವ ಮತ್ತು ಅರ್ಥ ಮಾಡಿಕೊಳ್ಳುವ ರೀತಿ ಸರಿಯಾಗಿ ಇರಬೇಕಷ್ಟೇ. ನಿಮ್ಮ ಕನಸಿನಲ್ಲಿ ಮುರಿದ ಗಾಜನ್ನು ನೀವು ನೋಡಿದರೆ, ಅದು ಅನೇಕ ವಿಭಿನ್ನ ಅರ್ಥಗಳನ್ನು ಹೊಂದಿರಬಹುದು. ಅಲ್ಲದೆ ಗಾಜು ಒಡೆಯುವುದು ಕುಟುಂಬಕ್ಕೆ ಪ್ರಮುಖ ಸಮಸ್ಯೆಯಾಗಿದೆ. ಕನಸಿನಲ್ಲಿ ಮುರಿದ ಕನ್ನಡಿಯನ್ನು ನೋಡುವುದು ಏನನ್ನು ತಿಳಿಸುತ್ತದೆ ಎಂಬುದನ್ನು ತಿಳಿಯಿರಿ.

ಕನಸಿನಲ್ಲಿ ಮುರಿದ ಗಾಜು ಅಥವಾ ಕನ್ನಡಿಯನ್ನು ನೋಡುವುದು ಶುಭವೋ, ಅಶುಭವೋ?

ಕನಸಿನಲ್ಲಿ ಮುರಿದ ಗಾಜನ್ನು ನೋಡುವುದು ಅಶುಭ ಎಂದು ಕೆಲವರು ನಂಬುತ್ತಾರೆ. ಏಕೆಂದರೆ ನಿಜವಾಗಿ ಕನ್ನಡಿ ಒಡೆದರೆ ಅದು ಅಶುಭ ಹಾಗಾಗಿ ಕನಸಿನಲ್ಲಿಯೂ ಅದೇ ರೀತಿಯಾದರೆ ಅದು ಏನೋ ಆಘಾತದ ಸೂಚನೆ ಎಂದು ತಿಳಿಯುತ್ತೇವೆ, ಆದರೆ ಅದು ನಿಜವಲ್ಲ. ಕನಸಿನಲ್ಲಿ ಮುರಿದ ಗಾಜನ್ನು ನೋಡುವುದು ಅಶುಭವಲ್ಲ ಆದರೆ ಅದನ್ನು ನೋಡುವುದು ಶುಭವೆಂದು ಕೂಡ ಪರಿಗಣಿಸಲಾಗುವುದಿಲ್ಲ. ಬದಲಾಗಿ ಕೆಲವು ಅಶುಭ ಘಟನೆಗಳು ನಿಮ್ಮ ಮನೆಯಲ್ಲಿ ನಡೆದಿದ್ದರೆ ನಿಮಗೆ ಇಂತಹ ಕನಸು ಬೀಳುವ ಸಾಧ್ಯತೆಗಳಿರುತ್ತವೆ.

ಕನಸಿನಲ್ಲಿ ಮುರಿದ ಗಾಜಿನಲ್ಲಿ ನಿಮ್ಮನ್ನೇ ನೀವು ನೋಡಿಕೊಳ್ಳುವುದು!

ರಾತ್ರಿ ನಿಮ್ಮ ಕನಸಿನಲ್ಲಿ ಮುರಿದ ಗಾಜಿನಲ್ಲಿ ನಿಮ್ಮನ್ನೇ ನೀವು ನೋಡುತ್ತಿದ್ದರೆ, ನಿಮ್ಮ ಸುತ್ತಲಿನ ಜನರ ಬಗ್ಗೆ ನೀವು ಜಾಗರೂಕರಾಗಿರಬೇಕು ಎಂದರ್ಥ. ನಿಮ್ಮ ಹತ್ತಿರದ ಯಾರಾದರೂ ನಿಮಗೆ ಮಾನಸಿಕ ಒತ್ತಡವನ್ನು ಉಂಟು ಮಾಡಬಹುದು. ನೀವು ಅಂತಹ ಜನರಿಂದ ದೂರವಿರಬೇಕು ಅಲ್ಲದೆ ನಿಮ್ಮ ವೈಯಕ್ತಿಕ ವಿಷಯಗಳನ್ನಾಗಲಿ ಅಥವಾ ದೌರ್ಬಲ್ಯಗಳನ್ನಾಗಲಿ ಯಾರೊಂದಿಗೂ ಬಹಿರಂಗಪಡಿಸಬೇಡಿ ಇದು ನಿಮ್ಮ ಜೀವನಕ್ಕೆ ಉತ್ತಮ.

