ಹೊಸ ಉದ್ಯಮಕ್ಕೆ ಕೈ ಹಾಕಿದ ಶಾರುಖ್ ಖಾನ್ ಪತ್ನಿ ಗೌರಿ ಖಾನ್
Gauri Khan: ಶಾರುಖ್ ಖಾನ್ ಪತ್ನಿ ಗೌರಿ ಖಾನ್ ಒಳಾಂಗಣ ವಿನ್ಯಾಸಕಿಯಾಗಿ ಜನಪ್ರಿಯರು. ಇದೀಗ ಹೊಸದೊಂದು ಉದ್ಯಮಕ್ಕೆ ಗೌರಿ ಖಾನ್ ಕೈ ಹಾಕಿದ್ದಾರೆ. ಯಾವುದು ಆ ಉದ್ಯಮ?
ಶಾರುಖ್ ಖಾನ್ (Shah Rukh Khan), ಅತಿ ಹೆಚ್ಚು ಸಂಭಾವನೆ ಪಡೆವ ವಿಶ್ವದ ಟಾಪ್ 100 ನಟರಲ್ಲಿ ಒಬ್ಬರು. ನಟನೆಯಿಂದ ಗಳಿಸುವುದು ಮಾತ್ರವೇ ಅಲ್ಲದೆ ತಮ್ಮದೇ ಆದ ನಿರ್ಮಾಣ ಸಂಸ್ಥೆ ಹೊಂದಿದ್ದಾರೆ, ಸ್ಟುಡಿಯೋ ಹೊಂದಿದ್ದಾರೆ. ರಿಯಲ್ ಎಸ್ಟೇಟ್ನಲ್ಲಿ ಹೂಡಿಕೆ ಮಾಡಿದ್ದಾರೆ. ಇನ್ನೂ ಹಲವು ಉದ್ಯಮಗಳಲ್ಲಿ ಶಾರುಖ್ ಖಾನ್ ಹಣ ತೊಡಗಿಸಿದ್ದಾರೆ. ಶಾರುಖ್ ಖಾನ್ರ ಪತ್ನಿ ಗೌರಿ ಖಾನ್ ಸಹ ಉದ್ಯಮಿ. ಮುಂಬೈನ ಜನಪ್ರಿಯ ಹಾಗೂ ದುಬಾರಿ ಒಳಾಂಗಣ ವಿನ್ಯಾಸಕಿ ಅವರು. ಒಳಾಂಗಣ ವಿನ್ಯಾಸದ ಸಂಸ್ಥೆಯನ್ನು ಹೊಂದಿರುವ ಗೌರಿ, ಹಲವು ಸೆಲೆಬ್ರಿಟಿಗಳ ಮನೆ, ಕಚೇರಿಗಳನ್ನು ವಿನ್ಯಾಸ ಮಾಡಿದ್ದಾರೆ. ಇದೇ ಗೌರಿ ಖಾನ್ ಹೊಸದೊಂದು ಉದ್ಯಮಕ್ಕೆ ಕೈ ಹಾಕಿದ್ದಾರೆ.
ಗೌರಿ ಖಾನ್ ಇದೇ ಮೊದಲ ಬಾರಿಗೆ ಹೋಟೆಲ್ ಉದ್ಯಮಕ್ಕೆ ಕೈ ಹಾಕಿದ್ದಾರೆ. ಮುಂಬೈನಲ್ಲಿ ‘ಟೋರಿ’ ಹೆಸರಿನ ಐಶಾರಾಮಿ ರೆಸ್ಟೊರೆಂಟ್ ಅನ್ನು ತೆರೆದಿದ್ದಾರೆ. ವಿಶಾಲವಾದ ಈ ರೆಸ್ಟೊರೆಂಟ್ ಮುಂಬೈನ ಖಾರ್ ವೆಸ್ಟ್ನ ಪಾಲಿ ಹಿಲ್ ರೋಡ್ನಲ್ಲಿ ನಿರ್ಮಿಸಿದ್ದಾರೆ. ಈ ಐಶಾರಾಮಿ ರೆಸ್ಟೊರೆಂಟ್ನ ಒಳಾಂಗಣ ವಿನ್ಯಾಸವನ್ನು ಸ್ವತಃ ಗೌರಿ ಅವರೇ ಮಾಡಿದ್ದು, ಭಿನ್ನ ಲೈಟ್ಗಳು, ಬಣ್ಣಗಳನ್ನು ಬಳಸಿ ಗ್ರಾಹಕರಿಗೆ ಶಾಂತ ಹಾಗೂ ಐಶಾರಾಮಿ ಅನುಭವ ದೊರಕುವಂತೆ ಮಾಡಿದ್ದಾರೆ.
