2 ದಿನಕ್ಕೆ 34 ಕೋಟಿ ರೂಪಾಯಿ ಗಳಿಸಿದ ‘ಶೈತಾನ್’; 3ನೇ ದಿನ ಮ್ಯಾಜಿಕ್ ನಿರೀಕ್ಷೆ
‘ಶೈತಾನ್’ ಸಿನಿಮಾ ಉತ್ತಮ ಓಪನಿಂಗ್ ಪಡೆದುಕೊಂಡಿದೆ. ಶುಕ್ರವಾರ ಮತ್ತು ಶನಿವಾರ ಈ ಸಿನಿಮಾ ಒಳ್ಳೆಯ ಕಲೆಕ್ಷನ್ ಮಾಡಿದೆ. ಮೂರನೇ ದಿನ ಕೂಡ ಗಳಿಕೆಯಲ್ಲಿ ಏರಿಕೆ ಕಾಣುವ ಸಾಧ್ಯತೆ ದಟ್ಟವಾಗಿದೆ. ಬಾಕ್ಸ್ ಆಫೀಸ್ನಲ್ಲಿ ‘ಶೈತಾನ್’ ಸಿನಿಮಾ ಆರ್ಭಟಿಸುತ್ತಿದೆ. ಈ ಚಿತ್ರದ ಮೂಲಕ ಅಜಯ್ ದೇವಗನ್ ಅವರಿಗೆ ಈ ವರ್ಷದ ಮೊದಲ ಗೆಲುವು ಸಿಕ್ಕಂತಾಗಿದೆ.
ನಟ ಅಜಯ್ ದೇವಗನ್ (Ajay Devgn) ಅವರು ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. 2024ರ ವರ್ಷ ಅವರಿಗೆ ಆಶಾದಾಯಕ ಆಗಿರಲಿದೆ. ಇತ್ತೀಚೆಗೆ ತೆರೆಕಂಡ ‘ಶೈತಾನ್’ (Shaitan) ಸಿನಿಮಾದಲ್ಲಿ ಅವರು ಪ್ರಮುಖ ಪಾತ್ರ ಮಾಡಿದ್ದಾರೆ. ಅಜಯ್ ದೇವಗನ್ ಎದುರು ವಿಲನ್ ಆಗಿ ಆರ್. ಮಾಧವನ್ ಅಬ್ಬರಿಸಿದ್ದಾರೆ. ಅಜಯ್ ದೇವಗನ್ ಪತ್ನಿಯ ಪಾತ್ರದಲ್ಲಿ ಜ್ಯೋತಿಕಾ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾ ಸೂಪರ್ ಹಿಟ್ ಆಗಿದೆ. ಮೊದಲ ಎರಡು ದಿನ ‘ಶೈತಾನ್’ ಚಿತ್ರಕ್ಕೆ ಉತ್ತಮ ಕಲೆಕ್ಷನ್ (Shaitan Box Office Collection) ಆಗಿದೆ. 3ನೇ ದಿನ ಒಂದು ಮ್ಯಾಜಿಕ್ ಆಗುವ ನಿರೀಕ್ಷೆ ಇದೆ. ಬೆಚ್ಚಿ ಬೀಳಿಸುವಂತಹ ಹಾರರ್ ಕಥಾಹಂದರ ಇರುವ ‘ಶೈತಾನ್’ ಸಿನಿಮಾವನ್ನು ಪ್ರೇಕ್ಷಕರು ಮೆಚ್ಚಿಕೊಂಡಿದ್ದಾರೆ.
ಶಿವರಾತ್ರಿ ಹಬ್ಬದ ದಿನ (ಮಾರ್ಚ್ 8) ‘ಶೈತಾನ್’ ಸಿನಿಮಾ ಬಿಡುಗಡೆ ಆಯಿತು. ಹಬ್ಬದ ದಿನವಾದ್ದರಿಂದ ಹಲವು ಕಡೆಗಳಲ್ಲಿ ರಜೆ ಇತ್ತು. ಆದ್ದರಿಂದ ಸಿನಿಮಾದ ಕಲೆಕ್ಷನ್ಗೆ ಅನುಕೂಲ ಆಯಿತು. ಮೊದಲ ದಿನ ಈ ಚಿತ್ರ 15.21 ಕೋಟಿ ರೂಪಾಯಿ ಗಳಿಸಿತು. ಎರಡನೇ ದಿನವಾದ ಶನಿವಾರ ವೀಕೆಂಡ್ ಆದ್ದರಿಂದ ಭರ್ಜರಿ ಕಲೆಕ್ಷನ್ ಆಯಿತು. ಅಂದು (ಮಾರ್ಚ್ 09) ‘ಶೈತಾನ್’ ಸಿನಿಮಾ ಬರೋಬ್ಬರಿ 19.18 ಕೋಟಿ ರೂಪಾಯಿ ಗಳಿಸಿತು.
