ಪವಡಿಸು ಪರಮಾತ್ಮ… ಬಾಲ ರಾಮನಿಗೆ ಬೇಕು ವಿಶ್ರಾಂತಿ: ಇನ್ನು ಅಯೋಧ್ಯೆ ಮಂದಿರವನ್ನು 1 ಗಂಟೆ ಕಾಲ ಮುಚ್ಚಲಾಗುವುದು
Ayodhya Ram Temple darshan timings: ಅಯೋಧ್ಯೆ ರಾಮಮಂದಿರದ ಮುಖ್ಯ ಅರ್ಚಕರಾದ ಆಚಾರ್ಯ ಸತ್ಯೇಂದ್ರ ದಾಸ್ ಪ್ರಕಾರ, ಜನವರಿ 23 ರಿಂದ, ದೇವರನ್ನು ಪ್ರತಿ ದಿನ ಬೆಳಿಗ್ಗೆ 4 ಗಂಟೆಗೆ ಬೆಳಗಿನ ಧಾರ್ಮಿಕ ಕ್ರಿಯೆಗಳಿಗಾಗಿ ಎಬ್ಬಿಸಲಾಗುತ್ತಿತ್ತು. ಭಕ್ತಾದಿಗಳಿಗೆ ಬಾಲರಾಮನ ದರ್ಶನ ತೆರೆದುಕೊಳ್ಳುವ ಮುಂಚೆ 2 ಗಂಟೆಗೂ ಮೊದಲೇ ಮಂದಿರ ತೆರೆದುಕೊಳ್ಳುತ್ತದೆ. ಮತ್ತು ಇದು ರಾತ್ರಿ 10 ರವರೆಗೆ ತೆರೆದಿರುತ್ತದೆ. ಆದರೆ ಇನ್ನು ಮುಂದೆ ದರ್ಶನ ಸಮಯದಲ್ಲಿ ಮಹತ್ವದ ಬದಲಾವಣೆ ಮಾಡಲಾಗಿದೆ.
ಪೌರಾಣಿಕ ಮತ್ತು ಐತಿಹಾಸಿಕ ಮಹತ್ವವಾಗಿ ಅಯೋಧ್ಯೆಯ ರಾಮ ಮಂದಿರದಲ್ಲಿ ಬಾಲರಾಮ ಪ್ರಾಣಪ್ರತಿಷ್ಠಾಪನೆಯಾಗಿ ಒಂದು ತಿಂಗಳಾಗುತ್ತಾ ಬಂದಿದೆ (ಜನವರಿ 22) . ಹೀಗೆ ಮಂದಿರವನ್ನು ಸಾರ್ವಜನಿಕರಿಗೆ ತೆರೆದ ನಂತರ, ಅಯೋಧ್ಯೆಯ ರಾಮ ಮಂದಿರ ಟ್ರಸ್ಟ್ ಭಕ್ತರಿಗಾಗಿ ರಾಮ ದರ್ಶನ ಸಮಯದಲ್ಲಿ ಬದಲಾವಣೆಗಳನ್ನು ಮಾಡಿದೆ. ಇದು ನಿನ್ನೆ ಶುಕ್ರವಾರ, ಫೆಬ್ರವರಿ 16 ರಿಂದ ಜಾರಿಗೆ ಬಂದಿದೆ. ಅದರಂತೆ ಇನ್ಮುಂದೆ ಅಯೋಧ್ಯೆ ರಾಮ ಮಂದಿರವನ್ನು ಪ್ರತಿದಿನ ಮಧ್ಯಾಹ್ನ ಒಂದು ಗಂಟೆ ಕಾಲ ಮುಚ್ಚಲಾಗುತ್ತದೆ.
ಅಯೋಧ್ಯೆ ರಾಮ ಲಲ್ಲಾಗೆ ಬೇಕು ವಿಶ್ರಾಂತಿ
ಅಯೋಧ್ಯೆಯ ರಾಮಮಂದಿರದ ಮುಖ್ಯ ಅರ್ಚಕರಾದ ಆಚಾರ್ಯ ಸತ್ಯೇಂದ್ರ ದಾಸ್ ಪ್ರಕಾರ, ಜನವರಿ 23 ರಿಂದ, ದೇವರನ್ನು ಪ್ರತಿ ದಿನ ಬೆಳಿಗ್ಗೆ 4 ಗಂಟೆಗೆ ಬೆಳಗಿನ ಧಾರ್ಮಿಕ ಕ್ರಿಯೆಗಳಿಗಾಗಿ ಎಬ್ಬಿಸಲಾಗುತ್ತಾ ಬಂದಿದೆ. ಭಕ್ತಾದಿಗಳಿಗೆ ಬಾಲರಾಮನ ದರ್ಶನ ತೆರೆದುಕೊಳ್ಳುವ ಮುಂಚೆ ಸುಮಾರು ಎರಡು ಗಂಟೆಗಳಿಗೂ ಮೊದಲೇ ಮಂದಿರ ತೆರೆದುಕೊಳ್ಳುತ್ತದೆ. ಮತ್ತು ಇದು ರಾತ್ರಿ 10 ರವರೆಗೆ ತೆರೆದಿರುತ್ತದೆ. ಆದರೆ ಇನ್ನು ಮುಂದೆ ದರ್ಶನ ಸಮಯದಲ್ಲಿ ಮಹತ್ವದ ಬದಲಾವಣೆ ಮಾಡಲಾಗಿದೆ.