ಇದನ್ನೂ ಓದಿ:‘ಟಾಕ್ಸಿಕ್’ ಸಿನಿಮಾನಲ್ಲಿ ಶಾರುಖ್ ಖಾನ್ ನಟಿಸ್ತಾರಾ? ಯಶ್ ಕೊಟ್ಟರು ಉತ್ತರ
‘ಟೋರಿ’ ಎಂದರೆ ದೇವಾಲಯದ ಬಾಗಿಲು ಎಂದರ್ಥವಂತೆ. ಕೆಲವು ದಿನಗಳ ಹಿಂದೆಯಷ್ಟೆ ‘ಟೋರಿ’ಯ ಉದ್ಘಾಟನೆ ಆಗಿದ್ದು, ಬಾಲಿವುಡ್ನ ಹಲವು ಸೆಲೆಬ್ರಿಟಿಗಳು ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಏಷಿಯಲ್ ರೆಸ್ಟೊರೆಂಟ್ ಇದಾಗಿದ್ದು, ಏಷಿಯಲ್ ಖಾದ್ಯಗಳಿಗೆ ಫ್ಯೂಷನ್ ಬೆರೆಸಿ ಭಿನ್ನ ರೀತಿಯಲ್ಲಿ, ಭಿನ್ನ ಫ್ಲೇವರ್ನಲ್ಲಿ ಗ್ರಾಹಕರಿಗೆ ಸರ್ವ್ ಮಾಡಲಾಗುತ್ತಿದೆಯಂತೆ. ಸ್ವತಃ ಪಂಜಾಬಿ ಕುಟುಂಬದವರಾದ ಗೌರಿ ಖಾನ್ಗೆ ಆಹಾರದ ಬಗ್ಗೆ ವಿಶೇಷ ಪ್ರೀತಿ, ಗೌರಿಗೂ ಸಹ ಏಷಿಯನ್ ಆಹಾರ ಬಹಳ ಪ್ರಿಯವಂತೆ ಅದೇ ಕಾರಣಕ್ಕೆ ಏಷಿಯನ್ ರೆಸ್ಟೊರೆಂಟ್ ತೆರೆದಿದ್ದಾರೆ.
ಬಾಲಿವುಡ್ನ ಹಲವು ಸೆಲೆಬ್ರಿಟಿಗಳು ರೆಸ್ಟೊರೆಂಟ್ ಬ್ಯುಸಿನೆಸ್ನಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಸನ್ನಿ ಲಿಯೋನಿ ಸಹ ಇತ್ತೀಚೆಗಷ್ಟೆ ತಮ್ಮ ಹೊಸ ರೆಸ್ಟೊರೆಂಟ್ ತೆರೆದಿದ್ದಾರೆ. ಕ್ರಿಕೆಟಿಗ ವಿರಾಟ್ ಕೊಹ್ಲಿ ಒನ್ಏಟ್ ಹೆಸರಿನ ರೆಸ್ಟೊರೆಂಟ್ ಚೈನ್ನ ಮಾಲೀಕರು. ಬೆಂಗಳೂರಿನಲ್ಲಿಯೂ ರೆಸ್ಟೊರೆಂಟ್ ತೆರೆದಿದ್ದಾರೆ. ಹೃತಿಕ್ ರೋಷನ್ ಸಹ ಹೆಲ್ತಿ ಆಹಾರ ಸರ್ವ್ ಮಾಡುವ ರೆಸ್ಟೊರೆಂಟ್ ಚೈನ್ ತೆರೆದಿದ್ದಾರೆ. ಪ್ರಿಯಾಂಕಾ ಚೋಪ್ರಾ, ವಿದೇಶಗಳಲ್ಲಿ ತಮ್ಮ ರೆಸ್ಟೊರೆಂಟ್ ಬ್ಯುಸಿನೆಸ್ ತೆರೆದಿದ್ದಾರೆ. ಇನ್ನೂ ಹಲವು ಬಾಲಿವುಡ್ ಸೆಲೆಬ್ರಿಟಿಗಳು ರೆಸ್ಟೊರೆಂಟ್ಗಳನ್ನು ಹೊಂದಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