ಶಾರುಖ್ ಖಾನ್ ಬಳಿ ಇರೋ ಮೊಬೈಲ್ ಸಂಖ್ಯೆ ಎಷ್ಟು? ನೀವು ಕೇಳಿದ್ರೆ ಅಚ್ಚರಿ ಪಡ್ತೀರಾ
ವಿವೇಕ್ ಅವರು 2018ರಲ್ಲಿ ಶಾರುಖ್ ಖಾನ್ ಬರ್ತ್ಡೇ ಪಾರ್ಟಿಗೆ ಹೋಗಿದ್ದರು. ಆ ಘಟನೆಯನ್ನು ನೆನಪಿಸಿಕೊಂಡಿದ್ದಾರೆ ಅವರು. ‘ನಾಲ್ಕು ವರ್ಷಗಳ ಹಿಂದೆ ಶಾರುಖ್ ಖಾನ್ ಬರ್ತ್ಡೇ ಪಾರ್ಟಿಗೆ ಹೋಗಿದ್ದೆ. ಆ ಪಾರ್ಟಿಯಲ್ಲಿ ಸಖತ್ ಫನ್ ಇತ್ತು. ನಾವು ಭೇಟಿ ಮಾಡಿದಾಗ ಖುಷಿಯಿಂದ ಸಮಯ ಕಳೆಯುತ್ತೇವೆ’ ಎಂದಿದ್ದಾರೆ ಅವರು.
ಶಾರುಖ್ ಖಾನ್ (Shah Rukh Khan) ಅವರು ಬಾಲಿವುಡ್ನ ಸೂಪರ್ ಸ್ಟಾರ್ ಆಗಿ ಗುರುತಿಸಿಕೊಂಡಿದ್ದಾರೆ. ಅವರಿಗೆ ಕಿಂಗ್ ಖಾನ್ ಎಂಬ ಖ್ಯಾತಿ ಇದೆ. ಶಾರುಖ್ ಖಾನ್ ಅವರು ಸಾಕಷ್ಟು ಕಷ್ಟಪಟ್ಟು ಇಲ್ಲಿಯವರೆಗೆ ಬಂದಿದ್ದಾರೆ. ಅವರು ಬಣ್ಣದ ಲೋಕಕ್ಕೆ ಕಾಲಿಟ್ಟಾಗ ವಿವೇಕ್ ವಸ್ವಾನಿಯಿಂದ ಸಹಾಯ ಪಡೆದಿದ್ದರು. ಶಾರುಖ್ಗೆ ಉಳಿದುಕೊಳ್ಳಲೂ ವಿವೇಕ್ ಸಹಾಯ ಮಾಡಿದ್ದರು. ಇತ್ತೀಚಿನ ವರ್ಷಗಳಲ್ಲಿ ಶಾರುಖ್ ಖಾನ್ ಅವರನ್ನು ಭೇಟಿ ಮಾಡೋಕೆ ಅವರಿಗೆ ಸಾಧ್ಯವಾಗಿಲ್ಲ. ಈಗ ಅವರು ಒಂದು ಅಚ್ಚರಿಯ ವಿಚಾರ ರಿವೀಲ್ ಮಾಡಿದ್ದಾರೆ.
ವಿವೇಕ್ ಅವರು ನಟನಾಗಿ, ನಿರ್ಮಾಪಕನಾಗಿ ಗುರುತಿಸಿಕೊಂಡಿದ್ದಾರೆ. ಅವರು ಶಾರುಖ್ ಖಾನ್ಗೆ ಸಹಾಯ ಮಾಡಿದ್ದಾರೆ. ವಿವೇಕ್ ಅವರು 2018ರಲ್ಲಿ ಶಾರುಖ್ ಖಾನ್ ಬರ್ತ್ಡೇ ಪಾರ್ಟಿಗೆ ಹೋಗಿದ್ದರು. ಆ ಘಟನೆಯನ್ನು ನೆನಪಿಸಿಕೊಂಡಿದ್ದಾರೆ ಅವರು. ‘ನಾಲ್ಕು ವರ್ಷಗಳ ಹಿಂದೆ ಶಾರುಖ್ ಖಾನ್ ಬರ್ತ್ಡೇ ಪಾರ್ಟಿಗೆ ಹೋಗಿದ್ದೆ. ಆ ಪಾರ್ಟಿಯಲ್ಲಿ ಸಖತ್ ಫನ್ ಇತ್ತು. ನಾವು ಭೇಟಿ ಮಾಡಿದಾಗ ಖುಷಿಯಿಂದ ಸಮಯ ಕಳೆಯುತ್ತೇವೆ’ ಎಂದಿದ್ದಾರೆ ಅವರು.