ಕನಸಿನಲ್ಲಿ ಗಾಜು ಒಡೆಯುವುದರ ಅರ್ಥವೇನು?

ನಿಮ್ಮ ಕನಸಿನಲ್ಲಿ ಗಾಜು ಒಡೆಯುವುದನ್ನು ಕಾಣುವುದು ಕೆಲವು ನಿರ್ಬಂಧಗಳಿಂದ ನಿಮ್ಮನ್ನು ಮುಕ್ತಗೊಳಿಸಬೇಕಾಗಿದೆ ಎಂಬುದನ್ನು ಸೂಚಿಸುತ್ತದೆ. ಕನಸಿನ ವಿಜ್ಞಾನದ ಪ್ರಕಾರ, ಈ ಕನಸು ನಿಮ್ಮ ಆಸೆಗಳು ಮತ್ತು ಭಾವನೆಗಳನ್ನು ಹೊರಹಾಕಬೇಕು ಎಂದು ಹೇಳುತ್ತದೆ. ಅಲ್ಲದೆ ನಿಮ್ಮ ಇಚ್ಛೆಗಳನ್ನು ಗೌರವಿಸುತ್ತಾ ನೀವು ಜೀವನದಲ್ಲಿ ಮುಂದೆ ಸಾಗಲು ಪ್ರಯತ್ನಿಸಬೇಕು ಎಂಬುದನ್ನು ತಿಳಿಸುತ್ತದೆ.

ಇದನ್ನೂ ಓದಿ: ಈ ವರ್ಷ ಹೋಳಿ ಹಬ್ಬ ಯಾವಾಗ? ಇಲ್ಲಿದೆ ಮಾಹಿತಿ

ಕನಸಿನಲ್ಲಿ ಕನ್ನಡಿ ಕೈಯಿಂದ ಬೀಳುವುದರ ಅರ್ಥವೇನು?

ನಿಮ್ಮ ಕೈಯಿಂದ ಯಾವುದಾದರೂ ವಸ್ತು ಬೀಳುವಂತೆ ಅಥವಾ ನಿಮ್ಮ ಕೈಯಿಂದ ಬಿದ್ದಂತೆ ಕನಸು ಕಂಡರೆ, ಅದು ನೀವು ಉತ್ತಮ ಅವಕಾಶವನ್ನು ಕಳೆದುಕೊಳ್ಳಬಹುದಾದ ಸೂಚನೆಯಾಗಿರಬಹುದು. ನಿಮ್ಮ ಜೀವನದ ಯಾವುದಾದರೂ ಪ್ರಮುಖ ಬದಲಾವಣೆ ಸ್ಥಗಿತಗೊಳ್ಳಬಹುದು ಅಥವಾ ಕೈ ತಪ್ಪಿ ಹೋಗಬಹುದು. ಹಾಗಾಗಿ ನೀವು ಜೀವನದಲ್ಲಿ ಯಾವುದೇ ಪ್ರಮುಖ ನಿರ್ಧಾರವನ್ನು ತೆಗೆದುಕೊಳ್ಳುವಾಗ ಬಹಳ ಯೋಚಿಸಿ ನಿರ್ಧಾರ ತೆಗೆದುಕೊಳ್ಳಿ.

ಅಧ್ಯಾತ್ಮಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Follow Us
ಕೆಡಿ ಸಿನಿಮಾದಲ್ಲಿ ಇರುವ ಕೆಡಿಗಳು ಎಷ್ಟು ಜನ? ಪೂರ್ತಿ ಪಟ್ಟಿ ನೀಡಿದ ರಮೇಶ್
ಕೆಡಿ ಸಿನಿಮಾದಲ್ಲಿ ಇರುವ ಕೆಡಿಗಳು ಎಷ್ಟು ಜನ? ಪೂರ್ತಿ ಪಟ್ಟಿ ನೀಡಿದ ರಮೇಶ್
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು