AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಯುಎ’ ಪ್ರಮಾಣಪತ್ರ ಪಡೆದ ‘ಶೈತಾನ್​’; ಅಜಯ್​ ದೇವಗನ್​ ಸಿನಿಮಾಗೆ ಗೆಲುವು ಖಚಿತ

‘ಶೈತಾನ್​’ ಸಿನಿಮಾಗೆ ‘ಯು/ಎ’ ಪ್ರಮಾಣಪತ್ರ ನೀಡಲಾಗಿದೆ. ಜಾನಕಿ ಬೋಡಿವಾಲಾ, ಅಜಯ್​ ದೇವಗನ್​, ಜ್ಯೋತಿಕಾ, ಆರ್​. ಮಾಧವನ್​ ನಟನೆಯ ಈ ಸಿನಿಮಾ ಮಾ.8ರಂದು ರಿಲೀಸ್​ ಆಗಲಿದೆ. ಕೆಲವು ದೃಶ್ಯಗಳನ್ನು ಕಟ್​ ಮಾಡುವಂತೆ ಸೆನ್ಸಾರ್​ ಮಂಡಳಿ ಸೂಚಿಸಿದೆ. ಸಿನಿಮಾದ ಒಟ್ಟು ಅವಧಿ 132 ನಿಮಿಷ ಇರಲಿದೆ. ಬಿಡುಗಡೆಗೂ ಮುನ್ನವೇ ಈ ಸಿನಿಮಾದ ಹೈಪ್​ ಹೆಚ್ಚಿದೆ.

‘ಯುಎ’ ಪ್ರಮಾಣಪತ್ರ ಪಡೆದ ‘ಶೈತಾನ್​’; ಅಜಯ್​ ದೇವಗನ್​ ಸಿನಿಮಾಗೆ ಗೆಲುವು ಖಚಿತ
ಆರ್. ಮಾಧವನ್​, ಅಜಯ್​ ದೇವಗನ್​, ಜ್ಯೋತಿಕಾ
ಮದನ್​ ಕುಮಾರ್​
|

Updated on: Mar 05, 2024 | 5:07 PM

Share

ಅತಿಯಾದ ಹಾರರ್​ ಇದ್ದರೆ ಅಂಥ ಸಿನಿಮಾಗಳಿಗೆ ಸೆನ್ಸಾರ್​ ಮಂಡಳಿಯವರು ‘ಎ’ ಪ್ರಮಾಣಪತ್ರ ನೀಡಿದ ಉದಾಹರಣೆ ಸಾಕಷ್ಟಿದೆ. ಅಂಥ ಸಿನಿಮಾಗಳನ್ನು 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಪ್ರೇಕ್ಷಕರು ನೋಡುವಂತಿಲ್ಲ. ಆದರೆ ಈಗ ಅಜಯ್​ ದೇವಗನ್ (Ajay Devgn)​ ನಟನೆಯ ‘ಶೈತಾನ್​’ ಸಿನಿಮಾಗೆ ‘ಯು/ಎ’ ಪ್ರಮಾಣಪತ್ರ ಸಿಕ್ಕಿದೆ. ಅಂದರೆ, 12 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಕೂಡ ಪಾಲಕರ ಮಾರ್ಗದರ್ಶನದಲ್ಲಿ ಈ ಸಿನಿಮಾವನ್ನು ನೋಡಬಹುದು. ಹಾಗಾಗಿ (Shaitaan) ‘ಶೈತಾನ್​’ ಸಿನಿಮಾ ನೋಡಲು ಕುಟುಂಬ ಸಮೇತರಾಗಿ ಚಿತ್ರಮಂದಿರಕ್ಕೆ ಬರುವ ಪ್ರೇಕ್ಷಕರ ಸಂಖ್ಯೆ ಹೆಚ್ಚಬಹುದು ಎಂದು ನಿರೀಕ್ಷಿಸಲಾಗಿದೆ.

‘ಶೈತಾನ್​’ ಸಿನಿಮಾದಲ್ಲಿ ಆರ್​. ಮಾಧವನ್​, ಜ್ಯೋತಿಕಾ, ಅಜಯ್​ ದೇವಗನ್​ ಹಾಗೂ ಜಾನಕಿ ಬೋಡಿವಾಲಾ ಅವರು ಪ್ರಮುಖ ಪಾತ್ರಗಳನ್ನು ಮಾಡಿದ್ದಾರೆ. ಈ ಸಿನಿಮಾದ ಟ್ರೇಲರ್​ ಬಿಡುಗಡೆ ಆದ ಬಳಿಕ ದೊಡ್ಡ ಮಟ್ಟದ ಹೈಪ್​ ಸೃಷ್ಟಿ ಆಗಿದೆ. ಮಾರ್ಚ್​ 8ಕ್ಕೆ ಈ ಸಿನಿಮಾ ಬಿಡುಗಡೆ ಆಗಲಿದೆ. ಮೊದಲ ದಿನವೇ ಈ ಚಿತ್ರ ದೊಡ್ಡ ಮಟ್ಟದ ಓಪನಿಂಗ್​ ಪಡೆದುಕೊಳ್ಳಲಿದೆ ಎಂದು ಬಾಕ್ಸ್​ ಆಫೀಸ್​ ತಜ್ಞರು ಊಹಿಸಿದ್ದಾರೆ.

ಇದನ್ನೂ ಓದಿ: ನೋಡುಗರಿಗೆ ನಡುಕ ಹುಟ್ಟಿಸಿದ ‘ಶೈತಾನ್​’ ಟ್ರೇಲರ್​; ಕ್ರೂರಿಯಾದ ಮಾಧವನ್​

ಗುಜರಾತಿ ಭಾಷೆಯ ಸೂಪರ್​ ಹಿಟ್​ ‘ವಶ್​’ ಸಿನಿಮಾದ ರಿಮೇಕ್​ ಆಗಿ ‘ಶೈತಾನ್​’ ಚಿತ್ರ ಮೂಡಿಬಂದಿದೆ. ‘ವಶ್​’ ಸಿನಿಮಾಗೆ ‘ಎ’ ಪ್ರಮಾಣಪತ್ರ ನೀಡಲಾಗಿತ್ತು. ಹಾಗಿದ್ದರೂ ಕೂಡ ಆ ಸಿನಿಮಾ ಭರ್ಜರಿ ಯಶಸ್ಸು ಕಂಡಿತ್ತು. ಹೀಗಿರುವಾಗ ‘ಯು/ಎ’ ಪ್ರಮಾಣಪತ್ರ ಪಡೆದಿರುವ ‘ಶೈತಾನ್​’ ಸಿನಿಮಾ ಖಂಡಿತವಾಗಿಯೂ ಹಿಟ್​ ಆಗಲಿದೆ ಎಂದು ನೆಟ್ಟಿಗರು ಭವಿಷ್ಯ ನಡಿಯುತ್ತಿದ್ದಾರೆ. ‘ಶೈತಾನ್​’ ಸಿನಿಮಾದ ಕೆಲವು ದೃಶ್ಯಗಳಿಗೆ ಕತ್ತರಿ ಹಾಕಲು ಸೂಚಿಸಲಾಗಿದೆ. ಈ ಸಿನಿಮಾದ ಅವಧಿ 132 ನಿಮಿಷ ಇದೆ. ಈ ಚಿತ್ರ ನೋಡಲು ಆಸಕ್ತಿ ಇದೆ ಎಂದು 75 ಸಾವಿಕ್ಕೂ ಅಧಿಕ ಮಂದಿ ಬುಕ್​ ಮೈ ಶೋನಲ್ಲಿ ಲೈಕ್​ ಬಟನ್​ ಕ್ಲಿಕ್​ ಮಾಡಿದ್ದಾರೆ.

‘ಶೈತಾನ್​’ ಸಿನಿಮಾ ಪೋಸ್ಟರ್​:

View this post on Instagram

A post shared by Ajay Devgn (@ajaydevgn)

ವಿಕಾಸ್​ ಬಹ್ಲ್ ಅವರ ನಿರ್ದೇಶನದಲ್ಲಿ ‘ಶೈತಾನ್​’ ಸಿನಿಮಾ ಸಿದ್ಧವಾಗಿದೆ. ಟ್ರೇಲರ್​ ನೋಡಿದವರು ಪಾಸಿಟ್​ ಆಗಿ ಕಮೆಂಟ್​ ಮಾಡಿದ್ದಾರೆ. ಅಜಯ್​ ದೇವಗನ್​ ಅವರ ಮಗಳ ಪಾತ್ರದಲ್ಲಿ ನಟಿಸಿರುವ ಜಾನಕಿ ಬೋಡಿವಾಲಾ ಅವರ ಅಭಿನಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ. ಈ ಸಿನಿಮಾ ರಿಲೀಸ್​ ಆದ ಬಳಿಕ ಅವರ ಜನಪ್ರಿಯತೆ ಹೆಚ್ಚಾಗಲಿದೆ. ಈಗಾಗಲೇ ಟಿಕೆಟ್​ ಬುಕಿಂಗ್​ನಲ್ಲಿ ಈ ಸಿನಿಮಾ ಮುನ್ನಡೆ ಸಾಧಿಸಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ವಿಮಾನ ನಿಲ್ದಾಣದ ವಿರುದ್ಧ ರಾಮಲಿಂಗಾರೆಡ್ಡಿ ಗರಂ
ವಿಮಾನ ನಿಲ್ದಾಣದ ವಿರುದ್ಧ ರಾಮಲಿಂಗಾರೆಡ್ಡಿ ಗರಂ
ಬೈಕ್​ ಸವಾರನ ರಕ್ಷಿಸಲು ಹೋಗಿ ಕಾರಿಗೆ ಲಾರಿ ಡಿಕ್ಕಿ, ಮೂವರು ಸಾವು
ಬೈಕ್​ ಸವಾರನ ರಕ್ಷಿಸಲು ಹೋಗಿ ಕಾರಿಗೆ ಲಾರಿ ಡಿಕ್ಕಿ, ಮೂವರು ಸಾವು
ಬಿಜೆಪಿ ಕಾರ್ಯಕರ್ತೆಯ ಬಟ್ಟೆಬಿಚ್ಚಿ ಹಲ್ಲೆ: ಗೃಹ ಸಚಿವರು ಹೇಳಿದ್ದೇನು?
ಬಿಜೆಪಿ ಕಾರ್ಯಕರ್ತೆಯ ಬಟ್ಟೆಬಿಚ್ಚಿ ಹಲ್ಲೆ: ಗೃಹ ಸಚಿವರು ಹೇಳಿದ್ದೇನು?
30 ಕಾಂಗ್ರೆಸ್​​​ ಕಾರ್ಯಕರ್ತರಿಗೆ ಶಾಕ್​​ ಕೊಟ್ಟ ಪೊಲೀಸರು
30 ಕಾಂಗ್ರೆಸ್​​​ ಕಾರ್ಯಕರ್ತರಿಗೆ ಶಾಕ್​​ ಕೊಟ್ಟ ಪೊಲೀಸರು
ಥ್ರಿಲ್ಲರ್ ಸೂಪರ್ ಥ್ರಿಲ್ಲರ್... ಕೊನೆಯ ಎಸೆತದಲ್ಲಿ ಸಿಕ್ಸ್, ಮ್ಯಾಚ್ ವಿನ್
ಥ್ರಿಲ್ಲರ್ ಸೂಪರ್ ಥ್ರಿಲ್ಲರ್... ಕೊನೆಯ ಎಸೆತದಲ್ಲಿ ಸಿಕ್ಸ್, ಮ್ಯಾಚ್ ವಿನ್
ಗವಿಸಿದ್ದೇಶ್ವರ ಜಾತ್ರೆ: ದಾಸೋಹದಲ್ಲಿ ಹೊಸ ದಾಖಲೆ, ಲಕ್ಷ ರೊಟ್ಟಿ ಸಂಗ್ರಹ!
ಗವಿಸಿದ್ದೇಶ್ವರ ಜಾತ್ರೆ: ದಾಸೋಹದಲ್ಲಿ ಹೊಸ ದಾಖಲೆ, ಲಕ್ಷ ರೊಟ್ಟಿ ಸಂಗ್ರಹ!
ಗಿಲ್ಲಿ ಬಿಗ್ ಬಾಸ್ ಮನೆ ಒಳಗೆ ಇಟ್ಟ ಬೇಡಿಕೆಯನ್ನು ಹೊರಗೆ ಈಡೇರಿಸಿದ ಫ್ಯಾನ್ಸ
ಗಿಲ್ಲಿ ಬಿಗ್ ಬಾಸ್ ಮನೆ ಒಳಗೆ ಇಟ್ಟ ಬೇಡಿಕೆಯನ್ನು ಹೊರಗೆ ಈಡೇರಿಸಿದ ಫ್ಯಾನ್ಸ
ಬಾಲ್ಕನಿಯಲ್ಲಿ ಸಿಲುಕಿದ್ದವರನ್ನು ರಕ್ಷಿಸಿದ ಬ್ಲಿಂಕಿಟ್ ಡೆಲಿವರಿ ಏಜೆಂಟ್
ಬಾಲ್ಕನಿಯಲ್ಲಿ ಸಿಲುಕಿದ್ದವರನ್ನು ರಕ್ಷಿಸಿದ ಬ್ಲಿಂಕಿಟ್ ಡೆಲಿವರಿ ಏಜೆಂಟ್
ಧ್ರುವಂತ್-ಅಶ್ವಿನಿ ಮಧ್ಯೆ ಕಿತ್ತಾಟ; ಉರಿಯೋ ಬೆಂಕಿಗೆ ತುಪ್ಪ ಸುರಿದ ಗಿಲ್ಲಿ
ಧ್ರುವಂತ್-ಅಶ್ವಿನಿ ಮಧ್ಯೆ ಕಿತ್ತಾಟ; ಉರಿಯೋ ಬೆಂಕಿಗೆ ತುಪ್ಪ ಸುರಿದ ಗಿಲ್ಲಿ
ಮರಣಿಸಿದವರ ಬಗ್ಗೆ ಕೆಟ್ಟದಾಗಿ ಮಾತನಾಡಬಾರದು ಯಾಕೆ?
ಮರಣಿಸಿದವರ ಬಗ್ಗೆ ಕೆಟ್ಟದಾಗಿ ಮಾತನಾಡಬಾರದು ಯಾಕೆ?