ಶ್ರೀ ರಾಮ ಲಲ್ಲಾ ಐದು ವರ್ಷದ ಮಗುವಾಗಿದ್ದು, ಇಷ್ಟು ಗಂಟೆಗಳ ಕಾಲ ಎಚ್ಚರವಾಗಿರಲು ಅವನು ಒತ್ತಡ ತಡೆಯಲು ಸಾಧ್ಯವಿಲ್ಲ. ಆದ್ದರಿಂದ ಬಾಲ ದೇವರಿಗೆ ಸ್ವಲ್ಪ ವಿಶ್ರಾಂತಿ ನೀಡಲು, ದೇವಾಲಯದ ಬಾಗಿಲುಗಳನ್ನು ಮುಚ್ಚಲು ಟ್ರಸ್ಟ್ ನಿರ್ಧರಿಸಿದೆ. ಮಧ್ಯಾಹ್ನ 12:30 ರಿಂದ 1:30 ರವರೆಗೆ ದೇವರು ವಿಶ್ರಾಂತಿ ಪಡೆಯಲಿದ್ದಾರೆ ಎಂದು ಪ್ರಧಾನ ಅರ್ಚಕ ಆಚಾರ್ಯ ಸತ್ಯೇಂದ್ರ ದಾಸ್ ಪಿಟಿಐ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.
ಅಯೋಧ್ಯೆ ರಾಮಮಂದಿರ ದರ್ಶನ ಸಮಯದಲ್ಲಿ ಬದಲಾವಣೆ
ಪ್ರಾಣಪ್ರತಿಷ್ಠಾಪನೆಗೆ ಮೊದಲು, ರಾಮ ದರ್ಶನ ಸಮಯವು ಬೆಳಗ್ಗೆ 7 ರಿಂದ ಸಂಜೆ 6 ರವರೆಗೆ ಇತ್ತು. ಇದರ ಮಧ್ಯೆ, ಮಧ್ಯಾಹ್ನ 1:30 ರಿಂದ 3:30 ರವರೆಗೆ ಅಂದರೆ ಎರಡು ಗಂಟೆಗಳ ಮಧ್ಯಾಹ್ನದ ವಿರಾಮ ಒಳಗೊಂಡಿತ್ತು. ಆದಾಗ್ಯೂ, ಮಹಾಮಸ್ತಕಾಭಿಷೇಕದ ನಂತರ ದೇವಾಲಯಕ್ಕೆ ಹರಿದುಬರುತ್ತಿರುವ ಭಕ್ತರ ಪ್ರವಾಹವನ್ನು ಪರಿಗಣಿಸಿ, ದೇವಾಲಯದ ಟ್ರಸ್ಟ್ ‘ದರ್ಶನ’ ಸಮಯವನ್ನು ಬೆಳಿಗ್ಗೆ 6 ರಿಂದ ರಾತ್ರಿ 10 ರವರೆಗೆ ಹೆಚ್ಚಿಸಿತ್ತು.
ರಾಮ ಮಂದಿರಕ್ಕೆ ವಾರ್ಷಿಕವಾಗಿ ಭೇಟಿ ನೀಡಲಿದ್ದಾರೆ 5 ಕೋಟಿ ಪ್ರವಾಸಿಗರು!
ರಾಮಮಂದಿರದ ಉದ್ಘಾಟನೆಯ ನಂತರದ ಮೊದಲ ಹನ್ನೆರಡು ದಿನಗಳ ಕಾಲದಲ್ಲಿ ಅಯೋಧ್ಯೆಯು 24 ಲಕ್ಷ ಭಕ್ತರನ್ನು ಸ್ವಾಗತಿಸಿತು. ಜನವರಿ 22 ರಂದು, ಪ್ರಾಣಪ್ರತಿಷ್ಠಾಪನೆ ದಿನವೇ 5 ಲಕ್ಷಕ್ಕೂ ಹೆಚ್ಚು ಸಂದರ್ಶಕರ ಭೇಟಿಯನ್ನು ಕಂಡಿತು. ಒಂದು ದಿನದ ನಂತರ, ಜನವರಿ 23 ರಂದು, ಸಾರ್ವಜನಿಕರಿಗೆ ದೇವಾಲಯದ ಬಾಗಿಲು ತೆರೆದಾಗ, ಅಂದಾಜು ಐದು ಲಕ್ಷ ಭಕ್ತರು ತಮ್ಮ ಮೊದಲ ದರ್ಶನ ಪಡೆದರು. ತದನಂತರ ಪ್ರತಿದಿನ ಮೂರು ಲಕ್ಷಕ್ಕೂ ಹೆಚ್ಚು ಜನರು ಅಯೋಧ್ಯೆಗೆ ಭೇಟಿ ನೀಡುತ್ತಾ ಬಂದಿದ್ದಾರೆ ಎಂದು ದೇವಸ್ಥಾನದ ಆಡಳಿತ ಮಂಡಳಿ ಹೇಳಿದೆ. ಇನ್ನು ಮುಂದೆ ಅಯೋಧ್ಯೆ ರಾಮ ಮಂದಿರವು ಪ್ರತಿ ವರ್ಷ ಅಂದಾಜು ಐದು ಕೋಟಿ ಪ್ರವಾಸಿಗರೊಂದಿಗೆ “ವಿಶ್ವದ ಅತ್ಯಂತ ಬೇಡಿಕೆಯ” ತಾಣವಾಗಬಹುದು ಎಂದು ವಿಶ್ಲೇಷಕರು ಹೇಳಿದ್ದಾರೆ.
Published On - 5:14 pm, Sat, 17 February 24