ಜಪಾನ್ನಲ್ಲಿ ಸಾಯಿ ಪಲ್ಲವಿ ಪಾರ್ಟಿ, ವಿಡಿಯೋ ವೈರಲ್
Sai Pallavi: ನಟಿ ಸಾಯಿ ಪಲ್ಲವಿ ಜಪಾನ್ನಲ್ಲಿ ಪಾರ್ಟಿ ಮಾಡುತ್ತಿರುವ ವಿಡಿಯೋ ಸಖತ್ ವೈರಲ್ ಆಗಿದೆ. ಪಾರ್ಟಿಯಲ್ಲಿ ಬಿಂದಾಸ್ ಆಗಿ ಡ್ಯಾನ್ಸ್ ಮಾಡಿದ್ದಾರೆ ಸಾಯಿ ಪಲ್ಲವಿ.
ನಟಿ ಸಾಯಿ ಪಲ್ಲವಿ (Sai Pallavi) ದಕ್ಷಿಣ ಭಾರತದ ಅತ್ಯಂತ ಜನಪ್ರಿಯ ನಟಿ. ಸಾಯಿ ಪಲ್ಲವಿಯ ನಟನೆ, ನೃತ್ಯದ ಜೊತೆಗೆ ಅವರ ಅದ್ಭುತ ವ್ಯಕ್ತಿತ್ವಕ್ಕೂ ಲಕ್ಷಾಂತರ ಅಭಿಮಾನಿಗಳಿದ್ದಾರೆ. ಇದೀಗ ನಟಿ ಸಾಯಿ ಪಲ್ಲವಿ ಬಾಲಿವುಡ್ಗೆ ಸಹ ಕಾಲಿಟ್ಟಿದ್ದಾರೆ. ಆಮಿರ್ ಖಾನ್ ಪುತ್ರ ನಟಿಸುತ್ತಿರುವ ‘ಏಕ್ ದಿನ್’ ಸಿನಿಮಾದ ಶೂಟಿಂಗ್ಗಾಗಿ ಜಪಾನ್ಗೆ ತೆರಳಿದ್ದರು ನಟಿ. ಇದೀಗ ಜಪಾನ್ನ ಪಬ್ ಒಂದರಲ್ಲಿ ಆಮಿರ್ ಖಾನ್ ಪುತ್ರ ಹಾಗು ಇತರರೊಟ್ಟಿಗೆ ಪಾರ್ಟಿ ಮಾಡಿ ಕುಣಿದು ಕುಪ್ಪಳಿಸಿದ್ದಾರೆ ಸಾಯಿ ಪಲ್ಲವಿ. ಪಾರ್ಟಿಯ ವಿಡಿಯೋ ತುಣುಕು ವೈರಲ್ ಆಗಿದೆ.
ಜಪಾನ್ನಲ್ಲಿ ಕಳೆದ ಕೆಲ ದಿನಗಳಿಂದಲೂ ಸಿನಿಮಾ ಚಿತ್ರೀಕರಣದಲ್ಲಿದ್ದ ತಂಡ ಇತ್ತೀಚೆಗಷ್ಟೆ ಸಿನಿಮಾದ ಶೂಟಿಂಗ್ ಮುಗಿಸಿದ್ದು, ಶೂಟಿಂಗ್ ಸಾಂಗವಾಗಿ ಮುಗಿದ ಖುಷಿಯಲ್ಲಿ ಪಾರ್ಟಿ ಮಾಡಿದೆ. ಪಾರ್ಟಿಯಲ್ಲಿ ನಟಿ ಸಾಯಿ ಪಲ್ಲವಿ ಚಿತ್ರತಂಡದ ಜೊತೆಗೆ ಡ್ಯಾನ್ಸ್ ಮಾಡಿದ್ದಾರೆ. ಸಾಯಿ ಪಲ್ಲವಿ ಖುಷಿಯಿಂದ ಡ್ಯಾನ್ಸ್ ಮಾಡುತ್ತಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ಸಾಯಿ ಪಲ್ಲವಿ ಖುಷಿಯಿಂದ ಬಿಂದಾಸ್ ಆಗಿ ಚಿತ್ರತಂಡದ ಡ್ಯಾನ್ಸ್ ಮಾಡಿದ್ದಾರೆ. ವಿಡಿಯೋ ನೋಡಿದ ಹಲವರು ಸಾಯಿ ಪಲ್ಲವಿಯ ಡ್ಯಾನ್ಸ್ ಮೆಚ್ಚಿಕೊಂಡಿದ್ದಾರೆ.
