AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

27 ವರ್ಷದ ಯುವಕನ ಸಾವಿಗೆ ಕಾರಣವಾದ ಬಟರ್ ಚಿಕನ್

ಒಂದೇ ಒಂದು ಪೀಸ್​​ ಬಟರ್​​​ ಚಿಕನ್​​​ ತಿಂದ ಕೆಲ ಕ್ಷಣದಲ್ಲೇ ಇದ್ದಕ್ಕಿಂದಂತೆ ಯುವಕ ಕುಸಿದು ಬಿದ್ದಿದ್ದಾನೆ. ತಕ್ಷಣ ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದರೂ ಕೂಡ ಚಿಕಿತ್ಸೆ ಫಲಕಾರಿಯಾಗದೇ ಯುವಕ ಸಾವನ್ನಪ್ಪಿದ್ದಾನೆ. ಈ ಘಟನೆ ಇಂಗ್ಲೆಂಡ್‌ನ ಮ್ಯಾಂಚೆಸ್ಟರ್‌ನಲ್ಲಿ ನಡೆದಿದೆ.

27 ವರ್ಷದ ಯುವಕನ ಸಾವಿಗೆ ಕಾರಣವಾದ ಬಟರ್ ಚಿಕನ್
Butter chicken kills 27 year old manImage Credit source: Pinterest
ಅಕ್ಷತಾ ವರ್ಕಾಡಿ
|

Updated on: Mar 09, 2024 | 10:45 AM

Share

ಮ್ಯಾಂಚೆಸ್ಟರ್‌ನ ಹೋಟೆಲ್​​​ ಒಂದರಲ್ಲಿ ಜೋಸೆಫ್ ಹಿಗ್ಗಿನ್ಸನ್(27) ಬಟರ್​​ ಚಿಕನ್​​ ಖರೀದಿಸಿ ಕೇವಲ ಒಂದೇ ಒಂದು ಪೀಸ್​​ ಬಟರ್​​​ ಚಿಕನ್ ತಿಂದಿದ್ದಾನೆ. ಅಷ್ಟರಲ್ಲೇ ಯುವಕನ ಆರೋಗ್ಯ ಏರುಪೇರಾಗಿದೆ. ತಕ್ಷಣ ಆತನನ್ನು ಆಸ್ಪತ್ರೆಗೆ ಸೇರಿಸಿದ್ದರೂ ಕೂಡ ಕುಸಿದು ಬಿದ್ದ ಬೆನ್ನಲ್ಲೇ ಹೃದಯಾಘಾತವಾಗಿದ್ದು ಸಾವನ್ನಪ್ಪಿರುವುದಾಗಿ ವೈದ್ಯರು ಘೋಷಿಸಿದ್ದಾರೆ.

ಹಿಂದಿನಿಂದಲೂ ಅನಾಫಿಲ್ಯಾಕ್ಸಿಸ್ ಎಂದು ಕರೆಯಲ್ಪಡುವ ಅಲರ್ಜಿಯ ಸಮಸ್ಯೆಯಿಂದ ಬಳಲುತ್ತಿದ್ದ ಜೋಸೆಫ್. ಈತನಿಗೆ ವೈದ್ಯರು ಬಾದಾಮಿ ಸೇರಿದಂತೆ ಕೆಲ ಧಾನ್ಯಗಳನ್ನು ತಿನ್ನದಂತೆ ಎಚ್ಚರಿಕೆ ನೀಡಿದ್ದರು. ವೈದ್ಯರ ಮಾತನ್ನು ನಿರ್ಲಕ್ಷ್ಯಿಸಿ ಈ ಹಿಂದೆ ತಿಂದಿದ್ದರೂ ಕೂಡ ಮಾರಣಾಂತಿಕ ಸಮಸ್ಯೆ ಎದುರಾಗಿರಲಿಲ್ಲ. ಅದರಂತೆ ಆತ ಬಟನ್​​ ಚಿಕನ್​​ ಖರೀದಿಸಿ ತಿಂದಿದ್ದಾನೆ. ಬಟರ್​ ಚಿಕನ್​​​ನಲ್ಲಿ ಗೋಡಂಬಿ ಕೆಲ ನಟ್ಸ್​​​ ಗಳನ್ನು ಹಾಕಿದ್ದರೂ ಕೂಡ ಈತ ತಿಂದಿರುವುದು ಆತನ ಪ್ರಾಣಕ್ಕೆ ಕಂಟಕವಾಗಿದೆ.

ಇದನ್ನೂ ಓದಿ: ಇಲ್ಲಿ ಪುರುಷರು ಕಡ್ಡಾಯವಾಗಿ ಎರಡು ಮದುವೆಯಾಗಲೇಬೇಕು! ʼನೋʼ ಅಂದ್ರೆ ಕಠಿಣ ಶಿಕ್ಷೆ

ಒಂದೇ ಒಂದು ಪೀಸ್​​ ಬಟರ್​​​ ಚಿಕನ್ ತಿನ್ನುತ್ತಿದ್ದಂತೆ ಅದರಲ್ಲಿ ಹಾಕಲಾಗಿರುವ ನಟ್ಸ್​​ಗಳು ಆತನ ಅಲರ್ಜಿ ಸಮಸ್ಯೆಯನ್ನು ಉಲ್ಬಣಗೊಳಿಸಿದೆ. ಕೆಲ ಕ್ಷಣದಲ್ಲೇ ಕುಸಿದು ಬಿದ್ದಿದ್ದು, ಕುಸಿದು ಬಿದ್ದ ಬೆನ್ನಲ್ಲೇ ಹೃದಯಾಘಾತವಾಗಿದೆ. ಜೋಸೆಫ್ ಅವರ ಅಕಾಲಿಕ ಮರಣದಿಂದ ಕಂಗಾಲಾದ ಕುಟುಂಬ, ಆತನ ಅಂಗಾಗ ದಾನ ಮಾಡಿ ಮತ್ತೊಬ್ಬರ ಬದುಕಿಗೆ ಬೆಳಕಾಗಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