Shaitaan Trailer: ನೋಡುಗರಿಗೆ ನಡುಕ ಹುಟ್ಟಿಸಿದ ‘ಶೈತಾನ್​’ ಟ್ರೇಲರ್​; ಕ್ರೂರಿಯಾದ ಮಾಧವನ್​

ಜ್ಯೋತಿಕಾ, ಅಜಯ್​ ದೇವಗನ್​, ಆರ್​. ಮಾಧವನ್​, ಜಾನಕಿ ಬೋಡಿವಾಲಾ ಅವರು ‘ಶೈತಾನ್​’ ಸಿನಿಮಾದಲ್ಲಿ ಮುಖ್ಯ ಭೂಮಿಕೆ ನಿಭಾಯಿಸಿದ್ದಾರೆ. ವಶೀಕರಣದ ಕಥೆಯನ್ನು ಇಟ್ಟುಕೊಂಡು ಈ ಸಿನಿಮಾ ಮಾಡಲಾಗಿದೆ. ಸದ್ಯ ಈ ಸಿನಿಮಾದ ಟ್ರೇಲರ್​ ಎಲ್ಲರ ಗಮನ ಸೆಳೆಯುತ್ತಿದೆ. ಮಾರ್ಚ್​ 8ರಂದು ಈ ಚಿತ್ರ ಬಿಡುಗಡೆ ಆಗಲಿದ್ದು, ಖಂಡಿತಾ ಸೂಪರ್​ ಹಿಟ್​ ಆಗಲಿದೆ ಎಂದು ಅಭಿಮಾನಿಗಳು ಭವಿಷ್ಯ ನುಡಿಯುತ್ತಿದ್ದಾರೆ.

Shaitaan Trailer: ನೋಡುಗರಿಗೆ ನಡುಕ ಹುಟ್ಟಿಸಿದ ‘ಶೈತಾನ್​’ ಟ್ರೇಲರ್​; ಕ್ರೂರಿಯಾದ ಮಾಧವನ್​
‘ಶೈತಾನ್​’ ಸಿನಿಮಾ ಪೋಸ್ಟರ್​
Follow us
ಮದನ್​ ಕುಮಾರ್​
|

Updated on: Feb 23, 2024 | 9:32 AM

ನಟ ಅಜಯ್​ ದೇವಗನ್​ (Ajay Devgn) ಅವರು ‘ದೃಶ್ಯಂ’ ಸಿನಿಮಾದಲ್ಲಿ ಮಗಳನ್ನು ರಕ್ಷಿಸಲು ದೊಡ್ಡ ರಿಸ್ಕ್​ ತೆಗೆದುಕೊಳ್ಳುವ ತಂದೆಯ ಪಾತ್ರ ಮಾಡಿದ್ದರು. ಈಗ ಅದೇ ರೀತಿಯ ಮತ್ತೊಂದು ಪಾತ್ರಕ್ಕೆ ಅವರು ಜೀವ ತುಂಬಿದ್ದಾರೆ. ‘ಶೈತಾನ್​’ ಸಿನಿಮಾದಲ್ಲಿ ಅವರು ತಂದೆಯಾಗಿ ಕಾಣಿಸಿಕೊಳ್ಳಲಿದ್ದಾರೆ. ವಿಶೇಷ ಏನೆಂದರೆ, ಈ ಸಿನಿಮಾದಲ್ಲಿ ಆರ್​. ಮಾಧವನ್​ (R Madhavan) ವಿಲನ್​! ಹೌದು, ‘ಶೈತಾನ್​’ ಚಿತ್ರದ ಟ್ರೇಲರ್​ ಬಿಡುಗಡೆ ಆಗಿದ್ದು, ಕಥೆ ಏನು ಎಂಬುದರ ಸುಳಿವು ಸಿಕ್ಕಿದೆ. ಈ ಚಿತ್ರದಲ್ಲಿ ಅಜಯ್​ ದೇವಗನ್​ ಮತ್ತು ಜ್ಯೋತಿಕಾ ಅವರು ಪತಿ-ಪತ್ನಿಯಾಗಿ ನಟಿಸಿದ್ದಾರೆ. ವಶೀಕರಣದ ಕಹಾನಿಯನ್ನು ಈ ಚಿತ್ರ ಒಳಗೊಂಡಿದೆ. ಸದ್ಯಕ್ಕೆ ‘ಶೈತಾನ್​’ ಟ್ರೇಲರ್​ (Shaitaan Trailer) ನೋಡಿದ ಪ್ರೇಕ್ಷಕರಿಗೆ ನಡುಕ ಹುಟ್ಟಿದೆ. ಇನ್ನು, ಪೂರ್ತಿ ಸಿನಿಮಾ ಎಷ್ಟರಮಟ್ಟಿಗೆ ಭಯಾನಕವಾಗಿರಬಹುದು ಎಂದು ಫ್ಯಾನ್ಸ್ ಊಹಿಸುತ್ತಿದ್ದಾರೆ.

