AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಇವರು ಡ್ರೋನ್ ಚಿಂಪಾಂಜಿ, ಭಲೇ ಬುದ್ವಂತ ಈತ   

ಬಹುಶಃ ಸೋಷಿಯಲ್ ಮೀಡಿಯಾದಲ್ಲಿ ಪಕ್ಷಿ ಮತ್ತು ಪ್ರಾಣಿ ಸಾಮ್ರಾಜ್ಯಕ್ಕೆ ಸಂಬಂಧಿಸಿದ ವಿಡಿಯೋಗಳು  ಕಾಣಸಿಗದ ದಿನವೇ ಇಲ್ಲ. ಪ್ರತಿನಿತ್ಯ ಇಂತಹ ಹಲವಾರು  ಇಂಟೆರೆಸ್ಟಿಂಗ್ ವಿಡಿಯೋಗಳು ಕಾಣಸಿಗುತ್ತವೆ. ಕೆಲವೊಂದು ದೃಶ್ಯಗಳು ಭಾವನಾತ್ಮಕವಾಗಿದ್ದರೆ, ಇನ್ನೂ ಕೆಲವು ವಿಡಿಯೋಗಳು ಸಖತ್ ಫನ್ನಿಯಾಗಿರುತ್ತವೆ. ಇದೀಗ ಅಂತಹದೊಂದು ಹಾಸ್ಯಮಯ ವಿಡಿಯೋ ಹರಿದಾಡುತ್ತಿದ್ದು, ಚಿಂಪಾಂಜಿಯೊಂದು ಮನುಷ್ಯರಿಗಿಂತ ನಾನೇನು ಕಮ್ಮಿಯಿಲ್ಲ ಎನ್ನುತ್ತಾ ಸ್ಟೈಲ್ ಆಗಿ ಡ್ರೋನ್ ಹಾರಿಸಿದೆ. 

Viral Video: ಇವರು ಡ್ರೋನ್ ಚಿಂಪಾಂಜಿ, ಭಲೇ ಬುದ್ವಂತ ಈತ   
ಮಾಲಾಶ್ರೀ ಅಂಚನ್​
| Edited By: |

Updated on: Mar 09, 2024 | 11:52 AM

Share

ಕೋತಿಗಳು, ಚಿಂಪಾಂಜಿಗಳ ವರ್ತನೆಗಳು ಮನುಷ್ಯರನ್ನೇ ಹೋಲುತ್ತವೆ.  ಮನುಷ್ಯ ಮತ್ತು ಚಿಂಪಾಂಜಿಗಳ ನಡುವೆ ಹಲವಾರು ಸಾಮ್ಯತೆಗಳಿವೆ ಎಂಬುದನ್ನು ಕೆಲವೊಂದು ಅಧ್ಯಯನಗಳೂ ಧೃಡಪಡಿಸಿವೆ. ತುಂಬಾನೇ ಬುದ್ಧಿವಂತ ಪ್ರಾಣಿಗಳಾಗಿರುವ ಚಿಂಪಾಂಜಿಗಳು ನಮ್ಮಂತೆಯೇ ಭಾವನೆಗಳನ್ನು ವ್ಯಕ್ತಪಡಿಸುವುದರ ಜೊತೆಗೆ ಅವುಗಳು ಮಾನವರಂತೆಯೇ ತರ್ಲೆ ತಮಾಷೆಗಳನ್ನು ಸಹ ಮಾಡುತ್ತವೆ. ಇವುಗಳ ಬುದ್ಧಿವಂತಿಕೆ ಮತ್ತು ತರ್ಲೆ ತಮಾಷೆಯ ಕುರಿತ ಹಲವಾರು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಆಗಾಗ್ಗೆ ಕಾಣಸಿಗುತ್ತಿರುತ್ತವೆ. ಒಮ್ಮೊಮ್ಮೆ ಇವುಗಳು ತೋರುವ ಬುದ್ಧಿವಂತಿಕೆ ನಿಜಕ್ಕೂ ಅಚ್ಚರಿಯನ್ನು ಮೂಡಿಸುತ್ತವೆ. ಇದೀಗ ಅಂತಹದೊಂದು ವಿಡಿಯೋ ವೈರಲ್ ಆಗಿದ್ದು, ಚಿಂಪಾಂಜಿಯೊಂದು ಮನುಷ್ಯರಿಗಿಂತ ನಾನೇನು ಕಮ್ಮಿಯಿಲ್ಲ ಎನ್ನುತ್ತಾ ಸ್ಟೈಲ್ ಆಗಿ ಡ್ರೋನ್ ಹಾರಿಸಿದೆ.