ಶಾರುಖ್ ಖಾನ್ ಅವರನ್ನು ಇತ್ತೀಚೆಗೆ ಏಕೆ ಭೇಟಿ ಮಾಡಿಲ್ಲ ಎಂಬುದನ್ನು ವಿವೇಕ್ ಹೇಳಿದ್ದಾರೆ. ‘ಶಾರುಖ್ ಖಾನ್ ಬಳಿ 17 ಫೋನ್ಗಳು ಇವೆ. ನನ್ನ ಬಳಿ ಇರೋದು ಒಂದು ನಂಬರ್ ಮಾತ್ರ. ಅವರು ಫೋನ್ ಎತ್ತಿದರೆ ಮಾತ್ರ ನಾವು ಮಾತನಾಡಬಹುದು. ಜವಾನ್ ಸಿನಿಮಾ ರಿಲೀಸ್ ಆದ ಬಳಿಕ ಕರೆ ಮಾಡಿದ್ದೆ. ಅವರು ಕರೆ ಸ್ವೀಕರಿಸಿಲ್ಲ. ನಾನು ಸ್ನಾನದಲ್ಲಿದ್ದಾಗ ಅವರು ಮರಳಿ ಮಾಡಿದರು. ಆಗ ನನಗೆ ಮಾತನಾಡೋಕೆ ಸಾಧ್ಯವಾಗಿಲ್ಲ. ಅವರು ಟ್ರಾವೆಲ್ ಮಾಡುತ್ತಲೇ ಇರುತ್ತಾರೆ. ಅವರಿಗೆ ಸಾಕಷ್ಟು ಜವಾಬ್ದಾರಿ ಇದೆ. ಅವರು ಸಾಮ್ರಾಜ್ಯವನ್ನೇ ನಡೆಸುತ್ತಿದ್ದಾರೆ. ಹೀಗಾಗಿ, ಅವರು ಫೋನ್ ಎತ್ತದೇ ಇದ್ದಾಗ ಬೇಸರ ಆಗಲ್ಲ ಎಂದಿದ್ದಾರೆ’ ವಿವೇಕ್.
ಇದನ್ನೂ ಓದಿ: ಹೊಸ ಉದ್ಯಮಕ್ಕೆ ಕೈ ಹಾಕಿದ ಶಾರುಖ್ ಖಾನ್ ಪತ್ನಿ ಗೌರಿ ಖಾನ್
‘ನಾವು ಸಂಬಂಧಿಕರಲ್ಲ. ನಾವು ಮಾತನಾಡಲ್ಲ. ನಾವು ಭೇಟಿ ಮಾಡಲ್ಲ. ನಾವು ಭೇಟಿ ಮಾಡಿದಾಗ ಖುಷಿಯಿಂದ ಮಾತನಾಡುತ್ತೇವೆ. ನಾನು ಟೀಚರ್. ನಾನು ದಿನದ 18 ಗಂಟೆ ಕೆಲಸ ಮಾಡುತ್ತೇನೆ. ಬಸ್ನಲ್ಲಿ ಓಡಾಡುತ್ತೇನೆ. ಶಾರುಖ್ ಖಾನ್ ಸೂಪರ್ಸ್ಟಾರ್’ ಎಂದಿದ್ದಾರೆ ವಿವೇಕ್.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