ಇದನ್ನೂ ಓದಿ: ‘ನನಗೂ ದೆವ್ವದ ಅನುಭವ ಆಗಿದೆ, ಆದರೆ ನಾನು ಮಾತಾಡಲ್ಲ’: ಅಜಯ್ ದೇವಗನ್
ಮೂರನೇ ದಿನವಾರ ಮಾರ್ಚ್ 10ರಂದು ಭಾನುವಾರ ಈ ಸಿನಿಮಾ 25 ಕೋಟಿ ರೂಪಾಯಿಗೂ ಹೆಚ್ಚು ಕಲೆಕ್ಷನ್ ಮಾಡುವ ನಿರೀಕ್ಷೆ ಇದೆ. ಅನೇಕ ಕಡೆಗಳಲ್ಲಿ ಹೌಸ್ಫುಲ್ ಪ್ರದರ್ಶನ ಕಾಣುತ್ತಿದೆ. ಈ ಸಿನಿಮಾಗೆ ಪ್ರೇಕ್ಷಕರಿಂದ ಬಾಯಿ ಮಾತಿನ ಪ್ರಚಾರ ಚೆನ್ನಾಗಿ ಸಿಗುತ್ತಿದೆ. ಆದ್ದರಿಂದ ಭಾನುವಾರ ಬಾಕ್ಸ್ ಆಫೀಸ್ನಲ್ಲಿ ಮ್ಯಾಜಿಕ್ ಆಗಬಹುದು ಎಂದು ನಿರೀಕ್ಷಿಸಲಾಗಿದೆ. ಸಿನಿಮಾದ ಕಲೆಕ್ಷನ್ ರಿಪೋರ್ಟ್ ಬಗ್ಗೆ ಬಾಕ್ಸ್ ಆಫೀಸ್ ವಿಶ್ಲೇಷಕ ತರಣ್ ಆದರ್ಶ್ ಅವರು ಮಾಹಿತಿ ಹಂಚಿಕೊಂಡಿದ್ದಾರೆ.
HALF-CENTURY *TODAY*… #Shaitaan goes WILD on Day 2… After a partial holiday [#MahaShivratri] on Day 1 – which added a good chunk of revenue to its overall total – the SOLID GROWTH on Day 2 places the film on the WINNING TRACK… Fri 15.21 cr, Sat 19.18 cr. Total: ₹ 34.39 cr.… pic.twitter.com/3rQHhSuH19
— taran adarsh (@taran_adarsh) March 10, 2024
ಯುವತಿಯೊಬ್ಬಳನ್ನು ವಶೀಕರಣ ಮಾಡುವ ಕಥೆ ಇರುವ ‘ಶೈತಾನ್’ ಸಿನಿಮಾದಲ್ಲಿ ಅಜಯ್ ದೇವಗನ್ ಅವರ ಪುತ್ರಿಯ ಪಾತ್ರದಲ್ಲಿ ಜಾನಕಿ ಬೋಡಿವಾಲ ನಟಿಸಿದ್ದಾರೆ. ಅವರ ಪಾತ್ರ ಈ ಸಿನಿಮಾದಲ್ಲಿ ಸಖತ್ ಹೈಲೈಟ್ ಆಗಿದೆ. ಸಿನಿಮಾ ನೋಡಿದ ಎಲ್ಲರೂ ಜಾನಕಿ ಬೋಡಿವಾಲಾ ಅವರ ನಟನೆಯ ಬಗ್ಗೆ ಮಾತನಾಡುತ್ತಿದ್ದಾರೆ. ‘ದೃಶ್ಯಂ’ ರೀತಿಯೇ ‘ಶೈತಾನ್’ ಸಿನಿಮಾ ಕೂಡ ಫ್ಯಾಮಿಲಿ ಪ್ರೇಕ್ಷಕರನ್ನು ಸೆಳೆದುಕೊಳ್ಳುತ್ತಿದೆ. ಆರ್. ಮಾಧವನ್ ಮತ್ತು ಜ್ಯೋತಿಕಾ ಅವರ ಅಭಿನಯಕ್ಕೆ ಮೆಚ್ಚುಗೆ ಸಿಕ್ಕಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.