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ಡ್ರೋನ್ ಹಾರಿಸಿದ ಚಿಂಪಾಂಜಿಯ ಬುದ್ಧಿವಂತಿಕೆಯನ್ನು ಕಂಡು ನೋಡುಗರು ಶಾಕ್ ಆಗಿದ್ದಾರೆ. @TheFigen_   ಎಂಬ X ಖಾತೆಯಲ್ಲಿ ಈ ವೈರಲ್ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ.

ವೈರಲ್​​​​​ ವಿಡಿಯೋ ಇಲ್ಲಿದೆ ನೋಡಿ:

ವೈರಲ್ ವಿಡಿಯೋದಲ್ಲಿ ಚಿಂಪಾಂಜಿಗಳೆರಡು ಡ್ರೋನ್ ಹಾರಿಸುತ್ತಾ ಖುಷಿ ಪಡುತ್ತಿರುವ ದೃಶ್ಯವನ್ನು  ಕಾಣಬಹುದು. ಅದರಲ್ಲಿ ಒಂದು ಬುದ್ಧಿವಂತ ಚಿಂಪಾಂಜಿಯೂ ಏನು ಈ ಮನುಷ್ಯರಿಗೆ ಮಾತ್ರನಾ ಹೊಸ ಹೊಸ ಟೆಕ್ನಾಲಜಿಯ ಬಗ್ಗೆ ಗೊತ್ತಿರೋದು, ನಾನು ಕೂಡಾ ಬುದ್ಧಿವಂತ, ನೋಡು ನೋಡು ನಾನ್ ಅವರಿಗಿಂತ ಏನೂ ಕಮ್ಮಿಯಿಲ್ಲ ಎನ್ನುತ್ತಾ ಕೈಯಲ್ಲಿ ರಿಮೋಟ್ ಇಟ್ಟುಕೊಟ್ಟು ಸ್ಟೈಲ್ ಆಗಿ ಡ್ರೋನ್ ಹಾರಿಸಿದೆ.

ಇದನ್ನೂ ಓದಿ: 27 ವರ್ಷದ ಯುವಕನ ಸಾವಿಗೆ ಕಾರಣವಾದ ಬಟರ್ ಚಿಕನ್

ಮಾರ್ಚ್ 03 ರಂದು ಹಂಚಿಕೊಳ್ಳಲಾದ ಈ ವಿಡಿಯೋ ಆರು ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್ಗಳನ್ನು ಪಡೆದುಕೊಂಡಿದೆ.  ಒಬ್ಬ ಬಳಕೆದಾರರು ʼ10000 ವರ್ಷಗಳ ನಂತರ ಈ ಚಿಂಪಾಂಜಿ ಮಾನವರಂತಾಗಿರುತ್ತವೆʼ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬ ಬಳಕೆದಾರರು ʼಅಬ್ಬಬ್ಬಾ ಬಲು ಬುದ್ಧಿವಂತ ಪ್ರಾಣಿಗಳಿವುʼ ಎಂಬ ಕಾಮೆಂಟ್ ಬರೆದುಕೊಂಡಿದ್ದಾರೆ.  ಮತ್ತೊಬ್ಬ ಬಳಕೆದಾರರು ʼಚಿಂಪಾಂಜಿ ಡ್ರೋನ್ ಶಾಟ್ ತೆಗೆದುಕೊಳ್ಳುತ್ತಿದೆʼ ಎಂದು ತಮಾಷೆ ಮಾಡಿದ್ದಾರೆ. ಇನ್ನೂ ಅನೇಕರು ಈ ದೃಶ್ಯವಂತೂ ನೋಡಲು ತುಂಬಾನೇ ಫನ್ನಿಯಾಗಿದೆ ಅಂತ ಹೇಳಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