Actress Sai Pallavi dances at “EK din” Japan Wrap up schedule party..! #SaiPallavi #Japan #Aamirkhan #Ekdin #Japanschedule #wrapupparty #junaidkhan pic.twitter.com/AAtZCOxnRS
— Pooja Suniramana (@PoojaSuniramana) March 9, 2024
ಕಳೆದ 50 ದಿನಗಳಿಂದಲೂ ಚಿತ್ರತಂಡ ಜಪಾನ್ನಲ್ಲಿ ಚಿತ್ರೀಕರಣ ಮಾಡಿದೆ. ಜಪಾನ್ ನಲ್ಲಿ ಚಿತ್ರೀಕರಣದ ವೇಳೆ ಚಿತ್ರತಂಡ ಹಲವು ಸಮಸ್ಯೆಗಳನ್ನು ಎದುರಿಸಿತಂತೆ. ಚಿತ್ರೀಕರಣದ ಸಮಯದಲ್ಲಿ ಸತತ ಹಿಮವರ್ಷ ಸಹ ಆಗಿದೆ. ಇನ್ನೂ ಹಲವು ಅಡೆ-ತಡೆಗಳ ನಡುವೆ ಪ್ರತಿದಿನ ಸುಮಾಋಉ 15-16 ಗಂಟೆಗಳ ಕಾಲ ಚಿತ್ರೀಕರಣವನ್ನು ಮಾಡಿದೆ ಚಿತ್ರತಂಡ. ಬಹಳ ಕಷ್ಟಪಟ್ಟು ಸಿನಿಮಾದ ಚಿತ್ರೀಕರಣ ಮಾಡಿ ಮುಗಿಸಿದ ಕಾರಣ ಇಡೀ ಚಿತ್ರತಂಡ ಒಟ್ಟಿಗೆ ಪಾರ್ಟಿ ಮಾಡಿದೆ.
ಇದನ್ನೂ ಓದಿ:Hair Care: ನಟಿ ಸಾಯಿ ಪಲ್ಲವಿಯ ಉದ್ದ ಕೂದಲಿನ ರಹಸ್ಯವೇನು?
ಜಪಾನ್ನ ಸಪ್ಪೋರೊ ಹೆಸರಿನ ಅತ್ಯಂತ ಸುಂದರವಾದ ನಗರದಲ್ಲಿ ಚಿತ್ರತಂಡ ಶೂಟಿಂಗ್ ಮಾಡಿದೆ. ಈ ವರೆಗೆ ಯಾವುದೇ ಭಾರತೀಯ ಸಿನಿಮಾಗಳು ಈ ಸುಂದರವಾದ ನಗರದಲ್ಲಿ ಚಿತ್ರೀಕರಣ ಮಾಡಿಲ್ಲವಂತೆ. ‘ಏಕ್ ದಿನ್’ ಸಿನಿಮಾ ಅಪ್ಪಟ ಪ್ರೇಮಕಥೆಯಾಗಿದ್ದು, ಸಾಯಿ ಪಲ್ಲವಿ ನಾಯಕಿಯಾಗಿ, ಜುನೈದ್ ಖಾನ್ ನಾಯಕನಾಗಿ ನಟಿಸುತ್ತಿದ್ದಾರೆ.
ಇನ್ನುಳಿದಂತೆ ಸಾಯಿ ಪಲ್ಲವಿ ಹಲವು ಸಿನಿಮಾಗಳಲ್ಲಿ ತೊಡಗಿಸಿಕೊಂಡಿದ್ದಾರೆ. ನಾಗ ಚೈತನ್ಯ ಜೊತೆಗೆ ‘ತಂಡೇಲ್’ ಹೆಸರಿನ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾದ ಚಿತ್ರೀಕರಣ ಇತ್ತೀಚೆಗಷ್ಟೆ ಉಡುಪಿ, ಮಂಗಳೂರುಗಳಲ್ಲಿ ನಡೆಯಿತು. ಈ ವೇಳೆ ಉಡುಪಿ ಕೃಷ್ಣಮಠಕ್ಕೆ ಸಾಯಿ ಪಲ್ಲವಿ ಭೇಟಿ ನೀಡಿದ್ದರು. ತಮಿಳಿನ ‘ಅಮರನ್’ ಹೆಸರಿನ ಸಿನಿಮಾದಲ್ಲಿ ಶಿವಕಾರ್ತಿಕೇಯನ್ ಜೊತೆಗೆ ಸಾಯಿ ಪಲ್ಲವಿ ನಟಿಸುತ್ತಿದ್ದಾರೆ. ಇದರ ಜೊತೆಗೆ ಕಮಲ್ ಹಾಸನ್ ಕಥೆ ಬರೆದು ಬಂಡವಾಳ ಹೂಡಿರುವ ಹೊಸ ಸಿನಿಮಾದಲ್ಲಿಯೂ ಸಾಯಿ ಪಲ್ಲವಿ ನಟಿಸಲಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 6:31 pm, Sat, 9 March 24