ಸಹಾಯ ಕೇಳಿಕೊಂಡು ಆರ್​. ಮಾಧವನ್​ ಅವರು ಅಜಯ್​ ದೇವಗನ್​ರ ಮನೆಗೆ ಎಂಟ್ರಿ ನೀಡುತ್ತಾರೆ. ಬಳಿಕ ಅವರ ಮಗಳನ್ನು ವಶೀಕರಣ ಮಾಡುತ್ತಾರೆ. ಅಲ್ಲಿಂದ ಶುರುವಾಗುವುದು ಅಸಲಿ ಸಮರ. ವಿಲನ್​ ಹೇಳಿದಂತೆಯೇ ಹೀರೋನ ಮಗಳು ಕೇಳುತ್ತಾಳೆ. ತಂದೆ-ತಾಯಿಗೆ ಹೊಡೆಯಲೂ ಆಕೆ ಹಿಂಜರಿಯುವುದಿಲ್ಲ. ಅಷ್ಟರಮಟ್ಟಿಗೆ ಪವರ್​ಫುಲ್​ ಆಗಿರುತ್ತದೆ ಶೈತಾನನ ವಶೀಕರಣ! ಇಂಥ ಹಾರರ್​ ಕಹಾನಿಯನ್ನು ಟ್ರೇಲರ್​ನಲ್ಲಿ ತೋರಿಸಲಾಗಿದೆ.

ಇದನ್ನೂ ಓದಿ: ಮತ್ತೆ ಒಂದಾದ ಕಂಗನಾ ರಣಾವತ್​-ಆರ್​. ಮಾಧವನ್​; ಫೋಟೋ ವೈರಲ್​

ಮಾರ್ಚ್​ 8ರಂದು ‘ಶೈತಾನ್​’ ಸಿನಿಮಾ ಬಿಡುಗಡೆ ಆಗಲಿದೆ. ಖ್ಯಾತ ನಿರ್ದೇಶಕ ವಿಕಾಸ್​ ಬೆಹ್ಲ್​ ಅವರು ಈ ಸಿನಿಮಾಗೆ ಆ್ಯಕ್ಷನ್​-ಕಟ್​ ಹೇಳಿದ್ದಾರೆ. ಟ್ರೇಲರ್​ನಲ್ಲಿನ ಹಾರರ್​ ದೃಶ್ಯಗಳನ್ನು ನೋಡಿ ಸಿನಿಪ್ರಿಯರ ನಿರೀಕ್ಷೆ ಹೆಚ್ಚಾಗಿದೆ. ಇದು ಖಂಡಿತವಾಗಿಯೂ ಬ್ಲಾಕ್​ ಬಸ್ಟರ್​ ಸಿನಿಮಾ ಆಗಲಿದೆ ಎಂದು ಅಭಿಮಾನಿಗಳು ಭವಿಷ್ಯ ನುಡಿಯುತ್ತಿದ್ದಾರೆ. ಜ್ಯೋತಿಕಾ, ಅಜಯ್​ ದೇವಗನ್​, ಆರ್​. ಮಾಧವನ್​ ಅವರಂತಹ ಘಟಾನುಘಟಿ ಕಲಾವಿದರು ಈ ಸಿನಿಮಾದಲ್ಲಿ ನಟಿಸಿರುವುದರಿಂದ ಸಹಜವಾಗಿಯೇ ಹೈಪ್​ ಹೆಚ್ಚಾಗಿದೆ.

‘ಶೈತಾನ್​’ ಸಿನಿಮಾದ ಟ್ರೇಲರ್​:

ಅಜಯ್ ದೇವಗನ್​ ಅವರ ಮಗಳ ಪಾತ್ರದಲ್ಲಿ ಜಾನಕಿ ಬೋಡಿವಾಲಾ ನಟಿಸಿದ್ದಾರೆ. ಈ ಸಿನಿಮಾದಲ್ಲಿ ಅವರ ಪಾತ್ರಕ್ಕೆ ಸಖತ್​ ಸ್ಕೋಪ್​ ಇದೆ. ವಶೀಕರಣಕ್ಕೆ ಒಳಗಾದ ಯುವತಿಯಾಗಿ ಅವರು ಕಾಣಿಸಿಕೊಂಡಿದ್ದಾರೆ. ಈ ಸಿನಿಮಾದಿಂದ ಅವರ ವೃತ್ತಿಜೀವನದ ಮೈಲೇಜ್​ ಹೆಚ್ಚಲಿದೆ. ಸದ್ಯ ಯೂಟ್ಯೂಬ್​ನಲ್ಲಿ ‘ಶೈತಾನ್​’ ಟ್ರೇಲರ್​ ನಂಬರ್​ 1 ಟ್ರೆಂಡಿಂಗ್​ನಲ್ಲಿದೆ. ಅಷ್ಟರಮಟ್ಟಿಗೆ ಈ ಸಿನಿಮಾದ ಟ್ರೇಲರ್​ ಗಮನ ಸೆಳೆದಿದೆ. 24 ಗಂಟೆ ಕಳೆಯುವುದಕ್ಕೂ ಮುನ್ನ 15 ಮಿಲಿಯನ್​ಗಿಂತಲೂ ಹೆಚ್ಚು ವೀಕ್ಷಣೆ ಕಂಡು ಮುನ್ನುಗ್ಗುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.